HOME » NEWS » Tech » WEBSITE DESIGNER HAS BOUGHT GOOGLES ARGENTINAS DOMAIN FOR JUST 216 RUPEES KNOW HOW SCT STG

ಗೂಗಲ್‌ನ ಅರ್ಜೆಂಟೀನಾ ಡೊಮೇನ್ ಅನ್ನು ಕೇವಲ 216 ರೂ.ಗಳಿಗೆ ಖರೀದಿಸಿದ ವೆಬ್‌ಸೈಟ್ ಡಿಸೈನರ್!

ಅರ್ಜೆಂಟೀನಾದಲ್ಲಿಗೂಗಲ್ ಡೊಮೇನ್ ಕೆಲವು ಗಂಟೆಗಳ ಕಾಲ ಕ್ರ್ಯಾಶ್‌ ಆಯಿತು. ಸೈಟ್ ಮತ್ತೆ ಕಾಣಿಸಿಕೊಂಡಾಗ, Google ಇನ್ನು ಮುಂದೆ ಅದರ ಮಾಲೀಕರಾಗಿಲ್ಲ ಎಂಬುದು ಬಯಲಾಯ್ತು.

news18-kannada
Updated:April 29, 2021, 12:33 PM IST
ಗೂಗಲ್‌ನ ಅರ್ಜೆಂಟೀನಾ ಡೊಮೇನ್ ಅನ್ನು ಕೇವಲ 216 ರೂ.ಗಳಿಗೆ ಖರೀದಿಸಿದ ವೆಬ್‌ಸೈಟ್ ಡಿಸೈನರ್!
ಗೂಗಲ್ ಸರ್ವರ್
  • Share this:
ನೀವು ಗೂಗಲ್​ನಲ್ಲಿ ಏನನ್ನೋ ಸರ್ಚ್ ಮಾಡಲು ನೋಡುತ್ತೀರ.. ಆಗ ಗೂಗಲ್ ಅಸ್ತಿತ್ವದಲ್ಲೇ ಇಲ್ಲ ಎಂಬುದು ಗೊತ್ತಾಗುತ್ತದೆ! ಆಗೇನು ಮಾಡುತ್ತೀರ? ಹುಡುಕಾಟ ನಡೆಸಲು ಬಳಸಬಹುದಾದ ಎಲ್ಲದರ ಸರ್ಚ್‌ ಎಂಜಿನ್ ಭೂಮಿಯಿಂದಲೇ ಕಣ್ಮರೆಯಾದರೆ ಏನಾಗುತ್ತದೆ? ಅರ್ಜೆಂಟೀನಾದಲ್ಲಿಗೂಗಲ್ ಡೊಮೇನ್ ಕೆಲವು ಗಂಟೆಗಳ ಕಾಲ ಕ್ರ್ಯಾಶ್‌ ಆಯಿತು. ಸೈಟ್ ಮತ್ತೆ ಕಾಣಿಸಿಕೊಂಡಾಗ, Google ಇನ್ನು ಮುಂದೆ ಅದರ ಮಾಲೀಕರಾಗಿಲ್ಲ ಎಂಬುದು ಬಯಲಾಯ್ತು. ಕಳೆದ ವಾರ ಅರ್ಜೆಂಟೀನಾ ದೇಶದಲ್ಲಿ ಎರಡು ಗಂಟೆಗಳ ಕಾಲ ಸೈಟ್ ಕಾರ್ಯನಿರ್ವಹಿಸದಿದ್ದಾಗ ಗೂಗಲ್ ಅರ್ಜೆಂಟೀನಾ ಡೊಮೇನ್ ಹೆಸರನ್ನು ಕೇವಲ 216 ರೂ.ಗಳಿಗೆ ವೆಬ್ ಡಿಸೈನರ್ ಖರೀದಿಸಿದ್ದಾರೆ!

ಹೌದು, 30 ವರ್ಷದ ವೆಬ್ ಡಿಸೈನರ್ ನಿಕೋಲಸ್ ಕುರೋನಾ ಈ ಮಾರಾಟವನ್ನು ಮಾಡಿದ್ದಾರೆ. ಕುರೋನಾ ಅವರು ಡೊಮೇನ್‌ನ ಸ್ಕ್ರೀನ್‌ಶಾಟ್ ಅನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ತಾವು, ಸಾಮಾನ್ಯ, ಕಾನೂನು ಪ್ರಕ್ರಿಯೆಯ ಮೂಲಕ ಖರೀದಿಸಿದ್ದಾಗಿ ವಿವರಿಸಿದರು.

''ಗೂಗಲ್‌ ನನಗೆ ಅದನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ'' ಎಂದು ಅವರು ಬಿಬಿಸಿಗೆ ತಿಳಿಸಿದರು. ಅದು ಹೇಗೆ ಸಂಭವಿಸಿತು ಎಂದು ಅವರು ವಿವರಿಸಿದ್ದು ಹೀಗೆ.. ''ತಾನು ಈ ಮೇಜಿನ ಬಳಿ ಕೆಲಸ ಮಾಡುತ್ತಿದ್ದೆ. ಕ್ಲೈಂಟ್‌ಗಾಗಿ ವೆಬ್‌ಸೈಟ್ ವಿನ್ಯಾಸಗೊಳಿಸುತ್ತಿದ್ದೆ. ಆ ವೇಳೆ ಗೂಗಲ್‌ ಡೌನ್‌ ಆಗಿದೆ ಎಂದು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ನೋಡಿದೆ. ನಂತರ ನಾನು ನನ್ನ ಬ್ರೌಸರ್‌ನಲ್ಲಿ www.google.com.ar ಅನ್ನು ಎಂಟರ್‌ ಮಾಡಿದೆ ಮತ್ತು ಅದು ವರ್ಕ್ ಆಗಲಿಲ್ಲ'' ಎಂದು ಅವರು ಹೇಳಿದರು.

ಈ ಹಿನ್ನೆಲೆ ವಿಚಿತ್ರವಾದ ಏನಾದರೂ ನಡೆಯುತ್ತಿದೆ ಎಂದು ನಾನು ಭಾವಿಸಿದೆ. ನಂತರ ನಾನು .ar ಕಂಟ್ರಿ ಕೋಡ್ ಡೊಮೇನ್‌ಗಳನ್ನು ನಿರ್ವಹಿಸುವ ಜವಾಬ್ದಾರಿಯುತ ಸಂಸ್ಥೆಯಾದ ನೆಟ್‌ವರ್ಕ್ ಮಾಹಿತಿ ಕೇಂದ್ರ ಅರ್ಜೆಂಟೀನಾ (ಎನ್‌ಐಸಿ) ವೆಬ್‌ಸೈಟ್‌ಗೆ ಹೋಗಲು ನಿರ್ಧರಿಸಿದೆ. ಅಲ್ಲಿ ಗೂಗಲ್‌ಗಾಗಿ ಹುಡುಕಾಡಿದೆ - ಮತ್ತು ಅರ್ಜೆಂಟೀನಾದ ಗೂಗಲ್ ಡೊಮೇನ್ ಖರೀದಿಗೆ ಲಭ್ಯವಿದೆ ಎನ್ನುವುದು ಅಪ್‌ ಪಾಪ್‌ ಮಾಡಿ ಮಾರಾಟಕ್ಕೆ ಲಭ್ಯವಾಗಿದೆ ಎನ್ನುವ ರೀತಿಯಲ್ಲಿ ಮಾಡಿದೆ. ಆದರೆ, ಅದು ವರ್ಕ್ ಆಗುವುದಿಲ್ಲ ಎಂದು ಯೋಚಿಸಿದರೂ, ತಾನು “ಹಂತಗಳನ್ನು ಅನುಸರಿಸಿದೆ ಮತ್ತು ನಂತರ ನಾನು ಖರೀದಿ ಇನ್‌ವಾಯ್ಸ್‌ನೊಂದಿಗೆ ಇಮೇಲ್ ಪಡೆದುಕೊಂಡೆ'' . ನಾನು £ 2.08 / $ 2.90 ಅಥವಾ ಭಾರತೀಯ ರೂಪಾಯಿ ಮೌಲ್ಯದಲ್ಲಿ 216 ರೂ.ಗೆ ಡೊಮೇನ್ ಅನ್ನು ಖರೀದಿಸಿದೆ '' ಎಂದು ವೆಬ್ ಡಿಸೈನರ್ ನಿಕೋಲಸ್ ಕುರೋನಾ ವಿವರಿಸಿದ್ದಾರೆ.



ನಂತರ ಅವರು url ಅನ್ನು ಟೈಪ್ ಮಾಡಿದರು - ಬಳಿಕ ಅವರ ವೈಯಕ್ತಿಕ ಮಾಹಿತಿಯನ್ನು ಕಂಡುಕೊಂಡರು, ನಂತರ ಈ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

"ಅಲ್ಪಾವಧಿಗೆ, ಡೊಮೇನ್ ಅನ್ನು ಬೇರೊಬ್ಬರು ಸ್ವಾಧೀನಪಡಿಸಿಕೊಂಡಿದ್ದಾರೆ" ಎಂದು ಗೂಗಲ್ ಅರ್ಜೆಂಟೀನಾ ಬಿಬಿಸಿಗೆ ಹೇಳಿದೆ. ಅಲ್ಲದೆ, ಇದು ಡೊಮೇನ್‌ನ ನಿಯಂತ್ರಣವನ್ನು ಶೀಘ್ರವಾಗಿ ಮರಳಿ ಪಡೆದುಕೊಂಡಿದೆ ಎಂದು ಅವರು ಹೇಳಿದರು. ಡೊಮೇನ್‌ಗಾಗಿ ಅವರ ಪರವಾನಗಿ ಅವಧಿ ಮುಗಿದಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಆದ್ದರಿಂದ ಅದು ಅದನ್ನು ಏಕೆ ಮಾರಾಟಕ್ಕೆ ಇಡಲಾಗಿದೆ ಎಂದು ಖಚಿತವಾಗಿಲ್ಲ. ಕುರೊನಾ ಅವರು, ಡೊಮೇನ್ ಹೆಸರನ್ನು ಶೀಘ್ರದಲ್ಲೇ ಎನ್ಐಸಿಯಿಂದ ತೆಗೆದುಕೊಂಡೆ. ಆದರೆ ಅವರ 270 ಪೆಸೊಗಳನ್ನು ಎನ್ಐಸಿ ಅಥವಾ ಗೂಗಲ್ ಹಿಂದಿರುಗಿಸಿಲ್ಲ ಎಂದು ವೆಬ್ ಡಿಸೈನರ್ ನಿಕೋಲಸ್ ಕುರೋನಾ ಸ್ಪಷ್ಟಪಡಿಸಿದ್ದಾರೆ.
First published: April 29, 2021, 12:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories