HOME » NEWS » Tech » WANT WHATSAPP NEW FEATURES BEFORE OTHERS HERE HOW YOU CAN BECOME A BETA TESTER HERE THE EASY PROCESS HG

WhatsApp: ವಾಟ್ಸ್ಆ್ಯಪ್​ ಪರಿಚಯಿಸುವ ಹೊಸ ಫೀಚರ್ ಎಲ್ಲರಿಗಿಂತ ಮೊದಲೇ ನಿಮಗೆ ಸಿಗಬೇಕಾ?; ಬೇಟಾ ವರ್ಶನ್​ನಲ್ಲಿ ನೋಡಿ

Beta tester: ವಾಟ್ಸ್​ಆ್ಯಪ್​ ಹೊರತರುವ ನೂತನ ಫೀಚರ್​ ಅನ್ನು ಮೊದಲಿಗೆ ಬೇಟಾ ಟೆಸ್ಟಿಂಗ್​ ನಡೆಸಿ ನಂತರ ಬಳಕೆದಾರರಿಗೆ ಒದಗಿಸುತ್ತದೆ.  ಆದರೆ ಹೊಸ ಫೀಚರ್​ ಎಲ್ಲಾ ಬಳಕೆದಾರರಿಗೆ ಸಿಗುವ ಮುನ್ನವೇ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸಿಗಬೇಕಾ? ಹಾಗಿದ್ದರೆ, ಏನು ಮಾಡುವುದು? ಇಲ್ಲಿದೆ ಮಾಹಿತಿ.

news18-kannada
Updated:November 2, 2020, 4:05 PM IST
WhatsApp: ವಾಟ್ಸ್ಆ್ಯಪ್​ ಪರಿಚಯಿಸುವ ಹೊಸ ಫೀಚರ್ ಎಲ್ಲರಿಗಿಂತ ಮೊದಲೇ ನಿಮಗೆ ಸಿಗಬೇಕಾ?; ಬೇಟಾ ವರ್ಶನ್​ನಲ್ಲಿ ನೋಡಿ
ವಾಟ್ಸ್ಆ್ಯಪ್
  • Share this:
ವಾಟ್ಸ್​ಆ್ಯಪ್ ಆಗಾಗ​​ ಹೊಸ ಫೀಚರ್​ ಪರಿಚಯಿಸುತ್ತಿರುತ್ತದೆ. ಬಳಕೆದಾರರಿಗೆ ಅನುಕೂಲವಾಗುವಂತೆ ನೂತನ ಫೀಚರ್​ ಅನ್ನು ನೀಡುತ್ತದೆ. ಆದರೆ ಅದಕ್ಕೂ ಮುನ್ನ ಟೆಸ್ಟಿಂಗ್​ ನಡೆಸುತ್ತದೆ. ಇಂತಿಷ್ಟೇ ಬಳಕೆರಾದರ ಜೊತೆಗೆ ಟೆಸ್ಟಿಂಗ್​ ನಡೆಸಿ ನಂತರ ಅವರ ಅಭಿಪ್ರಾಯ ತಿಳಿಯುತ್ತದೆ. ಇದರ ಆಧಾರದ ಮೇಲೆ ಹೊಸ ಫೀಚರ್​ ಅನ್ನು ದೇಶದಾದ್ಯಂತ ಎಲ್ಲಾ ಬಳಕೆದಾರರಿಗೆ ಪರಿಚಯಿಸುತ್ತದೆ.

ವಾಟ್ಸ್​ಆ್ಯಪ್​ ಹೊರತರುವ ನೂತನ ಫೀಚರ್​ ಅನ್ನು ಮೊದಲಿಗೆ ಬೇಟಾ ಟೆಸ್ಟಿಂಗ್​ ನಡೆಸಿ ನಂತರ ಬಳಕೆದಾರರಿಗೆ ಒದಗಿಸುತ್ತದೆ.  ಆದರೆ ಹೊಸ ಫೀಚರ್​ ಎಲ್ಲಾ ಬಳಕೆದಾರರಿಗೆ ಸಿಗುವ ಮುನ್ನವೇ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸಿಗಬೇಕಾ? ಹಾಗಿದ್ದರೆ, ಏನು ಮಾಡುವುದು? ಇಲ್ಲಿದೆ ಮಾಹಿತಿ.

2 ವಿಧಾನದಲ್ಲಿ ಸೈನ್​ಇನ್​ ಮಾಡುವ ಮೂಲಕ ಬೇಟಾ ಟೆಸ್ಟಿಂಗ್ ಆಯ್ಕೆಯನ್ನು ಪಡೆಯಬಹುದಾಗಿದೆ. ಸ್ಮಾರ್ಟ್​ಫೋನ್​ ಮತ್ತು ಕಂಪ್ಯೂಟರ್​ ಮೂಲಕ ಸೈನ್​ ಇನ್​ ಮಾಡುವ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ. ಆದರೆ ಗೂಗಲ್​ ಅಕೌಂಡ್​ ಇದ್ದರೆ ಮಾತ್ರ  ಬೇಟಾ ವರ್ಶನ್​​ ಆಯ್ಕೆ ಸಿಗಲಿದೆ.

ಆ್ಯಂಡ್ರಾಯ್ಡ್​ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್​ಗೆ ತೆರಳಿ ವ್ಯಾಟ್ಸ್​ಆ್ಯಪ್​ ಡೌನ್​ಲೋಡ್​ ಮಾಡಬೇಕು. ನಂತರ ವಾಟ್ಸ್​ಆ್ಯಪ್​ ತೆರೆದು ಸ್ಕ್ರೋಲ್​ ಡೌನ್​ಮಾಡಿದರೆ ‘Become a beta tester’ ಪ್ಯಾನಲ್​ ಕಾಣಸಿಗುತ್ತದೆ. ಬಳಿಕ ‘I’m in’  ಮತ್ತು ‘Join’ ಆಯ್ಕೆಯ ಮೇಲೆ ಕ್ಲಿಕ್​ ಮಾಡಬೇಕು.

ಕಂಪ್ಯೂಟರ್​ ಬಳಕೆದಾರರು ಕ್ರೋಮ್​, ಒಪೆರಾ, ಫೈರ್​ಪಾಕ್ಸ್​ ಮೂಲಕ ಅಧಿಕೃತ ವೆಬ್​ಸೈಟ್​ https://play.google.com/apps/testing/com.whatsapp ಭೇಟಿ ನೀಡಬೇಕು. ನಂತರ ಡೈಲಾಗ್​​ ಬಾಕ್ಸ್​ನಲ್ಲಿ   ‘Become a beta tester’ ಆಯ್ಕೆಯ ಮೇಲೆ ಕ್ಲಿಕ್​ ಮಾಡಬೇಕು.

ಇದಾದ ಸ್ವಲ್ಪ ಸಮಯದ ಬಳಿಕ ವ್ಯಾಟ್ಸ್​ಆ್ಯಪ್​​ ಬೇಟಾ ಟೆಸ್ಟರ್​​​​ ಸಿಗಲಿದೆ. ಜೊತೆಗೆ ಅಪ್ಡೇಟ್​​ ಮಾಡುವಂತೆ ಕೇಳುತ್ತದೆ. ನಂತರ ಬೇಟಾ ವರ್ಷನ್​ಗೆ ಅಪ್ಡೇಟ್​ ಮಾಡಿದರಾಯಿತು.
Youtube Video
ಇನ್ನು ಬೇಟಾ ಟೆಸ್ಟಿಂಗ್​ನಿಂದ ಹೊರಬರಬೇಕಾದರೆ ವಾಟ್ಸ್​ಆ್ಯಪ್​​​ ‘ಅನ್​ಇನ್​ಸ್ಟಾಲ್’ ಅಥವಾ ‘ರಿಇನ್​ಸ್ಟಾಲ್​’​ ಮಾಡಿದರಾಯಿತು.
Published by: Harshith AS
First published: November 2, 2020, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories