• Home
  • »
  • News
  • »
  • tech
  • »
  • WhatsApp Status: ಹೈಡ್‌ ಮಾಡಿದ ಸ್ಟೇಟಸ್‌ ನೋಡ್ಬೇಕಾ? ಈ ಟ್ರಿಕ್ಸ್ ಬಳಸಿ, ತುಂಬಾ ಸಿಂಪಲ್​!

WhatsApp Status: ಹೈಡ್‌ ಮಾಡಿದ ಸ್ಟೇಟಸ್‌ ನೋಡ್ಬೇಕಾ? ಈ ಟ್ರಿಕ್ಸ್ ಬಳಸಿ, ತುಂಬಾ ಸಿಂಪಲ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಅನುಕೂಲಕರ ಫೀಚರ್​​ಗಳನ್ನು ಪರಿಚಯಿಸುತ್ತಿದೆ. ಈ ಬಾರಿ ವಾಟ್ಸ್ಆ್ಯಪ್​ನಲ್ಲಿ ಸ್ಟೇಟಸ್ ಹೈಡ್‌ ಮಾಡಿದರೆ ಆ ಸ್ಟೇಟಸ್‌ ಅನ್ನು ನೋಡುವ ಟ್ರಿಕ್ಸ್‌ ಇಲ್ಲಿದೆ. ಓದಿ ನೋಡಿ.

  • Share this:

    ಮೆಟಾ (Meta) ಮಾಲಿಕತ್ವದಲ್ಲಿರುವ ಜನಪ್ರಿಯ ಮೆಸೇಜಿಂಗ್‌ ಆ್ಯಪ್‌ಗಳಲ್ಲಿ (Messaging Apps) ವಾಟ್ಸಪ್‌ ಕೂಡ ಒಂದು. ಇಂದಿನ ದಇನಗಳಲ್ಲಿ ಬಳಕೆದಾರರಿಗೆ ಅನುಕೂಲಕ್ಕೆ ತಕ್ಕಂತೆ ಎಲ್ಲಾ ಫೀಚರ್‌ಗಳನ್ನು ಜನರಿಗೆ ವಾಟ್ಸಪ್‌ (WhatsApp) ಪರಿಚಯಿಸುತ್ತಾ ಬಂದಿದೆ. ಈ ಫೀಚರ್‌ಗಳಿಂದ (Features) ಬಳಕೆದಾರರು ವಾಟ್ಸಪ್‌ ಬಳಕೆ ಮಾಡುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಯಾವುದೇ ಇತರ ಆ್ಯಪ್‌ಗಳು ಬಂದರೂ ವಾಟ್ಸಪ್‌ ಮಾತ್ರ ಅದರ ಸ್ಥಾನವನ್ನು ಇಂದಿಗೂ ಬಿಟ್ಟುಕೊಟ್ಟಿಲ್ಲ.ಇದಕ್ಕಿಂತ ಆಕರ್ಷಕವಾದ ಫೀಚರ್​ಗಳು ಟೆಲಿಗ್ರಾಮ್ (Telegram) ಸೇರಿದಂತೆ ಇತರೆ ಮೆಸೇಜಿಂಗ್ ಆ್ಯಪ್​ಗಳಲ್ಲಿ ಇವೆ. ಆದರೆ ​ವಾಟ್ಸಪ್‌ಗಿರುವಂತಹ ಕ್ರೇಜ್ ಮತ್ಯಾವುದಕ್ಕೂ ಇಲ್ಲ. ಇದಕ್ಕಾಗಿಯೇ ವಾಟ್ಸಪ್ ನ ಮಾದರಿಗಳನ್ನು ಹಿಂಬಾಲಿಸಿಕೊಂಡು ಅನೇಕ ಇತರೆ ಥರ್ಡ್ ಪಾರ್ಟಿ ಆ್ಯಪ್​ಗಳು ಕೂಡ ಹುಟ್ಟುಕೊಂಡಿವೆ.


    ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಅನುಕೂಲಕರ ಫೀಚರ್​​ಗಳನ್ನು ಪರಿಚಯಿಸುತ್ತಿದೆ. ಈ ಬಾರಿ ವಾಟ್ಸ್ಆ್ಯಪ್​ನಲ್ಲಿ ಸ್ಟೇಟಸ್ ಅಪ್ಲೋಡ್ ಮಾಡುವಾಗ ಯಾರಿಗೆ ಬೇಕು ಅವರಿಗೆ ಮಾತ್ರ ಕಾಣಿಸುವಂತೆ ಶೇರ್‌ ಮಾಡುವ ಆಯ್ಕೆಯನ್ನು ಕೂಡ ನೀಡಿದೆ.


    ವಾಟ್ಸಪ್‌ನಲ್ಲಿ ಸ್ಟೇಟಸ್‌ ಹೇಗೆ ಹೈಡ್‌ಮಾಡುವುದು?


    • ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಶೇರ್‌ ಮಾಡುವ ಮುನ್ನ ಸೆಟ್ಟಿಂಗ್​ಗೆ ಹೋಗಬೇಕು.

    • ಅಲ್ಲಿ ನಾವು ಅಪ್ಲೋಡ್ ಮಾಡುವ ಸ್ಟೇಟಸ್ ಎಲ್ಲರಿಗೆ ಕಾಣಬೇಕಾ? ಅಥವಾ ಕೆಲವರಿಗೆ ಮಾತ್ರ ಕಾಣುವಂತೆ ಮಾಡಬೇಕಾ? ಎಂಬ ಆಯ್ಕೆಯಿದೆ.


    ಇದನ್ನೂ ಓದಿ: ನಿಮ್ಮ ಮೊಬೈಲ್‌ನಲ್ಲಿ ಉಚಿತವಾಗಿ ಒಟಿಟಿ ಸಿನಿಮಾಗಳನ್ನು ನೋಡಿ, ಮೊದಲು ಹೀಗ್​ ಮಾಡಿ!

    • ಇದರಿಂದ ನಿಮ್ಮ ಸ್ನೇಹಿತರು ನಿಮಗೆ ಮಾತ್ರ ಕಾಣದಂತೆ ಹಾಗೂ ಉಳಿದವರೆಲ್ಲರಿಗೂ ಕಾಣುವಂತೆ ಸ್ಟೇಟಸ್ ಹಾಕಬಹುದು.

    • ಈ ರೀತಿಯಲ್ಲಿ ನಿಮ್ಮ ಸ್ಟೇಟಸ್‌ ಅನ್ನು ಹೈಡ್‌ ಮಾಡಿಕೊಳ್ಳಬಹುದಾಗಿದೆ.


    ಸಾಂದರ್ಭಿಕ ಚಿತ್ರ


    ಹೀಗೆ ಮಾಡಿದಾಗ ನಿಮಗೆ ನಿಮ್ಮ ಸ್ನೇಹಿತರ ಸ್ಟೇಟಸ್‌ ನೋಡಲು ಸಾಧ್ಯವಾಗುವುದಿಲ್ಲ. ಆದರೆ ಇದಕ್ಕೊಂದು ಟ್ರಿಕ್‌ ಇದೆ. ಈ ಟ್ರಿಕ್‌ ಫಾಲೋ ಮಾಡಿದರೆ ನಿಮ್ಮನ್ನು ಹೈಡ್‌ ಮಾಡಿದ ಸ್ನೇಹಿತರ ಸ್ಟೇಟಸ್‌ ಅನ್ನು ಸುಲಭದಲ್ಲಿ ನೋಡಬಹುದು. ಇದು ವಾಟ್ಸಪ್‌ನಲ್ಲಿರುವಂತಹ ವಿಶೇಷ ಫೀಚರ್‌ ಆಗಿದೆ.


    ಯಾವ ರೀತಿ ನೋಡುವುದು?


    • ಮುಖ್ಯವಾಗಿ ಹೇಳುವುದಾದರೆ ಈ ಆಯ್ಕೆ ಒರಿಜಿನಲ್‌ ವಾಟ್ಸಪ್‌ನಲ್ಲಿ ಲಭ್ಯವಿಲ್ಲ.

    • ಬದಲಾಗಿ ಇದಕ್ಕೆ ಮೊದಲು ನೀವು ಥರ್ಡ್ ಪಾರ್ಟಿ ಆ್ಯಪ್​ವೊಂದನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು.

    • ಅದೇ ಜಿಬಿ ವಾಟ್ಸಪ್. ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಇನ್​ಸ್ಟಾಲ್ ಮಾಡಿದ ಬಳಿಕ ಆ್ಯಪ್ ಐಕಾಲ್ ಮೇಲೆ ಕ್ಲಿಕ್ ಮಾಡಿ.‌

    • ಓಪನ್ ಆದ ಕೂಡಲೆ ಬಲ ಬದಿಯಲ್ಲಿರುವ ಮೂರು ಡಾಟ್ ಮೇಲೆ ಒತ್ತಿ.

    • ಈ ಸಂದರ್ಭ ಕೆಳಗಡೆ ಹೈಡ್ ವೀವ್ ಸ್ಟೇಟಸ್ (Hide View Status) ಎಂಬ ಆಯ್ಕೆ ಕಾಣುತ್ತದೆ.


    a-brand-new-feature-has-arrived-on-whatsapp-a-message-sent-once-can-be-edited-again
    ಸಾಂದರ್ಭಿಕ ಚಿತ್ರ


    • ಇದನ್ನು ಒತ್ತಿದರೆ ನಿಮ್ಮನ್ನ ಹೈಡ್ ಮಾಡಿ ಸ್ಟೇಟಸ್ ಹಾಕಿದವರು ಯಾರು?, ಯಾವ ಸ್ಟೇಟಸ್ ಹಾಕಿದ್ದಾರೆ ಎಂಬುದು ಕಾಣಿಸುತ್ತದೆ.

    • ಅಷ್ಟೇ ಅಲ್ಲದೆ ನಿಮ್ಮನ್ನ ಬ್ಲಾಕ್ ಮಾಡಿರುವವರ ಸ್ಟೇಟಸ್ ಕೂಡ ಇದರಲ್ಲಿ ನೋಡಬಹುದು.


    ಇದನ್ನೂ ಓದಿ: ಕ್ಯಾನ್ಸರ್ ಪತ್ತೆ ಹಚ್ಚಿದ ಆಪಲ್ ಸ್ಮಾರ್ಟ್‌ವಾಚ್, ಏನ್​ ಟೆಕ್ನಾಲಜಿ ಗುರೂ!


    ಬಳಸುವ ಮುನ್ನ ಎಚ್ಚರವಹಿಸಿ:


    ಇದೊಂದು ಥರ್ಡ್ ಪಾರ್ಟಿ ಆ್ಯಪ್ ಆಗಿದ್ದು ಬಳಕೆ ಮಾಡುವ ಮುನ್ನ ಎಚ್ಚರವಹಿಸಿ. ಈ ಆ್ಯಪ್ ಯಾವುದೇ ಸಂದರ್ಭದಲ್ಲೂ ನಿಮ್ಮ ಖಾಸಗಿ ಡಾಟಾವನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಈ ಆಯ್ಕೆ ಜಿಬಿ ವಾಟ್ಸ್ಆ್ಯಪ್​ನ ನೂತನ ಆವೃತ್ತಿಯಲ್ಲಿ ಸ್ವಲ್ಪ ಬೇರೆ ರೀತಿಯಲ್ಲಿದೆ.ಇದಲ್ಲದೆ ಈ ಆ್ಯಪ್‌ ನಿಮ್ಮ ಪ್ಲೇಸ್ಟೋರ್‌ನಲ್ಲಿ ಲಭ್ಯವಿಲ್ಲ.

    Published by:ವಾಸುದೇವ್ ಎಂ
    First published: