ಪ್ರಪಂಚದಾದ್ಯಂತ ಅತೀ ಹೆಚ್ಚು ಬಳಕೆ ಮಾಡುತ್ತಿರುವ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಎಂದರೆ ಅದು ವಾಟ್ಸಪ್ (Whatsapp) ಎಂದು ಹೇಳಬಹುದು. ವಾಟ್ಸಪ್ ತನ್ನ ಅದ್ಭುತ ಫೀಚರ್ಸ್ (Features) ಅನ್ನು ನೀಡುವ ಮೂಲಕ ಬಹಳಷ್ಟು ಬಳಕೆದಾರರನ್ನು ಆಕರ್ಷಿಸಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಎಂಬುದು ಯಾವುದೇ ವಿಡಿಯೋ (Video), ಫೋಟೋ (Photo), ಅಗತ್ಯವಾದ ಡಾಕ್ಯುಮೆಂಟ್ಸ್ಗಳನ್ನು (Documents) ಕ್ಷಣಮಾತ್ರದಲ್ಲಿ ಆನ್ಲೈನ್ ಮೂಲಕ ಕಳುಹಿಸುವ ಅಪ್ಲಿಕೇಶನ್ ಎಂದು ಹೇಳಬಹುದು. ವಾಟ್ಸಪ್ ಪ್ರತೀವರ್ಷ ಏನಾದರು ಒಂದು ಫೀಚರ್ಸ್ ಅನ್ನು ವಾಟ್ಸಪ್ನಲ್ಲಿ ಅಳವಡಿಸುತ್ತಿದ್ದರು. ಆದರೆ ಈ ವರ್ಷಅಂದರೆ 2022ರಲ್ಲಿ ವಾಟ್ಸಪ್ ಬಳಕೆದಾರರಿಗೆ ಬಹಳಷ್ಟು ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ. ಇದು ತನ್ನ ಬಳಕೆದಾರರ ಉಪಯೋಗಕ್ಕಾಗಿಯೇ ಅಳವಡಿಸಿದ ಫೀಚರ್ಸ್ಗಳಾಗಿವೆ.
ಹೌದು, ವಾಟ್ಸಪ್ ತನ್ನ ಬಳಕೆದಾರರಿಗೆ ಈ ವರ್ಷ ಬಹಳಷ್ಟು ಅಪ್ಡೇಟ್ಗಳನ್ನು ಹೊರತಂದಿದೆ. ಹಾಗಿದ್ರೆ ಯಾವೆಲ್ಲಾ ಫೀಚರ್ಸ್ಗಳು 2022ರಲ್ಲಿ ವಾಟ್ಸಪ್ನಲ್ಲಿ ಬಂದಿದೆ ಎಂಬುದನ್ನು ನೋಡೋಣ.
ವಿಡಿಯೋ ಕಾಲ್ ಅಪ್ಡೇಟ್:
ವಿಡಿಯೋ ಕಾಲ್ ಎಂಬುದು ವಾಟ್ಸಪ್ನಲ್ಲಿರುವ ಬಹಳ ವಿಶೇಷ ಫೀಚರ್ ಅಂತ ಹೇಳ್ಬಹುದು. ಮೊದಲು ವಾಟ್ಸಪ್ನಲ್ಲಿ ವಿಡಿಯೋ ಕಾಲ್ನಲ್ಲಿ ಕೇವಲ ಇಬ್ಬರಿಗೆ ಮಾತ್ರ ಮಾತಾಡಲು ಅವಕಾಶವಿತ್ತು ನಂತರ ದಲ್ಲಿ ಅದು ನಾಲ್ಕು, ಮತ್ತೆ ಎಂಟು ಜನರೊಂದಿಗೆ ಮಾತಾಡುವ ಅವಕಾಶವನ್ನು ನೀಡಿತು. ಈ ವರ್ಷ ವಾಟ್ಸಪ್ ಬಿಡುಗಡೆ ಮಾಡಿದ ಫೀಚರ್ಸ್ ಮೂಲಕ ವಿಡಿಯೋ ಕಾಲ್ನಲ್ಲಿ ಒಟ್ಟಾಗಿ 32 ಜನರ ಜೊತೆ ಮಾತಾಡಬಹುದಾಗಿದೆ.
ಇದನ್ನೂ ಓದಿ: 2022 ರಲ್ಲಿ ಟ್ರೆಂಡ್ ಆಗಿರುವ ಮೊಬೈಲ್ ತಂತ್ರಜ್ಞಾನಗಳು ಇವೇ ನೋಡಿ!
ಆನ್ಲೈನ್ ಇದೆ ಎಂದು ತೋರಿಸದೇ ಇರುವುದು
ಈ ಮುಂಚೆ ಎಲ್ಲಾ ವಾಟ್ಸಪ್ಗಳಲ್ಲಿ ಬಳಕೆದಾರರು ಇಂಟರ್ನೆಟ್ ಆನ್ ಮಾಡಿದಾಗ ವಾಟ್ಸಪ್ನಲ್ಲಿ ಆನ್ಲೈನ್ನಲ್ಲಿ ಇದ್ದಾರೆಂದು ತೋರಿಸುತ್ತಿತ್ತು. ಆದರೆ ಈ ವರ್ಷದ ಅಪ್ಡೇಟ್ ಮೂಲಕ ಇನ್ಮುಂದೆ ಈ ಆನ್ಲೈನ್ನಲ್ಲಿ ಇದ್ದೇವೆ ಎಂದು ತೋರಿಸುವ ನಾಟಿಫಿಕೇಶನ್ ಅನ್ನು ಕೂಡ ಆಫ್ ಮಾಡಿಟ್ಟುಕೊಳ್ಳಬಹುದಾಗಿದೆ. ಈ ರೀತಿ ಆಫ್ ಮಾಡಿಟ್ಟರೆ ಬೇರೆಯವರಿಗೆ ನೀವು ಆನ್ಲೈನ್ನಲ್ಲಿರುವುದು ಕಾಣುವುದಿಲ್ಲ.
ಗ್ರೂಪ್ನಿಂದ ಲೆಫ್ಟ್ ಆದರೆ ಅಡ್ಮಿನ್ ಬಿಟ್ಟು ಬೇರ್ಯಾರಿಗೂ ತಿಳಿಯಲ್ಲ
ಈ ಹಿಂದೆ ವಾಟ್ಸಪ್ ಗ್ರೂಪ್ಗಳಲ್ಲಿ ಇದ್ದವರು ಅವರಿಗೆ ಆ ಗ್ರೂಪ್ ಬೇಡವಾದಾಗ ಗ್ರೂಪ್ನಿಂದ ಲೆಫ್ಟ್ ಆಗುತ್ತಿದ್ದರು. ಇದು ವಾಟ್ಸಪ್ ಗ್ರೂಪ್ನಲ್ಲಿರುವ ಎಲ್ಲಾ ಸದಸ್ಯರಿಗೆ ನಾಟಿಫಿಕೇಶನ್ ತೋರಿಸುತ್ತಿತ್ತು. ಆದರೆ ಇನ್ನು ವಾಟ್ಸಪ್ ಗ್ರೂಪ್ನಲ್ಲಿ ಲೆಫ್ಟ್ ಆದರೆ ಗ್ರೂಪ್ ಅಡ್ಮಿನ್ಸ್ಗೆ ಬಿಟ್ರೆ ಬೇರೆ ಯಾರಿಗೂ ಗೊತ್ತಾಗುವುದಿಲ್ಲ.
ನಿಮಗೆ ನೀವೇ ಮೆಸೇಜ್ ಮಾಡಿಕೊಳ್ಳಬಹುದು
ಹೌದು ಇದು ವಾಟ್ಸಪ್ನಲ್ಲಿ ಈ ವರ್ಷ ಬಂದಂತಹ ಸ್ಪೆಷಲ್ ಫೀಚರ್ಸ್ ಆಗಿದೆ. ಇದು ಒಂದು ರೀತಿಯಲ್ಲಿ ನಮ್ಮ ನೋಟ್ಪ್ಯಾಡ್ ಇದ್ದಂತೆ. ಯಾಕೆಂದರೆ ಈ ಹಿಂದೆ ಏನಾದರು ಅಗತ್ಯ ವಿಷಯಗಳು ಮರೆಯಬಾರದು ಎನ್ನುವ ಕಾರಣಕ್ಕೆ ನೋಟ್ಪ್ಯಾಡ್ನಲ್ಲಿ ಟೈಪ್ ಮಾಡಿ ಇಟ್ಟುಕೊಳ್ಳುತ್ತಿದ್ದೆವು. ಆದರೆ ಇನ್ನುಮುಂದೆ ಇದನ್ನು ನಿಮ್ಮ ನಂಬರ್ಗೆ ವಾಟ್ಸಪ್ನಲ್ಲಿ ಮೆಸೇಜ್ ಮಾಡುವ ಮೂಲಕ ಬರೆದಿಟ್ಟುಕೊಳ್ಳಬಹುದಾಗಿದೆ.
ವಾಟ್ಸಪ್ ಪ್ರೊಫೈಲ್ ಫೋಟೋ ಹೈಡ್ ಮಾಡಬಹುದು:
ವಾಟ್ಸಪ್ನಲ್ಲಿ ಪ್ರೊಫೈಲ್ ಫೋಟೋ ಹೈಡ್ ಮಾಡುವ ಫೀಚರ್ ಈ ಹಿಂದೆಯೂ ಇತ್ತು. ಆದರೆ ಅದು ಅಪರಿಚಿತ ವ್ಯಕ್ತಿಗಳು ವಾಟ್ಸಪ್ ಗ್ರೂಪ್ಗಳಲ್ಲಿ ಇದ್ದಾಗ ಮಾತ್ರ ಉಪಯೋಗ ವಾಗುತ್ತಿತ್ತು. ಆದರೆ ಇನ್ನುಮುಂದೆ ಬಳಕೆದಾರರು ಅವರಿಗೆ ಬೇಕಾದವರಿಗೆ ಕಾಣದ ಹಾಗೆ ವಾಟ್ಸಪ್ ಡಿಪಿ ಯನ್ನು ಹೈಡ್ ಮಾಡಬಹುದು.
ಕಮ್ಯುನಿಟಿ ಗ್ರೂಪ್ ಫೀಚರ್:
ವಿಶೇಷವಾಗಿ ಇದು ಹೊಸ ಫೀಚರ್ ಎಂದು ಹೇಳಬಹುದು. ಏಕೆಂದರೆ ಇದು ಗ್ರೂಪ್ನಂತೆಯೇ ಇದರಲ್ಲಿ ಜನರಿರುತ್ತಾರೆ. ಆದರೆ ಅಡ್ಮಿನ್ಗಳಿಗೆ ಬಿಟ್ಟರೆ ಬೇರೆ ಯಾರಿಗೂ ಈ ಕಮ್ಯುನಿಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಮಬುದು ಗೊತ್ತಿರುವುದಿಲ್ಲ. ಜೊತೆಗೆ ಈ ಫೀಚರ್ಸ್ ಅನ್ನು ಕ್ರಿಯೇಟ್ ಮಾಡಿದರೆ ಅಡ್ಮಿನ್ಗಳಿಗೆ ಮಾತ್ರ ಮೆಸೇಜ್ ಮಾಡುವಂತಹ ಅವಕಾಶಗಳಿರುತ್ತದೆ. ಇದು ಹೆಚ್ಚಾಗಿ ವ್ಯವಹಾರ, ಶಾಲೆಗಳಲ್ಲಿ ಹೆಚ್ಚು ಉಪಯೋಗವಾಗುತ್ತದೆ.
ಇನ್-ಚಾಟ್ ಪೋಲ್ ಫೀಚರ್ಸ್:
ಇನ್-ಚಾಟ್ ಪೋಲ್ ಫೀಚರ್ ಎಂದರೆ ಚಾಟ್ನಲ್ಲಿ ಇನ್ನುಮುಂದೆ ಕೆಲವರು ಜನರ ಅಭಿಪ್ರಾಯಗಳನ್ನು ಪಡೆಯಲು ಪೋಲ್ ರೀತಿಯಲ್ಲಿ ರಚಿಸಬಹುದಾಗಿದೆ. ಇದರಲ್ಲಿ 4 ಆಯ್ಕೆಗಳಿರುತ್ತದೆ ಜೊತೆಗೆ ಪ್ರಶ್ನೆಯೂ ಇರುತ್ತದೆ. ಬಳಕೆದಾರರು ತಮ್ಮ ಆಯ್ಕೆಗಳನ್ನು ಟ್ಯಾಪ್ ಮಾಡಬೇಕು ಅದು ಕ್ರಿಯೇಟ್ ಆದ ಪೋಲ್ನಲ್ಲಿ ಆ್ಯಡ್ ಆಗುತ್ತದೆ. ಇದು ಒಂದು ರೀತಿಯಲ್ಲಿ ವೋಟಿಂಗ್ ಸಿಸ್ಟಮ್ನಂತೆ ಆಗಿದೆ.
ವಾಟ್ಸಪ್ ಅವತಾರ್ ಫೀಚರ್ಸ್:
ವಾಟ್ಸಪ್ ಅವತಾರ್ ಫೀಚರ್ಸ್ ಈ ವರ್ಷದ ಅಂತ್ಯದಲ್ಲಿ ಬರಬಹುದು ಎಂಬ ಊಹೆಯಿದೆ. ಇದು ಸ್ನ್ಯಾಪ್ಚಾಟ್, ಇನ್ಸ್ಟಾಗ್ರಾಮ್ನಂತೆ ಅವತಾರ್ ಸ್ಟಿಕ್ಕರ್ಸ್ ಅನ್ನು ಕ್ರಿಯೇಟ್ ಮಾಡುವುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ