HOME » NEWS » Tech » WHAT IS CLUBHOUSE AND WHO IS THE WOMAN ON THE APPS ICON HG

Clubhouse App: ಕ್ಲಬ್​ಹೌಸ್ ವಿಶೇಷತೆ ಏನು? ಲೊಗೊದಲ್ಲಿರುವ ಮಹಿಳೆ ಯಾರು?; ಇಲ್ಲಿದೆ ಮಾಹಿತಿ

Clubhouse: ಅನೇಕರು ಕ್ಲಬ್​ಹೌಸ್​ ಬಳಸುತ್ತಿದ್ದಾರೆ. ಅದರ ಲೊಗೋದಲ್ಲಿ ಮಹಿಳೆಯೊಬ್ಬರ ಫೋಟೋವಿದೆ. ಆದರೆ ಅವರು ಯಾರು? ಎಂಬುದರ ಬಗ್ಗೆ ಅನೇಕರಿಗೆ ಅರಿವಿಲ್ಲ.

news18-kannada
Updated:June 15, 2021, 3:35 PM IST
Clubhouse App: ಕ್ಲಬ್​ಹೌಸ್ ವಿಶೇಷತೆ ಏನು? ಲೊಗೊದಲ್ಲಿರುವ ಮಹಿಳೆ ಯಾರು?; ಇಲ್ಲಿದೆ ಮಾಹಿತಿ
Clubhouse-ಕ್ಲಬ್​ಹೌಸ್
  • Share this:
ಜನಪ್ರಿಯ ಕ್ಲಬ್​ಹೌಸ್​ ಆ್ಯಪ್​ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಫೇಸ್​ಬುಕ್​ , ಟ್ವಿಟ್ಟರ್​, ಇನ್​ಸ್ಟಾಗ್ರಾಂನಂತೆಯೇ ಕ್ಲಬ್​ ಹೌಸ್​ ಆ್ಯಪ್​ ದಿನ ಕಳೆದಂತೆ ಅತಿ ಹೆಚ್ಚು ಬಳಕೆದಾರರನ್ನು ಸೆಳೆದುಕೊಳ್ಳುತ್ತಿದೆ.  ಈ ಸೋಷಿಯಲ್​ ಆಡಿಯೋ ಆ್ಯಪ್​ ಉಳಿದೆಲ್ಲಾ ಆ್ಯಪ್​ಗಳಿಗಿಂತ ಕೊಂಚ ಭಿನ್ನವಾಗಿದ್ದು, ವಾರಕ್ಕೆ 10 ಮಿಲಿಯನ್​ಗೂ ಸಕ್ರಿಯ ಬಳಕೆದಾರರನ್ನು ಹೊಂದಿದೆ.

ಕ್ಲಬ್​ಹೌಸ್​-Clubhouse App

ಫೇಸ್​ಬುಕ್​, ಟ್ವಿಟ್ಟರ್​, ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್​ಗೆ ಸವಾಲು ಎಂಬಂತೆ  ಆ್ಯಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಇತರೆ ಜಾಲತಾಣದಂತೆ ಪೋಸ್ಟ್​ ಹಾಕಲು ಸಾಧ್ಯವಿಲ್ಲ. ಫೇಸ್​​ಬುಕ್​, ಇನ್​ಸ್ಟಾಗ್ರಾಂನಲ್ಲಿ ನಮಗೆ ಪೋಸ್ಟ್​ ಮಾಡುವ ಅವಕಾಶವಿದೆ. ಆದರೆ ಕ್ಲಬ್​ಹೌಸ್​ ವಿಶೇಷತೆ ಏನೆಂದರೆ ಇದರಲ್ಲಿ ವಾಯ್ಸ್​ ಚಾಟ್​​ ಮಾಡುವ ಮೂಲಕ ಸಂವಹನ ನಡೆಸಬಹುದಾಗಿದೆ.

ಸಾಮಾನ್ಯವಾಗಿ ಫೋಟೋ, ವಿಡಿಯೋ, ಧ್ವನಿ ಕರೆ, ಸಂದೇಶ ಮೂಲಕ ಸಂವಹನ ನಡೆಸುತ್ತಿದ್ದ ಜನರು ಅದಕ್ಕೆ ಹೆಚ್ಚು ಒತ್ತುಕೊಟ್ಟಿದ್ದರು. ಆದರೆ ಕ್ಲಬ್​ಹೌಸ್​ ಜನರ ಮನಸ್ಥಿತಿಯನ್ನು ಬದಲಾಯಿಸಲು ಮತ್ತು ಕೊಂಚ ವಿಭಿನ್ನವಾದ ಫೀಚರ್​ ಪರಿಚಯಿಸುವ ಸಲುವಾಗಿ ವಾಯ್ಸ್​ ಚಾಟ್​​ ಅನ್ನು ಇದರಲ್ಲಿ ಮುಖ್ಯವಾಗಿ ಅಳವಡಿಸಿದೆ.

ಕ್ಲಬ್​ಹೌಸ್​ ಆ್ಯಪ್​ನಲ್ಲಿ ಜನಪ್ರಿಯ ವ್ಯಕ್ತಿಗಳು!

ಜನಪ್ರಿಯ ವ್ಯಕ್ತಿಗಳು ಕೂಡ ಕ್ಲಬ್​ಹೌಸ್​ ಆ್ಯಪ್​ ಬಳಕೆ ಮಾಡುತ್ತಿದ್ದಾರೆ. ಇದರ ಮೂಲಕ ಲೈವ್​ ಬರುತ್ತಿದ್ದಾರೆ. ಆದ್ದರಿಂದ ದಿನ ಕಳೆದಂತೆ ಬಳಕೆದಾರರ ಸಂಖ್ಯೆಯನ್ನು ಕ್ಲಬ್​ ಹೌಸ್​ ಆ್ಯಪ್ ಹೆಚ್ಚಿಸಿಕೊಳ್ಳುತ್ತಿದೆ. ಅಂದಹಾಗೆಯೇ ವಾರಕ್ಕೆ 10 ಮಿಲಿಯನ್​ಗೂ ಸಕ್ರಿಯ ಬಳಕೆದಾರರನ್ನು, ದಿನಕ್ಕೆ 3 ಲಕ್ಷಕ್ಕೂ ಅಧಿಕ ರೂಂ ತೆರೆಯುವ ಮೂಲಕ ಸಂವಹನ ನಡೆಸುತ್ತಿದ್ದಾರೆ.

Club House ​2020ರಲ್ಲಿ ಐಫೋನ್ ಗೆ​ ಲಭ್ಯವಾಯಿತು. ಆದರೀಗ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಬಳಕೆಗೆ ಸಿಗುತ್ತಿದೆ. ಅನೇಕರು ಡೌನ್​ಲೋಡ್​ ಮಾಡಿ ಬಳಸುತ್ತಿದ್ದಾರೆ. ಅದರಲ್ಲೂ ಯುವಜನತೆ ಉತ್ಸುಕತೆ ಜೋರಾಗಿದೆ. ಇನ್ನು ಹೊಸ ಅಪ್​ಡೇಟ್​ನಲ್ಲಿ ಬಳಕೆದಾರರು ಇನ್​ಸ್ಟಾಗ್ರಾಂ ಪ್ರೊಫೈಲ್​ ಸೇರ್ಪಡೆ ಮಾಡುವ ಅವಕಾಶ ನೀಡಿದೆ.ಇನ್ನು ಕ್ಲಬ್​ಹೌಸ್​ ಎಂಬುದು ಇನ್ವಿಟೇಷನ್​ ಓನ್ಲಿ ಸೋಷಿಯಲ್​ ಮೀಡಿಯಾ ಆ್ಯಪ್​. ಇದರ ಮೂಲಕ ಚಾಟ್​ ರೂಮ್​ಗಳ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ಮಾಡಬಹುದು. 500 ಸಾವಿರ ಮಂದಿಯ ತನಕ ಗ್ರೂಪ್​ ರಚಿಸಿ ಚಾಯ್ಸ್​ ಚಾಟ್​ ಮಾಡಬಹುದಾಗಿದೆ. ಆದರೆ ಈ ಆ್ಯಪ್​​ನಲ್ಲಿ ಸಂಭಾಷಣೆ ರೆಕಾರ್ಡ್​ ಮಾಡುವುದಕ್ಕೆ, ದಾಖಲಿಸುವುದಕ್ಕೆ ಅವಕಾಶವಿಲ್ಲ.

ಜನಪ್ರಿಯ ವ್ಯಕ್ತಿಯೊಬ್ಬರು ಕ್ಲಬ್​ಹೌಸ್ ಲೈವ್​​ನಲ್ಲಿ ಮಾತನಾಡುತ್ತಿದ್ದಾರೆ ಎಂದರೆ ಅವರ ಮಾತನ್ನು ಯಾರೂ ಕೂಡ ಆಲಿಸಬಹುದು.  ಜತೆಗೆ ಪ್ರಶ್ನೆಯನ್ನು ಕೇಳಬಹುದು. ಪ್ನಶ್ನೆ ಕೇಳಬೇಕು ಅನಿಸಿದರೆ ಕೈ ಗುರುತಿರುವ ‘ಲೊಗೊ’ ಒತ್ತಿದರಾಯಿತು. ಯಾರು ರೂಂ ಕ್ರಿಯೇಟ್ ಮಾಡಿರುತ್ತಾರೋ ಅವರು ಅನುಮತಿ ನೀಡುತ್ತಾರೆ.

ಕ್ಲಬ್​ಹೌಸ್​ ಸೃಷ್ಟಿಕರ್ತ ಯಾರು?

ಚೀನಾದ ನಕಲಿ ಆ್ಯಪ್​ಗಳನ್ನು ಭಾರತ ನಿಷೇಧಗೊಳಿಸಿದ ಬಳಿಕ ಆ ನಂತರ ಜನಪ್ರಿಯತೆಗೊಳ್ಳುತ್ತಿರುವ ಆ್ಯಪ್​ಗಳನ್ನು ಬಳಸುವ ಮುನ್ನ ಆ್ಯಪ್​ ಡೆವಲಪರ್​​, ಯಾವ ದೇಶದ್ದು ಎಂದು ಪರೀಕ್ಷಿಸುತ್ತಿದ್ದಾರೆ. ಅದರಂತೆ ಇದೀಗ ಸುದ್ದಿಯಲ್ಲಿರುವ ಕ್ಲಬ್​ ಹೌಸ್​ ಆ್ಯಪ್​ ಆಲ್ಫಾ ಎಕ್ಸ್​​ ಫ್ಲೊರೇಶನ್​​ ಕಂಪನಿ ಮೂಲದ ಪೌಲ್​ ಡೇವಿಸನ್​ ಹಾಗೂ ರೋಹನ್​ ಸೇಠ್​​ 2020ರ ಮಾರ್ಚ್​ ನಲ್ಲಿ ಬಳಕೆಗೆ ತಂದಿದ್ದಾರೆ. ಐಒಎಸ್ ಮತ್ತು ಆ್ಯಂಡ್ರಾಯ್ಡ್​ (ಬೇಟಾ) ಆವೃತ್ತಿಯಲ್ಲಿ ಬಳಕೆಗೆ ಸಿಗಲಿದೆ. ಇದರ ಗಾತ್ರ 74.8 MBಯಷ್ಟಿದೆ.

ಯಾರು ಬೇಕಾದರು ಕ್ಲಬ್​ಹೌಸ್​ನಲ್ಲಿ ಖಾತೆ ತೆರೆಯಬಹುದು, ಜತೆಗೆ ಫಾಲೋ ಮಾಡಬಹುದಾಗಿದೆ. ಸದ್ಯ 2 ಮಿಲಿಯನ್​ಗಿಂತ ಹೆಚ್ಚಿನ ಬಳಕೆದಾರರ ಈ ಆ್ಯಪ್​ ಅನ್ನು ಡೌನ್​ ಮಾಡಿದ್ದಾರೆ.

ಕ್ಲಬ್​ಹೌಸ್​ ಲೋಗೊದಲ್ಲಿರುವ ಮಹಿಳೆ ಯಾರು?

ಅನೇಕರು ಕ್ಲಬ್​ಹೌಸ್​ ಬಳಸುತ್ತಿದ್ದಾರೆ. ಅದರ ಲೊಗೋದಲ್ಲಿ ಮಹಿಳೆಯೊಬ್ಬರ ಫೋಟೋವಿದೆ. ಆದರೆ ಅವರು ಯಾರು? ಎಂಬುದರ ಬಗ್ಗೆ ಅನೇಕರಿಗೆ ಅರಿವಿಲ್ಲ. ಕ್ಲಬ್​ ಹೌಸ್​ ಲೊಗೊದಲ್ಲಿರುವ ಮಹಿಳೆಯ ಹೆಸರು ಡ್ರೂ ಕಟೊಕಾ. ಖ್ಯಾತ ಏಷ್ಯನ್​ ಅಮೆರಿಕನ್​ ಕಲಾವಿದೆ ಮತ್ತು ಕಾರ್ಯಕರ್ತೆ ಕೂಡ. ಅಪ್ಲಿಕೇಶನ್​ನಲ್ಲಿ ಕಾಣಿಸಿಕೊಂಡ ಮೊದಲ ಕಲಾವಿದೆ ಈಕೆ. ಈ ಪಾತ್ರಕ್ಕಾಗಿ ಆಯ್ಕೆಯಾದ 8ನೇ ವ್ಯಕ್ತಿ ಎಂಬ ಹೆಗ್ಗಳಿಕೆ ಅವರ ಮೇಲಿದೆ.

ಮಾರ್ಚ್​ 2020 ಅಪ್ಲಿಕೇಶನ್​ ಪ್ರಾರಂಭವಾಗಿನಿಂದ ಕಟೊಕಾ ಅವರು ಇದರ ಆರಂಭಿಕ ಸದ್ಯರಾಗಿದ್ದರು. ಜನಾಂಗಿಯತೆಯ ನಿಂದನೆ ಕುರಿತಾಗಿ ಡಾಕ್ಟರ್​​ ಬರ್ನೈಸ್​​ ಕಿಂಗ್​  ಅವರ ಜೊತೆಗೆ ಕಟೊಕಾ ಅವರು #stopAsianhate ಎಂದು ಕ್ಲಬ್​ ಹೌಸ್​ ರೂಮ್​ ತೆರೆಯುವ ಮೂಲಕ ಭಾಗವಹಿಸಿದರು. ಈ ಕಾರ್ಯಕ್ರಮದ ಹೆಸರು#24Houroflove. ಕಂಪನಿಯ ತಂದ ಹೊಸ ವೈಶಿಷ್ಯವನ್ನು ಬೆಂಬಲಿಸಲು ಕಟೊಕಾ ಪ್ರಮುಖ ಪಾತ್ರ ವಹಿಸಿದ್ದಾರೆ.

ಚೀನಾದಲ್ಲಿ ಕ್ಲಬ್​ಹೌಸ್​ ಬ್ಯಾನ್​!

ಕ್ಲಬ್​ಹೌಸ್​ ಅಲ್ಲಿನ ಮಾರ್ಗಸೂಚಿಗೆ ತಕ್ಕಂತೆ ಇಲ್ಲದಿರುವುದಿಂದ ಮತ್ತು ಇದರಲ್ಲಿ ಧ್ವನಿ ರೆಕಾರ್ಡ್​ ಮಾಡುವುದು, ನಕಲು ಮಾಡುವುದು,  ಹಂಚುವ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲದಿರುವುದರಿಂದ ಗೌಪ್ಯತೆ ವಿಚಾರವಾಗಿ ಓಮನ್​ಮ ಜೋರ್ಡಾನ್​ ಮತ್ತು ಚೀನಾದಲ್ಲಿ ಬ್ಯಾನ್​ ಮಾಡಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಸಾರ್ವಜನಿಕ ಪ್ರವಚನಕ್ಕೆ ಮರುಳಾಗುತ್ತಾರೆ ಎಂಬ ಕಾರಣಕ್ಕೆ ಚೀನಾದ ಈ ಕೆಲಸ ಮಾಡಿದೆ ಎನ್ನಲಾಗುತ್ತಿದೆ.

ಫೇಸ್​ಬುಕ್​, ಟ್ವಿಟ್ಟರ್​, ಡಿಸ್ಕೋರ್ಡ್​​, ಸ್ಪೋಟಿಫೈ, ರಡ್ಡಿಟ್​​ ಮತ್ತು ಸ್ಲಾಕ್​​ ಆ್ಯಪ್​ನೊಂದಿಗೆ ಕ್ಲಬ್​ಹೌಸ್​ ಸ್ಪರ್ಧಿಸುತ್ತಿದೆ.
Published by: Harshith AS
First published: June 15, 2021, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories