HOME » NEWS » Tech » WHAT IS UPI AND HOW IS MONEY TRANSFERRED THROUGH IT HERE THE DETAILS STG HG

UPI ಅಂದ್ರೆ ಏನು? ಅದರ ಮೂಲಕ ಹಣವನ್ನು ಹೇಗೆ ವರ್ಗಾಯಿಸಲಾಗುತ್ತದೆ? ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ

ಯುನಿಫೈಡ್ ಪೇಮೆಂಟ್ಸ್​ ಇಂಟರ್​ಫೇಸ್ (ಯುಪಿಐ) ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ಆರ್​ ಬಿ ಐ ನಿಯಂತ್ರಣದಲ್ಲಿರುವ ಒಂದು ಹಣ ಪಾವತಿ ವ್ಯವಸ್ಥೆಯಾಗಿದೆ.

news18-kannada
Updated:April 10, 2021, 6:27 PM IST
UPI ಅಂದ್ರೆ ಏನು? ಅದರ ಮೂಲಕ ಹಣವನ್ನು ಹೇಗೆ ವರ್ಗಾಯಿಸಲಾಗುತ್ತದೆ? ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ
UPI
  • Share this:
ಭಾರತ ನಗದುರಹಿತ ಆರ್ಥಿಕತೆಯತ್ತ ಹೆಜ್ಜೆ ಹಾಕುತ್ತಿದೆ. ಈ ಕಾರಣದಿಂದ ನಿಮ್ಮ ಸ್ಮಾರ್ಟ್​ಫೋನ್​ಗಳು ನಿಮ್ಮ ಡೆಬಿಡ್​ ಕಾರ್ಡ್​ಗಳಾಗಿಯೂ ಬದಲಾಗುತ್ತಿದೆ. ಭಾರತ್ ಕ್ಯೂ ಆರ್​ ಕೋಡ್​ ಮೂಲಕ ನೀವು ನಿಮ್ಮ ದೈನಂದಿನ ಹಣಕಾಸಿನ ವ್ಯವಹಾರವನ್ನು ಸುಲಭವಾಗಿ ಮಾಡಬಹುದು. IMPS, NEFT ಗಿಂತ ಶೀಘ್ರವಾಗಿ ಇಲ್ಲಿ ಯಾವಾಗ ಬೇಕಾದರೂ ಹಣವನ್ನು ವರ್ಗಾಯಿಸಬಹುದು. ಡಿಜಿಟಲ್ ವ್ಯಾಲೆಟ್ ಅಥವಾ ಕ್ರೆಡಿಟ್, ಡೆಬಿಟ್ ಕಾರ್ಡ್ ಇಲ್ಲದೆಯೇ ಆನ್​ಲೈನ್​ ಮೂಲಕ ಸುಲಭವಾಗಿ ಹಣವನ್ನು ಪೇ ಮಾಡುವ ಸುಲಭ ಸಾಧನವೇ UPI. ಯುಪಿಐ ಎನ್ನುವುದು ಒಂದು ಮೊಬೈಲ್ ಅಪ್ಲಿಕೇಷನ್​ಲ್ಲಿ ಹಲವಾರು ಬ್ಯಾಂಕ್​ ಖಾತೆಗಳನ್ನು ನೋಂದಾಯಿಸಿ ಹಣವನ್ನು ವರ್ಗಾವಣೆ ಮಾಡಲು ಇರುವ ಡಿಜಿಟಲ್ ಮನಿ ಟ್ರಾನ್ಸಫರಿಂಗ್ ಆ್ಯಪ್‌​ ಆಗಿದೆ.

ಯುನಿಫೈಡ್ ಪೇಮೆಂಟ್ಸ್​ ಇಂಟರ್​ಫೇಸ್ (ಯುಪಿಐ) ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ಆರ್​ ಬಿ ಐ ನಿಯಂತ್ರಣದಲ್ಲಿರುವ ಒಂದು ಹಣ ಪಾವತಿ ವ್ಯವಸ್ಥೆಯಾಗಿದೆ. ಐಎಂಪಿಎಸ್ ಮೂಲಸೌಕರ್ಯದಿಂದ ಯು ಪಿ ಐ ರಚನೆ ಮಾಡಲಾಗಿದೆ. ಇಬ್ಬರು ಖಾತೆಯನ್ನು ಹೊಂದಿರುವವರು ಸುಲಭವಾಗಿ ಹಣವನ್ನು ವರ್ಗಾವಣೆ ಮಾಡುವ ವ್ಯವಸ್ಥೆಯಾಗಿದೆ.

ಇನ್ನೂ ಸುಲಭವಾಗಿ ಹೇಳುವುದಾದರೆ, UPI ಎನ್ನುವುದು ಒಂದು ಮೊಬೈಲ್ ಅಪ್ಲಿಕೇಷನ್​ಲ್ಲಿ ಹಲವಾರು ಬ್ಯಾಂಕ್​ ಖಾತೆಗಳನ್ನು ನೋಂದಾಯಿಸಿ ಹಣವನ್ನು ವರ್ಗಾವಣೆ ಮಾಡಲು ಇರುವ ಡಿಜಿಟಲ್ ಮನಿ ಟ್ರಾನ್ಸ್​​ಫರಿಂಗ್ ಆ್ಯಪ್‌​ ಆಗಿದೆ. ಇದರಲ್ಲಿ ಹಲವಾರು ಫೀಚರ್​ಗಳಿದ್ದು, ತಡೆರಹಿತ ಬ್ಯಾಕಿಂಗ್ ಮತ್ತು ಮರ್ಚೆಂಟ್​ ಪೇಮೆಂಟ್​ ಎಲ್ಲವೂ ಒಂದೇ ಆ್ಯಪ್‌​ನ ಅಡಿಯಲ್ಲಿ ಬರುತ್ತವೆ. ಈ ಪಾವತಿ ವ್ಯವಸ್ಥೆಯಲ್ಲಿ ಹಣದ ಪಾವತಿಗಾಗಿ ವಿನಂತಿ ಕಳುಹಿಸಿದರೆ ಖಾತೆದಾರರು ಸುಲಭವಾಗಿ ಹಣವನ್ನು ವರ್ಗಾಯಿಸಬಹುದು. ವರ್ಷ ಪೂರ್ತಿ ಯಾವ ಸಮಯದಲ್ಲಾದರೂ ಸರಿ ಗ್ರಾಹಕರು ಮೊಬೈಲ್​ ಮೂಲಕ ಹಣವನ್ನು ಕಳುಹಿಸಬಹುದಾಗಿದೆ. ಯುಪಿಐ ಆಂಡ್ರಯ್ಡ್ ಮತ್ತು ಐಓಎಸ್​​ ಮೊಬೈಲ್​ಗಳಲ್ಲಿ ಲಭ್ಯವಿದೆ.

ಬ್ಯಾಂಕ್​ಗಿಂತ ಯುಪಿಐ ಫಾಸ್ಟ್

ಇದಿಷ್ಟೇ ಅಲ್ಲದೇ ಬ್ಯಾಂಕ್​ ಮೂಲಕ ನೀವು ಹಣವನ್ನು ವರ್ಗಾಯಿಸಲು ಸಮಯದ ನಿರ್ಬಂಧವಿರುತ್ತದೆ. ಖಾತೆದಾರರ ವಿವರಗಳನ್ನು ಚಲನ್​ನಲ್ಲಿ ತುಂಬಬೇಕು. ಅಲ್ಲದೇ ಹಣ ಸ್ವೀಕರಿಸುವವರು ಬೇರೆ ಬ್ಯಾಂಕ್​ ಹೊಂದಿದ್ದರೆ, ಹಣ ತಲುಪಲು ಒಂದು ದಿನವಾದರೂ ಬೇಕು. ಆದರೆ ಯುಪಿಐನಲ್ಲಿ ಖಾತೆದಾರರ ಫೋನ್​ ನಂಬರ್​ ಇದ್ದರೆ ಸಾಕು. ಅವರ ಬಳಿಯೂ ಯುಪಿಐ ಆ್ಯಪ್‌​ ಇದ್ದರೆ ಸುಲಭದಲ್ಲಿ ಹಣವನ್ನು ಕಳುಹಿಸಬಹುದು.

ದೈನಂದಿನ ವ್ಯವಹಾರ ಈಗ ಸುಲಭ

ನೀವು ಟ್ಯಾಕ್ಸಿಯಲ್ಲಿ ಓಡಾಡುವಾಗ ಚಿಲ್ಲರೆಗಾಗಿ ಕಷ್ಟ ಅನುಭವಿಸುವ ಪರಿಪಾಠವಿಲ್ಲ. ಯುಪಿಐ ಮೂಲಕ ಪಾಸ್​ವರ್ಡ್​ ಬಳಸಿ ಹಣವನ್ನು ಡಿಜಿಟಲ್ ಕ್ಯಾಶ್​ ರೀತಿ ಪೇ ಮಾಡುವುದರಿಂದ ಚಿಲ್ಲರೆಯ ಗೊಡವೆ ಇರುವುದಿಲ್ಲ.ಯುಪಿಐ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 5 ಪ್ರಮುಖ ಅಂಶಗಳು ಇಲ್ಲಿವೆ

1. ಯುಪಿಐ ಮೂಲಕ ಹಣ ವರ್ಗಾಯಿಸಲು ಗ್ರಾಹಕರು ಬ್ಯಾಂಕ್​ ಅಕೌಂಟ್ ಹೊಂದಿರಬೇಕೆ?

ಕಾರ್ಡ್ ಅಥವಾ ವಾಲೆಟ್​​ ಮೂಲಕ ಯುಪಿಐ ಹಣ ಪಾವತಿ ಸಾಧ್ಯವಿಲ್ಲ. ಬ್ಯಾಂಕ್​ ಖಾತೆಗಳು ಮಾತ್ರ ಅದನ್ನು ಮಾಡಲು ಸಾಧ್ಯ.

2. ಯುಪಿಐ ಬಳಸಿ ಹಣವನ್ನು ವರ್ಗಾವಣೆ ಮಾಡಲು ವಿಭಿನ್ನ ಚಾನೆಲ್​ಗಳ ಆಯ್ಕೆ ಮಾಡಬಹುದೇ?
ಯುಪಿಐ ಬಳಸಿ ಹಣವನ್ನು ವರ್ಗಾಯಿಸುವ ಚಾನೆಲ್​ಗಳು ಹೀಗಿವೆ

a. ವರ್ಚುವಲ್ ಐಡಿ ಮೂಲಕ ಹಣವನ್ನು ಕಳಿಸಬಹುದು ಇಲ್ಲವೇ ಸ್ವೀಕರಿಸಬಹುದು
b. ಅಕೌಂಟ್​ ನಂಬರ್ + ಐಎಫ್​ಎಸ್​ಸಿ
c. ಆಧಾರ್​ ನಂಬರ್

3. ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ 10 ಯುಪಿಐ ಆಪ್​ಗಳು ಯಾವುವು?

ಫೋನ್ ಪೇ
ಪೇಟಿಎಂ
ಭೀಮ್ ಆ್ಯಪ್‌
ಮೊಬಿ ಕ್ವಿಕ್
ಗೂಗಲ್ ಪೇ
ಉಬರ್
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್
ಎಸ್​ಬಿಐ ಪೇ
ಆ್ಯಕ್ಸಿಸ್ ಪೇ
ಬಿಓಬಿ ಯುಪಿಐ

4. ಐಎಮ್​ಪಿಎಸ್​ಗಿಂತ ಯುಪಿಐ ವಿಭಿನ್ನ ಹೇಗೆ?

ಯುಪಿಐ ಐಎಮ್​ಪಿಎಸ್​ಗೆ ಈ ಕೆಳಗಿನ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ
1. P2P ಕಾರ್ಯಚಟುವಟಿಕೆಯನ್ನು ಒದಗಿಸುತ್ತದೆ
2. ಮರ್ಚೆಂಟ್​ ಪೇಮೆಂಟ್​ ಸರಳೀಕೃತಗೊಳಿಸುತ್ತದೆ
3. ಹಣ ವರ್ಗಾವಣೆಗೆ ಒಂದೇ ಆ್ಯಪ್‌​ ಸಾಕು

4. ಸಿಂಗಲ್ ಕ್ಲಿಕ್, ಎರಡು ಹಂತದ ದೃಢೀಕರಣ

5. ಯುಪಿಐಯಲ್ಲಿ ಹಣವನ್ನು ವರ್ಗಾಯಿಸಲು ಇರುವ ಮಿತಿ ಎಷ್ಟು?
ಪ್ರಸ್ತುತ 1 ಲಕ್ಷದ ವರೆಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ
First published: April 10, 2021, 6:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories