Video: ಕೈಯಲ್ಲಿದ್ದಾಗಲೇ ಶಿಯೋಮಿ ಸ್ಮಾರ್ಟ್​ಫೋನ್​ ಸ್ಫೋಟ! ಸಾವಿನ ದವಡೆಯಿಂದ ಪಾರಾದ ಅಂಗಡಿ ಮಾಲೀಕ

ಶಿಯೋಮಿ ಜನಪ್ರಿಯ ಸ್ಮಾರ್ಟ್​ಫೋನ್​ ಕಂಪನಿ. ಬಹುತೇಕರ ಬಳಿ ಈ ಸ್ಮಾರ್ಟ್​ಫೋನ್​ ಇದೆ. ಇದು ಚೀನಾ ಮೂಲದ್ದೇ ಆಗಿದ್ದರೂ, ಭಾರತದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ. ಹಾಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆದರೆ ವೈರಲ್​ ಆದ ವಿಡಿಯೋ ಕೂಡ ಭಾರತದ್ದೇ ಆಗಿದೆ. ಶಿಯೋಮಿ ಸ್ಮಾರ್ಟ್​ಫೋನ್​​ವೊಂದು ರಿಪೇರಿ ಅಂಗಡಿಯಲ್ಲಿ ಸ್ಫೋಟಗೊಂಡಿದೆ.

ಶಿಯೋಮಿ (Xiaomi) ಸ್ಮಾರ್ಟ್​ಫೋನ್ ​ಸ್ಫೋಟ

ಶಿಯೋಮಿ (Xiaomi) ಸ್ಮಾರ್ಟ್​ಫೋನ್ ​ಸ್ಫೋಟ

  • Share this:
    ಸ್ಮಾರ್ಟ್​ಫೋನ್​ಗಳು ಸ್ಫೋಟಗೊಳ್ಳುವುದು ತೀರಾ ಅಪರೂಪ. ಒಂದು ವೇಳೆ ಸ್ಫೋಟಗೊಂಡರೆ ಅದು ಕಂಪನಿಗೆ ಕಪ್ಪು ಚುಕ್ಕೆಯಾಗುತ್ತದೆ. ಮಾತ್ರವಲ್ಲದೆ, ಇಂತಹ ಘಟನೆಯಿಂದ  ಜೀವ ಕಳೆದುಕೊಂಡವರೂ ಇದ್ದಾರೆ. ಆದರೆ ಚೀನಾ ಮೂಲದ ಸ್ಮಾರ್ಟ್​ಫೋನ್ (Smart Phone) ಇದ್ದಕ್ಕಿದ್ದಂತೆಯೇ ಬ್ಲಾಸ್ಟ್ (Blast)​ ಆಗಿರುವ ವಿಡಿಯೋವೊಂದು ಇದೀಗ ವೈರಲ್​ ಆಗಿದೆ. ಬಹು ಜನರು ಬಳಸುವ ಶಿಯೋಮಿ (Xiaomi) ಸ್ಮಾರ್ಟ್​ಫೋನ್ ಸ್ಫೋಟಗೊಂಡ ದೃಶ್ಯ ಬೆಳಕಿಗೆ ಬಂದಿದೆ. ಅಚ್ಚರಿಯ ಸಂಗತಿ ಎಂದರೆ, ಇದು ಭಾರತದಲ್ಲಿ (India) ಸಂಭವಿಸಿದ ಘಟನೆಯಾಗಿದೆ.

    ಶಿಯೋಮಿ ಜನಪ್ರಿಯ ಸ್ಮಾರ್ಟ್​ಫೋನ್​ ಕಂಪನಿ. ಬಹುತೇಕರ ಬಳಿ ಈ ಸ್ಮಾರ್ಟ್​ಫೋನ್​ ಇದೆ. ಇದು ಚೀನಾ ಮೂಲದ್ದೇ ಆಗಿದ್ದರೂ, ಭಾರತದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ. ಹಾಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆದರೆ ವೈರಲ್​ ಆದ ವಿಡಿಯೋ ಕೂಡ ಭಾರತದ್ದೇ ಆಗಿದೆ. ಶಿಯೋಮಿ ಸ್ಮಾರ್ಟ್​ಫೋನ್​​ವೊಂದು ರಿಪೇರಿ ಅಂಗಡಿಯಲ್ಲಿ ಸ್ಫೋಟಗೊಂಡಿದೆ. ಮಾತ್ರವಲ್ಲದೆ, ಅಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ವೈರಲ್​ ಆಗಿದೆ. ಅಂದಹಾಗೆಯೇ ಈ ಸ್ಮಾರ್ಟ್‌ಫೋನ್ ಹೇಗೆ ಸ್ಫೋಟಗೊಂಡಿತು. ಪ್ರಾಣ ಹಾನಿ ಆಗಿದೆಯೇ? ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳು ಏಕೆ ಸ್ಫೋಟಗೊಳ್ಳುತ್ತವೆ ಎಂಬ ಕುರಿತಾದ ಮಾಹಿತಿ ಇಲ್ಲಿದೆ.

    ಬಾಂಬ್‌ನಂತೆ ಸ್ಫೋಟಗೊಂಡ ಶಿಯೋಮಿ ಸ್ಮಾರ್ಟ್​ಫೋನ್​

    ಆಗಸ್ಟ್ 17, 2022 ರಂದು ಮಧ್ಯಪ್ರದೇಶದ ಬಟ್‌ಘಾಟ್‌ನಲ್ಲಿರುವ ರಿಪೇರಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಶಿಯೋಮಿ ಸ್ಮಾರ್ಟ್​ಫೋನಿನ ಬ್ಯಾಟರಿ ಉಬ್ಬಿದ್ದ ಕಾರಣ ಅದನ್ನು ಹಿಡಿದುಕೊಂಡು ರಿಪೇರಿ ಮಾಡುವವನ ಬಳಿ ಬಂದಿದ್ದಾನೆ. ಅಂಗಡಿಯವನ ಬಳಿ ಇದನ್ನು ರಿಪೇರಿ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಇದನ್ನು ಸರಿಪಡಿಸಿದ ಬಳಿಕ ನಂತರ ಪರಿಶೀಲಿಸುವ ಸಮಯದಲ್ಲಿ ಸ್ಮಾರ್ಟ್​ಫೋನ್​ ಸ್ಫೋಟಗೊಂಡಿದೆ.

    ಇದನ್ನೂ ಓದಿ: 5G Smart Phone: ನಿಮ್ಮ ಸ್ಮಾರ್ಟ್​ಫೋನ್​ 5G ನೆಟ್​ವರ್ಕ್​ ಅನ್ನು ಬೆಂಬಲಿಸುತ್ತಿದೆಯೇ? ಹೀಗೆ ಪರಿಶೀಲಿಸಿ





    ಸ್ಮಾರ್ಟ್​ಫೋನ್​ ಸ್ಫೋಟಕ್ಕೆ ಕಾರಣ

    ಈ ಸ್ಮಾರ್ಟ್‌ಫೋನ್ ಏಕಾಏಕಿ ಹೇಗೆ ಸ್ಫೋಟಗೊಂಡಿತು ಎಂದು ತಿಳಿದರೆ ಆಶ್ಚರ್ಯವಾಗುತ್ತದೆ. ಫೋನಿನ ಬ್ಯಾಟರಿ ಉಬ್ಬಿದ್ದ ಕಾರಣ ಮತ್ತು ಈ ವೇಳೆ ಫೋನ್​ ಚಾಲ್ತಿಯಲ್ಲಿದ್ದು, ಅದಕ್ಕೆ ಕರೆ ಬಂದಾಗ ಬ್ಯಾಟರಿಯಲ್ಲಿ ಸ್ಫೋಟ ಸಂಭವಿಸಿದೆ. ಬಳಿಕ ಫೋನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂತಹ ಅವಘಡಗಳು ಈ ಹಿಂದೆಯೂ ನಡೆದಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಟರಿಯಿಂದಾಗಿ  ಸ್ಫೋಟಗೊಂಡಿವೆ ಎಂಬ ಪ್ರಕರಣ ಅನೇಕ ಬಾರಿ ದಾಖಲಾಗಿವೆ. ದುರದೃಷ್ಟವಷಾತ್ ಸ್ಮಾರ್ಟ್​ಫೋನ್​ ಸ್ಫೋಟದಿಂದ ಅಂಗಡಿಯವನಿಗೆ ಅಥವಾ ಬೇರೆ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: Video: ಬುಲೆಟ್​ ಬೈಕ್​ ಏರಿ ಮಂಟಪಕ್ಕೆ ಹೊರಟ ವಧು! ಕಾಲ ಬದಲಾಗಿದೆ ಕಣ್ರೀ

    ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುತ್ತಿರುವುದು ಇಂದು ತುಂಬಾ ಸಾಮಾನ್ಯವಾಗಿದೆ. ಯಾವಾಗ ಬೇಕಾದರೂ ಈ ಘಟನೆ ಸಂಭವಿಸಬಹುದು. ಆದರೆ ಸ್ಮಾರ್ಟ್‌ಫೋನ್ ಬಳಸುವವರು ಇಂತಹ ಸಂದರ್ಭದಲ್ಲಿ ಮಾಡುವ ತಪ್ಪೇನು ಎಂದು ಇಲ್ಲಿ ಹೇಳಲಾಗಿದೆ.

    -ಸಾಧನವು ಬಿಸಿಯಾಗುವುದರಿಂದ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಸ್ಫೋಟ ಸಂಭವಿಸುತ್ತದೆ.

    -ಫೋನ್ ಅಗತ್ಯಕ್ಕಿಂತ ಹೆಚ್ಚು ಸಮಯ ಚಾರ್ಜ್ ಮಾಡಿದಾಗ ಅಥವಾ ಚಾರ್ಜ್ ಮಾಡುವಾಗ ನೀವು ಫೋನ್ ಅನ್ನು ಬಳಸಿದಾಗ ಇದು ಸಂಭವಿಸುತ್ತದೆ.

    -ಇಂತಹ ತಪ್ಪುಗಳನ್ನು ಮಾಡಬಾರದು, ಇದು ತುಂಬಾ ಸಾಮಾನ್ಯವಾಗಿದೆ. ಇದರಿಂದ ನಾವು ಸ್ಮಾರ್ಟ್‌ಫೋನ್ ಸ್ಫೋಟದಂತಹ ಅಪಘಾತಗಳನ್ನು ತಪ್ಪಿಸಬಹುದು.
    Published by:Harshith AS
    First published: