• Home
 • »
 • News
 • »
 • tech
 • »
 • Google Doodle: ಹೊಸ ವರ್ಷವನ್ನು ಗೂಗಲ್​ ಡೂಡಲ್ ಮೂಲಕ ಸ್ವಾಗತಿಸಿ, ಒಮ್ಮೆ ಕ್ಲಿಕ್​ ಮಾಡಿದ್ರಾಯ್ತು

Google Doodle: ಹೊಸ ವರ್ಷವನ್ನು ಗೂಗಲ್​ ಡೂಡಲ್ ಮೂಲಕ ಸ್ವಾಗತಿಸಿ, ಒಮ್ಮೆ ಕ್ಲಿಕ್​ ಮಾಡಿದ್ರಾಯ್ತು

ಗೂಗಲ್​ ಡೂಡಲ್​ನಲ್ಲಿ ಹೊಸವರ್ಷದ ಸಂಭ್ರಮಾಚರಣೆ

ಗೂಗಲ್​ ಡೂಡಲ್​ನಲ್ಲಿ ಹೊಸವರ್ಷದ ಸಂಭ್ರಮಾಚರಣೆ

ಗೂಗಲ್​ ಪ್ರತೀ ಬಾರಿ ತನ್ನ ಡೂಡಲ್ ಮೂಲಕ ಎಲ್ಲರ ಗಮನಸೆಳೆಯುತ್ತಿರುತ್ತದೆ. ಏನಾದರೂ ವಿಶೇಷ ಆಚರಣೆಗಳಿದ್ದಾಗ ಗೂಗಲ್​ ಕೂಡ ತನ್ನ ಡೂಡಲ್​ನಲ್ಲಿ ಫೋಟೋ, ಆ್ಯನಿಮೇಷನ್ ಹಾಕುವ ಮೂಲಕ ಆಚರಿಸುತ್ತದೆ. ಅದೇ ರೀತಿ ಈ ಬಾರಿ ಜನರಿಗೆ 2022ರ ಜೊತೆ ಹೊಸ ವರ್ಷವನ್ನು ಮೆಲುಕು ಹಾಕುವಂತಹ ಆ್ಯನಿಮೇಷನ್​ ಶೈಲಿಯ ಫೋಟೋವನ್ನು ತೋರಿಸಿದೆ.

ಮುಂದೆ ಓದಿ ...
 • Share this:

  ದೊಡ್ಡ ಟೆಕ್​ ಕಂಪನಿಯಾಗಿರುವ ಗೂಗಲ್ (Google)​ ಪ್ರತೀ ಬಾರಿ ಏನಾದರು ವಿಶೇಷತೆ ಮೂಲಕ ಜನರ ಗಮನ ಸೆಳೆಯುತ್ತದೆ. ಅದ್ರಲ್ಲೂ ಗೂಗಲ್ ಡೂಡಲ್​ (Google Doodle) ಬಗ್ಗೆ ಕೇಳುವುದೇ ಬೇಡ. ಇದು ಗೂಗಲ್​ನ ಒಂದು ರಂಗಿನ ವೇದಿಕೆ ಅಂತಾನೇ ಹೇಳ್ಬಹುದು. ಗೂಗಲ್ ಡೂಡಲ್ ಪ್ರತೀ ಬಾರಿ ಏನಾದರು ವಿಶೇಷತೆ ಇದ್ದಾಗ ಗೂಗಲ್ ಡೂಡಲ್​​ನಲ್ಲಿ ಏನಾದರು ಫೋಟೋ (Photo) ಅಥವಾ ಆ್ಯನಿಮೇಷನ್ (Animation) ಮಾಡುವ ಮೂಲಕ ಆಚರಿಸುತ್ತಾರೆ. ಇದೀಗೆ ಇನ್ನೇನು ಒಂದು ದಿನದಲ್ಲಿ ಹೊಸವರ್ಷಕ್ಕೆ ನಾವೆಲ್ಲರೂ ಕಾಲಿಡುತ್ತೇವೆ. ಈ ಸಂದರ್ಭದಲ್ಲಿ ಎಲ್ಲರೂ ಸಂಭ್ರಮಾಚರಣೆಯಲ್ಲಿರುವಾಗ ಗೂಗಲ್​ ಕೂಡ ಹೊಸವರ್ಷವನ್ನು ಆಚರಿಸುತ್ತಿದೆ. ಗೂಗಲ್​ ವೆಬ್​ಸೈಟ್​ನಲ್ಲಿ ಡೂಡಲ್​ ಅನ್ನು ಕ್ಲಿಕ್​ ಮಾಡಿದಾಗ ನಾವೊಮ್ಮೆ ಈ ವರ್ಷದ ಜೊತೆ ಹೊಸ ವರ್ಷವನ್ನು ಮೆಲುಕು ಹಾಕುವಂತೆ ಮಾಡುತ್ತದೆ.


  ಗೂಗಲ್​ ಪ್ರತೀ ಬಾರಿ ತನ್ನ ಡೂಡಲ್ ಮೂಲಕ ಎಲ್ಲರ ಗಮನಸೆಳೆಯುತ್ತಿರುತ್ತದೆ. ಏನಾದರೂ ವಿಶೇಷ ಆಚರಣೆಗಳಿದ್ದಾಗ ಗೂಗಲ್​ ಕೂಡ ತನ್ನ ಡೂಡಲ್​ನಲ್ಲಿ ಫೋಟೋ, ಆ್ಯನಿಮೇಷನ್ ಹಾಕುವ ಮೂಲಕ ಆಚರಿಸುತ್ತದೆ. ಅದೇ ರೀತಿ ಈ ಬಾರಿ ಜನರಿಗೆ 2022ರ ಜೊತೆ ಹೊಸ ವರ್ಷವನ್ನು ಮೆಲುಕು ಹಾಕುವಂತಹ ಆ್ಯನಿಮೇಷನ್​ ಶೈಲಿಯ ಫೋಟೋವನ್ನು ತೋರಿಸಿದೆ.


  ಏನಿದೆ ಗೂಗಲ್​ ಡೂಡಲ್​ನಲ್ಲಿ?


  ಹಲವಾರು ಕಡೆ ಹೊಸ ವರ್ಷವನ್ನು ಸ್ವಾಗತ ಮಾಡಿಕೊಳ್ಳಲು ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಇದರ ಭಾಗವಾಗಿಯೇ ಹೊಸ ವರ್ಷದ ಮುನ್ನಾದಿನ 2022 ಗೂಗಲ್‌ ಡೂಡಲ್ ಅನ್ನು ಕ್ಲಿಕ್‌ ಮಾಡಿದಾಗ ಸರ್ಚ್‌ ಎಂಜಿನ್‌ ನಿಮ್ಮ ಡಿಸ್‌ಪ್ಲೇಯಾದ್ಯಂತ ವರ್ಚುವಲ್ ಹೂವುಗಳನ್ನು ಸುರಿಯುತ್ತದೆ. ಇದನ್ನು ವೀಕ್ಷಣೆ ಮಾಡುತ್ತಿದ್ದರೆ ನಿಜವಾಗಿಯೂ ಯಾರೋ ನಿಮ್ಮ ಮುಂದೆ ಬಂದು ಸುರಿದಂತೆ ಅನುಭವವಾಗುತ್ತದೆ.


  ಇದನ್ನೂ ಓದಿ: ವಾಟ್ಸಾಪ್​ನಲ್ಲಿ ಮತ್ತೊಂದು ಅಗತ್ಯ ಫೀಚರ್​​ ಬಿಡುಗಡೆ! 3 ರಿಂದ 5ಕ್ಕೆ ಏರಿಕೆ, ಏನದು?


  ಇನ್ನೂ ಏನೆಲ್ಲಾ ಫೀಚರ್ಸ್ ಇದೆ


  ಹೌದು, ಗೂಗಲ್​ ಹೊಸ ವರ್ಷವನ್ನು ಈ ಬಾರಿ ಡೂಡಲ್​ನಲ್ಲಿ ಆಚರಿಸುತ್ತಿದೆ. ಅದೇ ರೀತಿ ಗೂಗಲ್​ಗೆ ಹೋದಾಗ ಅಲ್ಲಿ ಪಕ್ಕದಲ್ಲಿ ನಾವು ಹಳೆಯ ವರ್ಷವನ್ನು ಮೆಲುಕು ಹಾಕುವಂತಹ ಚಿತ್ರವನ್ನು ನೋಡಬಹುದು. ಇದನ್ನು ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತದೆ. ಅದರ ಜೊತೆಗೆ ಕಾನ್ಫೆಟ್ಟಿಗಳು ಕೂಡ ಬೀಳುತ್ತದೆ. ಅದರೆಲ್ಲಿ ನಾವು ಒಂದು ಕೋನ್ ಚಿತ್ರವನ್ನು ಕಾಣಬಹುದು. ಅದನ್ನು ಕ್ಲಿಕ್​ ಮಾಡಿದರೆ ಯಾರೋ ಕಾನ್ಫೆಟ್ಟಿಗಳನ್ನು ಒಡೆದು ಸುರಿಸುವಂತೆ ಸುರಿಯುತ್ತದೆ. ಜೊತೆಗೆ ಮ್ಯೂಸಿಕ್ ಕೂಡ ಕೇಳುತ್ತದೆ.


  ಗೂಗಲ್​ ಡೂಡಲ್​ನಲ್ಲಿ ಹೊಸವರ್ಷದ ಸಂಭ್ರಮಾಚರಣೆ


  2 ವರ್ಷದ ನಂತರ ಅಬ್ಬರದ ಹೊಸ ವರ್ಷದ ಸಂಭ್ರಮ


  ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ 31 ವರ್ಷದ ಕೊನೆಯ ದಿನವಾಗಿದ್ದು, ಪ್ರಪಂಚದಾದ್ಯಂತ ಶತಕೋಟಿ ಜನರು ಮಧ್ಯರಾತ್ರಿಯ ವೇಳೆ ಸಂಭ್ರಮಾಚರಣೆ ಮಾಡುತ್ತಾರೆ. ಇನ್ನು ಕೋವಿಡ್ ನಿರ್ಬಂಧಗಳಿಂದ ಸತತ ಎರಡು ವರ್ಷಗಳ ಕಾಲ ಯಾವುದೇ ಆಚರಣೆಗಳು ನಡೆದಿರಲಿಲ್ಲ. ಆದರೆ 3 ನೇ ವರ್ಷವಾದರೂ 2023ರ ಸಂಭ್ರಮವನ್ನು ಆಚರಿಸಬೇಕೆಂದು ಅಂದುಕೊಂಡವರು ಬಹಳ ಸಿದ್ಧತೆಯಲ್ಲಿದ್ದಾರೆ. ಆದರೆ ಮತ್ತೆ ಸಾಂಕ್ರಾಮಿಕ ರೋಗ ಬರುತ್ತಿದೆ ಎಂಬ ಸುದ್ದಿಯಾಗಿದೆ. ಆದ್ದರಿಂದ ಜಾಗೃತೆಯಿಂದ ಹೊಸವರ್ಷ ಸಂಭ್ರಮಿಸಿದರೆ ಉತ್ತಮ.


  ಪ್ರತೀ ವರ್ಷ ಹೊಸ ವರ್ಷ ಬಂದಾಗ ಬೇರೆ ಬೇರೆ ಕಡೆಗಳಲ್ಲಿ ಪಟಾಕಿ ಸಿಡಿಸುವ ಮೂಲಕ, ಡ್ಯಾನ್ಸ್​ ಮಾಡುವ ಮೂಲಕ ಆಚರಿಸುತ್ತಿರುತ್ತಾರೆ. ಅದೇ ರೀತಿ ಈ ಬಾರಿಯೂ ನ್ಯೂಯಾರ್ಕ್​ನಲ್ಲಿಇಂದು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಹೊಳೆಯುವ ಚೆಂಡುಗಳು ನೆಲಕ್ಕೆ ಬೀಳುತ್ತವೆ. ಇದನ್ನು ನೋಡಲೆಂದೇ ಲಕ್ಷಾಂತರ ಜನರು ಟೈಮ್​ ಸ್ಕ್ವೇರ್​ ಬಳಿ ಆಗಮಿಸಲಿದ್ದಾರೆ. ಜೊತೆಗೆ ಇದರ ಪ್ರದರ್ಶನವು ನ್ಯಾಷನಲ್​ ಟಿವಿಗಳಲ್ಲಿ ಪ್ರಸಾರವಾಗಲಿದೆ.

  Published by:Prajwal B
  First published: