ಮೆಟಾ (Meta) ಒಡೆತನದಲ್ಲಿರುವ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಾಪ್- ಇತ್ತೀಚೆಗಂತೂ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ವಿಶ್ವದಲ್ಲಿ ಹಲವಾರು ಬಳಕೆದಾರನ್ನು ಇದು ಹೊಂದಿದ್ದು ಇತ್ತೀಚೆಗೆ ಬಳಕೆದಾರರಿಗಾಗಿ ಸಾಕಷ್ಟು ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಇದೆ. ವಾಟ್ಸಾಪ್ ನಲ್ಲಿ ಹೊಸ ಫೀಚರ್ ಮಾತ್ರ ಮಾತ್ರವಲ್ಲದೆ ಹಲವಾರು ಟ್ರಿಕ್ಗಳಿವೆ. ಆದರೆ ಈ ಟ್ರಿಕ್ಗಳು ಎಷ್ಟೋ ವಾಟ್ಸಾಪ್ ಬಳಕೆದಾರರಿಗೆ ತಿಳಿದಿಲ್ಲ. ವಾಟ್ಸಾಪ್ (WhatsApp) ಇತ್ತೀಚೆಗ ಒಮ್ಮೆಲೆ 100 ಫೋಟೋವನ್ನು ಶೇರ್ ಮಾಡುವಂತಹ ಫೀಚರ್ ಅನ್ನು ಪರಿಚಯಿಸಿತ್ತು. ಆದರೆ ವಾಟ್ಸಾಪ್ನ ಸೆಟ್ಟಿಂಗ್ಸ್ನಲ್ಲಿ ನಮಗೆ ಬೇಕಾದ ಹಾಗೇ ಈ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳುವಂತೆ ಸೆಟ್ ಮಾಡಿಕೊಳ್ಳಬಹುದು. ಅದೇ ರೀತಿ ನಾವು ಆನ್ಲೈನ್ನಲ್ಲಿ (Online) ಇನ್ನೊಬ್ಬರಿಗೆ ಕಾಣದ ಹಾಗೆಯೂ ಮಾಡ್ಬಹುದು.
ಹೌದು, ವಾಟ್ಸಾಪ್ನಲ್ಲಿ ಬಳಕೆದಾರರಿಗೆ ಗೊತ್ತಿಲ್ಲದ ಹಲವಾರು ಟ್ರಿಕ್ಗಳಿವೆ. ಅದರಲ್ಲಿ ನಮ್ಮ ಡಿಪಿ ಯಾರೆಲ್ಲಾ ನೋಡಿದ್ದಾರೆಂದು ನೋಡುವುದು, ಡಿಲೀಟ್ ಆದ ಮೆಸೇಜ್ ನೋಡುವುದು ಈ ರೀತಿಯ ಹಲವಾರು ಟ್ರಿಕ್ಗಳಿವೆ. ಹಾಗೆಯೇ ಇನ್ಮುಂದೆ ನಾವು ಆನ್ಲೈನ್ನಲ್ಲಿದ್ರೂ ಆಫ್ಲೈನ್ ಇದ್ದಂತೆ ಮಾಡ್ಬಹುದು. ಹೇಗೆಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ವಾಟ್ಸಾಪ್ನಲ್ಲಿ ಆನ್ಲೈನ್ನಲ್ಲಿದ್ರೂ ಆಫ್ಲೈನ್ನಲ್ಲಿದ್ದಂತೆ ಮಾಡುವುದು ಹೇಗೆ?
ವಾಟ್ಸಾಪ್ನಲ್ಲಿ ಪಿಕ್ಚರ್ ಇನ್ ಪಿಕ್ಚರ್ ಫೀಚರ್ ಬಿಡುಗಡೆ
ವಾಟ್ಸಾಪ್ ಬಳಕೆದಾರರಿಗಾಗಿ ಇತ್ತೀಚೆಗೆ ಹೊಸ ಫೀಚರ್ ಒಂದನ್ನು ಬಿಡುಗಡೆ ಮಾಡಿದೆ. ಇದು ವಿಡಿಯೋ ಕರೆಯಲ್ಲಿ ಮಾತನಾಡುವವರಿಗೆ ಬಹಳಷ್ಟು ಸಹಕಾರಿಯಾಗುತ್ತದೆ ಎಂದು ಕಂಪೆನಿ ಹೇಳಿದೆ. ವಾಟ್ಸಾಪ್ ಇದುವರೆಗೆ ಹಲವಾರು ಫೀಚರ್ಸ್ಗಳನ್ನು ಬಳಕೆದಾರರಿಗಾಗಿ ಬಿಡುಗಡೆ ಮಾಡಿದ್ದು, ಇದೀಗ ಈ ಸಾಲಿಗೆ ಪಿಕ್ಚರ್ ಇನ್ ಪಿಕ್ಚರ್ ಫೀಚರ್ ಸೇರಿದೆ. ಈ ಫೀಚರ್ನಿಂದ ಇನ್ಮುಂದೆ ವಾಟ್ಸಾಪ್ ಬಳಕೆದಾರರು ಆರಾಮವಾಗಿ ವಿಡಿಯೋ ಕಾಲ್ನಲ್ಲಿ ಮಾತನಾಡಬಹುದಾಗಿದೆ.
ಏನಿದರ ಪ್ರಯೋಜನ?
ಇದುವರೆಗೆ ಯಾರ ಜೊತೆಯಾದರೂ ವಾಟ್ಸಾಪ್ ಮೂಲಕ ವಿಡಿಯೋ ಕಾಲ್ನಲ್ಲಿ ಮಾತನಾಡಬನೇಕಾದರೆ, ಬೇರೆ ಆ್ಯಪ್ಗಳನ್ನು ಓಪನ್ ಮಾಡಿದ್ರೆ, ನಿಮ್ಮ ಕಾಲ್ನ ವಿಡಿಯೋ ಆಫ್ ಆಗುತ್ತಿತ್ತು. ಆದರೆ ಇನ್ಮುಂದೆ ಈ ತೊಂದರೆ ಎದುರಾಗುವುದಿಲ್ಲ ಎಂದು ಕಂಪೆನಿ ತಿಳಿಸಿದೆ. ಫೇಸ್‌ಟೈಮ್‌ನ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ನಂತೆಯೇ ಈ ಫೀಚರ್ ಕಾರ್ಯ ನಿರ್ವಹಿಸಲಿದ್ದು, ಗ್ರೂಪ್ ಕರೆ ಅಥವಾ ವೈಯಕ್ತಿಕ ಕರೆಯಲ್ಲಿದ್ದಾಗ ಇತರೆ ಆ್ಯಪ್ಗಳನ್ನು ಓಪನ್ ಮಾಡುವ ಮೂಲಕ ಒಂದೇ ಬಾರಿಗೆ ಎರಡೂ ಪ್ರಯೋಜನಗಳನ್ನು ಬಳಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ