• Home
 • »
 • News
 • »
 • tech
 • »
 • iPhone 14 Plus: ಏನಾಯ್ತು Apple ಕಂಪೆನಿಗೆ? ಇನ್ನು ಮುಂದೆ ಮಾರುಕಟ್ಟೆಗೆ ಬರಲ್ವಾ ಐಫೋನ್‌?

iPhone 14 Plus: ಏನಾಯ್ತು Apple ಕಂಪೆನಿಗೆ? ಇನ್ನು ಮುಂದೆ ಮಾರುಕಟ್ಟೆಗೆ ಬರಲ್ವಾ ಐಫೋನ್‌?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗ ಆ್ಯಪಲ್‌ ಕಂಪನಿ ತನ್ನ ಗ್ರಾಹಕರಿಗೆ ಕಹಿಸುದ್ದಿ ನೀಡುತ್ತಿದೆ. ಇನ್ನು ಮುಂದೆ ಕಂಪೆನಿ ಐಫೋನ್‌ 14 ಪ್ಲಸ್‌ ಉತ್ಪಾದನೆ ಕಡಿಮೆ ಮಾಡುತ್ತದೆ ಎನ್ನಲಾಗುತ್ತಿದೆ.

 • Share this:

  ಇತ್ತೀಚೆಗೆ ಆ್ಯ ಪಲ್‌ ಕಂಪೆನಿಯವರು (Apple Company) ಐಫೋನ್‌ 14 ಪ್ಲಸ್‌ (IPhone 14 Plus) ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ ಎಂದು ಘೋಷಿಸಿದ್ದರು. ಇದು ಐಫೋನ್‌ ಬ್ರಾಂಡ್‌ (Brand) ಗಳಲ್ಲಿ ಒಂದು ಗುಣಮಟ್ಟದ ಉತ್ಪನ್ನವಾಗಿದ್ದು ಸ್ವಲ್ಪಮಟ್ಟಿಗೆ ಗ್ರಾಹಕರೂ ಕಾಯುತ್ತಿದ್ದರು. ಆದರೆ ಈಗ ಆ್ಯಪಲ್‌ ಕಂಪನಿ ಆ್ಯಪಲ್‌ ಗ್ರಾಹಕರಿಗೆ ಕಹಿಸುದ್ದಿ ನೀಡುತ್ತಿದೆ. ಇನ್ನು ಮುಂದೆ ಕಂಪೆನಿ ಐಫೋನ್‌ 14 ಪ್ಲಸ್‌ ಅನ್ನು ಉತ್ಪಾದಿಸುವುದರಲ್ಲಿ ಕಡಿಮೆ ಮಾಡುತ್ತದೆ ಎಂದು ವರದಿ ನೀಡಿದೆ. ಏಕೆಂದರೆ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಐಫೋನ್‌ ಬೇಡಿಕೆ ಕಡಿಮೆಯಾಗುತ್ತಾ ಬಂದಿದೆ. ಇದರಿಂದ ಆ್ಯಪಲ್‌ ಕಂಪನಿ ತನ್ನ ಮಾರ್ಕೆಟಿಂಗ್‌ನಲ್ಲಿ ನಷ್ಟವನ್ನು ಕಂಡಿರುವುದರಿಂದ ಸ್ವಲ್ಪ ದಿನದ ಮಟ್ಟಿಗೆ ಐಫೋನ್‌ 14 ಪ್ಲಸ್‌ ಉತ್ಪಾದನೆಯನ್ನು ಕಡಿತಗೊಳಿಸಲಾಗುವುದು ಎಂದು ವರದಿ ಮಾಡಲಾಗಿದೆ.


  ಇದು  ಐಫೋನ್‌ ಕಂಪನಿಯ ಮಾರುಕಟ್ಟೆಯಲ್ಲಾಗಿರುವ ಬದಲಾವಣೆಯಾಗಿದೆ. ಇದರಿಂದ ಕಂಪೆನಿಗಳಲ್ಲಿ ಹಲವಾರು ಚರ್ಚೆಗಳು ನಡೆಯುತ್ತಿದೆ. ಜೊತೆಗೆ ಗ್ರಾಹಕರ ಬೇಡಿಕೆಯ ಮೇಲೆ  ಈ ಉತ್ಪಾದನೆಯ ವಿಷಯ ತಿಳಿಸಲಾಗುತ್ತದೆ ಎಂದು ವರದಿ ನೀಡಿದ್ದಾರೆ.


  ಇದಕ್ಕೆ ಕಾರಣಗಳೇನು?


  ಕ್ಯುಪರ್ಟಿನೊ, ಕ್ಯಾಲಿಫೋರ್ನಿಯಾ ಮೂಲದ ಕಂಪನಿಯು, ವರದಿಯ ಪ್ರಕಾರ ಐಫೋನ್ 14 ಪ್ಲಸ್ ಘಟಕಗಳ ಉತ್ಪಾದನೆಯನ್ನು ತಕ್ಷಣವೇ ನಿಲ್ಲಿಸುವಂತೆ ಚೀನಾದಲ್ಲಿ ಕನಿಷ್ಠ ಒಬ್ಬ ತಯಾರಕರಿಗೆ ತಿಳಿಸಿದೆ. ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆ ಕುಗ್ಗುತ್ತಿರುವ ಕಾರಣದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಂತ್ರಜ್ಞರು ತಿಳಿಸುತ್ತಾರೆ. ಒಂದು ವರ್ಷದ ಹಿಂದೆ ಹೋಲಿಸಿದರೆ ಈ ವರ್ಷ ಶೇಕಡಾ 9 ರಷ್ಟು ಮಾರುಕಟ್ಟೆ ಪ್ರಮಾಣದಲ್ಲಿ ಕುಸಿದಿದೆ ಎಂದು ವರದಿಯಾಗಿದೆ.


  ಇದನ್ನೂ ಓದಿ: Xiaomi Redmi Note 12 ಸೀರಿಸ್‌ ರಿಲೀಸ್​ ಡೇಟ್​ ಫಿಕ್ಸ್​, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಫೋನ್


  ಇದರ ಜೊತೆಗೆ ತನ್ನ ಬ್ರಾಂಡ್‌ನ ಮಾರಾಟದ ಪ್ರಮಾಣವನ್ನು ಈಗಿನ ಮಾರುಕಟ್ಟೆಗೆ ಹೋಲಿಸಿದಾಗ ಬಹಳಷ್ಟು ಕುಸಿತವನ್ನು ಕಂಡಿದೆ ಎಂದು ತಿಳಿದ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿ ಮಾಡಿದ್ದಾರೆ. ಇದಲ್ಲದೆ ಸಂಶೋಧನ ಸಂಸ್ಥೆ ಕೆನಾಲಿಸ್‌ನ ಅಂದಾಜಿನ ಪ್ರಕಾರ ಆರರಿಂದ ಒಂಬತ್ತು ತಿಂಗಳವರೆಗೆ ಬೇಡಿಕೆ ತುಂಬಾ ಕಡಿಮೆಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.


  What happened to Apple Will the iPhone ever come to the market
  ಸಾಂದರ್ಭಿಕ ಚಿತ್ರ


  ವರದಿಗಳ ಪ್ರಕಾರ ಏನಿದೆ?


  ಐಫೋನ್ 14 ಪ್ಲಸ್ ಮೂಲಭೂತವಾಗಿ iPhone 14 ನಂತೆಯೇ ಇದೆ, ಆದರೆ ಇದು ದೊಡ್ಡ ಡಿಸ್ ಪ್ಲೇ ಹೊಂದಿದೆ ಮತ್ತು ಇದರ ಆರಂಭಿಕ ಬೆಲೆಯೇ ಹೆಚ್ಚಾಗಿದೆ. ಮಾಹಿತಿಯ ಪ್ರಕಾರ, ಆಪಲ್ ಚೀನಾದಲ್ಲಿ ಒಬ್ಬ ತಯಾರಕರಿಗೆ ಫೋನ್‌ನಲ್ಲಿ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಿತು, ಆದರೆ ದೇಶದಲ್ಲಿ ಇಬ್ಬರು ಸಪ್ಲೈರ್ಸ್ ಕ್ರಮವಾಗಿ 70% ಮತ್ತು 90% ರಷ್ಟು ಉತ್ಪಾದನೆಯನ್ನು ಮಾಡುವಂತೆ ತಿಳಿಸಲಾಗಿದೆ. ವರದಿಯ ಪ್ರಕಾರ, ಬೇಡಿಕೆ ಕಡಿಮೆಯಾಗಿದೆ, ಕೆಲವು ಗ್ರಾಹಕರು ಐಫೋನ್ 14 ಪ್ರೊ ಮಾದರಿಯನ್ನೇ ಬಯಸುತ್ತಾರೆ ಏಕೆಂದರೆ ಇದು  ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ.


  ಇದನ್ನೂ ಓದಿ: ನಿಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ ವಿಡಿಯೋ ಸಿನಿಮಾದಷ್ಟು ಸಖತ್ ಆಗಿರ್ಬೇಕಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್


  ಇದು ಐಫೋನ್‌ ಮಾರುಕಟ್ಟೆ ಮೇಲೆ ಬಿದ್ದಂತಹ ಕುಸಿತದ ಮಾಹಿತಿಗಳಾಗಿವೆ. ಪ್ರತಿಯೊಬ್ಬ ಗ್ರಾಹಕರು ಒಂದು ಉತ್ಪನ್ನದ ಬಗ್ಗೆ ಬೇಡಿಕೆ ಕಡಿಮೆ ಮಾಡುತ್ತಾರೆ ಎಂದರೆ ಅದರ ಬಗ್ಗೆ ಏನಾದರು ಋಣಾತ್ಮಕ ಉದ್ದೇಶವನ್ನು ಹೊಂದಿರುತ್ತಾರೆ.

  Published by:Harshith AS
  First published: