Ola Electric Car: ಓಲಾ ಎಲೆಕ್ಟ್ರಿಕ್ ಕಾರಿನಲ್ಲಿರುವ ಈ ಫೀಚರ್​ ಖಂಡಿತಾ ಇಷ್ಟವಾಗುತ್ತೆ! ಮೈಲೇಜ್​ ಎಷ್ಟು ಗೊತ್ತಾ?

ಸ್ವಾತಂತ್ರ್ಯ ದಿನದಂದು (Independence Day) ಓಲಾ ಎಲೆಕ್ಟ್ರಿಕ್ (Ola Electric) ಮಾಡಿದ ಘೋಷಣೆಯಂತೆ ಕಂಪನಿಯು ತನ್ನ EV ಕಾರಿನ ಮುಂಬರುವ ಬಿಡುಗಡೆಯನ್ನು ಖಚಿತಪಡಿಸಿದೆ. ಕಾರು (Car) 2024 ರಲ್ಲಿ ಆಗಮಿಸಲಿದ್ದು 500 ಕಿ.ಮೀ ವ್ಯಾಪ್ತಿಯನ್ನು ಹೊಂದಲಿದೆ ಎಂದು ಹೇಳಿದ್ದು ಜೊತೆಗೆ S1 ಸ್ಕೂಟರ್ (S1 scooter) ಮತ್ತು ಹೊಸ ಬ್ಯಾಟರಿಯನ್ನು ಸಹ ಘೋಷಿಸಿತು.

 ಓಲಾ ಎಲೆಕ್ಟ್ರಿಕ್ ಕಾರು

ಓಲಾ ಎಲೆಕ್ಟ್ರಿಕ್ ಕಾರು

  • Share this:
ಸ್ವಾತಂತ್ರ್ಯ ದಿನದಂದು (Independence Day) ಓಲಾ ಎಲೆಕ್ಟ್ರಿಕ್ (Ola Electric) ಮಾಡಿದ ಘೋಷಣೆಯಂತೆ ಕಂಪನಿಯು ತನ್ನ EV ಕಾರಿನ ಮುಂಬರುವ ಬಿಡುಗಡೆಯನ್ನು ಖಚಿತಪಡಿಸಿದೆ. ಕಾರು (Car) 2024 ರಲ್ಲಿ ಆಗಮಿಸಲಿದ್ದು 500 ಕಿ.ಮೀ ವ್ಯಾಪ್ತಿಯನ್ನು ಹೊಂದಲಿದೆ ಎಂದು ಹೇಳಿದ್ದು ಜೊತೆಗೆ S1 ಸ್ಕೂಟರ್ (S1 scooter) ಮತ್ತು ಹೊಸ ಬ್ಯಾಟರಿಯನ್ನು ಸಹ ಘೋಷಿಸಿತು. ಈವೆಂಟ್‌ನಲ್ಲಿ ಓಲಾ ಸಿಇಒ ಮತ್ತು ಕೋಫೌಂಡರ್ ಭಾವೀಶ್ ಅಗರ್ವಾಲ್ (Bhavish Aggarwal) ಭಾರತದಲ್ಲಿ ಇವಿ ಕ್ರಾಂತಿಯನ್ನು ತರುವ ಬಗ್ಗೆ ಮಾತನಾಡಿದ್ದಾರೆ. ಕಂಪನಿಯ ಓಲಾ ಫ್ಯೂಚರ್ ಕಾರ್ಖಾನೆಯು ಭವಿಷ್ಯದಲ್ಲಿ ಒಂದು ಮಿಲಿಯನ್ ಇವಿ ಕಾರುಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.

2024 ರಲ್ಲಿಮಾರುಕಟ್ಟೆಗೆ ಬರಲಿದ್ಯಂತೆ ಓಲಾ ಎಲೆಕ್ಟ್ರಿಕ್ ಕಾರು
ಅಗರ್ವಾಲ್ ಸದ್ಯಕ್ಕೆ ಕಾರ್ ಘೋಷಣೆಯ ಬಗ್ಗೆ ಟೀಸರ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಹೊಸ EV (ಇಲೆಕ್ಟ್ರಿಕ್ ವೆಹಿಕಲ್) ಕಾರು ಬರುವ ಮೊದಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ತೋರುತ್ತಿದೆ. ಇದುವರೆಗೆ ಓಲಾ ಬಿಡುಗಡೆ ಮಾಡಿದ ವಿವರವೆಂದರೆ ಕಾರು ನಾಲ್ಕು ಸೆಕೆಂಡುಗಳಲ್ಲಿ ಕಾರು 0 ಯಿಂದ 100 ವೇಗವನ್ನು ತಲುಪುತ್ತದೆ ಅದಾಗ್ಯೂ ಕಾರು 2024 ರಲ್ಲಿ ಮಾತ್ರ ಆಗಮಿಸಲಿದ್ದು ಇನ್ನೂ ಕೂಡ ಅಭಿವೃದ್ಧಿಯ ಹಂತದಲ್ಲಿದೆ ಎಂಬುದು ಸ್ಪಷ್ಟವಾಗಿದೆ.

ಈವೆಂಟ್‌ನಲ್ಲಿ ಕಂಪನಿಯು ಕಾರಿನ ಬಣ್ಣವನ್ನು ಘೋಷಿಸಿದ್ದು ಖಾದಿ ಬಣ್ಣದಲ್ಲಿ ಕಾರು ಹೊರಬರಲಿದೆ ಎಂಬುದಾಗಿ ತಿಳಿಸಿದೆ, ಇದು ಓಲಾ ಎಲೆಕ್ಟ್ರಿಕ್ ಎಸ್‌1 ಪ್ರೊನ ರೂಪಾಂತವಾಗಿದೆ ಎಂಬುದಾಗಿ ತಿಳಿಸಿದ್ದು ಓಲಾ ಎಸ್‌1 ನ ಬೆಲೆ ಹಾಗೂ ಲಭ್ಯತೆಯನ್ನು ತಿಳಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಓಲಾ ಇಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೊಂದಿದ್ದು ಕಳೆದ ಕೆಲವು ತಿಂಗಳಲ್ಲಿ ಸುರಕ್ಷತೆಯ ಕಾಳಜಿ ಕುರಿತು ಸುದ್ದಿಗಳು ಹರಿದಾಡಿವೆ. ಅಗರ್‌ವಾಲ್ ಹೇಳುವಂತೆ ಓಲಾ ಎಲೆಕ್ಟ್ರಿಕ್ ಕಾರು, ಭವಿಷ್ಯಕ್ಕೆ ಸರಿಹೊಂದುವಂತಹ ವಿನ್ಯಾಸದೊಂದಿಗೆ ಬರಲಿದೆ.

ಕೀಲೆಸ್ ಮತ್ತು ಹ್ಯಾಂಡಲ್‌ಲೆಸ್ ಕಾರು!
"ಇದು ಭಾರತದಲ್ಲಿ ಇದುವರೆಗೆ ನಿರ್ಮಿಸಲಾದ ಅತ್ಯಂತ ಸ್ಪೋರ್ಟಿ ಕಾರು ಎಂದೆನಿಸಲಿದ್ದು, ಸಂಪೂರ್ಣ ಗಾಜಿನ ಮೇಲ್ಛಾವಣಿಯನ್ನು ಹೊಂದಿರಲಿದೆ, ಇದರಲ್ಲಿ ಮೂವ್ ಓಎಸ್ ಮತ್ತು ಸಹಾಯದ ಚಾಲನಾ ಸಾಮರ್ಥ್ಯಗಳನ್ನು ವಿಶ್ವದ ಯಾವುದೇ ಕಾರಿನಂತೆ ಉತ್ತಮವಾಗಿರುತ್ತದೆ. ಇದು ಕೀಲೆಸ್ ಮತ್ತು ಹ್ಯಾಂಡಲ್‌ಲೆಸ್ ಆಗಿರುತ್ತದೆ" ಎಂದು ಓಲಾ ಎಲೆಕ್ಟ್ರಿಕ್ ಸಂಸ್ಥಾಪಕ ಮತ್ತು ಸಿಇಒ ಅಗರ್ವಾಲ್ ಹೇಳಿದ್ದಾರೆ. ಕಂಪನಿಯು ಕಾರಿನ ಕುರಿತು ಇನ್ನಷ್ಟು ವಿವರಗಳನ್ನು ಹಂಚಿಕೊಂಡಿಲ್ಲ.

ಇದನ್ನೂ ಓದಿ: Hyundai ವಾಹನಗಳಲ್ಲಿ ಕಾಣಿಸಿಕೊಂಡ ಸಮಸ್ಯೆ! ದೋಷಪೂರಿತ ಭಾಗಗಳನ್ನು ಸರಿಪಡಿಸಲು ವಾಹನಗಳನ್ನು ಹಿಂಪಡೆದುಕೊಂಡ ಕಂಪನಿ

ಕಾರಿನ ಬ್ಯಾಟರಿ ಮಾಡ್ಯೂಲ್ ಅನ್ನು ಓಲಾ ಎಲೆಕಟ್ರಿಕ್‌ನ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸೆಲ್‌ಗಳಿಂದ ತಯಾರಿಸಲಾಗಿದ್ದು ಯಾವುದೇ ಭಾರತೀಯ ವಾಹನ OEM ಗೆ ಇದು ಮೊದಲನೆಯದ್ದಾಗಿದೆ

"ನಮ್ಮದೇ ಸೆಲ್‌ಗಳನ್ನು ನಾವೇ ತಯಾರಿಸಿಕೊಳ್ಳಬೇಕು” : ಓಲಾ ಎಲೆಕ್ಟ್ರಿಕ್ ಸಿಇಒ
"ನಾವು ಸೆಮಿಕಂಡಕ್ಟರ್, ಸೌರ, ಎಲೆಕ್ಟ್ರಾನಿಕ್ ಮತ್ತು ಇತರ ಉತ್ಪಾದನಾ ಕ್ರಾಂತಿಗಳನ್ನು ಕಳೆದುಕೊಂಡಿದ್ದೇವೆ. ಆದರೆ ಪ್ರಪಂಚದಾದ್ಯಂತದ ಪ್ರತಿಯೊಬ್ಬರೂ ಇನ್ನೂ ವಿದ್ಯುತ್ ಸೆಲ್‌ಗಳು ಮತ್ತು ಬ್ಯಾಟರಿಗಳೊಂದಿಗೆ ಆರಂಭಿಸಬೇಕಾಗಿದೆಯಷ್ಟೇ. ನಾವು ಈಗ ಈ ಉದ್ಯಮದಲ್ಲಿ ಹೂಡಿಕೆ ಮಾಡಿದರೆ, ಮಾರುಕಟ್ಟೆಯನ್ನು ಮುನ್ನಡೆಸಬಹುದು ”ಎಂದು ಅಗರ್ವಾಲ್ ತಿಳಿಸಿದ್ದಾರೆ.

  • ಓಲಾ ಎಲೆಕ್ಟ್ರಿಕ್ ದೊಡ್ಡ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಒದಗಿಸುತ್ತದೆ

  • ಓಲಾ "ಟಾಪ್ 50 ನಗರಗಳಲ್ಲಿ" 100 ಕ್ಕೂ ಹೆಚ್ಚು ಹೈಪರ್‌ಚಾರ್ಜರ್‌ಗಳನ್ನು ಪ್ರಾರಂಭಿಸಲು ಭರವಸೆ ನೀಡಿದೆ


ಓಲಾ ಎಲೆಕ್ಟ್ರಿಕ್ ಕಾರ್ ಬೆಲೆಯ ಬಗ್ಗೆ ಸುಳಿವು ನೀಡಿದ ಅಗರ್ವಾಲ್:
ಈವೆಂಟ್‌ನಲ್ಲಿ, ಅಗರ್ವಾಲ್ ಅವರು ಪಶ್ಚಿಮದಲ್ಲಿ ಕಾರಿನ ಸರಾಸರಿ ಮಾರಾಟ ಬೆಲೆ $70,000 ಮತ್ತು ಭಾರತದಲ್ಲಿ ಹೊಸ ಕಾರಿನ ಸರಾಸರಿ ಬೆಲೆ $25,000 ಎಂದು ತಿಳಿಸಿದ್ದು, ಓಲಾ ಎಲೆಕ್ಟ್ರಿಕ್‌ನ ಸಿಇಒ ಭಾರತೀಯ ವಾಹನಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಹೇಗೆ ಬೆಲೆ ನಿರ್ಧರಿಸಬೇಕು ಎಂಬುದಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ.

ಎಲೆಕ್ಟ್ರಿಕ್ ವಾಹನಗಳು ನೀವು ಯೋಚಿಸುವುದಕ್ಕಿಂತ ಹೆಚ್ಚು ಹಳೆಯದು:
ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಯಾವಾಗ ಕಂಡುಹಿಡಿಯಲಾಯಿತು ಎಂಬುದನ್ನು ನಿಖರವಾಗಿ ಗುರುತಿಸುವುದು ಸ್ವಲ್ಪ ಕಷ್ಟ, ಏಕೆಂದರೆ ಅಂತಹ ವಾಹನವನ್ನು ವಾಸ್ತವಿಕಗೊಳಿಸಲು ಬ್ಯಾಟರಿಯಿಂದ ಎಲೆಕ್ಟ್ರಿಕ್ ಮೋಟರ್‌ವರೆಗೆ ಹಲವಾರು ಆವಿಷ್ಕಾರಗಳನ್ನು ಮಾಡಲಾಯಿತು ಮತ್ತು ಈ ಆವಿಷ್ಕಾರಗಳು ಅನೇಕ ವರ್ಷಗಳಿಂದ ವಿವಿಧ ದೇಶಗಳಲ್ಲಿ ತಂತ್ರಜ್ಞಾನ ಆಧಾರಿತವಾಗಿದ್ದು ಇಂದಿನವರೆಗೆ ಸಂಭವಿಸಿದೆ.

ಇದನ್ನೂ ಓದಿ: Flying car: ರಸ್ತೆ ಮೇಲೆ ಓಡುತ್ತೆ, ಆಕಾಶದಲ್ಲೂ ಹಾರುತ್ತೆ! ಸಖತ್ತಾಗಿದೆ ಗುರು ಈ ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರು

ಇವಿ ವಾಹನಗಳ ಅಳವಡಿಕೆಯಲ್ಲಿ ಏರಿಕೆ:
ನಮ್ಮ ದೇಶದ ರಸ್ತೆಗಳಲ್ಲಿ ಸಂಚರಿಸುವ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯು 2020 ರಿಂದ ಸ್ಥಿರವಾಗಿ ಏರುತ್ತಿದೆ. ಒಟ್ಟು 4.19 ಲಕ್ಷ ಎಲೆಕ್ಟ್ರಿಕ್ ವಾಹನಗಳು 2022 ರಲ್ಲಿ ಮಾರಾಟವಾಗಿವೆ, 2021 ರಲ್ಲಿ 3.11 ಲಕ್ಷ ಮತ್ತು 2022 ರಲ್ಲಿ 1.19 ಲಕ್ಷ ಮಾರಾಟಗಳನ್ನು ಕಂಡಿವೆ.
Published by:Ashwini Prabhu
First published: