ಭಾರತದಲ್ಲಿ ಹೆಚ್ಚುತ್ತಿದೆ ಮೊಮೊ ಚಾಲೆಂಜ್​ ಹಾವಳಿ


Updated:August 23, 2018, 5:02 PM IST
ಭಾರತದಲ್ಲಿ ಹೆಚ್ಚುತ್ತಿದೆ ಮೊಮೊ ಚಾಲೆಂಜ್​ ಹಾವಳಿ

Updated: August 23, 2018, 5:02 PM IST
ನ್ಯೂಸ್​ 18 ಕನ್ನಡ

ಜಲ್ಪೈಗುರಿ: ಬ್ಲೂವೇಲ್​ನಂತಹ ಅತ್ಮಹತ್ಯೆಗೆ ಪ್ರಚೋದಿಸುವ ಆಟಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ, ಈ ಪಟ್ಟಿಗೆ ಮೊಮೊ ಚಾಲೆಂಜ್​ ಎಂಬ ಹೊಸ ಆಟ ಕೂಡಾ ಫೇಮಸ್​ ಆಗಿದೆ.

ರಾಜಸ್ಥಾನದ ಹದಿನಾರು ವರ್ಷದ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣಕ್ಕೆ ಮೊಮೊ ಚಾಲೆಂಜ್​ ಕೂಡಾ ಕಾರಣ ಇರಬಹುದು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಕಾಲೇಜು ವಿದ್ಯಾರ್ಥಿನೆಗೆ ಮೊಮೊ ಚಾಲೆಂಜ್​ ಆಡುವಂತೆ ಕರೆಯೊಂದು ಬಂದಿರುವುದಾಗಿ ವರದಿಯಾಗಿದೆ.

ಬ್ಲೂವೇಲ್​ ಆಟದಂತೆ ವಾಟ್ಸಪ್​ ಮೂಲಕ ಆಡಲ್ಪಡುವ ಮೊಮೊ ಚಾಲೆಂಜ್​ನಲ್ಲಿ ಆತ್ಮಹತ್ಯೆಯನ್ನು ಪ್ರಚೋದಿಸುವಂತಹ ಸಾಕಷ್ಟು ಸಂದೇಶ ಮತ್ತು ಟಾಸ್ಕ್​ಗಳನ್ನು ನೀಡಲಾಗುತ್ತದೆ. ಇದರಂತೆ ಜಲ್ಪೈಗುರಿನ ಕಾಲೇಜು ವಿದ್ಯಾರ್ಥಿಗೆ ಆಗಂತುಕನೊಬ್ಬ ಕರೆ ಮಾಡಿ ವಾಟ್ಸಪ್​ನಲ್ಲಿ ಈ ಆಟ ಆಡುವಂತೆ ಹೇಳಿಕೊಂಡಿದ್ದಾನೆ. ಆಟದ ನಿಯಮಗಳನ್ನು ಕೇಳಿ ಭಯಗೊಂಡ ಯುವತಿ ತನ್ನ ಸೋದರನಿಗೆ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ. ಪೋಷಕರು ಮಗಳಿಗೆ ಬಂದ ಕರೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ತನಿಖೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಅಜ್ಮೀರ್​ ಘಟನೆ?
ಕೆಲ ಮಾಧ್ಯಮಗಳ ವರದಿ ಪ್ರಕಾರ ಅಜ್ಮೀರ್​ನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದು, ಮೊದಲಿಗೆ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ನೇಣು ಬಿಗಿದುಕೊಂಡು ಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಮೊಮೊ ಆಟವನ್ನು ಹೆಚ್ಚು ಇಷ್ಟ ಪಡುತ್ತಿದ್ದು ಶಾಲೆಯ ಬಿಡುವಿನ ವೇಳೆ ಮತ್ತು ವಿರಾಮದಲ್ಲಿ ಮೊಮೊ ಗೇಮ್ ಆಡುತ್ತಿದ್ದಳು ಎಂದು ಆಕೆ ಸೋದರ ಪೊಲೀಸರಿಗೆ ತಿಳಿಸಿದ್ದಾನೆ.

ಪ್ರಕರಣದ ತನಿಖೆ ನಡೆಸಿರು ಪೊಲೀಸರು ಆಕೆಯ ಇಂಟರ್​ನೆಟ್​ ಮಾಹಿತಿಯನ್ನು ಕೂಡಾ ಕಲೆ ಹಾಕಿದ್ದಾರೆ, ಸದ್ಯ ಈ ಪ್ರಕರಣ ಕೂಡಾ ತನಿಖೆಯ ಹಂತದಲ್ಲಿ ಘಟನೆಗೆ ಮೊಮೊ ಚಾಲೆಂಜ್​ ಕೂಡಾ ಕಾರಣವೇ ಎಂಬುದನ್ನು ಪೊಲೀಸರು ಬಹಿರಂಗ ಪಡಿಸಬೇಕಷ್ಟೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ