• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Online Marketing: ಸಣ್ಣ ವ್ಯಾಪಾರಿಗಳಿಗೆ ಸೋಶಿಯಲ್ ಮೀಡಿಯಾಗಳಿಂದ ಏನು ಲಾಭ? ಇವುಗಳಿಂದ ಉತ್ಪನ್ನ ಪ್ರಚಾರ ಮಾಡುವುದು ಹೇಗೆ?

Online Marketing: ಸಣ್ಣ ವ್ಯಾಪಾರಿಗಳಿಗೆ ಸೋಶಿಯಲ್ ಮೀಡಿಯಾಗಳಿಂದ ಏನು ಲಾಭ? ಇವುಗಳಿಂದ ಉತ್ಪನ್ನ ಪ್ರಚಾರ ಮಾಡುವುದು ಹೇಗೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಣ್ಣ ವ್ಯಾಪಾರೋದ್ಯಮಿಗಳು ಕೂಡ ಸಾಮಾಜಿಕ ತಾಣಗಳಾದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಅನ್ನು ಬಳಸಿಕೊಂಡು ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದಾಗಿದೆ. ಈ ತಾಣಗಳು ಉಚಿತವಾಗಿ ಉತ್ಪನ್ನಗಳ ಜಾಹೀರಾತಿಗೆ ಅವಕಾಶವನ್ನೊದಗಿಸುತ್ತಿದ್ದು, ಗ್ರಾಹಕರನ್ನು ತಲುಪುವುದು, ಪ್ರಚಾರ, ಮಾರ್ಕೆಟಿಂಗ್‌ಗೆ ಕೂಡ ಸಹಕಾರಿಯಾಗಿದೆ.

ಮುಂದೆ ಓದಿ ...
 • Share this:

  ಸಣ್ಣ ವ್ಯಾಪಾರೋದ್ಯಮಿಗಳು (Small Business) ಕೂಡ ಸಾಮಾಜಿಕ ತಾಣಗಳಾದ (Social Media) ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ (Instagram) ಅನ್ನು ಬಳಸಿಕೊಂಡು ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದಾಗಿದೆ. ಈ ತಾಣಗಳು ಉಚಿತವಾಗಿ ಉತ್ಪನ್ನಗಳ ಜಾಹೀರಾತಿಗೆ ಅವಕಾಶವನ್ನೊದಗಿಸುತ್ತಿದ್ದು, ಗ್ರಾಹಕರನ್ನು ತಲುಪುವುದು, ಪ್ರಚಾರ, ಮಾರ್ಕೆಟಿಂಗ್‌ಗೆ (Marketting) ಕೂಡ ಸಹಕಾರಿಯಾಗಿದೆ. ಆದರೆ ಸಾಮಾಜಿಕ ತಾಣಗಳಲ್ಲಿ ವ್ಯಾಪಾರೋದ್ಯಮಿಗಳು ಉತ್ಪನ್ನಗಳ ಪ್ರಚಾರವನ್ನು ನಡೆಸುವ ಮುನ್ನ ಕೆಲವೊಂದು ಸಲಹೆಗಳ ಬಗ್ಗೆ ಅರಿತುಕೊಳ್ಳಬೇಕಾಗುತ್ತದೆ.


  ಮೆಟಾ ಬ್ಯುಸಿನೆಸ್ ಸೂಟ್


  ಸಾಮಾಜಿಕ ತಾಣಗಳಾದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ತಮ್ಮ ಸೈಟ್‌ಗಳಲ್ಲಿ ದೀರ್ಘಾವಧಿಯ ವ್ಯಾಪಾರ ಪರಿಕರಗಳನ್ನು ಸಂಯೋಜಿಸಿದೆ. ಮೆಟಾ ಬ್ಯುಸಿನೆಸ್ ಸೂಟ್ ಎಂಬ ಪರಿಕರವನ್ನು ಪರಿಚಯಿಸಿದ್ದು ವ್ಯಾಪಾರ ಕಾರ್ಯಾಚರಣೆಗಳನ್ನು ಕೇಂದ್ರೀಕರಿಸಲು ಬಯಸುತ್ತಿರುವ ಖಾತೆದಾರರಿಗೆ ಹೋಸ್ಟ್ ಮಾಡುತ್ತದೆ ಇದರೊಂದಿಗೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಎರಡೂ ತಾಣಗಳಲ್ಲಿಯೂ ಶಾಪಿಂಗ್ ಅನುಭವವನ್ನು ಒದಗಿಸುತ್ತದೆ.


  ಆನ್‌ಲೈನ್ ಸಂಪರ್ಕಗಳ ನಿರ್ಮಾಣ


  ಮೆಟಾ ಸಂಸ್ಥೆಯು ಮಹಿಳಾ ನೇತೃತ್ವದ ವ್ಯಾಪಾರ ವಹಿವಾಟು, ಪ್ರೋತ್ಸಾಹ ಧನಗಳು ಜೊತೆಗೆ ಕೌಶಲ್ಯ ನಿರ್ಮಾಣ ಅವಕಾಶಗಳನ್ನೊದಗಿಸುತ್ತಿದೆ ನಾಯಕತ್ವದ ಮಾರ್ಗಗಳ ಮೂಲಕ ಬೆಂಬಲಿಸುವ ಪ್ರಯತ್ನವನ್ನು ಮಾಡಿದೆ ಇದರೊಂದಿಗೆ ಸಣ್ಣ ವ್ಯಾಪಾರ ಮಾಲೀಕರ ಆನ್‌ಲೈನ್ ಸಂಪರ್ಕವನ್ನು ನಿರ್ಮಿಸುತ್ತದೆ. ನಿಮ್ಮ ಎಂಟರ್‌ಪ್ರೈಸ್‌ನ ಗಾತ್ರ ಅಥವಾ ವ್ಯಾಪ್ತಿಯು ಏನೇ ಇರಲಿ, ಬಹುಶಃ ನಿಮಗೆ ಸಹಾಯ ಮಾಡುವ ಮೆಟಾ ಸಂಪನ್ಮೂಲ ಇದಾಗಲಿದೆ.


  ಇದನ್ನೂ ಓದಿ: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್​! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ


  ಜಾಹೀರಾತಿಗೂ ಇದೆ ಅನುಕೂಲ


  ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ತಾಣಗಳನ್ನು ಬಳಸಿಕೊಂಡು ನಿಯಮಿತ ಮಾರ್ಕೆಟಿಂಗ್ ಬೆಲೆಗಳನ್ನು ಪಾವತಿಸದೆ ಸಣ್ಣ ವ್ಯಾಪಾರಸ್ಥರು ಪ್ರಪಂಚದಾದ್ಯಂತ ಜಾಹೀರಾತು ನೀಡಬಹುದು ಎಂದು ಲಾ ಮೊನಿಕ್ ಕಾಸ್ಮೆಟಿಕ್ಸ್ ಹೆಸರಿನ ನೈಸರ್ಗಿಕ ತ್ವಚೆ ಮತ್ತು ಸೌಂದರ್ಯ ಬ್ರ್ಯಾಂಡ್‌ನ ಸ್ಥಾಪಕರಾದ ಮೊನಿಕ್ ಗ್ಲೋವರ್ ತಿಳಿಸುತ್ತಾರೆ.


  ಈ ತಾಣಗಳು ದೊಡ್ಡ ಗ್ರಾಹಕರ ಸಂಪರ್ಕವನ್ನು ಒದಗಿಸುತ್ತದೆ ಹಾಗೂ ಬ್ರ್ಯಾಂಡ್ ಜಾಗೃತಿ ರಚಿಸಲು ಅನುಕೂಲಕರವಾಗಿದೆ ಎಂಬುದು ಗ್ಲೋವರ್ ಅಭಿಪ್ರಾಯವಾಗಿದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸುವುದು ವ್ಯಾಪಾರದ ಜನಪ್ರಿಯತೆಗೆ ಸಹಕಾರಿಯಾಗಿದೆ ಎಂದು ಗ್ಲೋವರ್ ತಿಳಿಸುತ್ತಾರೆ. ಗ್ಲೋವರ್ ವ್ಯಾಪಾರೋದ್ಯಮಿಗಳಿಗಾಗಿ ಕೆಲವೊಂದು ಟಿಪ್ಸ್ ನೀಡಿದ್ದು ಅದು ಹೀಗಿದೆ:


  ನಿಮ್ಮ ಬ್ಯುಸಿನೆಸ್‌ಗಾಗಿ ಆನ್‌ಲೈನ್ ಪ್ರಸ್ತುತಿಯನ್ನು ರಚಿಸುವುದು


  ಸಾಮಾಜಿಕ ತಾಣಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೊದಲು ಕೆಲವೊಂದು ಮೂಲಭೂತ ಅಂಶಗಳನ್ನು ನಿಭಾಯಿಸಬೇಕು ಎಂದು ಗ್ಲೋವರ್ ತಿಳಿಸುತ್ತಾರೆ. ಮೆಟಾ ತಂಡದ ಪ್ರಕಾರ, ಪ್ರತಿಯೊಬ್ಬ ವ್ಯಾಪಾರ ಮಾಲೀಕರು ಮಾಡಬೇಕಾದ ಮೊದಲ ಕೆಲಸವೆಂದರೆ ಅವರ ವ್ಯವಹಾರವನ್ನು ತಕ್ಷಣವೇ ಕ್ಲೈಮ್ ಮಾಡುವುದು ಎಂದು ಗ್ರೋವರ್ ಸಲಹೆ ನೀಡುತ್ತಾರೆ. ಫೇಸ್‌ಬುಕ್ ವ್ಯಾಪಾರ ಪುಟವನ್ನು ರಚಿಸುವುದು ಮತ್ತು ಇನ್‌ಸ್ಟಾದಲ್ಲಿ ನಿಮ್ಮ ವ್ಯಾಪಾರದ ಹೆಸರನ್ನು ಕ್ಲೈಮ್ ಮಾಡುವುದು ವ್ಯವಹಾರದಲ್ಲುಂಟಾಗಬಹುದಾದ ಸಂಘರ್ಷವನ್ನು ತಡೆಯುತ್ತದೆ ಎಂದು ಅವರು ಸಲಹೆ ನೀಡುತ್ತಾರೆ.


  ಸಾಂಕೇತಿಕ ಚಿತ್ರ


  ಮಾರ್ಕೆಟಿಂಗ್‌ನಲ್ಲಿ ಎಷ್ಟು ಖರ್ಚು ಮಾಡಲು ಬಯಸುತ್ತೀರಿ ಎಂಬುದನ್ನು ತಿಳಿಸುವ ವೈಯಕ್ತೀಕರಿಸಿದ ವ್ಯಾಪಾರ ಯೋಜನೆಯನ್ನು ರಚಿಸಿ ಎಂದು ಗ್ರೋವರ್ ಸಲಹೆ ನೀಡುತ್ತಾರೆ.


  ಮೆಟಾದ ಉಚಿತ ಸಂಪನ್ಮೂಲಗಳ ಪ್ರಯೋಜನ ಪಡೆಯುವುದು


  ಮೆಟಾ ಫಾರ್ ಬ್ಯುಸಿನೆಸ್


  ಮೆಟಾ ಬಿಸಿನೆಸ್ ಸೂಟ್ ಎಲ್ಲಾ ವ್ಯಾಪಾರ ಮತ್ತು ಜಾಹೀರಾತು ಅಗತ್ಯಗಳಿಗಾಗಿ ಪ್ಲ್ಯಾಟ್‌ಫಾರ್ಮ್‌ಗಳಾದ್ಯಂತ ಮುಖ್ಯ ಪುಟವಾಗಿದ್ದು ಆನ್‌ಲೈನ್ ಜಾಹೀರಾತಿನ ಕುರಿತು ಮಾರ್ಗದರ್ಶಿಗಳು, ಪ್ರಮಾಣೀಕರಣಗಳು ಮತ್ತು ಮಾರ್ಕೆಟಿಂಗ್ ಒಳನೋಟಗಳನ್ನು ನೀಡುತ್ತದೆ.


  ಮೆಟಾ ಬ್ಲೂಪ್ರಿಂಟ್


  ಮೆಟಾ ಬ್ಲೂಪ್ರಿಂಟ್  ಉಚಿತ ಸ್ವಯಂ ಮಾರ್ಗದರ್ಶಿ ಕೋರ್ಸ್‌ಗಳನ್ನು ಬ್ಯುಸಿನೆಸ್ ಮಾಲೀಕರಿಗೆ ಒದಗಿಸುತ್ತದೆ. ಇದು ಅವರ ಮಾರುಕಟ್ಟೆ ಕೌಶಲ್ಯಗಳನ್ನು ನಿರ್ಮಿಸಲು ಸಹಕಾರಿಯಾಗಿದೆ.
  ಮೆಟಾ ಪರ್ಫಾಮೆನ್ಸ್ ಹಬ್


  ಪರ್ಫಾರ್ಮೆನ್ಸ್ ಹಬ್ ಒಂದು ಮೆಟಾ ಬ್ಯುಸಿನೆಸ್ ಸೈಟ್ ಆಗಿದ್ದು ಜಾಹೀರಾತು ಸುಧಾರಣೆ ಅಂತೆಯೇ ಮಾರುಕಟ್ಟೆ ಬಜೆಟ್‌ಗಳನ್ನು ಗರಿಷ್ಟಗೊಳಿಸುವ ಸಲಹೆಗಳನ್ನು ನೀಡುತ್ತದೆ.


  ಮೆಟಾ ಅಡ್ವರ್ಟೈಸಿಂಗ್​


  ಗ್ರೋವರ್ ಅವರು ಈ ಪರಿಕರದ ಕುರಿತು ಸ್ವತಃ ತಮ್ಮದೇ ಅನುಭವಗಳನ್ನು ಹಂಚಿಕೊಂಡಿದ್ದು ಸಾಂಕ್ರಾಮಿಕದ ಸಮಯದಲ್ಲಿ ಅವರ ಸಂಸ್ಥೆಯ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಈ ಪರಿಕರ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

  Published by:Prajwal B
  First published: