ಈಗಿನ ಕಾಲದಲ್ಲಿ ಲ್ಯಾಪ್ಟಾಪ್ (Laptop) ಬಳಸದೇ ಇರುವವರು ಯಾರಿದ್ದಾರೆ ಹೇಳಿ. ಅದ್ರಲ್ಲೂ ಕೊರೊನಾ (Corona) ಸಾಂಕ್ರಾಮಿಕ ಬಂದಾಗಿನಿಂದ ಹೆಚ್ಚಾಗಿ ವರ್ಕ್ ಫ್ರಮ್ ಹೋಮ್ ಎಂಬ ಪದ್ಧತಿ ರೂಢಿಯಾಗಿಬಿಟ್ಟಿದೆ. ಈ ಸಂದರ್ಭದಲ್ಲಿ ಲ್ಯಾಪ್ಟಾಪ್ ಎಂಬುದು ಬಹುಮುಖ್ಯ ಸಾಧನವಾಗಿಬಿಟ್ಟಿದೆ. ಇತ್ತೀಚೆಗಡ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಲ್ಯಾಪ್ಟಾಪ್ಗಳನ್ನು ಹೊಂದಿರುತ್ತಾರೆ. ಯಾವುದೇ ಪ್ರಾಜೆಕ್ಟ್ಗಳನ್ನು, ಆಫೀಸ್ ಕೆಲಸಗಳನ್ನು ಮಾಡಲು ಇದು ತುಂಬಾನೇ ಸಹಕಾರಿಯಾಗುತ್ತದೆ. ಅದೇ ರೀತಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಟೆಕ್ ಕಂಪೆನಿಗಳು (tech Company) ಕೂಡ ಹೊಸ ಫೀಚರ್ಸ್ ಹೊಂದಿದ ಲ್ಯಾಪ್ಟಾಪ್ಗಳನ್ನು ಬಿಡುಗಡೆ ಮಾಡುತ್ತದೆ. ಲ್ಯಾಪ್ಟಾಪ್ ವಲಯದಲ್ಲಿ ಜನಪ್ರಿಯತೆಯನ್ನು ಹೊಂದಿರುವ ಕಂಪೆನಿಯೆಂದರೆ ಅಸುಸ್ (Asus). ಇದೀಗ ಈ ಕಂಪೆನಿ ಮಾರುಕಟ್ಟೆಗೆ ಹೊಸ ಲ್ಯಾಪ್ಟಾಪ್ ಅನ್ನು ಪರಿಚಯಿಸಲು ಸಜ್ಜಾಗಿದೆ.
ಅಸುಸ್ ಕಂಪೆನಿ ಮಾರುಕಟ್ಟೆಗೆ ಹೊಸ ಲ್ಯಾಪ್ಟಾಪ್ ಅನ್ನು ಪರಿಚಯಿಸುತ್ತಿದ್ದು, ಇದನ್ನು ಅಸುಸ್ ಪ್ರೋಆರ್ಟ್ ಸ್ಟುಡಿಯೋಬುಕ್ 16 3ಡಿ ಎಂದು ಗುರುತಿಸಲಾಗಿದೆ. ಈ ಲ್ಯಾಪ್ಟಾಪ್ 3ಡಿ ಫೀಚರ್ಸ್ ಅನ್ನು ಹೊಂದಿದ್ದು, ಇದೇ ರೀತಿಯ ಇನ್ನೂ ಹಲವಾರು ಫೀಚರ್ಸ್ಗಳನ್ನು ಇದು ಒಳಗೊಂಡಿದೆ. ಹಾಗಿದ್ರೆ ಅಸುಸ್ ಕಂಪನಿಯ ಈ ಹೊಸ ಲ್ಯಾಪ್ಟಾಪ್ನ ಫೀಚರ್ಸ್, ಬೆಲೆ ಹೇಗಿದೆ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಫುಲ್ ಓದಿ.
ಅಸುಸ್ ಪ್ರೋಆರ್ಟ್ ಸ್ಟುಡಿಯೋಬುಕ್ 16 3ಡಿ ಫೀಚರ್ಸ್
ಅಸುಸ್ ಪ್ರೊಆರ್ಟ್ ಸ್ಟುಡಿಯೋಬುಕ್ 16 3wi ಲ್ಯಾಪ್ಟಾಪ್ 16 ಇಂಚಿನ 3.2ಕೆ OLED ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಈ ಲ್ಯಾಪ್ಟಾಪ್ನ ವಿಶೇಷ ಫೀಚರ್ಸ್ ಎಂದರೆ ಇದು 3ಡಿ ಡಿಸ್ಪ್ಲೇಯನ್ನು ಹೊಂದಿದೆ. ಆದರೆ ಇದರ ಡಿಸ್ಪ್ಲೇಯನ್ನು ನೋಡಲು ಯಾವುದೇ ಪ್ರತ್ಯೇಕ ಗ್ಲಾಸ್ ಧರಿಸುವ ಅಗತ್ಯವಿಲ್ಲ. ಸಾಮಾನ್ಯ ಲ್ಯಾಪ್ಟಾಪ್ನಂತೆಯೆ ಇದನ್ನೂ ಬಳಸಿ 3ಡಿ ಅನುಭವವನ್ನು ಪಡೆಯಬಹುದಾಗಿದೆ. ಆದರೆ ಈ ಫೀಚರ್ಗೆ ಒಂದು ಬಟನ್ ಆಯ್ಕೆ ನೀಡಲಾಗಿದೆ. ಇನ್ನು ಈ ಲ್ಯಾಪ್ಟಾಪ್ನ ಡಿಸ್ಪ್ಲೇ 120 ಹರ್ಟ್ಜ್ ರಿಫ್ರೆಶ್ ರೇಟ್ ಆಯ್ಕೆ ಹೊಂದಿದ್ದು, ಗೇಮರ್ಗಳಿಗೆ ಈ ಲ್ಯಾಪ್ಟಾಪ್ ತಂಬಾ ಉತ್ತಮವಾದ ಆಯ್ಕೆಯಾಗಿದೆ.
ಇದನ್ನೂ ಓದಿ: ಈ ಮೂರು ಟೆಲಿಕಾಂ ಕಂಪೆನಿಗಳಲ್ಲಿ ಯಾವುದು ಬೆಸ್ಟ್? ಹೊಸ ರೀಚಾರ್ಜ್ ಪ್ಲ್ಯಾನ್ ಹೇಗಿದೆ?
ಪ್ರೊಸೆಸರ್ ಸಾಮರ್ಥ್ಯ
ಅಸುಸ್ ಪ್ರೋಆರ್ಟ್ ಸ್ಟುಡಿಯೋಬುಕ್ 16 3ಡಿ ಲ್ಯಾಪ್ಟಾಪ್ ಇಂಟೆಲ್ನ ಹೊಸ 13 ಜನ್ ಹೆಚ್ಡಕ್ಸ್ ಸಿಪಿಯು ಪ್ರೊಸೆಸರ್ನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಕಂಪೆನಿ ಹೇಳಿದೆ. ಎನ್ವಿಡಿಯಾದ RTX 4000 ಗ್ರಾಫಿಕ್ಸ್ ನಲ್ಲಿ ಈ ಲ್ಯಾಪ್ಟಾಪ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ 64 ಜಿಬಿ ರ್ಯಾಮ್ ಹಾಗೂ 8 ಟಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.
3ಡಿ ಫೀಚರ್ಸ್
ಅಸುಸ್ ಈ ಹೊಸ ತಂತ್ರಜ್ಞಾನಕ್ಕೆ ಪ್ರಾದೇಶಿಕ ದೃಷ್ಟಿ ಎಂದು ಹೆಸರಿಡಲಾಗಿದೆ. ಈ ಟೆಕ್ನಾಲಜಿ ಮೂಲತಃ ಕಣ್ಣಿನ ಟ್ರ್ಯಾಕಿಂಗ್ ಮತ್ತು ಲೆಂಟಿಕ್ಯುಲರ್ ಲೆನ್ಸ್ಗಳ ಮೇಲೆ ಕಾರ್ಯನಿರ್ವಹಿಸಲಿದೆ. ಹೀಗಾಗಿ ನಿಮ್ಮ ಕಣ್ಣಿಗೆ ಒಂದೇ ಸಮಯದಲ್ಲಿ ಎರಡು ಪ್ರತ್ಯೇಕ ಚಿತ್ರಗಳನ್ನು ಡಿಸ್ಪ್ಲೇ ಮಾಡುವ ಈ ಲ್ಯಾಪ್ಟಾಪ್ನಲ್ಲಿ ಸಂಪೂರ್ಣ 3ಡಿ ವೀಕ್ಷಣೆಗೆ ಯಾವುದೇ ರೀತಿಯ ಕನ್ನಡಕದ ಅಗತ್ಯವಿಲ್ಲ, ಈ ಮೂಲಕ ನೀವು 3ಡಿ ಚಿತ್ರಗಳನ್ನು ಅಥವಾ 3ಡಿ ಚಲನಚಿತ್ರಗಳನ್ನು ವೀಕ್ಷಿಸಲು ಯಾವುದೇ ಸಾಧನದ ಅಗತ್ಯವಿಲ್ಲದೆ ಸುಲಭದಲ್ಲಿ ವೀಕ್ಷಿಸಬಹುದಾಗಿದೆ ಎಂದು ಕಂಪೆನಿ ಹೇಳಿದೆ.
3ಡಿ ವೀಕ್ಷಣೆ ಒಮ್ಮೆ ಒಬ್ಬರು ಮಾತ್ರ ನೋಡಲು ಅವಕಾಶ
ಅಸುಸ್ನ ಈ ಹೊಸ ಫೀಚರ್ಸ್ ಹೊಂದಿದ ಲ್ಯಾಪ್ಟಾಪ್ ಅನ್ನು ವೀಕ್ಷಣೆ ಮಾಡುವಾಗ ಒಬ್ಬರು ಮಾತ್ರ ಕುಳಿತುಕೊಂಡು ನೋಡಬಹುದಾಗಿದೆ. ಯಾಕೆಂದರೆ ಒಂದು ಪೂರ್ಣ ಡಿಸ್ಪ್ಲೇಯನ್ನು ಏಕಕಾಲದಲ್ಲಿ ಓರ್ವ ವ್ಯಕ್ತಿ ವೀಕ್ಷಣೆ ಮಾಡಿದಾಗ 3ಡಿ ಅನುಭವ ಬಹಳ ಉತ್ತಮವಾಗಿ ಸಿಗುತ್ತದೆ. ಒಂದು ವೇಳೆ ಮೂರು ಅಥವಾ ನಾಲ್ಕು ಜನ ಒಟ್ಟಾಗಿ ವೀಕ್ಷಣೆ ಮಾಡಿದರೆ ನಿಮಗೆ ಆ ಡಿಸ್ಪ್ಲೇನ 3ಡಿ ಅನಿಭವ ದೊರೆಯುವುದಿಲ್ಲ ಎಂದು ಕಂಪೆನಿ ಹೇಳಿದೆ.
ಇನ್ನು ಈ ಲ್ಯಾಪ್ಟಾಪ್ನ ಬೆಲೆ, ಫೀಚರ್ಸ್ ಬಗ್ಗೆ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ ಇದು 3ಡಿ ಫೀಚರ್ಸ್ ಹೊಂದಿರುವ ಕಾರಣದಿಂದ ಇದರ ಬೆಲೆ ಸ್ವಲ್ಪ ಜಾಸ್ತಿಯೇ ಇರಬಹುದು ಎಂದು ಅಂದಾಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ