Fire-Boltt Smartwatch: ಫೈರ್​ಬೋಲ್ಟ್​ ಕಂಪೆನಿಯ ಹೊಸ ಬಜೆಟ್​ ಬೆಲೆಯ ಸ್ಮಾರ್ಟ್​ವಾಚ್ ಬಿಡುಗಡೆ! ಬೆಲೆ ಎಷ್ಟು?

ಫೈರ್​ ಬೋಲ್ಟ್​ ಟಾಕ್​ ಅಲ್ಟ್ರಾ ವಾಚ್​

ಫೈರ್​ ಬೋಲ್ಟ್​ ಟಾಕ್​ ಅಲ್ಟ್ರಾ ವಾಚ್​

ಫೈರ್​ ಬೋಲ್ಟ್​ ಕಂಪೆನಿ ಭಾರತದ ಮಾರುಕಟ್ಟೆಗೆ ಫೈರ್​​ಬೋಲ್ಟ್​ ಟಾಕ್​​ ಅಲ್ಟ್ರಾ ವಾಚ್ ಅನ್ನು ಅನಾವರಣ ಮಾಡಿದೆ. ಇದು 120ಕ್ಕೂ ಹೆಚ್ಚೂ ಸ್ಪೋರ್ಟ್ಸ್​​ ಫೀಚರ್​ಗಳನ್ನು ಒಳಗೊಂಡಿದ್ದು, ಇನ್ನೂ ಹಲವಾರು ಫೀಚರ್ಸ್​ಗಳನ್ನು ಹೊಂದಿದೆ. ಇದರ ಕಂಪ್ಲೀಟ್​ ಡೀಟೇಲ್ಸ್​ ಈ ಲೇಖನದಲ್ಲಿದೆ.

  • Share this:

    ಸ್ಮಾರ್ಟ್​​​ವಾಚ್​​ಗಳು ಟೆಕ್​ ಮಾರುಕಟ್ಟೆಯಲ್ಲಿ (Tech Market) ಭಾರೀ ಬೇಡಿಕೆಯಲ್ಲಿರುವ ಸಾಧನ ಎನ್ನಬಹುದು. ಈಗಿನ ದಿನದಲ್ಲಿ ಯಾರ ಕೈ ನೋಡಿದ್ರೂ ಸ್ಮಾರ್ಟ್​ವಾಚ್​ಗಳೇ ಕಾಣ ಸಿಗುತ್ತವೆ. ಕಂಪೆನಿಗಳು ಸಹ ಕಲರ್​ಫುಲ್​, ಗೇಮಿಂಗ್ ಸ್ಮಾರ್ಟ್​​ವಾಚ್​ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ. ಜನಪ್ರಿಯ ಸ್ಮಾರ್ಟ್​​ವಾಚ್​ ಕಂಪೆನಿಗಳಲ್ಲಿ ಒಂದಾದ ಫೈರ್​​ಬೋಲ್ಟ್​ ಇದೀಗ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ವಾಚ್​ ಅನ್ನು ಪರಿಚಯಿಸುತ್ತಿದೆ. ಈ ಕಂಪೆನಿಯ ಸ್ಮಾರ್ಟ್​​ವಾಚ್​ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಅದಕ್ಕಾಗಿಯೇ ಫೈರ್​ಬೋಲ್ಟ್ (Fire-Boltt)​ ಭಾರತದಲ್ಲಿ ಹಲವಾರು ಸಾಧನಗಳನ್ನು ಪರಿಚಯಿಸಿದೆ. ಇದೀಗ ಬಜೆಟ್​ ಬೆಲೆಯಲ್ಲಿ ಸ್ಮಾರ್ಟ್​​ವಾಚ್ (Smartwatch)​ ಒಂದನ್ನು ಅನಾವರಣ ಮಾಡಿದೆ.


    ಫೈರ್​ಬೋಲ್ಟ್​ ಕಂಪೆನಿ ಭಾರತದ ಮಾರುಕಟ್ಟೆಗೆ ಫೈರ್​​ಬೋಲ್ಟ್​ ಟಾಕ್​​ ಅಲ್ಟ್ರಾ ವಾಚ್ ಅನ್ನು ಅನಾವರಣ ಮಾಡಿದೆ. ಇದು 120ಕ್ಕೂ ಹೆಚ್ಚೂ ಸ್ಪೋರ್ಟ್ಸ್​​ ಫೀಚರ್​ಗಳನ್ನು ಒಳಗೊಂಡಿದ್ದು, ಇನ್ನೂ ಹಲವಾರು ಫೀಚರ್ಸ್​ಗಳನ್ನು ಹೊಂದಿದೆ. ಇದರ ಕಂಪ್ಲೀಟ್​ ಡೀಟೇಲ್ಸ್​ ಈ ಲೇಖನದಲ್ಲಿದೆ.


    ಫೈರ್​​ಬೋಲ್ಟ್​ ಟಾಕ್​ ಅಲ್ಟ್ರಾ ವಾಚ್​ ಫೀಚರ್ಸ್​


    ಫೈರ್​ಬೋಲ್ಟ್​ ಟಾಕ್ ಅಲ್ಟ್ರಾ ಸ್ಮಾರ್ಟ್ ವಾಚ್ 1.39 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240x240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ ವಾಚ್ ರನ್ನಿಂಗ್‌, ಸೈಕ್ಲಿಂಗ್ ಮತ್ತು ಸ್ವಿಮ್ಮಿಂಗ್‌ ಸೇರಿದಂತೆ 123 ಸ್ಪೋರ್ಟ್ಸ್‌ ಮೋಡ್‌ಗಳನ್ನು ಬೆಂಬಲಿಸಲಿದೆ. ಇದರೊಂದಿಗೆ SpO2 ಮಾನಿಟರಿಂಗ್, ಡೈನಾಮಿಕ್ ಹಾರ್ಟ್‌ಬೀಟ್‌ ಟ್ರ್ಯಾಕಿಂಗ್ ಮತ್ತು ಸ್ಲಿಪಿಂಗ್‌ ಟ್ರ್ಯಾಕ್‌ ಅನ್ನು ಕೂಡ ನಡೆಸಲಿದೆ.




    ಬ್ಲೂಟೂತ್​ ಕಾಲಿಂಗ್ ಫೀಚರ್​


    ಫೈರ್​​ಬೋಲ್ಟ್ ಟಾಕ್ ಅಲ್ಟ್ರಾ ವಾಚ್​ ಧೂಳು ಮತ್ತು ವಾಟರ್​ ಪ್ರೂಫ್​ ಫೀಚರ್​​ ಅನ್ನು ಹೊಂದಿದ್ದು ಇದಕ್ಕಾಗಿ ಈ ವಾಚ್ IP68 ರೇಟಿಂಗ್ ಅನ್ನು ಸಹ ಹೊಂದಿದೆ. ವಿಶೇಷವಾಗಿ ಈ ಫೈರ್​ಬೋಲ್ಟ್​ ಸ್ಮಾರ್ಟ್​​ವಾಚ್​ ಬ್ಲೂಟೂತ್ ಕಾಲ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದರಿಂದ ವಾಚ್ ಡಿಸ್‌ಪ್ಲೇ ಮೂಲಕ ಡೈರೆಕ್ಟ್‌ ಆಗಿ ಕಾಲ್‌ಗಳನ್ನು ಸ್ವೀಕರಿಸಬಹುದು ಮತ್ತು ತಿರಸ್ಕರಿಸುವ ಅವಕಾಶವನ್ನು ನೀಡುತ್ತದೆ.


    ಫೈರ್​ ಬೋಲ್ಟ್​ ಟಾಕ್​ ಅಲ್ಟ್ರಾ ವಾಚ್​


    ಜೊತೆಗೆ ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಆ್ಯಪಲ್​ ಸಿರಿಯಂತಹ ವಾಯ್ಸ್‌ ಅಸಿಸ್ಟೆಂಟ್‌ ಗಳ ಮೂಲಕವೂ ಕಂಟ್ರೋಲ್ ಮಾಡಬಹುದಾಗಿದೆ. ಇದರಿಂದ ಸ್ಮಾರ್ಟ್‌ವಾಚ್‌ನಲ್ಲಿ ಎಐ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬಳಸಬಹುದಾಗಿದೆ


    ಬ್ಯಾಟರಿ ಫೀಚರ್ಸ್​


    ಫೈರ್-ಬೋಲ್ಟ್ ಟಾಕ್ ಅಲ್ಟ್ರಾ ಸ್ಮಾರ್ಟ್‌ವಾಚ್‌ ಅನ್ನು  ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 7 ದಿನಗಳ ಕಾಲ ನಿರಂತರವಾಗಿ ಬಳಸಬಹುದಾಗಿದೆ. ಇನ್ನು ಈ ಸ್ಮಾರ್ಟ್​​ವಾಚ್​ ಅನ್ನು ಫುಲ್‌ ಚಾರ್ಜ್‌ ಮಾಡುವುದಕ್ಕೆ ಸುಮಾರು 120 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಫೈರ್‌ಬೋಲ್ಟ್‌ ಕಂಪೆನಿ ಹೇಳಿಕೊಂಡಿದೆ.


    ನೂರಕ್ಕೂ ಹೆಚ್ಚು ವಾಚ್​ಫೇಸ್​ಗಳು


    ಫೈರ್​ಬೋಲ್ಟ್​ ಟಾಕ್​ ಅಲ್ಟ್ರಾ ಸ್ಮಾರ್ಟ್‌ವಾಚ್‌ನಲ್ಲಿ ನೂರಕ್ಕೂ ಹೆಚ್ಚು ಕ್ಲೌಡ್ ವಾಚ್ ಫೇಸ್‌ಗಳನ್ನು ನೀಡಲಾಗಿದೆ. ಈ ಸ್ಮಾರ್ಟ್​​ವಾಚ್​ ಯುಐ ಇಂಟರ್ಫೇಸ್ ಅನ್ನು ಹೊಂದಿದೆ. ಇದರಿಂದ ಕ್ಯಾಮೆರಾ ಮತ್ತು ಮ್ಯೂಸಿಕ್‌ ಪ್ಲೇ ಬ್ಯಾಕ್‌ ಅನ್ನು ಕೂಡ ಕಂಟ್ರೋಲ್‌ ಮಾಡುವುದಕ್ಕೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಈ ವಾಚ್​ ಇನ್​ಬಿಲ್ಟ್​ ಗೇಮಿಂಗ ಅನ್ನು ಹೊಂದಿದ್ದು, ಬಳಕೆದಾರರಿಗೆ ಉತ್ತಮ ಗೇಮಿಂಗ್ ಅನುಭವವನ್ನು ಪಡೆಯಬಹುದಾಗಿದೆ.


    ಇದನ್ನೂ ಓದಿ: 36 ಗಂಟೆಗಳ ಬ್ಯಾಟರಿ ಬ್ಯಾಕಪ್​ ಹೊಂದಿರುವ ನಾಯ್ಸ್​ ಕಂಪೆನಿಯ ಹೊಸ ಇಯರ್​​ಬಡ್ಸ್​ ಲಾಂಚ್​!


    ಬೆಲೆ ಮತ್ತು ಲಭ್ಯತೆ


    ಭಾರತದಲ್ಲಿ ಬಿಡುಗಡೆಯಾಗಿರುವ ಫೈರ್​​ಬೋಲ್ಟ್ ಟಾಕ್ ಅಲ್ಟ್ರಾ ಸ್ಮಾರ್ಟ್ ವಾಚ್ 1,999 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇನ್ನು ಬಜೆಟ್‌ ಬೆಲೆಯಲ್ಲಿ ಬಂದಿರುವ ಈ ಸ್ಮಾರ್ಟ್‌ವಾಚ್‌ ಅನ್ನು ಕಂಪೆನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ ಖರೀದಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸ್ಮಾರ್ಟ್‌ವಾಚ್‌ ಕಪ್ಪು, ನೀಲಿ, ಕೆಂಪು, ಬೂದು, ಗುಲಾಬಿ ಮತ್ತು ಟೀಲ್ ಎಂಬ ಒಟ್ಟು ಆರು ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದೆ.

    Published by:Prajwal B
    First published: