ಏರ್‌ಟೆಲ್ 5ಜಿ ಯಲ್ಲಿ ಕ್ಲೌಡ್‌ ಗೇಮಿಂಗ್‌ನಿಂದ ನೀವು ಏನು ನಿರೀಕ್ಷಿಸಬಹುದು? ಇಲ್ಲಿದೆ ಸಂಪೂರ್ಣ ವಿವರ...

ಸ್ಮಾರ್ಟ್‌ಫೋನ್‌ನಲ್ಲಿ ಇದೊಂದು ಅತ್ಯುತ್ತಮ ಗುಣಮಟ್ಟದ ಗೇಮಿಂಗ್ ಅನುಭವವಾಗಿದೆ ಎಂಬುದಾಗಿ ಗೇಮರ್‌ಗಳು ಅನುಭವ ತಿಳಿಸಿದ್ದು ತಮ್ಮ ಗೇಮಿಂಗ್ ಅನುಭ ನಿಜಕ್ಕೂ ಬೆರಗುಗೊಳಿಸಿದೆ ಎಂಬುದಾಗಿ ಉಲ್ಲೇಖಿಸಿದ್ದಾರೆ. 5 ಜಿ ಸಂಪರ್ಕವು ಗೇಮಿಂಗ್ ದಿಕ್ಕನ್ನೇ ಬದಲಾಯಿಸಲಿದೆ ಎನ್ನಲಾಗುತ್ತಿದೆ.

ಪಬ್ ಜಿ.

ಪಬ್ ಜಿ.

 • Share this:
  ಗೇಮಿಂಗ್‌ನ ಸಂಪೂರ್ಣ ಭವಿಷ್ಯ ಅಡಗಿರುವುದು ಕ್ಲೌಡ್‌ನಲ್ಲಾಗಿದ್ದು, ಪವರ್‌ಫುಲ್ ಪ್ರೊಸೆಸರ್, ಗ್ರಾಫಿಕ್ಸ್ ಕಾರ್ಡ್, ಹೈ ಎಂಡ್ ಕನ್ಸೋಲ್ ಇವು ಯಾವುದೂ ಗೇಮಿಂಗ್‌ಗೆ ಬೇಕಾಗಿಲ್ಲ ಎಂಬುದಾಗಿ ಭಾರತದ ಟಾಪ್ ಗೇಮರ್‌ಗಳಾದ ಮಂಬಾ (ಸಲ್ಮಾನ್ ಅಹಮದ್) ಮೋರ್ಟಲ್ (ನಮನ್ ಮಾಥೂರ್) ಭಾರತದ ಮೊದಲ ಕ್ಲೌಡ್ ಗೇಮಿಂಗ್ ಈವೆಂಟ್‌ನಲ್ಲಿ ತಿಳಿಸಿದ್ದಾರೆ. ಗುರ್‌ಗಾಂವ್‌ನ ಮಾನೇಸರ್‌ನಲ್ಲಿ ಏರ್‌ಟೆಲ್ ಈ ಡೆಮೊವನ್ನು ಮೊದಲ ಬಾರಿಗೆ ನಡೆಸಿದ್ದು ಈ ಅನುಭವವು ಗೇಮರ್‌ಗಳಿಗೆ ಅತ್ಯುತ್ತಮ ಅನುಭವವನ್ನು ಒದಗಿಸಿದೆ ಎಂಬುದಂತೂ ನಿಜ. 3500 MHz ಹೆಚ್ಚಿನ ಸ್ಪೆಕ್ಟ್ರಮ್ ಬ್ಯಾಂಡ್‌ಗೆ ಸಂಪರ್ಕ ಹೊಂದಿರುವ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಇಬ್ಬರೂ ಗೇಮರ್‌ಗಳು 1 Gbps ವೇಗದ ಮತ್ತು 10 ಮಿಲಿಸೆಕೆಂಡುಗಳ ಸಮಯದಲ್ಲಿ ಅನುಭವ ಪಡೆದರು. ಮಧ್ಯಮ ಕ್ರಮಾಂಕದ ಸ್ಮಾರ್ಟ್‌ಫೋನ್‌ಗಳನ್ನು ಬಳಸಿದ ಗೇಮರ್‌ಗಳು 5ಜಿ ಸಂಪರ್ಕದ ಮೂಲಕ ಯಾವುದೇ ಸಮಯದ ಅಭಾವವಿಲ್ಲದೆ ಬಜೆಟ್ ಫೋನ್‌ಗಳಲ್ಲಿ ಕೂಡ ಗೇಮಿಂಗ್ ಅನುಭವವನ್ನು ಆನಂದಿಸಬಹುದು ಎಂಬುದಾಗಿ ತೋರಿಸಿಕೊಟ್ಟಿದ್ದಾರೆ.

  ಸ್ಮಾರ್ಟ್‌ಫೋನ್‌ನಲ್ಲಿ ಇದೊಂದು ಅತ್ಯುತ್ತಮ ಗುಣಮಟ್ಟದ ಗೇಮಿಂಗ್ ಅನುಭವವಾಗಿದೆ ಎಂಬುದಾಗಿ ಗೇಮರ್‌ಗಳು ಅನುಭವ ತಿಳಿಸಿದ್ದು ತಮ್ಮ ಗೇಮಿಂಗ್ ಅನುಭ ನಿಜಕ್ಕೂ ಬೆರಗುಗೊಳಿಸಿದೆ ಎಂಬುದಾಗಿ ಉಲ್ಲೇಖಿಸಿದ್ದಾರೆ. 5 ಜಿ ಸಂಪರ್ಕವು ಗೇಮಿಂಗ್ ದಿಕ್ಕನ್ನೇ ಬದಲಾಯಿಸಲಿದ್ದು ಸಣ್ಣ ಊರುಗಳಿಂದ ಪ್ರತಿಭಾವಂತ ಗೇಮರ್‌ಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ 5 ಜಿ ಸಂಪರ್ಕವು ಗೇಮಿಂಗ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದ್ದು ಭಾರತದಿಂದ ಗೇಮಿಂಗ್‌ಗಳನ್ನು ನಿರ್ಮಿಸಲು ಹಾಗೂ ಬಿಡುಗಡೆ ಮಾಡಲು ಅವಕಾಶ ನೀಡಲಿದೆ ಎಂದು ತಿಳಿಸಿದ್ದಾರೆ.

  ಕ್ಲೌಡ್ ಗೇಮಿಂಗ್ ಸಂಪೂರ್ಣ ಗೇಮಿಂಗ್ ದಿಕ್ಕನೇ ಹೇಗೆ ಬದಲಾಯಿಸಬಲ್ಲುದು:

  ಇಂದಿನ ದಿನಗಳಲ್ಲಿ ಗೇಮಿಂಗ್ ಸಾಮಾನ್ಯವಾಗಿ ಸಾಧನದ ಹಾರ್ಡ್‌ವೇರ್, ಡಿಸ್‌ಪ್ಲೇ, ಗ್ರಾಫಿಕ್ಸ್, ರ‍್ಯಾಮ್ ಮೊದಲಾದ ಭಾಗಗಳ ಮೇಲೆ ಅವಲಂಬಿತವಾಗಿದೆ. ನಿರ್ದಿಷ್ಟ ಗೇಮ್ ಆಡಲು ನೀವು ಬಯಸುವಿರಾದರೆ ನಿಮ್ಮ ಡಿವೈಸ್ ಅದಕ್ಕೆ ಬೆಂಬಲ ನೀಡುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು. ಡಿವೈಸ್ ಹೆಚ್ಚು ಶಕ್ತಿಶಾಲಿಯಾಗಿರುವಂತೆ ಅದು ಹೆಚ್ಚು ದುಬಾರಿಯಾಗಿರುತ್ತದೆ. ಇದರಿಂದಾಗಿ ಉನ್ನತ ಮಟ್ಟದ ಗೇಮಿಂಗ್ ಅನುಭವ ಪಡೆಯಲು ಸೀಮಿತ ಪ್ರೇಕ್ಷಕರಿಗೆ ಮಾತ್ರವೇ ಸಾಧ್ಯವಾಗುತ್ತಿದ್ದು ದುಬಾರಿ ಹಾರ್ಡ್‌ವೇರ್‌ಗೆ ಹೂಡಿಕೆ ಮಾಡುವ ಅಗತ್ಯವಿರುತ್ತದೆ.

  ಆದರೆ ಕ್ಲೌಡ್ ಗೇಮಿಂಗ್, ಗೇಮಿಂಗ್ ದಿಕ್ಕನ್ನೇ ಬದಲಾಯಿಸಲಿದೆ. ಗೇಮಿಂಗ್ ಅನ್ನು ಕ್ಲೌಡ್, ಸ್ಟ್ರೀಮಿಂಗ್ ಅನುಭವವಾಗಿ ಪರಿವರ್ತಿಸುತ್ತದೆ. ನಿಮ್ಮ ಡಿವೈಸ್‌ನಲ್ಲಿ ವಿಡಿಯೋವನ್ನು ಸ್ಟ್ರೀಮ್ ಮಾಡುತ್ತಿರುವಂತೆಯೇ ಗೇಮ್ ಅನ್ನು ಡೌನ್‌ಲೋಡ್ ಮಾಡದೆಯೇ ನೀವು ಗೇಮ್ ಆಡಬಹುದಾಗಿದೆ. ಕ್ಲೌಡ್‌ನಲ್ಲಿರುವ ಸರ್ವರ್‌ನಲ್ಲಿ ಗೇಮ್ ಪ್ಲೇಯಾಗುತ್ತದೆ. ನೀವು ಮಾಡಬೇಕಾಗಿರುವುದು ಏನೆಂದರೆ ಕ್ಲೌಡ್‌ಗೆ ಕನೆಕ್ಟ್ ಮಾಡುವುದಾಗಿದೆ. ನಿಮಗೆ ಬೇಕಾದ ಆಟವನ್ನು ಆರಿಸಿ ಹಾಗೂ ಆಡಿ. ಏರ್‌ಟೆಲ್ 5ಜಿ ಮೂಲಕ ಯಾರು ಬೇಕಾದರೂ ಉತ್ತಮ ಗೇಮಿಂಗ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

  ಚಲನಚಿತ್ರ ಅಥವಾ ಟಿವಿ ಶೋವನ್ನು ಸ್ಟ್ರೀಮಿಂಗ್ ಮಾಡುವುದಕ್ಕಿಂತ ಭಿನ್ನವಾಗಿ ಗೇಮ್‌ನೊಂದಿಗೆ ಸಂವಹನ ನಡೆಸಬಹುದಾಗಿದೆ. (ಕಮಾಂಡ್‌ಗಳನ್ನು ನೀಡುವುದು, ಇತರ ಗೇಮರ್‌ಗಳ ಜೊತೆ ಮಾತನಾಡುವುದು). ಹೈಪರ್-ಫಾಸ್ಟ್ ಮತ್ತು ಅಲ್ಟ್ರಾ-ಲೋ ಲೇಟೆನ್ಸಿ 5 ಜಿ ಟೆಸ್ಟ್ ನೆಟ್‌ವರ್ಕ್ ಅನ್ನು ಹೊಂದಿರುವುದು ಅನುಭವವನ್ನು ತಡೆರಹಿತವಾಗಿಸುತ್ತದೆ.

  5ಜಿ ಕ್ಲೌಡ್‌ ಗೇಮಿಂಗ್‌ಗೆ ಹೇಗೆ ಬೆಂಬಲ ನೀಡಲಿದೆ?

  ಭಾರತಿ ಏರ್‌ಟೆಲ್, CTO ರಣ್‌ದೀಪ್ ಸೆಖೋನ್ 5ಜಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು 5ಜಿ ಕ್ಷೇತ್ರದಲ್ಲಿ ಕ್ಲೌಡ್ ಗೇಮಿಂಗ್ ಅತಿದೊಡ್ಡ ಸಾಧನೆಯಾಗಿದ್ದು ಹೆಚ್ಚಿನ ವೇಗ ಹಾಗೂ ಕಡಿಮೆ ಸಮಯ ಅಭಾವದ ಸಂಯೋಜನೆಯನ್ನು ಪಡೆದುಕೊಂಡಿದೆ. ಟೆಸ್ಟ್ ನೆಟ್‌ವರ್ಕ್ ಮೂಲಕ ಭಾರತದ ಮೊದಲ 5G ಡೆಮೊವನ್ನು ತಲುಪಿಸಿದ ನಂತರ, ಈ ರೋಮಾಂಚಕಾರಿ 5G ಗೇಮಿಂಗ್ ಸೆಶನ್ ಅನ್ನು ನಡೆಸಲು ನಾವು ರೋಮಾಂಚನಗೊಂಡಿದ್ದೇವೆ. ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: iPhone 13 sale offer: ಬಿಡುಗಡೆಗೊಂಡ 4 ದಿನದಲ್ಲೇ ಐಫೋನ್ 13 ಸಿರೀಸ್ ಮೇಲೆ 6 ಸಾವಿರ ರಿಯಾಯಿತಿ!

  ಏರ್‌ಟೆಲ್‌ನ 5ಜಿ ಕ್ಲೌಡ್ ಗೇಮಿಂಗ್ ಈವೆಂಟ್ ಈ ವರ್ಷದ ಆರಂಭದಲ್ಲಿ ಹೈದ್ರಾಬಾದ್‌ನಲ್ಲಿ ನಡೆದ ಮತ್ತೊಂದು ಯಶಸ್ವಿ ಲೈವ್ ಪ್ರಾತ್ಯಕ್ಷಿಕೆಯ ನಂತರ ಬಂದಿದೆ. ಇಲ್ಲಿ 4 ಜಿ ನೆಟ್‌ವರ್ಕ್ ಮೂಲಕ 5ಜಿ ಸೇವೆಗಳನ್ನು ಪರಿಶೀಲಿಸಲಾಯಿತು. ಸೇವಾ ಪೂರೈಕೆದಾರರು ಇತ್ತೀಚೆಗೆ ನೋಕಿಯಾ ಮತ್ತು ಎರಿಕ್ಸನ್ ಜೊತೆ ಪಾಲುದಾರಿಕೆ ಹೊಂದಿದ್ದು, ಭಾರತದ ಅನೇಕ ನಗರಗಳಲ್ಲಿ 5 ಜಿ ಪ್ರಯೋಗಗಳನ್ನು ನಡೆಸಿದ್ದಾರೆ.
  First published: