ಈಗಂತೂ ಈ ಮೊಬೈಲ್ (Mobile) ನೆಟ್‌ವರ್ಕ್ (Network) ಕಂಪನಿಗಳು (Company) ಗ್ರಾಹಕರಿಗಾಗಿ ಅನೇಕ ರೀತಿಯ ಅನಿಯಮಿತ ಕರೆಗಳನ್ನು (Unlimited call) ಮಾಡುವ, ಸಂದೇಶಗಳನ್ನು (message) ಕಳುಹಿಸುವ ಮತ್ತು ಇಂಟರ್ನೆಟ್ (Internet) ಬಳಸಲು ಡೇಟಾದ (Data) ಪ್ರಿಪೇಯ್ಡ್ (Prepaid) ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತವೆ. ಮೊಬೈಲ್ ನೆಟ್‌ವರ್ಕ್ ಕಂಪನಿಗಳಾದ Airtel, Jio, Vi, BSNL ಹೊಸ ಹೊಸ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಅನೇಕ ರೀತಿಯ ಪ್ರಯೋಜನಗಳನ್ನು ಒಂದೇ ಪ್ಲ್ಯಾನ್ ನಲ್ಲಿ ಪರಿಚಯಿಸುತ್ತದೆ.
ಏನೆಲ್ಲಾ ಈ ಪ್ರಿಪೇಯ್ಡ್ ಯೋಜನೆ ಅಳವಡಿಸಿದ್ದಾರೆ?
ಡೇಟಾ, ಕರೆಗಳು, ಸಂದೇಶಗಳ ಸೌಲಭ್ಯಗಳು ಅಲ್ಲದೆ, ಬೇರೆ ಬೇರೆ ಒಟಿಟಿ ಪ್ಲಾಟ್ಫಾರ್ಮ್ ಗಳಾದ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವೀಡಿಯೋ, ವೂಟ್ ಮತ್ತು ಇತರೆ ಮ್ಯೂಸಿಕ್ ಅಪ್ಲಿಕೇಶನ್ ಗಳಿಗೂ ಸಹ ಉಚಿತ ಪ್ರವೇಶವನ್ನು ಈ ಹೊಸ ಪ್ರಿಪೇಯ್ಡ್ ಯೋಜನೆಗಳಲ್ಲಿ ಸೇರಿಸಿರುವುದನ್ನು ನಾವು ನೋಡಿದ್ದೇವೆ. ಗ್ರಾಹಕರು ಸಹ ಆಯಾ ನೆಟ್‌ವರ್ಕ್ ನಲ್ಲಿ ಯಾವ ಯೋಜನೆ ಹಾಕಿಸಿದರೆ ಒಳ್ಳೆಯದು ಅಂತ ನೋಡಿಕೊಂಡು ಮೊಬೈಲ್ ರಿಚಾರ್ಜ್ ಮಾಡಿಸಿಕೊಳ್ಳುತ್ತಾರೆ.
ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದ ಬಿಎಸ್ಎನ್ಎಲ್!
ಈಗ ಬಿಎಸ್ಎನ್ಎಲ್ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. ಇದರೊಂದಿಗೆ ಬಿಎಸ್ಎನ್ಎಲ್ ತನ್ನ ಪೋರ್ಟ್‌ಫೋಲಿಯೋ ಗೆ ಇನ್ನೆರಡು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಸೇರಿಸಿದೆ.
ಇದನ್ನೂ ಓದಿ: ಇಂಟರ್ನೆಟ್ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಿದ್ರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ
ಹೊಸದಾಗಿ 269 ಮತ್ತು 769 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಗಳನ್ನು ಒಂದೇ ರೀತಿಯ ಪ್ರಯೋಜನಗಳೊಂದಿಗೆ ನೀಡುತ್ತಿದೆ. ಆದರೆ ಇವೆರಡರಲ್ಲಿ ವ್ಯಾಲಿಡಿಟಿ ಅವಧಿಯ ವಿಷಯಕ್ಕೆ ಬಂದರೆ ಮಾತ್ರ ತುಂಬಾನೇ ಭಿನ್ನವಾಗಿವೆ ಅಂತ ಹೇಳಬಹುದು. ಕೈಗೆಟುಕುವ ಬೆಲೆಯಲ್ಲಿ ಅನಿಯಮಿತ ಪ್ರಯೋಜನಗಳನ್ನು ಬಯಸುವವರಿಗೆ ಈ ಹೊಸ ರೀಚಾರ್ಜ್ ಯೋಜನೆಗಳು ತುಂಬಾನೇ ಒಳ್ಳೆಯದು.
BSNL 269 ರೂಪಾಯಿಯ ಪ್ರಿಪೇಯ್ಡ್ ಯೋಜನೆ ಹೇಗಿದೆ?
BSNL ಇತ್ತೀಚಿನ 269 ರೂಪಾಯಿಯ ಪ್ರಿಪೇಯ್ಡ್ ಯೋಜನೆಯು ತನ್ನ ಗ್ರಾಹಕರಿಗೆ ಪ್ರತಿದಿನ 2 ಜಿಬಿ ಡೇಟಾ ಇಂಟರ್ನೆಟ್ ಅನ್ನು ನೀಡುತ್ತದೆ.ಹೊಸ ರೀಚಾರ್ಜ್ ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್ ಗೆ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಸಹ ಗ್ರಾಹಕರು ಕಳುಹಿಸಬಹುದು.
ಕಂಪನಿಯು ಬಿಎಸ್ಎನ್ಎಲ್ ಟ್ಯೂನ್ ಗಳನ್ನು ಸಹ ಉಚಿತವಾಗಿ ನೀಡುತ್ತದೆ. ಇದು ಯಾರಿಗಾದರೂ ತಮ್ಮ ನೆಚ್ಚಿನ ಹಾಡನ್ನು ಕಾಲರ್ ಟ್ಯೂನ್ ಆಗಿ ಹೊಂದಿಸಲು ಅನುಮತಿಸುತ್ತದೆ ಮತ್ತು ಬದಲಾವಣೆಗಳಿಗೆ ಯಾವುದೇ ರೀತಿಯ ನಿಯಮಗಳಿಲ್ಲ.
ಇದನ್ನೂ ಓದಿ: ಫೋನ್ ಕರೆಗಳನ್ನು ಟ್ಯಾಪ್ ಮಾಡದೆಯೇ ಆಲಿಸುವ ಮಾರ್ಗವನ್ನು ಕಂಡುಹಿಡಿದಿದ ವಿಜ್ಞಾನಿಗಳು
ಬಿಎಸ್ಎನ್ಎಲ್ 769 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ಹೇಗಿದೆ ಗೊತ್ತೇ?
769 ರೂಪಾಯಿಗಳ ಯೋಜನೆಯು ಬಿಎಸ್ಎನ್ಎಲ್ ನ ಮತ್ತೊಂದು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಾಗಿದೆ. ಇದು ಹಿಂದಿನ ಯೋಜನೆಯನ್ನು ಹೋಲುತ್ತದೆ, ಆದರೆ ಅದರ ವ್ಯಾಲಿಡಿಟಿಯಿಂದಾಗಿ ಬೆಲೆ ಹೆಚ್ಚಾಗಿದೆ.
ಈ ರೀಚಾರ್ಜ್ ಪ್ಯಾಕ್ ನಲ್ಲಿ ಗ್ರಾಹಕರು ದಿನಕ್ಕೆ 2 ಜಿಬಿ ಡೇಟಾ ಇಂಟರ್ನೆಟ್, ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿದಿನ 100 ಎಸ್ಎಂಎಸ್ ಗಳನ್ನು ಸಹ ಗ್ರಾಹಕರು ಕಳುಹಿಸಬಹುದು. ಇದು 269 ರೂಪಾಯಿಗಳ ಯೋಜನೆಯೊಂದಿಗೆ ಬಳಕೆದಾರರು ಪಡೆಯುತ್ತಿರುವ ಎಲ್ಲಾ ಹೆಚ್ಚುವರಿ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ಆದರೆ ಇದು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಎರಡು ಪ್ರಿಪೇಯ್ಡ್ ಯೋಜನೆಗಳು ಈಗಾಗಲೇ ಬಿಡುಗಡೆಗೊಳಿಸಿರುವುದರಿಂದ ಇವುಗಳಲ್ಲಿ ಆಸಕ್ತಿ ಹೊಂದಿರುವವರು ಈ ಆಫರ್ ಪಡೆಯಬಹುದು.
ಇದು ಈ ವರ್ಷದ BSNLನ ಒಳ್ಳೆಯ ರೀತಿಯ ಆಫರ್ ಅಂತ ಹೇಳಬಹುದು. ಈ ರೀತಿಯ ಆಫರ್‌ಗಳು ಪ್ರತಿಯೊಂದು ನೆಟ್‌ವರ್ಕ್‌ಗಳಲ್ಲಿ ಬರುತ್ತಿರುತ್ತದೆ. ಆದರೆ ಒಂದೊಂದು ಯೋಜನೆಗಳು ಒಂದೊಂದು ರೀತಿಯಲ್ಲಿರುತ್ತದೆ. ಆದರೆ ಈ ಯೋಜನೆಗಳು ಎಲ್ಲವೂ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ