2022 Best Smartphones: 2022ರ ನಂಬರ್​ 1 ಸ್ಮಾರ್ಟ್​ಫೋನ್​ ಯಾವುದು? ಊಹೆ ಮಾಡಿರ್ಲಿಕ್ಕೂ ಸಾಧ್ಯ ಇಲ್ಲ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸ್ಮಾರ್ಟ್​​ಫೋನ್​ಗಳ ಬಳಕೆ ಹೆಚ್ಚಾದಂತೆ ಸ್ಮಾರ್ಟ್​ಫೋನ್​ಗಲ ಬಿಡುಗಡೆ ಪ್ರಮಾಣ ಕೂಡ ಹೆಚ್ಚಾಯಿತು. ಈ ವರ್ಷದಲ್ಲಿ ತಿಂಗಳಿಗೆ  3 ರಿಂದ 4 ರಷ್ಟು ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗುತ್ತಿತ್ತು. ಆದರೆ ಎಷ್ಟೇ ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾದರು ಮಾರಕಟ್ಟೆಯಲ್ಲಿ ಕೆಲವೊಂದು ಸ್ಮಾರ್ಟ್​ಫೋನ್ಸ್​ ಮಾತ್ರ ಜನರಿಗೆ ಇಷ್ಟವಾಗಿದೆ. ಹಾಗಿದ್ರೆ 2022ರ ನಂಬರ್​ 1 ಮತ್ತು ಟಾಪ್​ 5 ಸ್ಮಾರ್ಟ್​ಫೋನ್ಸ್​ ಯಾವುದೆಂದು ಈ ಕೆಳಗೆ ಓದಿ.

ಮುಂದೆ ಓದಿ ...
  • Share this:

    ಈ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ಸ್ಮಾರ್ಟ್​ಫೋನ್ (​Smartphones) ಜಗತ್ತು ಕಲರ್​ಫುಲ್​ ಎನ್ನಬಹುದು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​ಫೋನ್​ಗಳ ಬಳಕೆ ಹೆಚ್ಚಾಗಿದೆ. ಅದ್ರಲ್ಲೂ ಈ ವರ್ಷ ಅಂತೂ ಸ್ಮಾರ್ಟ್​ಫೋನ್​ಗಳು ಹಲವಾರು ಬಿಡುಗಡೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ (News Year) ಬಂದಾಗುತ್ತೆ. ಹಾಗಿದ್ದಾಗ ಒಮ್ಮೆಯಾದರೂ ನಮ್ಮ ಈ ಹಿಂದೆ  ಟೆಕ್ನಾಲಜಿ ಯುಗದಲ್ಲಿ ಆದಂತಹ ಬೆಳವಣಿಗೆಯನ್ನು ಮೆಲುಕು ಹಾಕಬೇಕು. ಈ ವರ್ಷ ಮೊಬೈಲ್​ ಮಾರುಕಟ್ಟೆಗೆ ಹಲವಾರು ಸ್ಮಾರ್ಟ್​ಫೋನ್​ಗಳು ಕಾಲಿಟ್ಟಿದೆ. ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮಟ್ಟದ ಬೆಲೆಯವರೆಗೆ ಸಾಕಷ್ಟು ಮೊಬೈಲ್​ಗಳು ಬಿಡುಗಡೆಯಾಗಿದೆ. ಆದರೆ ಇದರಲ್ಲಿ ಕೆಲವೊಂದು ಸ್ಮಾರ್ಟ್​ಫೋನ್​ಗಳು ಮಾತ್ರ ಮಾರುಕಟ್ಟೆಯಲ್ಲಿ ತನ್ನದೇ ಆದಂತಹ ಸ್ಥಾನವನ್ನು ಗಳಿಸಿಕೊಂಡಿದೆ. ಹಾಗಿದ್ರೆ 2022ರ ನಂಬರ್​ 1 ಸ್ಮಾರ್ಟ್​ಫೋನ್​ (2022 Number 1 Smartphone) ಯಾವುದು ಎಂಬುದನ್ನು  ನಾವು ತಿಳಿಸ್ತೀವಿ.


    ಸ್ಮಾರ್ಟ್​​ಫೋನ್​ಗಳ ಬಳಕೆ ಹೆಚ್ಚಾದಂತೆ ಸ್ಮಾರ್ಟ್​ಫೋನ್​ಗಲ ಬಿಡುಗಡೆ ಪ್ರಮಾಣ ಕೂಡ ಹೆಚ್ಚಾಯಿತು. ಈ ವರ್ಷದಲ್ಲಿ ತಿಂಗಳಿಗೆ  3 ರಿಂದ 4 ರಷ್ಟು ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗುತ್ತಿತ್ತು. ಆದರೆ ಎಷ್ಟೇ ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾದರು ಮಾರಕಟ್ಟೆಯಲ್ಲಿ ಕೆಲವೊಂದು ಸ್ಮಾರ್ಟ್​ಫೋನ್ಸ್​ ಮಾತ್ರ ಜನರಿಗೆ ಇಷ್ಟವಾಗಿದೆ. ಹಾಗಿದ್ರೆ 2022ರ ನಂಬರ್​ 1 ಮತ್ತು ಟಾಪ್​ 5 ಸ್ಮಾರ್ಟ್​ಫೋನ್ಸ್​ ಯಾವುದೆಂದು ಈ ಕೆಳಗೆ ಓದಿ.


    ಕೌಂಟರ್​ಪಾಯಿಂಟ್​ ವರದಿಯ ಪ್ರಕಾರ


    ವಿಶ್ವದ ಅತಿದೊಡ್ಡ ಸ್ಮಾರ್ಟ್​​ಫೋನ್​ ಮಾರುಕಟ್ಟೆಗಳಲ್ಲಿ ಭಾರತ ಕೂಡ ಒಂದು. ಅದೇ ರೀತಿ ಕೌಂಟರ್​​ಪಾಯಿಂಟ್​ ಸಂಸ್ಥೆಯ ವರದಿಯ ಪ್ರಕಾರ 2ನೇ ತ್ರೈಮಾಸಿಕದಲ್ಲಿ 2022ರಲ್ಲಿ ಭಾರತದಲ್ಲಿ ಸುಮಾರು 37 ಮಿಲಿಯನ್​ ಸ್ಮಾರ್ಟ್​​ಫೋನ್​ಗಳನ್ನು ರವಾನಿಸಿದೆ. ಭಾರತದ ಸ್ಮಾರ್ಟ್​ಫೋನ್​ ಬಳಕೆ ಮಾಡುವವರ ಸಂಖ್ಯೆ 600 ಮಿಲಿಯನ್​ಗಿಂತಲೂ ಹೆಚ್ಚಾಗಿದೆ ಎಂದು ವರದಿ ಹೇಳಿದೆ.


    ಇದನ್ನೂ ಓದಿ: 5 ಸಾವಿರಕ್ಕಿಂತಲೂ ಕಡಿಮೆ ಬೆಲೆ ಹೊಂದಿರುವ ಟಾಪ್​ 5 ಸ್ಮಾರ್ಟ್​ಫೋನ್ಸ್​ ಪಟ್ಟಿ ಇಲ್ಲಿದೆ


    ಇದಲ್ಲದೆ ವಿಶೇಷವಾಗಿ ದೇಶದಲ್ಲಿ ಈ ವರ್ಷ 5ಜಿ ನೆಟ್​ವರ್ಕ್​ ಸೇವೆ ಆರಂಭವಾಗಿದ್ದರಿಂದ ಸ್ಮಾರ್ಟ್​ಫೋನ್​ ಬಳಕೆದಾರರಲ್ಲಿ ಶೇಕಡಾ 50% ರಚ್ಟು ಜನ ಹೊಸ ಸ್ಮಾರ್ಟ್​​ಫೋನ್​ಗಳನ್ನೇ ಈ ವರ್ಷ ಖರೀದಿಸಿದ್ದಾರೆ ಎಮದು ಕೌಂಟರ್​ಪಾಯಿಂಟ್​ ಸಂಶೋಧನಾ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.


    ಸಾಂಕೇತಿಕ ಚಿತ್ರ


    ನಂಬರ್​ ಒನ್​ ಮೊಬೈಲ್​ ಯಾವುದು?


    2022ರ ಸಮೀಕ್ಷೆಯ ಪ್ರಕಾರ ನಂಬರ್​ 1 ಸ್ಮಾರ್ಟ್​​ಫೋನ್​ ಎಂವ ಬಿರುದನ್ನು ಆ್ಯಪಲ್​ ಕಂಪನಿಯಿಂದ ಈ ವರ್ಷ ಬಿಡುಗಡೆಯಾದಂತಹ ಐಫೋನ್ 14 ಪ್ರೋ ಮೊಬೈಲ್ ಪಡೆದುಕೊಂಡಿದೆ. ಕಂಪನಿ ಈ ಫೋನ್​ನ ಮೇಲೆ ನಂಬರ್ 1 ಸ್ಥಾನ ಪಡೆಯಲು ಇದರ ಕ್ಯಾಮೆರಾ, ಕೆಲವೊಂದು ಫೀಚರ್ಸ್​ಗಳೇ ಕಾರಣ ಎನ್ನಬಹುದು.


    ವಿಶೇಷವಾಗಿ ಐಫೋನ್ 14 ಪ್ರೋ ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದೆ. ಆ್ಯಪಲ್ ಕಂಪನಿ ಮೊದಲ ಬಾರಿಗೆ ಆಲ್ವೇಸ್‌ ಆನ್ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್​ಫೊನ್​ನಲ್ಲಿ ನೀಡಿದೆ.  ಹಿಂಬದಿಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ವಾಡ್ ಪಿಕ್ಸೆಲ್​ನಿಂದ ಕೂಡಿದ್ದು 65 ಪ್ರತಿಶತ ದೊಡ್ಡ ಸೆನ್ಸಾರ್​ ಅನ್ನು ಹೊಂದಿದೆ. 48 ಮೆಗಾ ಪಿಕ್ಸೆಲ್ ಅಗಲದ ಕ್ಯಾಮೆರಾ 2x ಟೆಲಿಫೋಟೋ ಕ್ಯಾಮೆರಾವನ್ನು ಇದು ಹೊಂದಿದೆ. A16 ಬಯೋನಿಕ್ ಚಿಪ್ ಪ್ರೊಸೆಸರ್ ನಿಂದ ಇದು ಕಾರ್ಯನಿರ್ವಹಿಸುತ್ತದೆ.


    ಟಾಪ್​ 2 ಸ್ಮಾರ್ಟ್​ಫೋನ್​:


    2022ರ ಬೆಸ್ಟ್​ ಸ್ಮಾರ್ಟ್​ಫೋನ್​ಗಳಲ್ಲಿ ಟಾಪ್ 2  ಪಟ್ಟವನ್ನು ಸ್ಯಾಮ್​ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್‌ ಪಡೆದಿದೆ. ಇದು 6.8 ಇಂಚಿನ ಎಡ್ಜ್‌ QHD ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಇದರ ಡಿಸ್​​ಪ್ಲೇ ಸೇಫ್ಟಿಗಾಗಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ಅನ್ನು ನೀಡಿದ್ದಾರೆ. ಇದರೊಂದಿಗೆ ಐ ಕಂಫರ್ಟ್ ಶೀಲ್ಡ್‌ ಸೌಲಭ್ಯ ಇದೆ. ಇದು ಆಕ್ಟಾ ಕೋರ್ 4 nm SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 12 GB RAM ಮತ್ತು ವೇರಿಯಂಟ್ ಆಯ್ಕೆ ಪಡೆದಿದೆ. ಇನ್ನು ಇದು ಉತ್ತಮ ಕ್ಯಾಮೆರಾ ಫೀಚರ್ಸ್​ ಅನ್ನು ಹೊಂದಿದ್ದು, 5000mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ.


    Apple Is Bringing 5G For iPhone Users In India
    ಐಫೋನ್​ 14


    ಟಾಪ್​ 3 ಸ್ಮಾರ್ಟ್​ಫೋನ್:


    ಗೂಗಲ್ ಪಿಕ್ಸೆಲ್ 7 ಪ್ರೋ ಸ್ಮಾರ್ಟ್​ಫೋನ್​ ಈ ವರ್ಷದ ಟಾಪ್​ 3 ಸ್ಮಾರ್ಟ್​ಫೋನ್​ ಆಗಿದೆ. ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಕ್ವಾಡ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್‌ ಜೊತೆಗೆ ಆಂಡ್ರಾಯ್ಡ್ 13 ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. 10.8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಇದು 5000mAh ಬ್ಯಾಟರಿ ಜೊತೆಗೆ 30 ವ್ಯಾಟ್​ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.


    ಟಾಪ್​ 4 ಸ್ಮಾರ್ಟ್​​ಫೋನ್​:


    ಶಿವೋಮಿ 12 ಪ್ರೋ 2022ರ ಟಾಪ್​ 5 ಸ್ಮಾರ್ಟ್​​ಫೋನ್​ಗಳಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಇನ್ನು ಇದರ ಫೀಚರ್ಸ್​ ಬಗ್ಗೆ ಹೇಳುವುದಾದರೆ  ಇದು 6.72 ಇಂಚಿನ WQHD+ E5 ಅಮೋಲ್​ಡ್‌ ಡಿಸ್‌ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX707 ಸೆನ್ಸಾರ್‌ ಅನ್ನು ಹೊಂದಿದ್ದು ಇನ್ನು ಹಲವಾರು ಬೆಸ್ಟ್​ ಫೀಚರ್ಸ್​ ಹೊಂದಿರು ಸ್ಮಾರ್ಟ್​​ಫೋನ್ ಇದಾಗಿದೆ.


    ಟಾಪ್​ 5 ಸ್ಮಾರ್ಟ್​​ಫೋನ್​:


    ಒನ್‌ಪ್ಲಸ್‌ 10 ಪ್ರೋ ಸ್ಮಾರ್ಟ್​​ಫೋನ್​ ಈ ವರ್ಷದ ಟಾಪ್​ 5 ಸ್ಮಾರ್ಟ್​ಫೋನ್​ಗಳಲ್ಲಿ ಐದನೇ ಸ್ಥಾನವನ್ನು ಗಳಿಸಿದೆ. ಈ ಸ್ಮಾರ್ಟ್​​ಫೋನ್ 6.7 ಇಂಚಿನ QHD+ ಲಿಕ್ವಿಡ್‌ ಅಮೋಲ್​ಡ್​​ ಡಿಸ್‌ಪ್ಲೇ ಹೊಂದಿದೆ. ಆಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX789 ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ ಜೊತೆಗೆ 80W ಸೂಪರ್‌ವೂಕ್‌ ವೈರ್ಡ್ ಚಾರ್ಜಿಂಗ್ ಮತ್ತು 50W ಏರ್‌ವೂಕ್‌ ವಾಯರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು