ನೀರಿನಿಂದ ನಿಮ್ಮ ಸ್ಮಾರ್ಟ್​ಫೋನ್​ ರಕ್ಷಿಸಲು​ ಹೀಗೆ ಮಾಡಿ

ಮಳೆಗಾಲದಲ್ಲಿ ಒದ್ದೆ ಕೈಗಳಿಂದ ಮೊಬೈಲ್​ ಬಳಕೆ ಮಾಡಿದರೆ ಹಾಳಾಗುವ ಪ್ರಸಂಗ ಹೆಚ್ಚು, ಮಾತ್ರವಲ್ಲದೆ ಕೆಲ ಸಂದರ್ಭದಲ್ಲಿ ಫೋನ್​ಗಳು ಕೈಜಾರಿ ನೀರಿಗೆ ಬೀಳುವ ಸಾದ್ಯತೆಗಳಿರುತ್ತವೆ. ಹೀಗಾಗಿ, ಇಂತಹ ಸಮಸ್ಯೆಗಳಿಂದ ಪಾರಾಗಲು ವಾಟರ್​ ಪ್ರೂಫ್​ ಕವರ್​ ಅಳವಡಿಕೆ ಮಾಡುವುದು ಉತ್ತಮ.

news18
Updated:May 5, 2019, 5:06 PM IST
ನೀರಿನಿಂದ ನಿಮ್ಮ ಸ್ಮಾರ್ಟ್​ಫೋನ್​ ರಕ್ಷಿಸಲು​ ಹೀಗೆ ಮಾಡಿ
ವಾಟರ್​​  ಪ್ರೂಫ್​​ ಮೊಬೈಲ್​ ಕವರ್
  • News18
  • Last Updated: May 5, 2019, 5:06 PM IST
  • Share this:
ಮಾರುಕಟ್ಟೆಯಲ್ಲಿ ವಾಟರ್​ ಪ್ರೂಫ್​ ಫೋನ್​ಗಳಿಗೆ ಉತ್ತಮ ಬೇಡಿಕೆ ಇದೆ. ಗ್ರಾಹಕರು ವಾಟರ್​​ ಪ್ರೂಫ್​ ಸ್ಮಾರ್ಟ್​ಫೋನ್​ಗಳನ್ನು ಖರೀದಿಸುತ್ತಿದ್ದಾರೆ. ಆದರೆ, ವಾಟರ್​ ಪ್ರೂಫ್​ ಫೋನ್​ಗಳ ಕೈಗೆಟಕುವ ಬೆಲೆಗಳಿಗೆ ಸಿಗುತ್ತಿಲ್ಲ. ಕೆಲ ಗ್ರಾಹಕರಿಗೆ ಇಂತಹ ಮೊಬೈಲ್​ ಫೋನ್​ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಗ್ರಾಹಕರು ತಮ್ಮ ಮೊಬೈಲ್​ ಫೋನ್​​ಗಳನ್ನು ನೀರಿನಿಂದ ರಕ್ಷಿಸಿಕೊಳ್ಳಲು ಮಾರುಕಟ್ಟೆಯಲ್ಲಿ ವಾಟರ್​​  ಪ್ರೂಫ್​​ ಮೊಬೈಲ್​ ಕವರ್​ವೊಂದನ್ನು ಪರಿಚಯಿಸಲಾಗಿದೆ.

ಇನ್ನೇನೂ ಕೆಲ ದಿನಗಳಲ್ಲಿ ಮಳೆಗಾಲ ಆರಂಭವಾಗುತ್ತದೆ. ಮಳೆಗಾಲದಲ್ಲಿ ಒದ್ದೆ ಕೈಗಳಿಂದ ಮೊಬೈಲ್​ ಬಳಕೆ ಮಾಡಿದರೆ ಹಾಳಾಗುವ ಪ್ರಸಂಗ ಹೆಚ್ಚು, ಮಾತ್ರವಲ್ಲದೆ ಕೆಲ ಸಂದರ್ಭದಲ್ಲಿ ಫೋನ್​ಗಳು ಕೈಜಾರಿ ನೀರಿಗೆ ಬೀಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಇಂತಹ ಸಮಸ್ಯೆಗಳಿಂದ ಪಾರಾಗಲು ವಾಟರ್​ ಪ್ರೂಫ್​ ಕವರ್​ ಅಳವಡಿಕೆ ಮಾಡುವುದು ಉತ್ತಮ.

ಇದನ್ನೂ ಓದಿ: ಆಟವಾಡುತ್ತಿದ್ದ ವೇಳೆ ಮಣ್ಣು ತಿಂದು ಇಬ್ಬರು ಮಕ್ಕಳು ಸಾವು

ಸ್ಮಾರ್ಟ್​ಫೋನ್​ಗಳಿಗೆ ವಾಟರ್​ ಪ್ರೂಫ್​ ಕವರ್ ಅಳವಡಿಸಿದರೆ ನೀರಿನಲ್ಲೂ ಕೂಡ ಉಪಯೋಗಿಸಬಹುದಾಗಿದೆ. ಮಾತ್ರವಲ್ಲದೆ, ಈ ಕವರ್ ಅಳವಡಿಸಿದರೆ ಒದ್ದೆಯಾದ ಕೈಯಿಂದಲೂ ಮೊಬೈಲ್​ ಬಳಸಬಹುದು.

ಅಮೇಜಾನ್​ ಮಾರುಕಟ್ಟೆ ತಾಣದಲ್ಲಿ ಮೊಬೈಲ್​ ವಾಟರ್​ ಪ್ರೂಫ್​ ಕವರ್​ಗಳು ಮಾರಾಟವಾಗುತ್ತಿದೆ. ವಿವಿಧ ಕಂಪೆನಿಗಳ ನೂತನ ಫೀಚರ್​ ಅಳವಡಿಕೆಯ ವಾಟರ್​​ ಪ್ರೂಫ್​ ಕವರ್​ಗಳಿವೆ.


S
First published: May 5, 2019, 5:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading