ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ (Smartphone) ಎಂಬುದು ಪ್ರತಿಯೊಬ್ಬರ ಅಗತ್ಯ ಸಾಧನ ಎಂದು ಹೇಳ್ಬಹುದು. ಸ್ಮಾರ್ಟ್ಫೋನ್ ಇಲ್ಲದೆ ಜೀವನವೇ ಇಲ್ಲ ಎನ್ನುವವರು ಎಷ್ಟೋ ಮಂದಿ ಇದ್ದಾರೆ. ಅದಕ್ಕೆ ತಕ್ಕಂತೆ ಕಂಪನಿಗಳು ಕೂಡ ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಈ ಪ್ರಸಿದ್ಧ ಸ್ಮಾರ್ಟ್ಫೋನ್ ಕಂಪನಿಗಳಲ್ಲಿ ಇನ್ಫಿನಿಕ್ಸ್ (Infinix) ಕೂಡ ಒಂದು. ಆದರೆ ಈ ಕಂಪನಿ ಈ ಹಿಂದೆ ಒಂದು ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ ಎಂದು ಮಾರುಕಟ್ಟೆಯಲ್ಲಿ ಹೇಳಿತ್ತು. ಇದೀಗ ಆ ಸ್ಮಾರ್ಟ್ಫೋನ್ ಡಿಸೆಂಬರ್ 28 ರಿಂದ ಅಂದರೆ ಇಂದಿನಿಂದ ಖರೀದಿಸಬಹುದಾಗಿದೆ. ಇನ್ಫಿನಿಕ್ಸ್ ನಿಂದ ಇಂದು ಮಾರಾಟ ಪ್ರಾರಂಭಿಸಿರುವ ಸ್ಮಾರ್ಟ್ಫೋನ್ ಇನ್ಫಿನಿಕ್ಸ್ ಝೀರೋ 20 (Infinix Zero 20) ಎಂಬುದಾಗಿದೆ.
ಇನ್ಫಿನಿಕ್ಸ್ ಕಂಪನಿ ಈ ಹಿಂದೆ ತನ್ನ ಕಂಪನಿಯಿಂದ ಇನ್ಫಿನಿಕ್ಸ್ ಝೀರೋ 20 ಎಂಬ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಬರಲಿದೆ ಎಂದು ಘೋಷಿಸಿತ್ತು. ಇದೀಗ ಡಿಸೆಂಬರ್ 28 ರಿಂದ ಫ್ಲಿಪ್ಕಾರ್ಟ್ನಲ್ಲಿ ಖರೀದಿಸಬಹುದೆಂದು ಘೋಷಿಸಿದೆ. ಹಾಗಿದ್ರೆ ಇದರ ಬೆಲೆ ಎಷ್ಟು, ಫೀಚರ್ಸ್ ಹೇಗಿದೆ ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಡಿಸ್ಪ್ಲೇ ಮತ್ತು ಪ್ರೊಸೆಸರ್ ಹೇಗಿದೆ?
ಇನ್ಫಿನಿಕ್ಸ್ ಝೀರೋ 20 ಸ್ಮಾರ್ಟ್ಫೋನ್ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಮತ್ತು ಡ್ಯೂಡ್ರಾಪ್ ನಾಚ್ನೊಂದಿಗೆ ಬರಲಿದೆ. ಇದು ಮೀಡಿಯಾಟೆಕ್ ಹಿಲಿಯೋ G99 SoC ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಇನ್ಫಿನಿಕ್ಸ್ ಝೀರೋ 20 ಸ್ಮಾರ್ಟ್ಫೋಬ್ ಆಂಡ್ರಾಯ್ಡ್ 12 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿರಲಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ರೆಡ್ಮಿ ಹೊಸ ಸ್ಮಾರ್ಟ್ಫೋನ್! ಹೇಗಿದೆ ಗೊತ್ತಾ ಫೀಚರ್ಸ್?
ಕ್ಯಾಮೆರಾ ಫೀಚರ್ಸ್
ಇನ್ಫಿನಿಕ್ಸ್ ಝೀರೋ 20 ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಯೂನಿಟ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 60 ಎಮ್ಪಿ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ಫೀಚರ್ಸ್ ಹೇಗಿದೆ?
ಇನ್ನು ಇದರಲ್ಲಿ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W ವೇಗದ ವೈರ್ಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 4ಜಿ, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್, GNSS, NFC ಮತ್ತು ಯುಎಸ್ಬಿ ಟೈಪ್ ಸಿ ಅನ್ನು ಬೆಂಬಲಿಸಲಿದೆ.
ಸ್ಟೋರೇಜ್ ಆಯ್ಕೆಗಳು ಹೇಗಿವೆ?
ಇನ್ಫಿನಿಕ್ಸ್ ಝೀರೋ 20 ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್ನಲ್ಲಿ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್ ಝೀರೋ 20 ಸ್ಮಾರ್ಟ್ಫೋನ್ ಅನ್ನು 15,999 ರೂಪಾಯಿಯ ಆರಂಭಿಕ ಬೆಲೆಯಲ್ಲಿ ಫ್ಲಿಪ್ಕಾರ್ಟ್ನಲ್ಲಿ ಖರೀದಿಸಬಹುದಾಗಿದೆ. ಜೊತೆಗೆ ಈ ಸ್ಮಾರ್ಟ್ಫೋನ್ ಗ್ರೀನ್ ಫ್ಯಾಂಟಸಿ, ಗ್ಲಿಟರ್ ಗೋಲ್ಡ್ ಮತ್ತು ಸ್ಪೇಸ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ