ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನಗಳು (Technology) ಭಾರೀ ಪ್ರಗತಿಯನ್ನು ಕಾಣ್ತಾ ಇದೆ. ಇದಕ್ಕೆ ಕಾರಣ ಟೆಕ್ ಕಂಪೆನಿಗಳು (Tech Company) ಅಂತಾನೇ ಹೇಳ್ಬಹುದು. ಯಾವುದೇ ಒಂದು ಉತ್ಪನ್ನವನ್ನು ತಯಾರಿಸುವ ಮೊದಲು ಬಳಕೆದಾರರಿಗೆ ಇದರಿಂದ ಅನುಕೂಲವಾಗ್ಬಹುದಾ ಅಥವಾ ನಷ್ಟವಾಗ್ಬಹುದಾ ಎಂದು ತಂತ್ರಜ್ಞರು ಯೋಚಿಸಿಯೇ ತಯಾರು ಮಾಡುತ್ತಾರೆ. ಇದೀಗ ಪ್ರಪಂಚದಾದ್ಯಂತ ಭಾರೀ ಸದ್ದಿನಲ್ಲಿರುವ ಟೆಕ್ನಾಲಜಿ ಎಂದರೆ ಅದು ಚಾಟ್ಜಿಪಿಟಿ. ಚಾಟ್ಜಿಪಿಟಿ (ChatGPT) ಎಂಬುದು ಮನುಷ್ಯರಂತೆಯೇ ಆಲೋಚನೆ ಮಾಡಬಲ್ಲ ಒಂದು ತಂತ್ರಜ್ಞಾನವಾಗಿದೆ. ಇದು ತನ್ನ ಬಳಕೆದಾರರು ಕೇಳುವಂತಹ ಪ್ರಶ್ನೆಗಳಿಗೆ ಪ್ರಾಂಪ್ಟ್ ರೀತಿಯಲ್ಲಿ ಸರಿಯಾದ ಉತ್ತರವನ್ನು ನೀಡುತ್ತದೆ. ಇದರಿಂದ ಬಳಕೆದಾರರು ಯಾವುದೇ ವಿಚಾರಗಳನ್ನು ಸುಲಭದಲ್ಲಿ ತಿಳಿಯಲು ಸಹಕಾರಿಯಾಗುತ್ತದೆ.
ಓಪನ್ ಎಐ ಸಂಸ್ಥೆ ಅಭಿವೃದ್ಧಿ ಪಡಿಸಿದ ಹೊಸ ತಂತ್ರಜ್ಞಾನವೆಂದರೆ ಅದು ಚಾಟ್ಜಿಪಿಟಿ. ಇತ್ತೀಚೆಗೆ ಈ ತಂತ್ರಜ್ಞಾನ ಭಾರೀ ಸದ್ದಿನಲ್ಲಿದ್ದು, ಮಾನವರಂತೆಯೇ ಯೋಚಿಸಬಲ್ಲಂತಹ ಏಕೈಕ ಟೆಕ್ನಾಲಜಿ ಇದು ಎಂದು ಗುರುತಿಸಲ್ಪಟ್ಟಿದೆ. ಹಾಗಿದ್ರೆ ಈ ಚಾಟ್ಜಿಪಿಟಿಯಿಂದ ಬಳಕೆದಾರರಿಗೆ ಏನೆಲ್ಲಾ ಲಾಭವಿದೆ ಮತ್ತು ನಷ್ಟಗಳಿವೆ ಎಂಬುದರ ಮಾಹಿತಿ ಈ ಲೇಖನದಲ್ಲಿ ಓದಿ.
ಚಾಟ್ಜಿಪಿಟಿ ಹೇಗೆ ಕಾರ್ಯನಿರ್ವಹಿಸುತ್ತದೆ?
ಚಾಟ್ಜಿಪಿಟಿ ಎಂಬುದು ಒಂದು ಎಐ ಮಾದರಿಯ ಚಾಟ್ಬಾಟ್ ಎಂದು ಹೇಳ್ಬಹುದು. ಇದನ್ನು ಎಐ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ಓಪನ್ಎಐ ಸಂಸ್ಥೆ ಅಭಿವೃದ್ಧಿ ಪಡಿಸಲಾಗಿದೆ. ಈ ಚಾಟ್ಜಿಪಿಟಿ ಎಂಬುದು ಮನುಷ್ಯನ ಆಲೋಚನೆಗೆ ತಕ್ಕಂತೆ ಇದೂ ಸಹ ಆಲೋಚನೆ ಮಾಡುತ್ತದೆ ಎಂದು ಕಂಪೆನಿ ಹೇಳಿವೆ. ಇನ್ನು ಬಳಕೆದಾರರು ತಮಗೆ ಮೂಡುವಂತಹ ಪ್ರಶ್ನೆಗಳನ್ನು ಇದರಲ್ಲಿ ಕೇಳಿದ್ರೆ, ಮನುಷ್ಯರಂತೆಯೇ ಯೋಚಿಸಿ ಉತ್ತರವನ್ನು ನೀಡುತ್ತದೆ. ಇನ್ನು ಈ ಮಾದರಿಗಾಗಿ ಡೇಟಾ ಸೆಟ್ಗಳ ಇದಕ್ಕೆ ತರಬೇತಿಯನ್ನು ಸಹ ನೀಡಲಾಗಿದೆ ಎಂದು ವರದಿಯಾಗಿದೆ.
ಚಾಟ್ಜಿಪಿಟಿಯಿಂದ ಏನೆಲ್ಲಾ ಲಾಭವಿದೆ?
ಚಾಟ್ಜಿಪಿಟಿ ಎಐ ಆಧಾರಿತ ತಂತ್ರಜ್ಞಾನವಾಗಿದ್ದು, ಬಳಕೆದಾರರು ಕೇಳುವಂತಹ ಪ್ರಶ್ನೆಗಳಿಗೆ ಮಾನವರಂತೆಯೇ ಆಲೋಚಿಸಿ ಉತ್ತರಗಳನ್ನು ನೀಡುತ್ತದೆ. ಇನ್ನು ಇದು ನೀಡುವಂತಹ ಉತ್ತರಗಳು ಹೆಚ್ಚಾಗಿ ನಿಖರವಾಗಿಯೇ ಇರುತ್ತದೆ ಎಂದು ಹೇಳಲಾಗ್ತಿದೆ. ಇನ್ನು ಈ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಬಳಕೆದಾರರ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ಬಹಳಷ್ಟು ಸಹಕಾರಿಯಾಗಲಿದೆ. ಹಾಗೆಯೇ ಇದು ಗೂಗಲ್ಗೆ ಪ್ರತಿಸ್ಪರ್ಧಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
ಚಾಟ್ಜಿಪಿಟಿ ಅಭಿವೃದ್ಧಿಯಿಂದ ನಷ್ಟಗಳೇನು?
ಚಾಟ್ಜಿಪಿಟಿಇಯ ಅಭಿವೃದ್ಧಿಯಿಮದ ಇಡೀ ವಿಶ್ವವೇ ಒಮ್ಮೆ ಈ ತಂತ್ರಜ್ಞಾನದ ಕಡೆ ತಿರುಗಿ ನೋಡುವಂತಾಗಿದೆ. ಏಕೆಂದರೆ ಈ ತಂತ್ರಜ್ಞಾನದ ಜೊತೆಗೆ ಮತ್ತೊಂದು ಸುದ್ದಿ ವೈರಲ್ ಆಗುತ್ತಿದ್ದು, ಚಾಟ್ಜಿಪಿಟಿಯಿಂದ ಮನುಷ್ಯರ ಉದ್ಯೋಗದ ಮೇಲೂ ಪರಿಣಾಮ ಬೀರಲಿದೆ ಎಂದು ವರದಿಯಾಗುತ್ತಿದೆ. ಏಕೆಂದರೆ ಚಾಟ್ಜಿಪಿಟಿ ಎಂಬುದು ಒಬ್ಬ ಮನುಷ್ಯನಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸಬಲ್ಲ, ಯೋಚಿಸಬಲ್ಲ ಟೆಕ್ನಾಲಜಿಯನ್ನು ಹೊಂದಿದೆ.
ಈ ಮೂಲಕ ಇನ್ಮುಂದೆ ಮನುಷ್ಯರು ಮಾಡುವಂತಹ ಕೆಲಸಗಳನ್ನು ಚಾಟ್ಜಿಪಿಟಿ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಮಾನವರು ಮಾಡುವ ಉದ್ಯೋಗದ ಮೇಲೆ ಪರಿಣಾಮ ಬೀರಬಹುದುಎನ್ನಲಾಗುತ್ತಿದೆ. ಆದರೆ ಸದ್ಯಕ್ಕೆ ಈ ಚಾಟ್ಜಿಪಿಟಿಯಿಂದ ಯಾವುದೇ ಮನುಷ್ಯನ ಉದ್ಯೋಗಕ್ಕೆ ತೊಂದರೆಗಳಾಗುವುದಿಲ್ಲ ಎಂದು ಅಂದಾಜಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಚಾಟ್ಜಿಪಿಟಿ ಅಭಿವೃದ್ಧಿಯಾಗಬಹುದು, ಆ ನಂತರ ಯಾವ ರೀತಿ ಪರಿಣಾಮ ಬೀರಬಹುದು ಎಂದು ಹೇಳಲು ಸಾಧ್ಯವಿಲ್ಲ.
ಇದನ್ನೂ ಓದಿ: ಮ್ಯಾಕ್ಓಎಸ್ ಆ್ಯಪ್ ಲಾಂಚ್ ಮಾಡಿದ ವಾಟ್ಸಾಪ್! ಏನಿದರ ಲಾಭ?
ಬೆಂಗಳೂರಿನ ಕೆಲ ಕಾಲೇಜುಗಳಲ್ಲಿ ಚಾಟ್ಜಿಪಿಟಿ ಬ್ಯಾನ್
ಇನ್ನು ಬೆಂಗಳೂರಿನ ಕೆಲ ಖಾಸಗಿ ಕಾಲೇಜುಗಳಲ್ಲಿ ಎಐ ಟೆಕ್ನಾಲಜಿಯನ್ನು ಹೊಂದಿರುವ ಟೂಲ್ಸ್ಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಏಕೆಂದರೆ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶಿಕ್ಷಕರು ನೀಡಿದ ಅಸೈನ್ಮೆಂಟ್ಗಳನ್ನು ಈ ಚಾಟ್ಜಿಪಿಟಿ ಯ ಸಹಾಯದಿಂದ ಮಾಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದ ಮೇಲೆ ಪ್ರಭಾವ ಬೀರಬಹುದೆಂಬ ಕಾರಣಕ್ಕೆ ಇದನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ