'ಐಫೋನ್X' vs 'ಗ್ಯಾಲಕ್ಸಿ S9': 'ಆ್ಯಪಲ್' ಕಂಪನಿಯ ಕಾಲೆಳೆದ 'ಸ್ಯಾಮ್‌ಸಂಗ್'

news18
Updated:July 24, 2018, 9:07 PM IST
'ಐಫೋನ್X' vs 'ಗ್ಯಾಲಕ್ಸಿ S9': 'ಆ್ಯಪಲ್' ಕಂಪನಿಯ ಕಾಲೆಳೆದ 'ಸ್ಯಾಮ್‌ಸಂಗ್'
news18
Updated: July 24, 2018, 9:07 PM IST
-ನ್ಯೂಸ್ 18 ಕನ್ನಡ

ಆ್ಯಪಲ್ ಮತ್ತು ಸ್ಯಾಮ್‌ಸಂಗ್ ಮೊಬೈಲ್​ ಕಂಪನಿಗಳ ನಡುವಿನ ಶೀತಲ ಸಮರ ಜಾಹೀರಾತಿನ ಮೂಲಕ ಮತ್ತೆ ಬಹಿರಂಗವಾಗಿದೆ. ಸ್ಯಾಮ್‌ಸಂಗ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಜಾಹೀರಾತಿನ ಮೂಲಕ ತನ್ನ ಪ್ರತಿಸ್ಫರ್ಧಿ ಆ್ಯಪಲ್ ಮೊಬೈಲ್​​ ಅನ್ನು ಕಾಲೆಳೆದಿದೆ. ಇನ್​ಜೀನಿಯಸ್ ಎಂಬ ಹೆಸರಿನಲ್ಲಿ ಸ್ಯಾಮ್​ಸಂಗ್ 30 ಸೆಕೆಂಡ್​ಗಳ ನಾಲ್ಕು ಹೊಸ ವೀಡಿಯೋ ಜಾಹೀರಾತುಗಳನ್ನು ಬಿಡುಗಡೆ ಮಾಡಿದೆ.

ಈ ಜಾಹೀರಾತಿನಲ್ಲಿ ಐಫೋನ್​ನಲ್ಲಿ ಇರದ ಫೀಚರ್​ಗಳನ್ನು ಸ್ಯಾಮ್​ಸಂಗ್ ಕಂಪನಿ ಪ್ರಸ್ತಾಪಿಸಿದೆ. ಅಲ್ಲದೆ ಈ ಮೂಲಕ ತನ್ನ ಹೊಸ ಮೊಬೈಲ್​ನ ಫೀಚರ್​ಗಳನ್ನು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ. ಈ ಜಾಹೀರಾತು ಆ್ಯಪಲ್ ಐಫೋನ್ X ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ S9 ನಡುವಿನ ನೇರ ಹಣಾಹಣಿಯಂತಿದೆ.

ಆ್ಯಪಲ್​ ಸ್ಟೋರ್​ನ ವಿನ್ಯಾಸದಲ್ಲಿರುವ ಶಾಪ್​ನಲ್ಲಿ ಪ್ರಾರಂಭವಾಗುವ ಈ ಜಾಹೀರಾತಿನಲ್ಲಿ ಆ್ಯಪಲ್ ಟಿ ಶರ್ಟ್​ ಧರಿಸಿರುವ ಸೇಲ್ಸ್​ಮನ್ ಗ್ರಾಹಕರ ಸಹಾಯಕ್ಕೆ ಧಾವಿಸುತ್ತಾನೆ. ಈ ವೇಳೆ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಸೇಲ್ಸ್​ಮನ್ ಉತ್ತರಿಸಿ, ಸ್ಯಾಮ್​ಸಂಗ್ ಮೊಬೈಲ್ ಶ್ರೇಷ್ಠ ಎಂಬ ರೀತಿಯಲ್ಲಿ ನಿರೂಪಿಸಲಾಗಿದೆ.


ಸ್ಪೀಡ್ : ಐಫೋನ್​ನ ಸ್ಪೀಡ್​ನ ಬಗ್ಗೆ ಕೇಳಲಾಗುವ ಪ್ರಶ್ನೆಗೆ ಐಫೋನ್8 ಗಿಂತ ಉತ್ತಮ ಸ್ಪೀಡ್ ಹೊಂದಿರುವುದಾಗಿ ಸೇಲ್ಸ್​ಮನ್ ಹೇಳುತ್ತಾನೆ. ಆದರೆ ಸ್ಯಾಮ್​ಸಂಗ್ ಗ್ಯಾಲಕ್ಸಿ S9ಗಿಂತ ಸ್ಪೀಡ್​ಗಿಂತ ಉತ್ತಮವಾಗಿಲ್ಲ ಎಂದು ಗ್ರಾಹಕಿ ಉತ್ತರಿಸುವುದು ಐಫೋನ್ ವಿರುದ್ಧ ಸ್ಯಾಮ್​ಸಂಗ್ ನೇರವಾಗಿ ಸಮರ ಸಾರಿದಂತಿದೆ. ಅಲ್ಲದೆ ಗ್ಯಾಲಕ್ಸಿ S9 ಭವಿಷ್ಯದ ಸ್ಮಾರ್ಟ್​ಫೋನ್​ ಎಂದು ತಿಳಿಸುತ್ತಾಳೆ.


Loading...

ಫಾಸ್ಟ್​ ಚಾರ್ಚರ್ : ಮತ್ತೊಂದು ವೀಡಿಯೋನಲ್ಲಿ ಗ್ರಾಹಕಿ ಫಾಸ್ಟ್​ ಚಾರ್ಜರ್ ಸೌಲಭ್ಯ ನೀಡಲಾಗಿದೆಯೇ ಎಂದು ಪ್ರಶ್ನಿಸುತ್ತಾಳೆ. ಆದರೆ ಐಫೋನ್​ನಲ್ಲಿ ಫಾಸ್ಟ್​ ಚಾರ್ಜಿಂಗ್ ಸೌಲಭ್ಯವಿಲ್ಲ ಎನ್ನುವ ಸೇಲ್ಸ್​ಮನ್​, ಅದಕ್ಕಾಗಿ ಯುಎಸ್​ಬಿ ಕೇಬಲ್, ಫಾಸ್ಟ್​ ಚಾರ್ಜಿಂಗ್ ಅಡಾಪ್ಟರ್ ಅನ್ನು ಖರೀದಿಸಬೇಕೆಂದು ಸಲಹೆ ನೀಡುತ್ತಾನೆ. ಆದರೆ ಸ್ಯಾಮ್​ಸಂಗ್ ಗ್ಯಾಲಕ್ಸಿ S9 ವೇಗವಾಗಿ ಚಾರ್ಜ್​ ಆಗುವುದನ್ನು ಈ ಮೂಲಕ ತಿಳಿಸಲಾಗಿದೆ. ಅಲ್ಲದೆ ಆ್ಯಪಲ್ ಸೇಲ್​ಮನ್​ನ ಸಲಹೆಯಿಂದ ಗ್ರಾಹಕಿ ಗೊಂದಲಕ್ಕೀಡಾದಂತೆ ಚಿತ್ರಿಸಲಾಗಿದೆ.​


ಡೊಂಗಲ್ : ತನ್ನ ಹೆಡ್​ಸೆಟ್​ ಅನ್ನು ಐಫೋನ್​ Xನಲ್ಲಿ ಬಳಸಬಹುದೇ ಎಂದು ಕೇಳುವ ಜಾಹೀರಾತಿನಲ್ಲಿ, ಸೇಲ್ಸ್​ಮನ್ 'ಡೊಂಗಲ್' ಅನ್ನು​ ಬಳಸಬೇಕಾಗುತ್ತದೆ ಎಂಬ ಉತ್ತರ ನೀಡುತ್ತಾನೆ. ಡೊಂಗಲ್ ಬಳಸಿದರೆ ಅದೇ ಸಮಯ ಚಾರ್ಜ್​ ಹೇಗೆ ಮಾಡಲಿ ಎಂದು ಕೇಳುವ ಗ್ರಾಹಕನಿಗೆ ಆಗ ಬೇರೆ ರೀತಿಯ ಡೊಂಗಲ್ ಉಪಯೋಗಿಸ ಬೇಕಾಗುತ್ತದೆ ಎನ್ನುತ್ತಾನೆ. ಇಲ್ಲಿ ಗ್ರಾಹಕ ಎರಡು ಡೊಂಗಲ್ ಬಳಸಬೇಕಾ ಎಂಬ ಮಾರ್ಮಿಕವಾದ ಪ್ರಶ್ನೆಯನ್ನು  ಆ್ಯಪಲ್ ಸೇಲ್ಸ್​ಮನ್​ನ ಮುಂದಿಡುತ್ತಾನೆ.


ಕ್ಯಾಮೆರಾ: ಫೋನ್​ಗಳಲ್ಲಿ ಐಫೋನ್ ಕ್ಯಾಮೆರಾಗಳು ತುಂಬಾ ಪ್ರಸಿದ್ಧಿ ಪಡೆದಿದೆ. ಇಲ್ಲಿ ಕೂಡ ಸೇಲ್ಸ್​ಮನ್ ಕ್ಯಾಮೆರಾವನ್ನು ಹಾಡಿಹೊಗಳುತ್ತಿದ್ದರೂ ಗ್ರಾಹಕನ ಮರು ಪ್ರಶ್ನೆಗೆ ವಿಚಲಿತನಾಗುವಂತೆ ಚಿತ್ರಿಸಲಾಗಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ S9ನಲ್ಲಿರುವ ಕ್ಯಾಮೆರಾ ಅತ್ಯುತ್ತಮವಲ್ಲವೇ ಎಂಬ ಗ್ರಾಹಕನ ಪ್ರಶ್ನೆಗೆ ಸೇಲ್ಸ್​ಮನ್ ಹೌದೆಂಬ ಉತ್ತರ ನೀಡುವ ಸನ್ನಿವೇಶವನ್ನು ಇಲ್ಲಿ ಚಿತ್ರಿಸಲಾಗಿದೆ.

ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ S9, S9+ ಮೊಬೈಲ್​ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಸದ್ಯದ ಅತ್ಯುತ್ತಮ ಮೊಬೈಲ್ ಎಂದು ಖ್ಯಾತಿ ಪಡೆದಿರುವ ಆ್ಯಪಲ್ ಐಫೋನ್ Xನ ಗ್ರಾಹಕರನ್ನು ಸೆಳೆಯಲು ವಿಭಿನ್ನವಾಗಿ ಈ ಜಾಹೀರಾತನ್ನು ಚಿತ್ರಿಸಲಾಗಿದೆ.

2012ರಲ್ಲಿ ತನ್ನ ಕಂಪನಿಯ ಪೇಟೆಂಟ್​ ಅನ್ನು ಸ್ಯಾಮ್​ಸಂಗ್ ಕಂಪನಿ ನಕಲಿ ಮಾಡಿದೆ ಎಂದು  ಆ್ಯಪಲ್​ ಕಂಪನಿ ಕಾನೂನು ಸಮರ ಸಾರಿತ್ತು. ಅಲ್ಲದೆ ಸ್ಯಾಮ್​ಸಂಗ್ ಕಂಪನಿಯಿಂದ  548 ಮಿಲಿಯನ್ ಡಾಲರ್ ಮೊತ್ತವನ್ನು ನಷ್ಟ ಪರಿಹಾರವಾಗಿ  ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಜಾಹೀರಾತಿನ ಮೂಲಕ 'ಆ್ಯಪಲ್'​ನ್ನು ಉರುಳಿಸುವ ಪ್ರಯತ್ನ ಮಾಡಿರುವ 'ಸ್ಯಾಮ್​ಸಂಗ್' ವಿರುದ್ಧ ಆ್ಯಪಲ್ ಕಂಪನಿ ಯಾವ ರೀತಿಯಾಗಿ ಸಮರ ಸಾರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...