ಜಗತ್ತಿನಾದ್ಯಂತ ಹೆಚ್ಚಿನ ದೇಶಗಳು ಇಂದು ಸೈಬರ್ ಕ್ರೈಮ್ (Cyber Crime) ಅಪರಾಧದಿಂದ ತತ್ತರಿಸಿ ಹೋಗಿವೆ. ಸೈಬರ್ ಅಪರಾಧದ ಒಂದು ಭಾಗ ಎಂದೆನಿಸಿರುವ ಸೈಬರ್ ಕ್ರೈಮ್ ಕಂಪ್ಯೂಟರ್ ಅಥವಾ ಇಂಟರ್ನೆಟ್ (Internet) ಮೂಲಕ ನಡೆಸುವ ಕಳ್ಳತನವಾಗಿದೆ. ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು (Personal Data Hack) ಕದಿಯುವುದು, ಬ್ಯಾಂಕ್ ಖಾತೆಗೆ (Bank Account) ಅಕ್ರಮವಾಗಿ ಪ್ರವೇಶಿಸಿ ಹಣ ಲಪಟಾಯಿಸುವುದು, ಪಾಸ್‌ವರ್ಡ್ ಮೊದಲಾದ ಅಧಿಕೃತ ಮಾಹಿತಿಯನ್ನು ಲೂಟುವುದು ಭದ್ರತಾ ಉಲ್ಲಂಘನೆಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಸೈಬರ್ ಕ್ರೈಮ್ ಒಳಗೊಂಡಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಮ್
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಡೇಟಾವು 2021 ರಲ್ಲಿ 52,974 ಸೈಬರ್ ಅಪರಾಧಗಳ ಘಟನೆಗಳನ್ನು ದಾಖಲಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಂಕಿಅಂಶಗಳು ಸುಮಾರು 6 ಪ್ರತಿಶತದಷ್ಟು ಹೆಚ್ಚಾಗಿದೆ.
ಡೇಟಾವು ಹೆಚ್ಚುತ್ತಿರುವ ಸೈಬರ್ ಕ್ರೈಮ್ ದರದ ತೀವ್ರತೆಯನ್ನು ತೋರಿಸುತ್ತದೆ, ಇದಕ್ಕಿಂತ ಹೆಚ್ಚಾಗಿ, ಈ ಡೇಟಾವು ವರದಿಯಾದ ಪ್ರಕರಣಗಳ ಆಧಾರದ ಮೇಲೆ ಅಂಕಿಅಂಶಗಳನ್ನು ಅಂದಾಜು ಮಾಡುತ್ತದೆ.
ಸೈಬರ್ ಕ್ರೈಮ್‌ಗೆ ಒಳಗಾದ ಪ್ರತಿಯೊಬ್ಬರೂ ಕಡ್ಡಾಯವಾಗಿ ದೂರು ದಾಖಲಿಸಬೇಕು
ಸೈಬರ್ ಕ್ರೈಮ್‌ಗೆ ಒಳಗಾದ ಹೆಚ್ಚಿನವರು ಪೊಲೀಸರ ಬಳಿ ದೂರು ದಾಖಲಿಸುವುದಿಲ್ಲ. ಹೆಚ್ಚಿನ ಹಣ ವಂಚನೆಯಾದಲ್ಲಿ ಮಾತ್ರವೇ ದೂರು ದಾಖಲಿಸುತ್ತಾರೆ ಆದರೆ ಕಡಿಮೆ ಹಣ ವಂಚನೆಯಾದಲ್ಲಿ ದೂರು ಸಲ್ಲಿಸುವ ಗೋಜಿಗೆ ಹೋಗುವುದಿಲ್ಲ.
ಇದನ್ನೂ ಓದಿ: ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ಯಾ? ಈ ಟಿಪ್ಸ್ ಮೂಲಕ ಚೆಕ್ ಮಾಡಿಕೊಳ್ಳಿ
ಇನ್ನು ಕೆಲವರಿಗೆ ಇಂತಹ ಮೋಸ ತಮಗಾದರೆ ಹೇಗೆ ದೂರು ಸಲ್ಲಿಸಬೇಕು ಎಂಬುದರ ಅರಿವೂ ಇರುವುದಿಲ್ಲ. ಸೈಬರ್ ವಂಚನೆ ಎಂದರೇನು ಮತ್ತು ಅದಕ್ಕಾಗಿ ದೂರು ದಾಖಲಿಸುವುದು ಹೇಗೆ ಎಂಬುದನ್ನು ವಿವರವಾಗಿ ನೋಡೋಣ.
ಸೈಬರ್ ವಂಚನೆ ಎಂದರೇನು?
ಸೈಬರ್ ವಂಚನೆ, ಇದನ್ನು ಆನ್‌ಲೈನ್ ವಂಚನೆ ಅಥವಾ ಇಂಟರ್ನೆಟ್ ವಂಚನೆ ಎಂದೂ ಕರೆಯಲಾಗುತ್ತದೆ, ಇದರಲ್ಲಿ ಯಾರಾದರೂ ಹಣವನ್ನು ಕದಿಯಲು ಇಂಟರ್ನೆಟ್ ಅನ್ನು ಬಳಸಿಕೊಂಡು ಅಪರಾಧವೆಸಗುತ್ತಾರೆ. ವಂಚಕರು ವ್ಯಕ್ತಿಯನ್ನು ಗುರಿಯಾಗಿಸಬಹುದು ಮತ್ತು SMS, ಕರೆ, ಇಮೇಲ್ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಇತರ ಮಾರ್ಗಗಳ ಮೂಲಕ ಅವರನ್ನು ಸಂಪರ್ಕಿಸಬಹುದು.
ಅವರ ಬ್ಯಾಂಕ್ ಮಾಹಿತಿಯನ್ನು ಹ್ಯಾಕ್ ಮಾಡಲು ಕಂಪ್ಯೂಟರ್, ಮೊಬೈಲ್ ಸಾಧನ ಅಥವಾ ನೆಟ್‌ವರ್ಕ್‌ಗೆ ದುರುದ್ದೇಶಪೂರಿತ ಲಿಂಕ್ ಅನ್ನು ಕಳುಹಿಸುತ್ತಾರೆ. ನೀವು ಈ ಲಿಂಕ್ ಕ್ಲಿಕ್ ಮಾಡಿದರೆಂದರೆ ಅವರ ಜಾಲಕ್ಕೆ ಬಿದ್ದಂತೆಯೇ ಸರಿ.
ಸಾಮಾನ್ಯ ಸೈಬರ್ ವಂಚನೆಗಳು: ಮುಂದುವರಿದ ತಂತ್ರಜ್ಞಾನದೊಂದಿಗೆ, ಸೈಬರ್ ಸ್ಕ್ಯಾಮರ್‌ಗಳು ಜನರನ್ನು ಮತ್ತು ನೈಜ ಹಣವನ್ನು ಗುರಿಯಾಗಿಸಲು ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.
ಸ್ಕ್ಯಾಮರ್‌ಗಳು ನಕಲಿ ಇಮೇಲ್‌ಗಳು, ಪಠ್ಯ ಸಂದೇಶಗಳನ್ನು ಕಳುಹಿಸುತ್ತಾರೆ ಅಥವಾ ಕಾನೂನುಬದ್ಧ ಸಂಸ್ಥೆ ಎಂದು ಹೇಳಿಕೊಂಡು ಫೋನ್ ಕರೆಗಳನ್ನು ಮಾಡುತ್ತಾರೆ ಅಂತೆಯೇ ಬಳಕೆದಾರರ ಹೆಸರುಗಳು, ಪಾಸ್‌ವರ್ಡ್‌ಗಳು OTP ಅಥವಾ ಇತರ ಸೂಕ್ಷ್ಮ ಮಾಹಿತಿಯನ್ನು ನೀಡಲು ತಿಳಿಸಿ ಜನರನ್ನು ಮೋಸಗೊಳಿಸುತ್ತಾರೆ.
ವೈಯಕ್ತಿಕ ವಂಚನೆ: ವೈಯಕ್ತಿಕ ಮಾಹಿತಿಯನ್ನು ಕದ್ದು ಮೋಸ ನಡೆಸುತ್ತಿದ್ದಾರೆ. ಅವರ ಹೆಸರನ್ನು ಬಳಸಿಕೊಂಡು ಮೋಸದಲ್ಲಿ ಲೋನ್‌ಗೆ ಅಪ್ಲೈ ಮಾಡಿ ಹಣ ಪಡೆಯುವುದು, ಖಾತೆಗಳನ್ನು ತೆರೆಯಲು ಹಾಗೂ ಇನ್ನಿತರ ಅಪರಾಧಗಳನ್ನು ಮಾಡಲು ವ್ಯಕ್ತಿಯ ಗುರುತನ್ನು ಬಳಸುತ್ತಾರೆ.
ಮಾಲ್‌ವೇರ್ ವಂಚನೆ: ಸ್ಕ್ಯಾಮರ್‌ಗಳು ದುರುದ್ದೇಶಪೂರಿತ ಲಿಂಕ್ ಅಪ್ಲಿಕೇಶನ್‌ಗಳನ್ನು ಕಳುಹಿಸುತ್ತಾರೆ, ಇವುಗಳನ್ನು ಹಾನಿ ಮಾಡಲು, ಅಡ್ಡಿಪಡಿಸಲು ಅಥವಾ ಕಂಪ್ಯೂಟರ್ ಸಿಸ್ಟಮ್‌ಗೆ ಅನಧಿಕೃತ ಪ್ರವೇಶವನ್ನು ಪಡೆಯಲು ವಿನ್ಯಾಸಗೊಳಿಸಲಾಗಿದೆ ಮತ್ತು ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಸೂಕ್ಷ್ಮ ಮಾಹಿತಿಯನ್ನು ಪಡೆಯುತ್ತಾರೆ.
ಉದ್ಯೋಗ ವಂಚನೆ: ಹೆಸರೇ ಸೂಚಿಸುವಂತೆ, ಸ್ಕ್ಯಾಮರ್‌ಗಳು ಉದ್ಯೋಗವನ್ನು ನೀಡುವ ನೆಪದಲ್ಲಿ ಜನರನ್ನು ಆನ್‌ಲೈನ್‌ನಲ್ಲಿ ಗುರಿಯಾಗಿಸಿ ನಂತರ ಅವರ ಹಣವನ್ನು ಕದಿಯುತ್ತಾರೆ.
ಆನ್‌ಲೈನ್ ಶಾಪಿಂಗ್ ಹಗರಣಗಳು: ಇದು ಅತ್ಯಂತ ಸಾಮಾನ್ಯವಾದ ವಂಚನೆಗಳಲ್ಲಿ ಒಂದಾಗಿದೆ. ಸೈಬರ್ ಅಪರಾಧಿಗಳು ನಕಲಿ ಇ-ಕಾಮರ್ಸ್ ವೆಬ್‌ಸೈಟ್‌ಗಳನ್ನು ಸ್ಥಾಪಿಸುತ್ತಾರೆ ಅಥವಾ ಕಾನೂನುಬದ್ಧ ವೆಬ್‌ಸೈಟ್‌ಗಳಲ್ಲಿ ನಕಲಿ ಉತ್ಪನ್ನಗಳನ್ನು ಜಾಹೀರಾತು ಮಾಡುತ್ತಾರೆ ಮತ್ತು ಖರೀದಿಗಳನ್ನು ಮಾಡಲು ಜನರನ್ನು ಮೋಸಗೊಳಿಸುತ್ತಾರೆ.
ದೂರು ಸಲ್ಲಿಸುವುದು ಹೇಗೆ?
ಸೈಬರ್ ವಂಚನೆ ಸೇರಿದಂತೆ ಸೈಬರ್ ಅಪರಾಧದ ಬಗ್ಗೆ ಯಾವುದೇ ದೂರು ದಾಖಲಿಸಲು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (ಸಹಾಯ ಸಂಖ್ಯೆ -1930) ಅನ್ನು ಸಂಪರ್ಕಿಸಬಹುದು. ಇಲ್ಲದಿದ್ದರೆ ಸಮೀಪದ ಪೊಲೀಸ್ ಸ್ಟೇಶನ್‌ಗೆ ಹೋಗಿ ದೂರು ದಾಖಲಿಸಬಹುದು. ನೀವು cybercrime.gov.in ಮೂಲಕ ನಿಮ್ಮ ದೂರನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.
ಸೈಬರ್ ಅಪರಾಧದ ದೂರುಗಳನ್ನು ಆನ್‌ಲೈನ್‌ನಲ್ಲಿ ವರದಿ ಮಾಡುವುದು ಹೇಗೆ?
ಸೈಬರ್ ವಂಚನೆಗಾಗಿ ವರದಿಯನ್ನು ಸಲ್ಲಿಸಲು ಅಗತ್ಯವಾದ ದಾಖಲೆಗಳು
ನೀವು ಆನ್‌ಲೈನ್ ವಹಿವಾಟುಗಳು, ಲಾಟರಿ ವಂಚನೆಗಳು, ಎಟಿಎಂ ವಹಿವಾಟುಗಳು, ನಕಲಿ ಕರೆಗಳು ಅಥವಾ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ಸೈಬರ್ ವಂಚನೆ ಪ್ರಕರಣವನ್ನು ದಾಖಲಿಸುತ್ತಿದ್ದರೆ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ವಿಳಾಸ ಮತ್ತು ಐಡಿ ಡಾಕ್ಯುಮೆಂಟ್‌ಗಳೊಂದಿಗೆ ನೀವು ಆಪಾದಿತ ಮೋಸದ ವಹಿವಾಟುಗಳ ಆಧಾರಗಳನ್ನು ಲಗತ್ತಿಸಬೇಕು. ಮತ್ತು ನೀವು ಸ್ವೀಕರಿಸಿದ ಯಾವುದೇ ಅನುಮಾನಾಸ್ಪದ ಸಂದೇಶಗಳು ಅಥವಾ ಇಮೇಲ್‌ಗಳನ್ನು ಕಂಪ್ಲೇಟ್‌ನಲ್ಲಿ ಲಗತ್ತಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ