• Home
  • »
  • News
  • »
  • tech
  • »
  • Social Media: ಸಾವಿನ ನಂತರ ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಏನಾಗುತ್ತೆ? ಶಾಕ್​ ಆಗ್ತೀರಾ ನೋಡಿ

Social Media: ಸಾವಿನ ನಂತರ ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಏನಾಗುತ್ತೆ? ಶಾಕ್​ ಆಗ್ತೀರಾ ನೋಡಿ

ಸಾಮಾಜಿಕಾ ಜಾಲತಾಣ

ಸಾಮಾಜಿಕಾ ಜಾಲತಾಣ

ಇದು ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಸತ್ತ ಮೇಲೆ ಏನು ಮಾಡಬಹುದೆಂಬುದಕ್ಕೆ ಮಾಹಿತಿ. ಬಳಕೆದಾರರ ಮುಂದಾಲೋಚನೆಗಿರುವ ಒಳ್ಳೆಯ ಉಪಾಯವಾಗಿದೆ.

  • Share this:

    ಇದು ಆಧುನಿಕ ಯುಗ ಇಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್‌ಫೋನ್‌‌ (Smartphone) ಇದ್ದೇ ಇದೆ. ಸ್ಮಾರ್ಟ್‌ಫೋನ್‌ ಇಲ್ಲದೇ ಯಾವುದೇ ಕೆಲಸ ಆಗುವುದಿಲ್ಲ. ಅದೇ ರೀತಿ ಈ ಮೊಬೈಲ್‌ನ (Mobile) ಬಳಕೆ ಹೇಗೆ ಹೆಚ್ಚಾಗಿದೆಯೋ ಅದೇ ರೀತಿ ಸೋಶಿಯಲ್‌ ಮೀಡಿಯಾದ (Social Media) ಬಳಕೆಯೂ ಹೆಚ್ಚುತ್ತಲೇ ಇದೆ. ಈಗಿನ ಆಧುನಿಕ ಯುಗದಲ್ಲಿ ಸೋಷಿಯಲ್‌ ಮೀಡಿಯಾಗಳು ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಪ್ರತಿಯೊಬ್ಬರೂ ಕನಿಷ್ಟವಾಗಿ ಒಂದಾದರು ಸೋಷಿಯಲ್‌ ಮೀಡಿಯಾ ಅಕೌಂಟ್‌ ಅನ್ನು ಹೊಂದಿರುತ್ತಾರೆ. ಇನ್ಸ್ಟಾಗ್ರಾಮ್‌ (Instagram), ಫೇಸ್‌ಬುಕ್‌ (Facebook), ಯೂಟ್ಯೂಬ್‌ (Youtube) ಈ ಮೂರು ಸೋಷಿಯಲ್‌ ಮೀಡಿಯಾ ಬಳಕೆ ಮಾಡದ ಜನರಿಲ್ಲ ಎಂದರೆ ತಪ್ಪಾಗಲಾರದು. ಆದರೆ ಈ ರೀತಿಯ ಸೋಷಿಯಲ್‌ ಮೀಡಿಯಾಗಳು ಜನರನ್ನು ಬೇಗನೆ ತನ್ನತ್ತ ಆಕರ್ಷಿಸುತ್ತದೆ.


    ಆದರೆ ಈ ಸೋಷಿಯಲ್‌ ಮೀಡಿಯಾಗಳ ಬಗ್ಗೆ ಕೆಲವು ಬಳಕೆದಾರರು ಮುಂದಾಲೋಚನೆ ಮಾಡುತ್ತಾರೆ. ಇನ್ನು ಕೆಲವೊಬ್ಬರಿಗೆ ತಾವು ಸತ್ತಮೇಲೆ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಅನ್ನು ಏನಾಗುತ್ತದೆ ಎಂಬ ಪ್ರಶ್ನೆಗಳು ಇವೆ. ಇದಕ್ಕೆಲ್ಲ ಉತ್ತರ ಇಲ್ಲಿದೆ ಓದಿ.


    ಫೇಸ್​ಬುಕ್:


    ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳು ಅದರದ್ದೇ ಆಗಿರುವ ಕೆಲವೊಂದು ಖಾಸಗಿ ನಿಯಮಗಳನ್ನು ರೂಪಿಸಿರುತ್ತವೆ. ಫೇಸ್‌ಬುಕ್ ಅಂತೂ ನೀವು ಸತ್ತ ಮೇಲೆ ನಿಮ್ಮ ಖಾತೆಯನ್ನು ಯಾರು ನಿರ್ವಹಿಸಬೇಕೆಂಬುದನ್ನು ಮೊದಲೇ ನಿರ್ಧರಿಸುವುದಕ್ಕೆ ಬಳಕೆದಾರರಿಗೆ ಸೌಲಭ್ಯವನ್ನು ಕೂಡ ಒದಗಿಸಿದೆ.


    ಇದನ್ನೂ ಓದಿ: ಮರೆತು ಹೋಯಿತೆ ಮೊಬೈಲ್ ಪಾಸ್‌ವರ್ಡ್? ಟೆನ್ಷನ್‌ ಬಿಡಿ, ಹುಡುಕುವ ಟಿಪ್ಸ್ ಇಲ್ಲಿದೆ ನೋಡಿ


    ಆದರೆ, ಇದು ಅನೇಕರಿಗೆ ತಿಳಿದಿಲ್ಲವಷ್ಟೆ. ಇದಕ್ಕಾಗಿ ಮೊದಲು ನಿಮ್ಮ ಫೇಸ್‌ಬುಕ್ ಖಾತೆಯ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಸೆಕ್ಯೂರಿಟಿ ಮತ್ತು ಪ್ರೈವಸಿಯಲ್ಲಿ ‘ಲಿಗಸಿ ಕಾಂಟ್ಯಾಕ್ಟ್’ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಸಾಮಾಜಿಕ ಜಾಲತಾಣದಲ್ಲಿರುವಂತಹ ವ್ಯಕ್ತಿಯನ್ನು ನೀವು ಆಯ್ಕೆ ಮಾಡಿ ಸೆಲೆಕ್ಟ್ ಮಾಡಿದರೆ, ನೀವು ಸತ್ತ ನಂತರ ಆ ವ್ಯಕ್ತಿ ನಿಮ್ಮ ಖಾತೆಯನ್ನು ನಿಭಾಯಿಸುವಂತಹವರಾಗಿತ್ತಾರೆ. ಇದು ಫೇಸ್‌ಬುಕ್‌ ತಮ್ಮ ಬಳಕೆದಾರರಿಗೆ ನೀಡಿರುವಂತಹ ಒಂದು ಫೀಚರ್‌ ಆಗಿದೆ.


    What happens to your social media accounts after death
    ಸಾಮಾಜಿಕ ಜಾಲತಾಣ


    ಇನ್ಸ್ಟಾಗ್ರಾಮ್:‌


    ಇನ್ಸ್ಟಾಗ್ರಾಮ್‌ ಕೂಡ ತನ್ನದೇ ಆದ ಫಿಚರ್‌ ಅನ್ನು ಹೊಂದಿದೆ. ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆಗಳನ್ನು ಅಳಿಸಲು ಅಥವಾ ಅವರ ಸಾವಿನ ನಂತರ ಅವುಗಳನ್ನು ಸ್ಮರಣಾರ್ಥವಾಗಿ ಪರಿವರ್ತಿಸಲು ಆಯ್ಕೆಯನ್ನು ಹೊಂದಿರುತ್ತಾರೆ. ಇದೇ ರೀತಿ ಇನ್ಸ್ಟಾಗ್ರಾಮ್‌ನಲ್ಲೂ ಮಾಡಬಹುದಾಗಿದೆ.


    What happens to your social media accounts after death
    ಇನ್ಸ್ಟಾಗ್ರಾಮ್


    ಈ ರೀತಿಯಾಗಿ ಮೊದಲೇ ಸೆಟ್ಟಿಂಗ್ಸ್‌ಗೆ ಹೋಗಿ ತಮ್ಮ ಪ್ರೈವಸಿಯನ್ನು ಮಾಡಿಕೊಳ್ಳಬೇಕು. ನಂತರದಲ್ಲಿ ನಿಮ್ಮ ಮರಣದ ನಂತರ ಇನ್ನೊಬ್ಬರು ಬಳಕೆ ಮಾಡಬೇಕಾದರೆ ಮರಣದ ಡಾಕ್ಯುಮೆಂಟ್‌ ಅನ್ನು ಆ್ಯಡ್ ಮಾಡ್ಬೇಕು. ನಂತರದಲ್ಲಿ ಬೇರೊಬ್ಬರಿಗೆ ನಿಮ್ಮ ಖಾತೆಯನ್ನು ಬಳಸಲು ಅನುಮತಿಸಲಾಗುತ್ತದೆ.


    ಟ್ವಿಟರ್:


    ವಿಶ್ವದಲ್ಲಿ ಮತ್ತೊಂದು ಜನಪ್ರಿಯ ಸಾಮಾಜಿಕ ಜಾಲತಾಣವೆಂದರೆ ಟ್ವಿಟರ್. ಸಾವಿನ ಬಳಿಕ ಖಾತೆ ಯಾರು ಮುಂದುವರಿಸಿಕೊಂಡು ಹೋಗಬಹುದು ಎನ್ನುವ ಬಗ್ಗೆ ಯಾವುದೇ ನಿಯಮವಿಲ್ಲ. ಆದರೆ ಮೃತನ ಕುಟುಂಬದವರು ಖಾತೆ ಮುಚ್ಚಬೇಕೆಂದು ಟ್ವಿಟರ್​ಗೆ ಮನವಿ ಮಾಡಿಕೊಳ್ಳುವ ಅವಕಾಶವಿದೆ. ಖಾತೆದಾರನ ಕುಟುಂಬದವರು ಎಂದು ದೃಢಪಟ್ಟ ಬಳಿಕವಷ್ಟೇ ಆ ಖಾತೆಯ ಪೋಸ್ಟ್, ಫೋಟೋ ಮತ್ತು ಖಾತೆ ತೆಗೆದುಹಾಕಲಾಗುವುದು. ಮರಣಪ್ರಮಾಣ ಪತ್ರ ಸಲ್ಲಿಸುವುದು ಅತೀ ಅಗತ್ಯ.


    ಜಿ- ಮೇಲ್:


    ಜಿ-ಮೇಲ್‌ನಲ್ಲಿ ಸಹ ಖಾತೆಯನ್ನು ತಮ್ಮ ಮರಣದ ಮೇಲೆ ಅಕೌಂಟ್‌ ಅನ್ನು ನಿಷೇಧಿಸುವ ಆಯ್ಕೆಯನ್ನು ನೀಡಲಾಗಿದೆ. ಅದಕ್ಕಾಗಿ ‘ಪ್ರಿ ಸೆಲೆಕ್ಟೆಡ್‌ ಪೀರಿಡ್’ ಆಯ್ಕೆ ಮತ್ತು ಅಕೌಂಟ್ ಡಿಆಕ್ಟಿವ್ ಮಾಡಲು ಕುಟುಂಬದ ಸದಸ್ಯರಿಗೆ ಸೆಲೆಕ್ಟ್  ಮಾಡುವ ಆಯ್ಕೆಗಳನ್ನು ನೀಡಿದೆ. ಬಳಕೆದಾರರು ಮೊದಲೇ ಪ್ರಿ ಸೆಲೆಕ್ಟೆಡ್ ಪೀರಿಡ್ ಆಯ್ಕೆಯ ಡಿಆಕ್ಟಿವ್ ಮಾಡುವ ಅವಕಾಶ ಇದೆ. ಬಳಕೆದಾರ ಇಲ್ಲವಾದಾಗ ಅವರ ಕುಟುಂಬ ಸದಸ್ಯರು ಖಾತೆ ಡಿಆಕ್ಟಿವ್ ಮಾಡಲು ಆಕ್ಸಸ್ ನೀಡುವ ಆಯ್ಕೆ ಗೂಗಲ್ ನೀಡಿದೆ.


    ಯೂ ಟ್ಯೂಬ್:


    ಯೂ ಟ್ಯೂಬ್ ಖಾತೆದಾರರು ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸಲು ಅವಕಾಶ ನೀಡಿದೆ. ಯೂ ಟ್ಯೂಬ್​​ನಲ್ಲಿ ಹಣ ಸಂಪಾದನೆ ಮಾಡುವಂತಹ ಲಕ್ಷಾಂತರ ಮಂದಿಗೆ ಇದು ತುಂಬಾ ಒಳ್ಳೆಯ ಆಯ್ಕೆ. ಸಾವಿನ ಬಳಿಕ ನಿಮ್ಮ ಚಾನೆಲ್ ಅನ್ನು ಯಾರು ನಿರ್ವಹಿಸಬಹುದು ಎನ್ನುವ ಬಗ್ಗೆ ಒಂದು ಕಾನೂನು ಪತ್ರ ಸಲ್ಲಿಸಬೇಕು.


    ಇದನ್ನೂ ಓದಿ: ಹುಷಾರ್, ನಿಮ್ಮ ಡಿಜಿಟಲ್‌ ಅಕೌಂಟ್‌ ಹ್ಯಾಕ್‌ ಆಗುತ್ತೆ! ಸೈಬರ್‌ ಚೋರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ


    ಈ ಆಯ್ಕೆ ಮಾಡದೇ ಇದ್ದರೆ ಕೆಲವು ಸಮಯದ ತನಕ ಯಾವುದೇ ಪ್ರತಿಕ್ರಿಯೆ ಇಲ್ಲದೆ ಇರುವಂತಹ ನಿಮ್ಮ ಖಾತೆಯನ್ನು ಯೂ ಟ್ಯೂಬ್ ಮುಚ್ಚುತ್ತದೆ. ನೀವು ಗೂಗಲ್​ನ ಇನ್ ಆ್ಯಕ್ಟಿವ್ ಅಕೌಂಟ್ ಮ್ಯಾನೇಜರ್ ಮೂಲಕ ಒಬ್ಬ ನಂಬಿಕಸ್ಥ ವ್ಯಕ್ತಿಗೆ ಖಾತೆಯ ನಿರ್ವಹಣೆ ನೀಡಬಹುದು.


    ಇದು ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಸತ್ತ ಮೇಲೆ ಏನು ಮಾಡಬಹುದೆಂಬುದಕ್ಕೆ ಮಾಹಿತಿ. ಬಳಕೆದಾರರ ಮುಂದಾಲೋಚನೆಗಿರುವ ಒಳ್ಳೆಯ ಉಪಾಯವಾಗಿದೆ.

    Published by:Harshith AS
    First published: