WhatsApp: 10 ದಿನಗಳ ನಂತರ ಈ ಮೊಬೈಲ್‌ಗಳಲ್ಲಿ ವಾಟ್ಸ್‌ಆ್ಯಪ್‌ ಬಂದ್‌: ಇದರಲ್ಲಿ ನಿಮ್ಮ ಮೊಬೈಲ್ ಸಹ ಇದೆಯೇ ನೋಡಿಕೊಳ್ಳಿ..

ಫೇಸ್‌ಬುಕ್ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್‌ ನವೆಂಬರ್ 1 ರಿಂದ ಹಲವಾರು ಸ್ಮಾರ್ಟ್‌ಫೋನ್ ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ

WhatsApp

WhatsApp

  • Share this:

ಈಗಂತೂ ವಾಟ್ಸ್‌ಆ್ಯಪ್‌ (WhatsApp) ಬಳಸದವರು ಯಾರಿದ್ದಾರೆ ಹೇಳಿ..? ಬಹುತೇಕವಾಗಿ ಎಲ್ಲರ ಸ್ಮಾರ್ಟ್‌ ಫೋನ್‌ಗಳಲ್ಲಿ (Smart phone) ವಾಟ್ಸ್‌ಆ್ಯಪ್‌ ಇದ್ದೇ ಇರುತ್ತದೆ. ಇದನ್ನು ತಮ್ಮ ಸಮಯಕ್ಕೆ ಸರಿಯಾಗಿ ಅನುಕೂಲಕ್ಕೆ ಬಳಸಿಕೊಳ್ಳುವವರು ಇದ್ದರೆ ಇನ್ನು ಕೆಲವು ಜನರು ತಮಗೆ ಸಮಯ ಕಳೆಯಲು ಉತ್ತಮ ಸಂಗಾತಿಯಂತೆ ಬಳಸಿಕೊಳ್ಳುತ್ತಾರೆ.ಆದರೆ ಬರೋಬ್ಬರಿ 10 ದಿನಗಳ ನಂತರ ಈ ನಿಮ್ಮ ಸಂಗಾತಿ ಕೈ ಬಿಟ್ಟು ಹೋಗಬಹುದು. ಏಕೆ ಅಂತೀರಾ..? ಕಾರಣವೇನೆಂದರೆ ಫೇಸ್‌ಬುಕ್ (Facebook) ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ (Messaging application) ವಾಟ್ಸ್‌ಆ್ಯಪ್‌ ನವೆಂಬರ್ 1 ರಿಂದ ಹಲವಾರು ಸ್ಮಾರ್ಟ್‌ಫೋನ್ ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ ಎಂದು ವರದಿಯಾಗಿದೆ.


ನಿಮ್ಮ ವಾಟ್ಸ್‌ಆ್ಯಪ್‌ ಬ್ಲಾಕ್ ಆಗಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ ಗಳಲ್ಲಿ ಸಂದೇಶಗಳು, ಫೋಟೋಗಳು ಅಥವಾ ವಿಡಿಯೋಗಳನ್ನು ನಿಮ್ಮ ಆಪ್ತರಿಗೆ ಕಳುಹಿಸಲು ಅಥವಾ ಅವರಿಂದ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.


ತನ್ನ ಘೋಷಣೆಯಲ್ಲಿ, ಅಪ್ಲಿಕೇಶನ್ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಎರಡರ ಹಳೆಯ ಆವೃತ್ತಿಗಳನ್ನು ಬೆಂಬಲಿಸುವುದಿಲ್ಲ ಎಂದು ವಾಟ್ಸ್‌ಆ್ಯಪ್‌ ಹೇಳಿದೆ. ಆಂಡ್ರಾಯ್ಡ್ ಓಎಸ್ 4.1 ಮತ್ತು ಅದಕ್ಕಿಂತ ನಂತರದ ಮತ್ತು ಐಒಎಸ್ 10 ಹಾಗೂ ಅದಕ್ಕಿಂತ ನಂತರದನ್ನು ಬೆಂಬಲಿಸುವ ಸ್ಮಾರ್ಟ್‌ಫೋನ್ ಹೊಂದಿರುವ ಯಾರಾದರೂ ಮಾತ್ರ ಮೆಸೇಜಿಂಗ್ ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತದೆ.


ಎಲ್ಲಾ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಮೊಬೈಲ್‌‌ ಫೋನ್ ಸೆಟ್ಟಿಂಗ್‌ಗಳನ್ನು ಪ್ರವೇಶಿಸುವ ಮೂಲಕ ಅವರು ಬಳಸುತ್ತಿರುವ ಸಾಫ್ಟ್‌ವೇರ್‌ನ ಆವೃತ್ತಿಯನ್ನು ಸಹ ಪರಿಶೀಲಿಸಬಹುದು. ಬನ್ನಿ ಹಾಗಾದರೆ ನೋಡೋಣ ಯಾವ ಯಾವ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಲ್ಲಿ ನವೆಂಬರ್ 1 ರಿಂದ ವಾಟ್ಸ್‌ಆ್ಯಪ್‌ ಲಭ್ಯವಿರುವುದಿಲ್ಲ.


ಆ್ಯಪಲ್ (appale)


ನವೆಂಬರ್ 1 ರಿಂದ ಆ್ಯಪಲ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಾದ ಐಫೋನ್ SE, ಐಫೋನ್ 6S ಮತ್ತು ಐಫೋನ್ 6S ಪ್ಲಸ್‌ಗಳಲ್ಲಿ ವಾಟ್ಸ್‌ಆ್ಯಪ್‌ ಲಭ್ಯವಿರುವುದಿಲ್ಲ.


ಸ್ಯಾಮ್ಸಂಗ್ (Samsung)


ಅದೇ ರೀತಿಯಾಗಿ ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ II, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ 2, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್3 ಮಿನಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್ ಕವರ್ 2, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 2ಗಳಲ್ಲಿ ವಾಟ್ಸ್‌ಆ್ಯಪ್‌ ಲಭ್ಯವಿರುವುದಿಲ್ಲ.


ಇದನ್ನು ಓದಿ: 100 ಕೋಟಿ ಲಸಿಕೆ ಸಾಧನೆ; ದೇಶದ ಜನರಿಗೆ ಮೋದಿ ಶುಭಾಶಯ; ಇಲ್ಲಿದೆ ಪ್ರಧಾನಿ ಭಾಷಣದ ಹೈಲೈಟ್ಸ್​​

ಎಲ್ಜಿ (LG)


ಎಲ್​​ಜಿ ಲೂಸಿಡ್ 2, ಆಪ್ಟಿಮಸ್ ಎಫ್ 7, ಆಪ್ಟಿಮಸ್ ಎಫ್ 5, ಆಪ್ಟಿಮಸ್ ಎಲ್ 3 II ಡ್ಯುಯಲ್, ಆಪ್ಟಿಮಸ್ ಎಫ್ 5, ಆಪ್ಟಿಮಸ್ ಎಲ್ 5, ಆಪ್ಟಿಮಸ್ ಎಲ್ 5 II, ಆಪ್ಟಿಮಸ್ ಎಲ್ 5 ಡ್ಯುಯಲ್, ಆಪ್ಟಿಮಸ್ ಎಲ್ 3 II, ಆಪ್ಟಿಮಸ್ ಎಲ್ 7, ಆಪ್ಟಿಮಸ್ ಎಲ್ 7 II ಡ್ಯುಯಲ್, ಆಪ್ಟಿಮಸ್ ಎಲ್ 7 II, ಆಪ್ಟಿಮಸ್ ಎಲ್4 II ಡ್ಯುಯಲ್, ಆಪ್ಟಿಮಸ್ ಎಫ್3ಕ್ಯೂ, ಆಪ್ಟಿಮಸ್ ಎಲ್3 II ಡ್ಯುಯಲ್, ಆಪ್ಟಿಮಸ್ ಎಫ್6, ಎನಾಕ್ಟ್‌, ಆಪ್ಟಿಮಸ್ ಎಫ್3, ಆಪ್ಟಿಮಸ್ ನೈಟ್ರೋ ಎಚ್‌ಡಿ ಮತ್ತು 4ಎಕ್ಸ್ ಎಚ್‌ಡಿಗಳಲ್ಲಿ ವಾಟ್ಸ್‌ಆ್ಯಪ್‌ ಲಭ್ಯವಿರುವುದಿಲ್ಲ.


ಇದನ್ನು ಓದಿ: ಈ ಹಬ್ಬದ ಸೀಸನ್‌ನಲ್ಲಿ ಹೊಚ್ಚ ಹೊಸ vivo V21 Neon Spark ನೊಂದಿಗೆ ಪ್ರಜ್ವಲಿಸಿ

ಝಡ್ಟಿಇ (ZTE)


ಝಡ್‌ಟಿಇ ಗ್ರ್ಯಾಂಡ್ ಎಸ್ ಫ್ಲೆಕ್ಸ್, ಗ್ರ್ಯಾಂಡ್ ಎಕ್ಸ್ ಕ್ವಾಡ್ ವಿ987, ಝಡ್‌ಟಿಇ ವಿ956, ಗ್ರ್ಯಾಂಡ್ ಮೆಮೋಗಳಲ್ಲಿ ವಾಟ್ಸ್‌ಆ್ಯಪ್‌ ಲಭ್ಯವಿರುವುದಿಲ್ಲ.


ಹುವಾವೇ (Huawei )


ಹುವಾವೇ ಕಂಪೆನಿ ಮೊಬೈಲ್ ಫೋನ್‌ಗಳಾದ ಹುವಾವೇ ಅಸೆಂಡ್ ಜಿ 740, ಅಸೆಂಡ್ ಡಿ ಕ್ವಾಡ್ ಎಕ್ಸ್ ಎಲ್, ಅಸೆಂಡ್ ಮೇಟ್, ಅಸೆಂಡ್ ಪಿ1 ಎಸ್, ಅಸೆಂಡ್ ಡಿ2, ಅಸೆಂಡ್ ಡಿ1 ಕ್ವಾಡ್ ಎಕ್ಸ್ ಎಲ್‌ಗಳಲ್ಲಿ ಸಹ ವಾಟ್ಸ್‌ಆ್ಯಪ್‌ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.


Published by:Seema R
First published: