ವಾಟ್ಸಾಪ್​ನಲ್ಲಿ ಡೌನ್​ಲೋಡ್​ ಆದ ಮಾಹಿತಿಯನ್ನು ಹೈಡ್​ ಮಾಡುವುದು ಹೇಗೆ?


Updated:June 25, 2018, 5:20 PM IST
ವಾಟ್ಸಾಪ್​ನಲ್ಲಿ ಡೌನ್​ಲೋಡ್​ ಆದ ಮಾಹಿತಿಯನ್ನು ಹೈಡ್​ ಮಾಡುವುದು ಹೇಗೆ?

Updated: June 25, 2018, 5:20 PM IST
ನ್ಯೂಯಾರ್ಕ್​: ಸದಾ ಹೊಸ ಫೀಚರ್​ಗಳನ್ನು ನೀಡುತ್ತಾ ಬಂದಿರುವ ವಾಟ್ಸಾಪ್​ ಈ ಬಾರಿ ಸ್ಥಗಿತಗೊಳಿಸಿದ್ದ ಫೀಚರ್​ವೊಂದನ್ನು ಮತ್ತೆ ಚಾಲನೆಗೆ ತರುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ.

ಬೀಟಾ ಗ್ರಾಹಕರಿಗಾಗಿ ಈ ಹಿಂದೆ ವಾಟ್ಸಾಪ್​ ಸಂಸ್ಥೆ ವಿಸಿಬಲಿಡಿ ಫೀಚರ್​​ನ್ನು ಪರಿಚಯಿಸಿತ್ತು. ಈ ಆಯ್ಕೆಯಲ್ಲಿ ಆ್ಯಪ್​ ಬಳಕೇದಾರರು ತಮ್ಮ ಮೀಡಿಯಾ ಗ್ಯಾಲರಿಯಲ್ಲಿ ವಾಟ್ಸಾಪ್​ ನಿಂದ ಡೌನ್​ಲೋಡ್​ ಆಗಿರುವ ಚಿತ್ರಗಳು, ವೀಡಿಯೋ ಸೇರಿ ಇತರೇ ದಾಖಲೆಗಳನ್ನು ಮರೆಮಾಚಬಹುದಾಗಿತ್ತು. ಈ ಆಯ್ಕೆ ಕೇವಲ ಡೇಟಾ ಮತ್ತು ಸ್ಟೋರೇಜ್​ ವಿಭಾಗದಲ್ಲಿ ಸೀಮಿತವಾಗಿತ್ತು. ಆದರೆ ಕಾರಣಾಂತರಗಳಿಂದ ಕೆಲವೇ ದಿನಗಳಲ್ಲಿ ಈ ಫೀಚರ್​ನ್ನು ಸಂಸ್ಥೆ ಸ್ಥಗಿತಗೊಳಸಿತ್ತು.

ಆದರೆ ಈ ಬಾರಿ ಮತ್ತೆ ಕೇವಲ ಆ್ಯಂಡ್ರಾಯ್ಡ್​ ಬಳಕೇದಾರರಿಗೆ ಮಾತ್ರವೇ ವಾಟ್ಸಾಪ್ ಬೇಟಾ ವರ್ಷನ್‍ನಲ್ಲಿ (2.18.194ನಲ್ಲಿ ಈ ಫೀಚರ್​ನ್ನು ಮರು ಆರಂಭಿಸಿದೆ. ಈ ಫಿಚರ್​​ ಪ್ರಕಾರ ನಿರ್ದಿಷ್ಟ ವ್ಯಕ್ತಿ ಅಥವಾ ಗ್ರೂಪ್​ನಿಂದ ಬರುವ ಮೆಸೇಜ್​ಗಳನ್ನು ಹೈಡ್​ ಮಾಡಬಹುದು ಎಂದು WABetaInfo ಡಾಟ್​ ಕಾಂ ವರದಿ ಮಾಡಿದೆ.

ವಾಟ್ಸಾಪ್​ ಬಳಕೇದಾರರು ಈ ಆಯ್ಕೆಯನ್ನು ಎನೇಬಲ್​​​ ಮಾಡಬೇಕಾದರೆ ಮೊದಲು ನಿಮಗೆ ಬೇಕಾದ ವ್ಯಕ್ತಿ ಅಥವಾ ಗ್ರೂಪ್​ನ್ನು ಸೆಲೆಕ್ಟ್​ ಮಾಡಿ ಬಳಿಕ 'ಕಾಂಟಾಕ್ಟ್​ ಇನ್ಫೋ'ವನ್ನು ಆಯ್ಕೆ ಮಾಡಿ, ಇಲ್ಲಿ 'ಮೀಡಿಯಾ ವಿಸಿಬಿಲಿಟಿ' ಆಯ್ಕೆಯಿರುತ್ತದೆ. ಅಲ್ಲಿ 'ನೊ' ಎಂದು ಸೆಲೆಕ್ಟ್​ ಮಾಡಿ. ಈ ಮೂಲಕ ನೀವು ಚಿತ್ರಗಳು ಅಥವಾ ಡೌನ್​ಲೋಡ್​ ಆಗಿರುವ ಮಾಹಿತಿಗಳನ್ನು ಹೈಡ್​ ಮಾಡಬಹುದು.

ಕೆಲ ದಿನಗಳ ಹಿಂದೆ ವಾಟ್ಸಾಪ್​ ತನ್ನ ಬೀಟಾ ಬಳಕೇದಾರರಿಗೆ ಸ್ಟಿಕ್ಕರ್​ ರಿಯಾಕ್ಷನ್​ ಆಯ್ಕೆಯನ್ನು ನೀಡಿತ್ತು. ಆದರೆ ಇತ್ತೀಚೆಗಷ್ಟೇ ಸ್ಟಕ್ಕರ್​ ಆಯ್ಕೆಯಲ್ಲಿ ಕೆಲ ಬದಲಾವಣೆ ತರಲು ಇಚ್ಚಿಸಿದ ಸಂಸ್ಥೆ ಇದನ್ನು ಡಿಸೇಬಲ್​ ಮಾಡಿದೆ ಎಂದು WABetaInfo ವರದಿ ಮಾಡಿದೆ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ