ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್ನಲ್ಲಿ ಹಲವು ವಲಯಗಳಿಗೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಇಂದು ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ (Nirmala Sitharaman)ಅವರು ಮೋದಿ ಸರ್ಕಾರದ ಕೊನೆಯ ಬಜೆಟ್ ಮಂಡನೆಯನ್ನು ಇಂದು ಮಾಡಿದರು. ಇವರು ಶಿಕ್ಷಣ ವಲಯ, ಪ್ರವಾಸೋದ್ಯಮ ವಲಯ, ಕೃಷಿ ವಲಯ, ಉದ್ಯೋಗ, ಬ್ಯಾಂಕಿಂಗ್ ವಲಯ ಸೇರಿದಂತೆ ತಂತ್ರಜ್ಞಾನ ವಲಯಕ್ಕೂ ಮಹತ್ತರ ಕೊಡುಗೆಗಳನ್ನು ಘೋಷಣೆ ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ವಿಶೇಷವಾಗಿ ಈ ವರ್ಷ ಡಿಜಿಟಲ್ ಕ್ಷೇತ್ರಕ್ಕೆ (Digital) ಹೆಚ್ಚು ಒತ್ತು ನೀಡಿರುವುದನ್ನು ಕಾಣಬಹುದಾಗಿದೆ.
2023ರ ಕೇಂದ್ರ ಬಜೆಟ್ ಮಂಡನೆಯು ಹಲವಾರು ಕ್ಷೇತ್ರಗಳಿಗೆ ಕೊಡುಗೆಯನ್ನು ನೀಡಿದ್ದು, ವಿಶೇಷವಾಗಿ ತಂತ್ರಜ್ಞಾನ ವಲಯಕ್ಕೂ ಕೊಡುಗೆಗಳ ಘೋಷಣೆಯನ್ನು ಮಾಡಿದ್ದಾರೆ. ಹಾಗಿದ್ರೆ ಈ ಬಾರಿಯ ಬಜೆಟ್ ಘೋಷಣೆಯಲ್ಲಿ ತಂತ್ರಜ್ಞಾನ ವಲಯಕ್ಕೆ ಏನೆಲ್ಲಾ ಕೊಡುಗೆಗಳನ್ನು ನೀಡಿದ್ದಾರೆಂದು ಈ ಲೇಖನದ ಮೂಲಕ ತಿಳಿಯೋಣ.
ಪ್ಯಾನ್ ಕಾರ್ಡ್ ಅನ್ನು ಪ್ರಮುಖ ಗುರತಿನ ಚೀಟಿಯನ್ನಾಗಿ ಪರಿವರ್ತನೆ
ಮುಂದಿನ ದಿನಗಳಲ್ಲಿ ಸರ್ಕಾರದ ಯಾವುದೇ ಸೇವೆಗಳನ್ನು ಗಮನಿಸಲು ಮತ್ತು ಸೌಲಭ್ಯಗಳನ್ನು ಪಡೆಯಲು ಜನರು ಪ್ಯಾನ್ ಕಾರ್ಡ್ ಅನ್ನು ಪ್ರಮುಖ ಗುರುತಿನ ಚೀಟಿಯಾಗಿ ಬಳಸಬಹುದು ಎಂದು ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮೊಬೈಲ್ಗಳ ಉತ್ಪಾದನೆಯಲ್ಲಿ ಹೆಚ್ಚಳ
ಇನ್ನು ಯೂನಿಯನ್ ಬಜೆಟ್ 2023ರ ಘೋಷಣೆಯ ಪ್ರಕಾರ ಮೊಬೈಲ್ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವುದಾಗಿ ಹೇಳಿದ್ದಾರೆ.
ಗ್ಯಾಜೆಟ್ಸ್ಗಳ ಬೆಲೆ ಇಳಿಕೆ
ಗ್ಯಾಜೆಟ್‌ಗಳ ಆಮದು ಸುಂಕದ ಬೆಲೆಯನ್ನು ಈ ಬಾರಿ ಬಜೆಟ್ನಲ್ಲಿ 21 ರಿಂದ 12 ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಲಾಗಿದೆ. ಇದಲ್ಲದೆ ಮೊಬೈಲ್, ಸ್ಮಾರ್ಟ್ ಟಿವಿ, ಕ್ಯಾಮೆರಾ ಲೆನ್ಸ್, ಲಿಥೀಯಮ್ ಬ್ಯಾಟರಿ, ಟಿವಿ ಪ್ಯಾನೆಲ್, ಮೊಬೈಲ್ ಟೂಲ್ಸ್ಗಳ ಆಮದು ಸುಂಕದ ಬೆಲೆಯನ್ನು ಇಳಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಡಿಜಿಟಲ್ ಪೇಮೆಂಟ್ಗೆ ಪ್ರೋತ್ಸಾಹ
ಡಿಜಿಟಲ್ ಪೇಮೆಂಟ್ ಮಾಡುವವರಿಗೆ ಭಾರೀ ಉತ್ತೇಜನ ನೀಡುವುದಾಗಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಯುಪಿಐ ಪೇಮೆಂಟ್ ದೇಶದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳಲಿದೆ. ಹಾಗೆಯೇ ಬ್ಯಾಂಕ್ ಖಾತೆಗಳ ಬಡ್ಡಿ ದರಗಳಲ್ಲಿ ಇನ್ನಷ್ಟು ಹೆಚ್ಚಳವಾಗುತ್ತದೆ ಎಂದು ಘೋಷಿಸಿದ್ದಾರೆ.
5ಜಿ ಅಭಿವೃದ್ಧಿಗೆ 100 ಲ್ಯಾಬ್
ಇನ್ನು ಇಂಜಿನಿಯರ್ ಕಾಲೇಜುಗಳಲ್ಲಿ 5ಜಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು 100 ಲ್ಯಾಬ್ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.
ಕೆವೈಸಿ ಸರಳೀಕರಣಕ್ಕೆ ಒತ್ತು
ಇತ್ತೀಚಿನ ದಿನಗಳಲ್ಲಿ ಯಾವುದೇ ಸರ್ಕಾರಿ ಮತ್ತು ಪ್ರಮುಖ ಸೇವೆಗಳಿಗೆ ಕೆವೈಸಿ ಅಗತ್ಯವಾಗಿದೆ. ಆದ್ದರಿಂದ ಈ ವರ್ಷದ ಕೇಂದ್ರ ಬಜೆಟ್ ಮಂಡನೆಯಲ್ಲಿ ಕೆವೈಸಿ ಅಪ್ಡೇಟ್ ಮಾಡುವುದನ್ನು ಇನ್ನಷ್ಟು ಸರಳೀಕರಣ ಮಾಡುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಇಂದಿನಿಂದ ಈ ಫೋನ್ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸಲ್ಲ
ಡಿಜಿಟಲ್ ಮೂಲಕ ಪ್ರವಾಸೋದ್ಯಮ ವಲಯಕ್ಕೆ ಪ್ರೋತ್ಸಾಹ
ಇನ್ನು ಈ ವರ್ಷದಲ್ಲಿ ಪ್ರವಾಸೋದ್ಯಮ ವಲಯವನ್ನು ಬಹಳಷ್ಟು ಅಭಿವೃದ್ಧಿ ಮಾಡುವ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ದೇಖೋ ಅಪ್ನಾ ದೇಶ‘ ಎಂಬ ಯೋಜನೆಯನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಇನ್ನು ಪ್ರವಾಸೋದ್ಯಮ ವಲಯವನ್ನು ಡಿಜಿಟಲೈಸ್ ಮಾಡುವುದರ ಬಗ್ಗೆ ಘೋಷಣೆ ಮಾಡಿದ್ದಾರೆ ಜೊತೆಗೆ ಇದಕ್ಕೆ ಸಂಬಂಧಿಸದಂತೆ ಸರ್ಕಾರಿ ಅಪ್ಲಿಕೇಶನ್ ಒಂದನ್ನು ರಚಿಸಲಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರವಾಸಿಗರಿಗೆ ಇನ್ನು ಮುಂದಿನ ದಿನಗಳಲ್ಲಿ ಬಹಳಷ್ಟು ಸಹಕಾರಿಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ