Tech Facts: ಕ್ಯೂಆರ್​ ಕೋಡ್​ ಅಂದ್ರೆ ಏನು ಗೊತ್ತಾ? ಇದರ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ

ಕ್ಯೂಆರ್ ಕೋಡ್

ಕ್ಯೂಆರ್ ಕೋಡ್

ಕ್ಯೂಆರ್​​ ಕೋಡ್​ ಎಂಬುದು ಒಂದು ರೀತಿಯ ಹೊಸ ಟೆಕ್ನಾಲಜಿ ಎನ್ನಬಹುದು. ಆದರೆ ಇದರ ಬಗ್ಗೆ ಗೊತ್ತಿಲ್ಲದ ಎಷ್ಟೋ ಜನರು ಇದ್ದಾರೆ. ಇನ್ನು ಕ್ಯೂಆರ್​ ಕೋಡ್​ ಎಂದರೇನು?, ಇದನ್ನು ಹೇಗೆ ಕ್ರಿಯೇಟ್​ ಮಾಡ್ತಾರೆ ಎಂಬ ಕುತೂಹಲ ಹಲವರಿಗೆ ಇರುತ್ತದೆ. ಇದಕ್ಕೆಲ್ಲಾ ಉತ್ತರ ಸಿಗ್ಬೇಕಾದ್ರೆ ಈ ಲೇಖನವನ್ನೊಮ್ಮೆ ಓದಿ.

ಮುಂದೆ ಓದಿ ...
  • Share this:

    ಸ್ಮಾರ್ಟ್​​ಫೋನ್​ಗಳ (Smartphones) ಬಳಕೆ ಇತ್ತೀಚೆಗೆ ಹೆಚ್ಚುತ್ತಲೇ ಇದೆ. ಇದಕ್ಕಾಗಿ ಕಂಪೆನಿಗಳು ಸಹ ಹೊಸ ಹೊಸ ಫೀಚರ್ಸ್​​ಗಳನ್ನು ಸ್ಮಾರ್ಟ್​ಫೋನ್​ಗಳಲ್ಲಿ ಅಳವಡಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಇನ್ನು ಸ್ಮಾರ್ಟ್​ಫೋನ್​ಗಳು ಬಂದ ನಂತರ ಕೆಲವೊಂದು ಟೆಕ್​ ವಲಯದಲ್ಲಿ ಹಲವಾರು ಬದಲಾವಣೆಗಳಾಗಿದೆ. ಇನ್ನು ಸ್ಮಾರ್ಟ್​​ಫೋನ್​ ಬಳಕೆ ಹೆಚ್ಚಾದಂತೆ ಕ್ಯೂಆರ್​ ಕೋಡ್​ ಟೆಕ್ನಾಲಜಿ ಸಹ ಅಸ್ತಿತ್ವಕ್ಕೆ ಬಂತು. ಜೊತೆಗೆ ಆನ್​ಲೈನ್ ಪೇಮೆಂಟ್​ (Online Payment) ವಿಧಾನವಂತೂ ಬಂದ ನಂತರ ಕ್ಯೂಆರ್​ ಕೋಡ್ (QR Code)​ ಬಗ್ಗೆ ಹೇಳೋ ಹಾಗೆನೇ ಇಲ್ಲ. ಎಲ್ಲಿ ನೋಡಿದ್ರೂ ಕ್ಯೂಆರ್​ ಕೋಡ್​ಗಳೇ ಕಾಣಸಿಗುತ್ತದೆ. ಆದರೆ ಹೆಚ್ಚಿನವರಿಗೆ ಕ್ಯೂಆರ್​​ ಕೋಡ್​ ಅಂದ್ರೆ ಏನು?, ಇದನ್ನು ಹೇಗೆ ಕ್ರಿಯೇಟ್ ಮಾಡುತ್ತಾರೆಂಬುದು ಗೊತ್ತಿಲ್ಲ. 


    ಕ್ಯೂಆರ್​​ ಕೋಡ್​ ಎಂಬುದು ಒಂದು ರೀತಿಯ ಹೊಸ ಟೆಕ್ನಾಲಜಿ ಎನ್ನಬಹುದು. ಆದರೆ ಇದರ ಬಗ್ಗೆ ಗೊತ್ತಿಲ್ಲದ ಎಷ್ಟೋ ಜನರು ಇದ್ದಾರೆ. ಇನ್ನು ಕ್ಯೂಆರ್​ ಕೋಡ್​ ಎಂದರೇನು?, ಇದನ್ನು ಹೇಗೆ ಕ್ರಿಯೇಟ್​ ಮಾಡ್ತಾರೆ ಎಂಬ ಕುತೂಹಲ ಹಲವರಿಗೆ ಇರುತ್ತದೆ. ಇದಕ್ಕೆಲ್ಲಾ ಉತ್ತರ ಸಿಗ್ಬೇಕಾದ್ರೆ ಈ ಲೇಖನವನ್ನೊಮ್ಮೆ ಓದಿ.


    ಕ್ಯೂಆರ್​​ ಕೋಡ್​ ಅಂದ್ರೆ ಏನು?


    ಕ್ಯೂಆರ್​ ಕೋಡ್ (QR Code) ಅಂದ್ರೆ ಕ್ವಿಕ್​ ರೆಸ್ಪಾನ್ಸ್​ ಕೋಡ್​ ಎಂದರ್ಥ. ಇನ್ನು ಈ ಟೆಕ್ನಾಲಜಿಯನ್ನು ಡೆನ್ಸೋ ವೇವ್ ಎಂಬ ಜಪಾನಿ ಕಂಪೆನಿಯೊಂದು ಮೊದಲ ಬಾರಿಗೆ ಪರಿಚಯಿಸಿದೆ. ಮೊದಲ ಬಾರಿಗೆ ಈ ಟೆಕ್ನಾಲಜಿಯನ್ನು ಆಟೋಮೋಟಿವ್ ಕೈಗಾರಿಕೆಯ ಉದ್ದೇಶದಿಂದ ಆವಿಷ್ಕಾರ ಮಾಡಲಾಯಿತು. ಆದರೆ ನಂತರದ ದಿನಗಳಲ್ಲಿ ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆಯಿತು.


    ಇದನ್ನೂ ಓದಿ: ಕೀಬೋರ್ಡ್​ನ F​, J ಲೆಟರ್​​ಗೆ ಲೈನ್​ ಇರೋದು ಯಾಕೆ? ಗೊತ್ತಾದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!


    ಮೊದಲು ವಾಹನಗಳ ತಯಾರಿಕೆಯ ಟ್ರ್ಯಾಕಿಂಗ್ ಉದ್ದೇಶವಾಗಿ ಅತಿವೇಗವಾಗಿ ಭಾಗಗಳ ಸ್ಕ್ಯಾನಿಂಗ್ ಆಗಲು ಅನುವುಮಾಡಲು ಇದನ್ನು ತಯಾರಿಸಲಾಗಿತ್ತು. ಆದರೆ, ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಈಗ ಕ್ಯೂಆರ್ ಕೋಡ್ ಗಳು ಸಹ ವ್ಯಾಪಕವಾಗಿ ಬೆಳವಣಿಗೆಯಾಗಿದೆ. ಇದಲ್ಲದೆ ಆನ್​ಲೈನ್ ಪೇಮೆಂಟ್​ನಲ್ಲಿ ಈ ಟೆಕ್ನಾಲಜಿ ವಿಶ್ವದ ಮೂಲೆ ಮೂಲೆಯಲ್ಲಿ ತಲುಪಿದೆ.


    ಕ್ಯೂಆರ್​ ಕೋಡ್​ ಹೇಗೆ ಕ್ರಿಯೇಟ್ ಆಗುತ್ತದೆ?


    ಕ್ಯೂಆರ್​ ಕೋಡ್​ ಎಂಬುದು ಒಂದು ರೀತಿಯಲ್ಲಿ ಟೆಕ್ನಾಲಜಿಯಲ್ಲಿ ಮ್ಯಾಟ್ರಿಕ್ಸ್ ಬಾರ್​​ ಕೋಡ್​ ಟ್ರೇಡ್​ಮಾರ್ಕ್​ ಆಗಿದೆ. ಇನ್ನು ಈ ಬಾರ್​ ಕೋಡ್​ ಎಂಬುದು ಆಪ್ಟಿಕಲ್​ ಸಾಧನಗಳ ಮೂಲಕ ರೀಡ್ ಮಾಡಬಹುದಾದ ಒಂದು ವಿಧಾನವಾಗಿದ್ದು, ಯಾವ ವಿಷಯಕ್ಕೆ ಸಂಬಂಧಿಸಿರುತ್ತದೆಯೋ ಅದರಲ್ಲಿ ಆ್ಯಡ್ ಆಗಿರುತ್ತದೆ. ಈ ಕ್ಯೂಆರ್ ಕೋಡ್ ನಾಲ್ಕು ಬಗೆಯ ಪ್ರಮಾಣೀಕೃತ ಸಂಕೇತೀಕರಣ (standardized encoding)ಗಳನ್ನು ಬಳಸಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ.


    ಕ್ಯೂಆರ್ ಕೋಡ್


    ಅವೆಂದರೆ ನ್ಯೂಮೆರಿಕ್ (ಸಾಂಖ್ಯಿಕ), ಆಲ್ಫಾನ್ಯೂಮೆರಿಕ್ (ಅಕ್ಷರ ಮತ್ತು ಸಂಖ್ಯೆ ಒಳಗೊಂಡ), ಬೈಟ್/ ಬೈನರಿ ಮತ್ತು ಕಾಂಜಿ ಎಂಬ ಟೆಕ್ನಾಲಜಿಗಳು. ಇನ್ನು ಈ ಕ್ಯೂಆರ್​ ಕೋಡ್​ಗಳು ಒಂದು ಬಿಳಿಯ ಬಣ್ಣದ ಚೌಕಾಕಾರದ ಒಳಗೆ ಕಪ್ಪು ಬಣ್ಣದಲ್ಲಿ ಬಾಕ್ಸ್​ ಟೈಪ್​ನಲ್ಲಿರುತ್ತದೆ. ಆದರೆ ಮೊಬೈಲ್​ ಕ್ಯಾಮೆರಾ ಮೂಲಕ ಇದರಲ್ಲಿರುವಂತ ವಿಷಯವನ್ನು ಸ್ಕ್ಯಾನ್ ಮಾಡಬಹುದು.




    ಹೇಗೆ ಕಾರ್ಯನಿರ್ವಹಿಸುತ್ತದೆ?


    ಇನ್ನು ಯಾವುದೇ ಸಂದರ್ಭದಲ್ಲಿ ಉಪಯೋಗವಾಗುವ ಈ ಕ್ಯೂಆರ್​ ಕೋಡ್ ಬಗ್ಗೆ ಹೇಳುವುದಾದ್ರೆ, ಈ ಕ್ಯೂಆರ್​ ಕೋಡ್​ಗಳು ಹೆಚ್ಚಾಗಿ ಆನ್​ಲೈನ್ ಪೇಮೆಂಟ್​ ವಿಷಯದಲ್ಲಿ ಕಂಡುಬರುತ್ತದೆ. ಇನ್ನು ಇದರಲ್ಲಿ ಎನ್​ಕೋಡಿಂಗ್ ಮೂಲಕ ಆ್ಯಡ್ ಮಾಡಲಾದ ವಿಷಯಕ್ಕೆ ಸಂಬಂಧಿಸಿದಂತೆ ಈ ಕ್ಯೂಆರ್​ ಕೋಡ್ ಕಾರ್ಯನಿರ್ವಹಿಸುತ್ತದೆ. ಇದು ಇತ್ತೀಚಿನ ಕಾಲಮಾನದಲ್ಲಿ ಭಾರೀ ಸಹಕಾರಿಯಾಗಿದೆ.

    Published by:Prajwal B
    First published: