ಸ್ಮಾರ್ಟ್ಫೋನ್ (Smartphone ) ಮಾರುಕಟ್ಟೆಗೆ ಬಂದ ದಶಕದಲ್ಲೇ ವಿಶ್ವಾದ್ಯಂತ ದೊಡ್ಡ ಮಾರುಕಟ್ಟೆ ಸೃಷ್ಟಿಸಿಕೊಂಡಿದೆ. ಹೀಗಾಗಿ ಈ ಉದ್ಯಮದಲ್ಲಿ(Industry) ಬೇರೆ ಯಾವ ಉದ್ಯಮದಲ್ಲೂ ಕಂಡು ಬರದ ಮಾರುಕಟ್ಟೆ ಪೈಪೋಟಿ ನಡೆಯುತ್ತಿದೆ. ಹಾಗೆಯೇ ಪ್ರತಿ ಸ್ಮಾರ್ಟ್ಫೋನ್ ತಯಾರಿಕಾ ಸಂಸ್ಥೆ ನೂತನ ಆವಿಷ್ಕಾರಗಳಿಗೆ ( Innovations) ದೊಡ್ಡ ಮೊತ್ತವನ್ನೇ ಮೀಸಲಿಟ್ಟಿವೆ. ಹೀಗಾಗಿಯೇ ವರ್ಷವೊಂದರಲ್ಲಿ ಹತ್ತಾರು ಬಗೆಯ ಮಾಡೆಲ್ಗಳನ್ನು ಪ್ರತಿ ಸ್ಮಾರ್ಟ್ಫೋನ್ ಕಂಪನಿ ಬಿಡುಗಡೆ ಮಾಡುತ್ತವೆ. ಮೊದಲಿಗೆ ಸ್ಮಾರ್ಟ್ಫೋನ್ ಉದ್ಯಮದ ಅನಭಿಷಕ್ತ ಸಾಮ್ರಾಟನಂತೆ ಮೆರೆದಿದ್ದ ಸ್ಯಾಮ್ಸಂಗ್ (Samsung) ಕಂಪನಿ. ಆದರೆ, ಕೆಲವೇ ವರ್ಷಗಳಲ್ಲಿ ಸ್ಯಾಮ್ ಸಂಗ್ ಸ್ಮಾರ್ಟ್ಫೋನ್ ಮಾರುಕಟ್ಟೆಯನ್ನು ಹಿಂದಿಕ್ಕುವಂತೆ ( overtake ) ಚೀನಾದ ವಿವೋ, ಒಪ್ಪೋ, ರೆಡ್ ಮಿ ಮತ್ತಿತರ ಕಂಪನಿಗಳು ಸ್ಮಾರ್ಟ್ಫೋನ್ ಮಾರುಕಟ್ಟೆ ಆವರಿಸಿಕೊಂಡಿವೆ. ಈಗ ಇದರ ಸಾಲಿಗೆ ಮತ್ತೊಂದು ಸ್ಮಾರ್ಟ್ಫೋನ್ ಕಂಪನಿ ಸೇರಿಕೊಂಡಿದೆ: ರಿಯಲ್ ಮಿ.( Real Me)
ಡೋರ್ ಬೆಲ್ ಕ್ಯಾಮೆರಾ
ಸ್ಮಾರ್ಟ್ಫೋನ್ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಲು ಅಣಿಯಾಗಿರುವ ರಿಯಲ್ ಮಿ, 2022ರ ವರ್ಷಾರಂಭಕ್ಕೆ ತನ್ನ ನೂತನ ಮಾಡೆಲ್ನೊಂದಿಗೆ ಲಗ್ಗೆ ಹಾಕಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಡೋರ್ ಬೆಲ್ ಕ್ಯಾಮೆರಾದಿಂದ ಮೊದಲ್ಗೊಂಡು ಸ್ಮಾರ್ಟ್ ಗ್ಲಾಸ್ಗಳಿಗೆ ಗಾಳಿ ಶುದ್ಧೀಕರಣ ತಂತ್ರಜ್ಞಾನ ಹಾಗೂ ನೀರಿನಲ್ಲಿ ಮುಳುಗಿದಾಗ ಎಚ್ಚರಿಸುವ ಸೆನ್ಸಾರ್ ಮತ್ತಿತರ ಅತ್ಯಾಧುನಿಕ ಉತ್ಪನ್ನಗಳು ಸೇರಿವೆ.
ಇದನ್ನೂ ಓದಿ: Realme GT 2 Series: ಜನವರಿಯಲ್ಲಿ ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಬಿಡುಗಡೆ ಖಚಿತ!
ರಿಯಲ್ ಮಿ ಕಂಪನಿಯು ಭಾರತದ ಬೃಹತ್ ಮಾರುಕಟ್ಟೆ ಪ್ರವೇಶಿಸಲು ತನ್ನ ಬತ್ತಳಿಕೆಯಲ್ಲಿ ಹಲವಾರು ಬಗೆಯ ಜೀವನ ಶೈಲಿ ಉತ್ಪನ್ನಗಳನ್ನು ಹೊಂದಿದ್ದು, ಗ್ರಾಹಕರಿಗೆ ಕೈಗೆಟಕುವಂತೆ ಮಾಡುವ ಉದ್ದೇಶ ಹೊಂದಿದೆ. ಆದರೆ, ಅವೆಲ್ಲವೂ ಭಾರತ ಮಾರುಕಟ್ಟೆಯನ್ನು ಅದ್ದೂರಿಯಾಗಿ ಪ್ರವೇಶಿಸುವ ಉದ್ದೇಶದ ಒಂದು ಭಾಗ ಮಾತ್ರವಾಗಿದೆ.
ಟೆಕ್ ಶೋ ವಿಶೇಷ ಪ್ರದರ್ಶನ
2021ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ ರಿಯಲ್ ಮಿ ಸಂಸ್ಥೆ, ಸ್ಮಾರ್ಟ್ ಫೋನ್ ಹೊರತಾದ ಮಾರುಕಟ್ಟೆಯಲ್ಲಿ ದೊಡ್ಡ ಪಾತ್ರ ನಿರ್ವಹಿಸುವ ಯೋಜನೆಯನ್ನು ಪ್ರಕಟಿಸಿತ್ತು. ಇತ್ತೀಚೆಗೆ ನಡೆದ ಟೆಕ್ ಶೋವೊಂದರಲ್ಲಿ ತನ್ನ ಉತ್ಪನ್ನಗಳ ವಿಶೇಷ ಪ್ರದರ್ಶನ ನಡೆಸಿರುವ ರಿಯಲ್ ಮಿ, ಭಾರತದ ಒಟ್ಟಾರೆ ಮಾರುಕಟ್ಟೆಯ ಶೇ. 10ರಷ್ಟು ಪಾಲನ್ನು ಹೊಂದಿರುವ ಸ್ಮಾರ್ಟ್ಫೋನ್ ಹೊರತಾದ ಮಾರುಕಟ್ಟೆಗೆ ತನ್ನ ಕೊಡುಗೆ ನೀಡಲು ಮುಂದಾಗಿದೆ ರಿಯಲ್ ಮಿ.
ರಿಯಲ್ ಮಿ ಆಯೋಜಿಸಿದ್ದ ಪ್ರದರ್ಶನದಲ್ಲಿ ಸ್ಮಾರ್ಟ್ ಹೋಂ ಪರಿಕಲ್ಪನೆಯ ಭಾಗವಾಗಿ ರೋಬೋಟ್ ವ್ಯಾಕ್ಯೂಮ್ ಕ್ಲೀನರ್, ಎಲ್ಇಡಿ ಸ್ಮಾರ್ಟ್ ಬಲ್ಬ್, ಸ್ವಯಂಚಾಲಿತ ರಾತ್ರಿ ದೀಪ, ಸ್ಮಾರ್ಟ್ ಸ್ಕೇಲ್, ಸ್ಮಾರ್ಟ್ ಕ್ಯಾಮ್ 360 ಎಲ್ಲ ಸೇರಿತ್ತು. ಈ ಉತ್ಪನ್ನಗಳನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ರಿಯಲ್ ಮಿ ದೆಹಲಿಯಲ್ಲಿ ವಿಶೇಷ ಪ್ರದರ್ಶನವೊಂದನ್ನು ಹಮ್ಮಿಕೊಂಡಿತ್ತು. ಈ ಪ್ರದರ್ಶನದಲ್ಲಿ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕೆಲವು ಉತ್ಪನ್ನಗಳು ಸೇರಿದಂತೆ ಇನ್ನಷ್ಟೇ ಬಿಡುಗಡೆಯಾಗಬೇಕಾದ ಉತ್ಪನ್ನಗಳನ್ನು ದೊಡ್ಡ ಮನೆಯೊಂದರಲ್ಲಿ ಅಚ್ಚುಕಟ್ಟಾಗಿ ಜೋಡಿಸಿಡಲಾಗಿತ್ತು.
ಇದನ್ನೂ ಓದಿ: ಕೇವಲ 449 ರೂ.ಗೆ Realme X7 Max ಸ್ಮಾರ್ಟ್ಫೋನ್! Flipkart ನೀಡುತ್ತಿರುವ ಈ ಆಫರ್ ಮಿಸ್ ಮಾಡ್ಬೇಡಿ
ರಿಯಲ್ ಮಿ ಆ್ಯಪ್
ಈ ಪೈಕಿ ಮನೆಗೆ ಪ್ರವೇಶಿಸುವ ದ್ವಾರದ ಮುಂಭಾಗವೇ ರಿಯಲ್ ಮಿ ಸಂಪರ್ಕ ಹೊಂದಿದ್ದ ಡೋರ್ ಬೆಲ್ ಕ್ಯಾಮೆರಾ ಅಳವಡಿಸಲಾಗಿತ್ತು. ಇದರಿಂದ ಯಾರಾದರೂ ನಿಮ್ಮ ಮನೆಯಲ್ಲಿದ್ದಾಗ ನೀವು ವಿಶ್ವದ ಯಾವುದೇ ಮೂಲೆಯಿಂದಾದರೂ ಅವರೊಂದಿಗೆ ಈ ತಂತ್ರಜ್ಞಾನ ಬಳಸಿಕೊಂಡು ಮಾತನಾಡಬಹುದು. ರಿಯಲ್ ಮಿ ಆ್ಯಪ್ ತಂತ್ರಜ್ಞಾನಕ್ಕೆ ನಿಜಕ್ಕೂ ಧನ್ಯವಾದ!! ಇದರೊಂದಿಗೆ ರಿಯಲ್ ಮಿ ಆ್ಯಪ್ ಪ್ಲಾಟ್ಫಾರ್ಮ್ ನಿರ್ವಹಣೆಯಂತೆ ಕಾರ್ಯನಿರ್ವಹಿಸಲಿದ್ದು, ಹಲವಾರು ಕಂಪನಿಗಳ ಉತ್ಪನ್ನಗಳನ್ನು ನಿಮ್ಮ ಸ್ಮಾರ್ಟ್ಫೋನ್ಗೆ ಸಂಪರ್ಕಿಸುತ್ತದೆ.
ಟೆಕ್ ಲೈಫ್ ಸ್ಮಾರ್ಟ್ ಡೋರ್ ಬೆಲ್ ಕ್ಯಾಮೆರಾ ಬಿಡುಗಡೆಯಾಗುವ ಸಮಯದ ಬಗ್ಗೆ ರಿಯಲ್ ಮಿ ಸಂಸ್ಥೆ ಇನ್ನೂ ಅಧಿಕೃತವಾಗಿ ಏನೂ ಹೇಳಿಕೆ ನೀಡಿಲ್ಲವಾದರೂ ಮುಂದಿನ ವರ್ಷ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಅಂದಾಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ