ಜನಪ್ರಿಯ ಟ್ವಿಟ್ಟರ್ CEO ಆಗಿ ಭಾರತೀಯ ಮೂಲದ ಪರಾಗ್ ಅಗ್ರವಾಲ್ (Parag Agrawal) ಸ್ಥಾನ ವಹಿಸಿಕೊಂಡಿದ್ದಾರೆ. ಜಾಕ್ ಡೋರ್ಸಿ (jack dorsey) ಬಳಿಕ ಭಾರತೀಯರೊಬ್ಬರು ಟ್ವಿಟ್ಟರ್ ಸಂಸ್ಥೆಯನ್ನು ಮುನ್ನಡೆಸಲು ಮುಂದಾಗಿದ್ದಾರೆ. ಈ ವಿಚಾರ ವಿಶ್ವದಾದ್ಯಂತ ಸುದ್ದಿಯಾಗಿರುವುದಲ್ಲದೆ. ಅನೇಕರು ಪರಾಗ್ ಅಗ್ರವಾಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನೂತನ ಸ್ಥಾನವನ್ನು ಅಲಂಕರಿಸುವ ವಿಚಾರವಾಗಿ ಶುಭಾಶಯ ತಿಳಿಸುತ್ತಿದ್ದಾರೆ.
ಪರಾಗ್ ಅಗ್ರವಾಲ್ ಟ್ವಿಟ್ಟರ್ ಸಿಇಒ ಸ್ಥಾನವನ್ನು ಅಲಂಕರಿಸಿದ ಬಳಿಕ ಅವರ ಕುರಿತಾಗಿ ಹಲವಾರು ಸುದ್ದಿಗಳು ವೈರಲ್ ಆಗುತ್ತಿದೆ. ಟ್ರೇಲ್ ಪೇಜ್ ಅವರ ಕುರಿತಾಗಿ ಕೆಲವೊಂದು ಮಾಹಿತಿಗಳನ್ನು ವೈರಲ್ ಮಾಡುತ್ತಿವೆ. ಅವರ ವೈಯ್ಯಕ್ತಿಕ ಜೀವನದಿಂದ ಹಿಡಿದು, ಫೋಟೋ, ಅವರು ಕಲಿತ ಕೋರ್ಸ್, ಭಾರತದ ಯಾವ ರಾಜ್ಯದವರು? ಎಂಬೆಲ್ಲಾ ಕುತೂಹಲತೆ ಪ್ರಶ್ನೆಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹರಿಬಿಡುತ್ತಿದ್ದಾರೆ. ಒಟ್ಟಾರೆ ಟ್ವಿಟ್ಟರ್ ನೂತನ ಸಿಇಒ ಪರಾಗ್ ಅಗ್ರವಾಲ್ ಹೆಸರು ಟ್ರೆಂಡಿಂಗ್ನಲ್ಲಿರುವುದಂತೂ ಸತ್ಯ.
ಪರಾಗ್ ಅಗ್ರವಾಲ್ ಸಂಪಾದನೆ ಎಷ್ಟು?
ನವೆಂಬರ್ 29 ರ ರಾತ್ರಿ ಪರಾಗ್ ಅಗ್ರವಾಲ್ ಅವರ ವೈಯಕ್ತಿಕ ವಿವರಗಳ ಕುರಿತು ಹಲವಾರು ಪ್ರಶ್ನೆಗಳೊಂದಿಗೆ Google ಟ್ರೆಂಡ್ ಕಾಣಿಸಿಕೊಂಡಿವೆ. ಅದರಲ್ಲಿ ಪ್ರಮುಖವಾಗಿ ಜನರು ಹುಡುಕಾಡುತ್ತಿರುವ ವಿಚಾರವೆಂದರೆ "ಪರಾಗ್ ಅಗರವಾಲ್ ನ್ಯೂ ವರ್ತ್", ನಂತರ "ಪರಾಗ್ ಅಗ್ರವಾಲ್ ಟ್ವಿಟರ್ ಸಂಬಳ" ಕುರಿತಾಗಿ ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪರಾಗ್ ಅವರ ಸಂಭಾವನೆ ಮತ್ತು ಅವರ ಆದಾಯದ ಕುರಿತ ಹಲವಾರು ಕಾಮೆಂಟ್ಗಳು ಮತ್ತು ಟ್ವೀಟ್ಗಳು ವೈರಲ್ ಆಗಿವೆ.
ಪರಾಗ್ ಅಗ್ರವಾಲ್ ಹೆಂಡತಿ ಯಾರು?
ಇಂಟರ್ನೆಟ್ನಲ್ಲಿ "ಟ್ವಿಟರ್ ಹೊಸ ಸಿಇಒ" ಎಂದು ಸರ್ಚ್ ಮಾಡಿರುವ ತಂಡವೊಂದಾದರೆ. "ಪರಾಗ್ ಅಗ್ರವಾಲ್ ಮಡದಿಯ " ಬಗ್ಗೆಯೂ ಅನೇಕರು ಹುಡುಕಾಡಿದ್ದಾರೆ. ಮಾತ್ರವಲ್ಲದೆ ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ಪರಾಗ್ ಅವರ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಅಂದಹಾಗೆಯೇ
ಪರಾಗ್ ಅಗ್ರವಾಲ್ ಹೆಂಡತಿ ವಿನೀತಾ ಅಗ್ರವಾಲ್ ಅವರು ವೈದ್ಯರಾಗಿದ್ದು, ಸ್ಟ್ಯಾನ್ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ವೈದ್ಯ ಮತ್ತು ಸಹಾಯಕ ಕ್ಲಿನಿಕಲ್ ಪ್ರೊಫೆಸರ್ ಆಗಿದ್ದಾರೆ.
ಟ್ವಿಟ್ಟರ್ನಲ್ಲಿ ಕೆಲವರು ಫೀಚರ್ಸ್ ಬಗ್ಗೆ ಬೇಡಿಕೆ ಇಟ್ಟಿದ್ದು, ಅದರಲ್ಲಿ ಎಡಿಟ್ ಬಟನ್ ಅನ್ನು ತರಲು ಅಥವಾ ನೀಲಿ ಪರಿಶೀಲನೆ ಬ್ಯಾಡ್ಜ್ಗಳನ್ನು ಹೊಂದಿರುವ ಜನರಿಗೆ ಸಹಾಯ ಮಾಡಲು ವಿನಂತಿಸಿದ್ದಾರೆ.
ಪರಾಗ್ ಅಗ್ರವಾಲ್ 10 ವರ್ಷಗಳಿಂದ ಟ್ವಿಟರ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜಾಹೀರಾತು ಎಂಜಿನಿಯರ್ ಆಗಿ ಟ್ವಿಟ್ಟರ್ ತಂಡವನ್ನು ಅವರು ಸೇರಿಕೊಂಡರು. ಅಗ್ರವಾಲ್ ಅವರು ವಿಶ್ವದ ಅತಿದೊಡ್ಡ ಟೆಕ್ ಸಂಸ್ಥೆಗಳ ಭಾರತೀಯ ಮೂಲದ ಸಿಇಒಗಳ ಗಣ್ಯ ಪಟ್ಟಿಗೆ ಸೇರಿದ್ದಾರೆ. (ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ಅನ್ನು ನೋಡಿಕೊಳ್ಳುತ್ತಾರೆ ಮತ್ತು ಸುಂದರ್ ಪಿಚೈ ಗೂಗಲ್ನ ಮುಖ್ಯಸ್ಥರಾಗಿದ್ದಾರೆ).
ಪರಾಗ್ ಅಗ್ರವಾಲ್ ಅವರ ಸಂಬಳ ಎಷ್ಟಿರಬಹುದು?
ಅನೇಕ ಭಾರತೀಯರು ಪರಾಗ್ ಅವರ ಸಂಬಳ ಎಷ್ಟಿರಬಹುದು ಎಂಬ ಪ್ರಶ್ನೆಗೆ ಉತ್ತರ ಹುಡುಕಾಡುತ್ತಿದ್ದಾರೆ. ಸದ್ಯ ಹರಿದಾಡುತ್ತಿರುವ ಮಾಹಿತಿಯಂತೆ ಮೂಲ ವೇತನವು ವರ್ಷಕ್ಕೆ (7,49,75,000.00) $1,000,000 ಇರಲಿದೆ ಎಂದು ಹೇಳಲಾಗುತ್ತಿದೆ.
ಪರಾಗ್ ಅವರ ಆಫರ್ ಲೆಟರ್ ಹೇಳುವಂತೆ, ವಾರ್ಷಿಕ ಮೂಲ ವೇತನದ 150% ರಷ್ಟು ಹೊಸ ಗುರಿ ಮತ್ತು ಬೋನಸ್ ಶೇಕಡಾವಾರುಗಳೊಂದಿಗೆ ಕಂಪನಿಯ ಕಾರ್ಯನಿರ್ವಾಹಕ ಬೋನಸ್ ಯೋಜನೆಯಲ್ಲಿ ಪಾಲ್ಗೊಳ್ಳುವವರಾಗಿ ಉಳಿಯುತ್ತೀರಿ. 2021 ಕ್ಕೆ ನೀವು ಗಳಿಸಿದ ನಿಜವಾದ ಬೋನಸ್ (ಯಾವುದಾದರೂ ಇದ್ದರೆ) ನಂತರ ಅನ್ವಯಿಸುವ ವಿಭಿನ್ನ ಸಂಬಳ ಮತ್ತು ಬೋನಸ್ ಶೇಕಡಾವಾರುಗಳನ್ನು ಆಧರಿಸಿರುತ್ತದೆ. ಎಲ್ಲಾ ಗಳಿಸಿದ ಬೋನಸ್ಗಳು (ಯಾವುದಾದರೂ ಇದ್ದರೆ) ಕಾಲಕಾಲಕ್ಕೆ ಜಾರಿಯಲ್ಲಿರುವಂತೆ Twitter ನ ಬೋನಸ್ ಯೋಜನೆಗೆ ಒಳಪಟ್ಟಿರುತ್ತವೆ, ”ಎಂದು ಅವರ ಆಫರ್ ಲೆಟರ್ ಉಲ್ಲೇಖಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ