ದೇಶದಲ್ಲಿರುವಂತಹ ಅನೇಕ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆಯೂ (Unemployment Problem) ಒಂದು. ಆದರೆ ಈ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಜನರು ತಮಗೆ ತಾವೇ ಉದ್ಯೋಗವನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಕೆಲವೊಂದು ಬಾರಿ ಏನಾಗುತ್ತದೆ ಎಂದರೆ ಈ ಕೆಲ ವಂಚಕರು ಉದ್ಯೋಗದ ದೃಷ್ಟಿಯಿಂದ ಅಮಾಯಕರ ಹಣವನ್ನು ದೋಚುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಸೋಶಿಯಲ್ ಮೀಡಿಯಾಗಳು (Social Media) ಎಷ್ಟು ಉಪಯೋಗವಾಗುತ್ತದೆಯೋ ಅಷ್ಟೇ ದುರುಪಯೋಗವೂ ಆಗುತ್ತದೆ ಎಂದು ಕೇಳಿದ್ದೇವೆ. ಈ ಮಾತು ನಿಜ ಏಕೆಂದರೆ ವಾಟ್ಸಾಪ್ (WhatsApp), ಇನ್ಸ್ಟಾಗ್ರಾಮ್, ಫೇಸ್ಬುಕ್ ಮನರಂಜನಾ ಮಾಧ್ಯಮ ಹೌದು, ಆದರೆ ಕೆಲವಂಚಕರಿಗೆ ಇದರಿಂದ ವಂಚನೆ ಮಾಡಲು ಸಹಾಯವಾಗುವಂತಹ ವೇದಿಕೆಯಾಗಿದೆ. ಇದೀಗ ಇನ್ಸ್ಟಾಗ್ರಾಮ್ನಲ್ಲಿ ಮಹಿಳೆಯೊಬ್ಬರು ಮೋಸ ಹೋಗಿದ್ದಾರೆ.
ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಎಂಬುದು ಉದ್ಯೋಗ ಹುಡುಕುತ್ತಿರುವವರಿಗೆ ಇರುವಂತಹ ದೊಡ್ಡ ವೇದಿಕೆ ಎಂದರೆ ತಪ್ಪಾಗಲಾರದು. ಆದರೆ ಇಲ್ಲೊಂದು ಮಹಾರಾಷ್ಟ್ರದ ಮಹಿಳೆಯೊಬ್ಬರು ಇನ್ಸ್ಟಾಗ್ರಾಮ್ನಿಂದ ಉದ್ಯೋಗದಿಂದ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಈ ಘಟನೆಗೆ ಕಾರಣವಾದರೂ ಏನು ಎಂಬುದನ್ನು ತಿಳಿಬೇಕಾದರೆ ಈ ಲೇಖನವನ್ನು ಓದಿ.
ಘಟನೆಯಲ್ಲಿ ಏನಿದೆ?
ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಥಾಣೆಯ 26 ವರ್ಷದ ಮಹಿಳೆಯೊಬ್ಬರು ಉದ್ಯೋಗದ ಹುಡುಕಾಟದಲ್ಲಿದ್ದರು. ಈ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಉದ್ಯೋಗ ಸಂಬಂಧಿತ ಜಾಹೀರಾತು ಒಂದನ್ನು ವೀಕ್ಷಿಸಿದ್ದಾರೆ. ಜೊತೆಗೆ ಆ ಜಾಹೀರಾತಿನಲ್ಲಿ ಒಂದು ಲಿಂಕ್ ಅನ್ನು ನೀಡಿದ್ದರು. ಇದು ಸೈಬರ್ ವಂಚಕರು ಬಳಕೆದಾರರ ಡೇಟಾವನ್ನು ಪಡೆಯಲು ನೋಂದಣಿ ಹೆಸರಿನಲ್ಲಿ ನೀಡಿರುವ ಲಿಂಕ್ ಆಗಿದೆ. ಈ ಲಿಂಕ್ ನೋಡಿದ ಮಹಿಳೆ ತಕ್ಷಣ ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಬೇರೊಂದು ಸೈಟ್ಗೆ ಭೇಟಿಯಾಗುವಂತೆ ಮಾಡಿದೆ ಎಂದು ಆರೋಪದಲ್ಲಿ ತಿಳಿಸಿದ್ದಾರೆ.
ಹಣ ಕೇಳುವ ಮೂಲಕ ವಂಚನೆ
ಲಿಂಕ್ ಓಪನ್ ಮಾಡಿದಾಗ ಅಲ್ಲಿ ಕೆಲಸದ ವಿವರಗಳನ್ನು, ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ ಶುಲ್ಕ ಪಾವತಿ ಮಾಡಬೇಕು ಎಂದು ಕೇಳಲಾಗಿತ್ತು. ಅದೇ ರೀತಿ ಉದ್ಯೋಗದ ಹಂಬಲದಲ್ಲಿದ್ದ ಮಹಿಳೆ ಅದರಲ್ಲಿ ನೀಡಿದ ವಿವರಗಳನ್ನೆಲ್ಲಾ ಭರ್ತಿ ಮಾಡಿ, ನಂತರ 6 ದಿನಗಳಲ್ಲಿ ಒಟ್ಟು 5,38.173 ರೂಪಾಯಿಗಳನ್ನು ಪಾವತಿ ಮಾಡಿದ್ದಾರೆ.
ಹಣ ಪಾವತಿಯಾದ ನಂತರ ನಂಬರ್ ಬ್ಲಾಕ್
ಮಹಾರಾಷ್ಟ್ರದ ಆ ಮಹಿಳೆ ವೆಬ್ಸೈಟ್ನಲ್ಲಿ ನೀಡಲಾದ ವಿವರಗಳನ್ನು ಭರ್ತಿ ಮಾಡಿ, ಹಣ ಪಾವತಿಸಿದ ಮೇಲೆ ಅದರಲ್ಲಿ ನೀಡಿದ್ದ ನಂಬರ್ಗೆ ಉದ್ಯೋಗದ ಮಾಹಿತಿಯನ್ನು ತಿಳಿಯಲು ಕಾಲ್ ಮಾಡುತ್ತಾರೆ. ಆದರೆ ಕಾಲ್ ಮಾಡಿದಾಗ ಆ ನಂಬರ್ ಬ್ಲಾಕ್ ಆಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ತಕ್ಷಣ ಆ ಮಹಿಳೆಗೆ ತಾನು ಮೋಸ ಹೋಗಿದ್ದೇನೆಂದು ತಿಳಿಯುತ್ತದೆ. ನಂತರ ಕೂಡಲೇ ಆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಈ ಆರೋಪದನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜಾಹೀರಾತು ನೋಡುವಾಗ ಎಚ್ಚರಿಗೆ ಅಗತ್ಯ
ಉದ್ಯೋಗ ಸಂಬಂಧಿತ ಯಾವುದೇ ಜಾಹೀರಾತುಗಳನ್ನು ನೋಡುವಾಗ ಅದನ್ನು ಸರಿಯಾಗಿ ಪರೀಕ್ಷಿಸಬೇಕು. ಏಕೆಂದರೆ ಕೆಲ ವಂಚಕರು ಸೋಶಿಯಲ್ ಮೀಡಿಯಾದಲ್ಲಿ ವಂಚನೆ ಮಾಡುವುದನ್ನೇ ನಿತ್ಯದ ಕೆಲಸವಾಗಿಸಿಕೊಂಡಿದ್ದಾರೆ. ಇದಲ್ಲದೆ ಈ ಉದ್ಯೋಗ ಸಂಬಂಧಿಸಿದ ಅನೇಕ ಫೇಕ್ ಅಕೌಂಟ್ಗಳು ಸಹ ಹಾಗೇ ಅಸ್ಥಿತ್ವದಲ್ಲಿದೆ. ಆದ್ದರಿಂದ ಯಾವುದೇ ಜಾಹೀರಾತನ್ನು ಕ್ಲಿಕ್ ಮಾಡುವಾಗ ಎಚ್ಚರವಹಿಸಿ.
ಇದಲ್ಲದೆ ಉದ್ಯೋಗದ ಮಾಹಿತಿಯನ್ನು ತಿಳಿಯಬೇಕಾದ್ರೆ ಲಿಂಕ್ಡ್ಇನ್ ಅಥವಾ ಗ್ಲಾಸ್ಡೋರ್ನಂತಹ ಆ್ಯಪ್ಗಳನ್ನು ಬಳಕೆಮಾಡಬಹುದಾಗಿದೆ.
ಇದನ್ನೂ ಓದಿ: ಗೇಮರ್ಗಳಿಗಂತಾನೇ ತಯಾರಾಗಿದೆ ಹೊಸ ಸ್ಮಾರ್ಟ್ಫೋನ್! ಹೇಗಿದೆ ಗೊತ್ತಾ ಫೀಚರ್ಸ್?
ನಕಲಿ ಮಾಹಿತಿಯನ್ನು ತಿಳಿಯುವುದು ಹೇಗೆ?
ಮುಖ್ಯವಾಗಿ ಯಾವುದೇ ಉದ್ಯೋಗ ಮಾಹಿತಿಯನ್ನು ನೋಡುವಾಗ ಅದರ ಬಗ್ಗೆ ಸವಿವರಗಳನ್ನು ನೀಡಿದ್ದಾರೆಯೇ, ಇಲ್ಲವೇ ಎಂದು ನೋಡಿಕೊಳ್ಳಿ. ನಂತರ ಆ ಜಾಹೀರಾತಿಗೆ ಸಂಬಂಧಪಟ್ಟ ಕಂಪೆನಿಯ ಬಗ್ಗೆ ಗೂಗಲ್ ಅಥವಾ ಬೇರೆ ಬೇರೆ ವೆಬ್ಸೈಟ್ಗಳಲ್ಲಿ ಪರೀಕ್ಷಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ