ಯಾವುದೇ ಹಬ್ಬ (Festival) ಬರಲಿ ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ (Social Media) ಆಚರಿಸುವುದು ಒಂದು ಟ್ರೆಂಡ್ (Trend) ಆಗಿದೆ. ಅದೇ ರೀತಿ ಈ ಈ ಹಬ್ಬಗಳ ಮೂಲಕ ಸೋಶಿಯಲ್ ಮೀಡಿಯಾ ಮೂಲಕ ವಿಡಿಯೋ ಹಾಕುವುದು, ಫೋಟೋ ಹಾಕುವುದು, ಡಿಪಿ ಹಾಕುವ ಮೂಲಕ ಆಚರಣೆ ಮಾಡ್ತಾರೆ. ಇದೀಗ ಡಿಸೆಂಬರ್ 25 ಕ್ಕೆ ಕ್ರಿಸ್ಮಸ್ (Christmus) ಹಬ್ಬ ಬರ್ತಾ ಇದೆ. ಇದನ್ನು ನೀವು ವಾಟ್ಸಪ್ನಲ್ಲಿ ಸ್ಪೆಷಲ್ ಆಗಿ ಆಚರಿಸ್ಬಹುದು. ವಾಟ್ಸಪ್ ಐಕಾನ್ನಲ್ಲಿ (Whatsapp Icon) ನೀವು ಕ್ರಿಸ್ಮಸ್ ಟೋಪಿಯನ್ನು ಹಾಕುವ ಮೂಲಕ ಈ ಬಾರಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮಿಸಬಹುದಾಗಿದೆ. ಆದರೆ ವಾಟ್ಸಪ್ ಐಕಾನ್ಗೆ ಕ್ರಿಸ್ಮಸ್ ಟೋಪಿ ಹಾಕ್ಬೇಕಾದ್ರೆ ಕೆಲವೊಂದು ಟಿಪ್ಸ್ಗಳಿವೆ.
ಯಾವುದೇ ಹಬ್ಬಗಳು ಬಂದಾಗ ಕೆಲವು ಆ್ಯಪ್ಗಳು ಈ ಹಬ್ಬದ ಹಿನ್ನಲೆಯಲ್ಲಿ ಕೆಲವೊಂದು ಫೀಚರ್ಸ್ಗಳನ್ನು ಬಿಡುಗಡೆ ಮಾಡುತ್ತದೆ. ಅದೇ ರೀತಿ ಈ ಬಾರಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಾಟ್ಸಪ್ ಐಕಾನ್ನಲ್ಲಿ ಕ್ರಿಸ್ಮಸ್ ಟೋಪಿ ಹಾಕುವಂತ ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಅದನ್ನು ಹೇಗೆ ಸೆಟ್ ಮಾಡುವುದು ಎಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಇದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡಿ
ವಾಟ್ಸಪ್ನಲ್ಲಿ ಇದುವರೆಗೆ ಹಲವಾರು ಫೀಚರ್ಸ್ಗಳು ಬಿಡುಗಡೆಯಾಗಿದೆ. ಆದರೆ ವಾಟ್ಸಪ್ ಐಕಾನ್ ಅನ್ನು ಕಸ್ಟಮೈಸ್ ಮಾಡುವಂತಹ ಫೀಚರ್ಸ್ ಇದುವರೆಗೆ ಬಿಡುಗಡೆಯಾಗಿಲ್ಲ. ಆದ್ದರಿಂದ ಈ ಐಕಾನ್ಗಳನ್ನು ಕಸ್ಟಮೈಸ್ ಮಾಡಬೇಕಾದರೆ ಥರ್ಡ್ ಪಾರ್ಟಿ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: 2023ರಲ್ಲಿ ಒನ್ಪ್ಲಸ್ನಿಂದ ಎರಡು 5ಜಿ ಪೋನ್ಗಳ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್?
ಅದ್ರಲ್ಲೂ ಆಂಡ್ರಾಯ್ಡ್ ಬಳಕೆದಾರರು ತಮ್ಮಲ್ಲಿರುವಂತ ಆ್ಯಪ್ಗಳ ಐಕಾನ್ಗಳನ್ನು ತಮಗೆ ಬೇಕಾದ ಹಾಗೆ ಬದಲಾಯಿಸಬೇಕಾದರೆ ಹಲವಾರು ಲಾಂಚರ್ಗಳು ಗೂಗಲ್ ಪ್ಲೇ ಸ್ಟೋರ್ನಿಂದ ಇನ್ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಸದ್ಯ ಈ ಲಾಂಚರ್ಗಳಲ್ಲಿ ಬಹಳ ಪ್ರಸಿದ್ದಿಯನ್ನು ಹಾಗೂ ಬಳಸಲು ಯೋಗ್ಯವಾಗಿರುವ ಆ್ಯಪ್ ಅಂದರೆ ನೋವಾ ಲಾಂಚರ್. ಈ ಆ್ಯಪ್ ಮೂಲಕ ವಾಟ್ಸಪ್ ಐಕಾನ್ ಅನ್ನು ಬಳಕೆದಾರರಿಗೆ ಬೇಕಾದ ರೀತಿಯಲ್ಲಿ ಕಸ್ಟಮೈಸ್ ಮಾಡಿಕೊಳ್ಳಬಹುದು. ಆದರೆ ಅದಕ್ಕಾಗಿ ಕೆಲವು ಹಂತಗಳಿವೆ.
ಹಂತ 1
ಮೊದಲಿಗೆ ನಿಮ್ಮ ವಾಟ್ಸಪ್ ಐಕಾನ್ನಲ್ಲಿ ಯಾವ ಚಿತ್ರವನ್ನು ಹಾಕಬೇಕು ಅಥವಾ ಅದ್ರಲ್ಲಿ ಏನೆಲ್ಲಾ ಡಿಸೈನ್ಗಳು ಬೇಕು ಎಂಬುದನ್ನು ಅರಿತುಕೊಳ್ಳಿ. ನಂತರದಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಬ್ರೌಸರ್ನಲ್ಲಿ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಂಡು, ನಿಮಗೆ ಬೇಕಾದ ಹಾಗೆ ಸೆಟ್ ಮಾಡಿಟ್ಟುಕೊಳ್ಳಿ.
ಹಂತ 2
ಡೌನ್ಲೋಡ್ ಮಾಡಿಟ್ಟ ಬಳಿಕ ನೀವು ಈಗಾಗಲೇ ಇನ್ಸ್ಟಾಲ್ ಮಾಡಿಕೊಂಡಿರುವ ನೋವಾ ಆ್ಯಪ್ ಅನ್ನು ಓಪನ್ ಮಾಡಿ, ಅದರಲ್ಲಿ ಕೇಳಲಾಗುವ ಷರತ್ತನ್ನು ಓದಿ ಮತ್ತು ಒಪ್ಪಿಕೊಳ್ಳಿ. ತದನಂತರ ವಾಟ್ಸಾಪ್ ಐಕಾನ್ ಬಳಿ ಬಂದು ಅದನ್ನು ಕೆಲವು ಸೆಕೆಂಡುಗಳ ಕಾಲ ಹಾಗೆ ಟ್ಯಾಪ್ ಮಾಡಿ ಹಿಡಿದಿಟ್ಟುಕೊಳ್ಳಬೇಕು.
ಹಂತ 3
ಈ ರೀತಿ ಹಿಡಿದಿಟ್ಟ ಮೇಲೆ ನಿಮಗೆ ಎಡಿಟ್ ಬಟನ್ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿ. ನಂತರ ಈಗಾಗಲೇ ಡೌನ್ಲೋಡ್ ಮಾಡಲಾದ ಚಿತ್ರವನ್ನು ಆರಿಸಿಕೊಳ್ಳಿ. ಬಳಿಕ ನಿಮಗೆ ಹೇಗೆ ಬೇಕೋ ಹಾಗೆ ಕಸ್ಟಮೈಸ್ ಮಾಡಿಕೊಳ್ಳಿ. ನಂತರ ನಿಮ್ಮ ವಾಟ್ಸಾಪ್ ಲೋಗೋ ಸುಂದರವಾಗಿ ಕಾಣುವುದನ್ನು ಗಮನಿಸಿ.
ಯಾವುದೇ ಆ್ಯಪ್ ಅನ್ನು ಸಹ ಕಸ್ಟಮೈಸ್ ಮಾಡ್ಬಹುದು
ಈ ಆ್ಯಪ್ ಮೂಲಕ ನಿಮ್ಮ ಮೊಬೈಲ್ನಲ್ಲಿ ಪ್ರಸ್ತುತವಾಗಿ ಇರುವಂತಹ ಯಾವುದೇ ಆ್ಯಪ್ನ ಐಕಾನ್ ಅನ್ನು ಸಹ ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ.
ಇದು ನಿಮ್ಮ ವಾಟ್ಸಪ್ ಐಕಾನ್ ಅನ್ನು ಕಸ್ಟಮೈಸ್ ಮಾಡಲಿರುವಂತಹ ಸ್ಪೆಷಲ್ ಫೀಚರ್ಸ್ ಅಂತಾನೂ ಹೇಳ್ಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ