Jio Recharge Plans: ಜಿಯೋನ ಈ ರೀಚಾರ್ಜ್​ ಪ್ಲ್ಯಾನ್​ನಲ್ಲಿ ಯಾವುದು ಉತ್ತಮ? ಇಲ್ಲಿದೆ ಕಂಪ್ಲೀಟ್​ ಮಾಹಿತಿ

ಜಿಯೋ ಟೆಲಿಕಾಂ ಕಂಪೆನಿ

ಜಿಯೋ ಟೆಲಿಕಾಂ ಕಂಪೆನಿ

Recharge Offers: ಜಿಯೋ ತನ್ನ ಗ್ರಾಹಕರಿಗಾಗಿ ಇತ್ತೀಚೆಗೆ ಅಗ್ಗದ ಬೆಲೆಯಲ್ಲಿ, ವಾರ್ಷಿಕ ವ್ಯಾಲಿಡಿಟಿ ಅವಧಿಯನ್ನು ಹೊಂದಿರುವ ರೀಚಾರ್ಜ್ ಪ್ಲ್ಯಾನ್​ ಅನ್ನು ಬಿಡುಗಡೆ ಮಾಡಿತ್ತು. ಆದರೆ ಈ ಯೋಜನೆಗಳಲ್ಲಿ ಯಾವುದು ಉತ್ತಮ, ಹೇಗೆಲ್ಲಾ ಪ್ರಯೋಜನಗಳು ಲಭ್ಯವಿದೆ ಎಂಬುದು ಕೆಲವರಿಗೆ ಮಾಹಿತಿ ಇಲ್ಲ. ಹಾಗಿದ್ರೆ ಜಿಯೋ ಪರಿಚಯಿಸಿರುವ ಆ ಯೋಜನೆಗಳು ಯಾವುದೆಂಬುದನ್ನು ನೋಡ್ಬೇಕಾದ್ರೆ ಈ ಲೇಖನವನ್ನು ನೋಡಿ.

ಮುಂದೆ ಓದಿ ...
  • Share this:

    ಭಾರತೀಯ ಟೆಲಿಕಾಂ ಕಂಪೆನಿಗಳಲ್ಲಿ (Indian Telecom Companies)  ಹಲವಾರು ಖಾಸಗಿ ಕಂಪೆನಿಗಳಿವೆ. ಈ ಕಂಪೆನಿಗಳಲ್ಲಿ ಜಿಯೋ ತನ್ನ ಗ್ರಾಹಕರಿಗೆ ಅಗ್ಗದ ಬೆಲೆಯ ರೀಚಾರ್ಜ್ ಪ್ಲ್ಯಾನ್​ಗಳನ್ನು ಪರಿಚಯಿಸುವ ಮೂಲಕ ಅಗ್ರಸ್ಥಾನದಲ್ಲಿದೆ. ಇದಕ್ಕೆ ಪೈಪೋಟಿ ನೀಡುವ ದೃಷ್ಟಿಯಿಂದ ಏರ್​ಟೆಲ್ (Airtel)​, ಬಿಎಸ್​ಎನ್​ಎಲ್ (BSNL)​ ಮತ್ತು ವೊಡಫೋನ್ ಐಡಿಯಾ (Vodafone Idea) ಕಂಪೆನಿಗಳು ವಿಶೇಷ ಬೆಲೆಯ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಜಿಯೋ (reliance Jio) ದೇಶದೆಲ್ಲೆಡೆ 5ಜಿ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಹಲವು ನಗರಗಳಲ್ಲಿ ಈಗಾಗಲೇ ಸ್ಥಾಪಿಸಿ ಆ ನಗರಗಳಲ್ಲಿ 5ಜಿ ನೆಟ್​ವರ್ಕ್ ಅನ್ನು ಸ್ಥಾಪಿಸಿದ ಏಕೈಕ ಟೆಲಿಕಾಂ ಕಂಪೆನಿ ಎಮದು ಗುರುತಿಸಿಕೊಂಡಿದೆ. 


    ಜಿಯೋ ತನ್ನ ಗ್ರಾಹಕರಿಗಾಗಿ ಇತ್ತೀಚೆಗೆ ಅಗ್ಗದ ಬೆಲೆಯಲ್ಲಿ, ವಾರ್ಷಿಕ ವ್ಯಾಲಿಡಿಟಿ ಅವಧಿಯನ್ನು ಹೊಂದಿರುವ ರೀಚಾರ್ಜ್ ಪ್ಲ್ಯಾನ್​ ಅನ್ನು ಬಿಡುಗಡೆ ಮಾಡಿತ್ತು. ಆದರೆ ಈ ಯೋಜನೆಗಳಲ್ಲಿ ಯಾವುದು ಉತ್ತಮ, ಹೇಗೆಲ್ಲಾ ಪ್ರಯೋಜನಗಳು ಲಭ್ಯವಿದೆ ಎಂಬುದು ಕೆಲವರಿಗೆ ಮಾಹಿತಿ ಇಲ್ಲ. ಹಾಗಿದ್ರೆ ಜಿಯೋ ಪರಿಚಯಿಸಿರುವ ಆ ಯೋಜನೆಗಳು ಯಾವುದೆಂಬುದನ್ನು ನೋಡ್ಬೇಕಾದ್ರೆ ಈ ಲೇಖನವನ್ನು ನೋಡಿ.


    ಜಿಯೋನ 2999 ರೂಪಾಯಿ ಪ್ರೀಪೇಯ್ಡ್​ ಪ್ಲ್ಯಾನ್​


    ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಆದ್ರೆ ಈಗ ಹೆಚ್ಚುವರಿಯಾಗಿ 23 ದಿನಗಳನ್ನು ನೀಡಿದ್ದು, ಒಟ್ಟು 388 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಇನ್ನು ಯೋಜನೆಯಲ್ಲಿ ಪ್ರತಿದಿನ 2.5 ಜಿಬಿ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ.




    ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನ್ಲಿಮಿಟೆಡ್​ ವಾಯ್ಸ್​ ಕಾಲ್​​ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಅನ್ನು ಉಚಿತವಾಗಿ ಮಾಡಬಹುದು. ಇನ್ನು ಈ ಯೋಜನೆಯಲ್ಲಿ ಜಿಯೋ ಆ್ಯಪ್ಸ್​ ಸೇವೆಗಳು ಲಭ್ಯವಾಗುತ್ತದೆ.


    ಜಿಯೋನ 2879 ರೂಪಾಯಿ ಪ್ರೀಪೇಯ್ಡ್​ ಪ್ಲ್ಯಾನ್​


    ಜಿಯೋ ಟೆಲಿಕಾಂ ಪರಿಚಯಿಸಿರುವ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಇದು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನುನೀಡುತ್ತದೆ. ಈ ಅವಧಿಯಲ್ಲಿ ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದು. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನ್ಲಿಮಿಟೆಡ್​ ಉಚಿತ ಕಾಲ್​ ಮಾಡುವ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.


    ಜಿಯೋನ 2545 ರೂಪಾಯಿ ಪ್ರೀಪೇಯ್ಡ್​ ಪ್ಲ್ಯಾನ್​


    ಜಿಯೋ ಟೆಲಿಕಾಂನ 2545 ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್ ಯೋಜನೆಯು 336 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದೆ. ಈ ಯೋಜನೆ ಮೂಲಕ ಪ್ರತಿದಿನ 1.5 ಜಿಬಿ ಡೇಟಾವನ್ನು ಗ್ರಾಹಕರು ಬಳಸಬಹುದಾಗಿದೆ.


    ಜಿಯೋ ಟೆಲಿಕಾಂ ಕಂಪೆನಿ


    ಈ ಯೋಜನೆಯ ವ್ಯಾಲಿಡಿಟಿ ಅವಧಿಯಲ್ಲಿ ಒಟ್ಟು 504 ಜಿಬಿ ಡೇಟಾ ಸೌಲಭ್ಯ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯ್ಸ್​ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಮಾಡುವ ಪ್ರಯೋಜನ ಸಹ ದೊರೆಯುತ್ತದೆ.


    ಜಿಯೋನ 2023 ರೂಪಾಯಿ ಪ್ರೀಪೇಯ್ಡ್​ ಪ್ಲ್ಯಾನ್​


    ಜಿಯೋನ ಈ ಯೋಜನೆಯು ಈ ವರ್ಷದಲ್ಲಿ ಬಿಡುಗಡೆಯಾದ ಮೊದಲ ವಾರ್ಷಿಕ ಯೋಜನೆಯನ್ನು ನೀಡಿದಂತಹ ಪ್ಲ್ಯಾನ್ ಆಗಿದೆ. ಹೊಸ ವರ್ಷದ ಪ್ರಯುಕ್ತ ಈ ಯೋಜನೆಯನ್ನು ಕಂಪೆನಿ ತನ್ನ ಗ್ರಾಹಕರಿಗೆ ಪರಿಚಯಿಸಿತು. ಈ ಯೋಜನೆಯು ಒಟ್ಟು 252 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ.


    ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಒಪ್ಪೋ ಕಂಪೆನಿಯ ಹೊಸ ಸ್ಮಾರ್ಟ್​ಫೋನ್!


    ಇದರಲ್ಲಿ ಪ್ರತಿದಿನ 2.5 ಜಿಬಿ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಒಟ್ಟಾಗಿ ವ್ಯಾಲಿಡಿಟಿ ಮುಗಿಯುವ ಹೊತ್ತಿಗೆ 630ಜಿಬಿ ಡೇಟಾವನ್ನು ಬಳಸಬಹುದು. ಹಾಗೆಯೇ ಅನ್ಲಿಮಿಟೆಡ್​ ವಾಯ್ಸ್​ ಕಾಲ್ ಸವಲಭ್ಯ, ಉಚಿತ ದೈನಂದಿನ 100 ಎಸ್​​ಎಮ್​ಎಸ್ರ್ ಸೌಲಭ್ಯಗಳು ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನೆಮಾ ಹಾಗೂ ಇತರೆ ಆ್ಯಪ್​ಗಳನ್ನು ಪಡೆಯಬಹುದು.

    Published by:Prajwal B
    First published: