Tech Tips: ಬೆರಳಲ್ಲಿರುವ ಉಂಗುರದ ಅಳತೆಯನ್ನು ತಿಳಿಬೇಕಾ? ಇಲ್ಲಿದೆ ನೋಡಿ ಸೂಪರ್ ಟ್ರಿಕ್ಸ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಟೆಕ್ನಾಲಜಿಗಳು ಈಗಂತೂ ಬಹಳಷ್ಟು ಪ್ರಗತಿಯಾಗಿದೆ. ಹಿಂದೆಲ್ಲಾ ಕೈ ಬೆರಳಿಗೆ ಧರಿಸುವಂತಹ ಉಂಗುರವನ್ನು ಅದಕ್ಕೆ ಸಂಬಂಧಪಟ್ಟಂತಹ ಟೂಲ್ಸ್​ ಅನ್ನು ಬಳಸಿಕೊಂಡು ಅದರ ಅಳತೆಯನ್ನು ನೋಡುತ್ತಿದ್ದರು. ಆದರೆ ಇನ್ಮುಂದೆ ಮೊಬೈಲ್​ನಲ್ಲೇ ಸುಲಭದಲ್ಲಿ ನೋಡಬಹುದಾಗಿದೆ. ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಮುಂದೆ ಓದಿ ...
  • Share this:

    ಭಾರತೀಯ ಸಂಸ್ಕೃತಿ (Indian Culture) ಪ್ರಕಾರ ಕೈ ಬೆರಳಲ್ಲಿ ಧರಿಸುವಂತಹ ಉಂಗುರಕ್ಕೆ (Ring) ಅಪಾರ ಗೌರವಿದೆ. ಅದಕ್ಕೆ ಅದರದೇ ಆದಂತಹ ಒಂದು ಸ್ಥಾನಮಾನ ಇದೆ. ಈ ಉಂಗುರಗಳನ್ನು ರಾಶಿ ಹಾಗೂ ಇನ್ನಿತರೆ ವಿಷಯಗಳ ಕಾರಣಕ್ಕಾಗಿ ಈ ಉಂಗುರಗಳನ್ನು ಧರಿಸುತ್ತಾರೆ. ಆದರೆ ಈ ಉಂಗುರಗಳನ್ನು ಖರೀದಿ ಮಾಡಬೇಕಾದರೆ ನಿಮ್ಮ ಕೈ ಬೆರಳಿನ ಅಳತೆಯನ್ನು ಮೊದಲು ತಿಳಿದುಕೊಳ್ಳಬೇಕು. ಆದರೆ ಕೆಲವೊಂದು ತುರ್ತು ಸಂದರ್ಭದಲ್ಲಿ ನಮಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಸಣ್ಣ ದಾರದಲ್ಲೋ ಅಥವಾ ಬೇರೆ ಯಾವುದೋ ಉಪಕರಣದ ಮೂಲಕ ಬೆರಳಿನ ಸೈಜ್ (Finger Size) ಅನ್ನು ಅಳತೆ ಮಾಡುತ್ತಾರೆ. ಆದರೆ ಇನ್ಮುಂದೆ ಸ್ಮಾರ್ಟ್​​​ಫೋನ್​ನಲ್ಲಿ (Smartphone) ಸುಲಭದಲ್ಲಿ ಇದನ್ನು ಅರಿತುಕೊಳ್ಳಬಹುದಾಗಿದೆ.


    ಟೆಕ್ನಾಲಜಿಗಳು ಈಗಂತೂ ಬಹಳಷ್ಟು ಪ್ರಗತಿಯಾಗಿದೆ. ಹಿಂದೆಲ್ಲಾ ಕೈ ಬೆರಳಿಗೆ ಧರಿಸುವಂತಹ ಉಂಗುರವನ್ನು ಅದಕ್ಕೆ ಸಂಬಂಧಪಟ್ಟಂತಹ ಟೂಲ್ಸ್​ ಅನ್ನು ಬಳಸಿಕೊಂಡು ಅದರ ಅಳತೆಯನ್ನು ನೋಡುತ್ತಿದ್ದರು. ಆದರೆ ಇನ್ಮುಂದೆ ಮೊಬೈಲ್​ನಲ್ಲೇ ಸುಲಭದಲ್ಲಿ ನೋಡಬಹುದಾಗಿದೆ. ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.


    ರಿಂಗ್ ಫಿಂಗ್


    ರಿಂಗ್‌ ಫಿಂಗ್ ಆ್ಯಪ್​ ಬೆರಳಿನ ಗಾತ್ರವನ್ನು ಸುಲಭವಾಗಿ ಪತ್ತೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ಅನೇಕ ಘಟಕಗಳನ್ನು ಬೆಂಬಲಿಸುವ ಇದು, ಗಾತ್ರ ಪರಿವರ್ತನೆ ಚಾರ್ಟ್ ಅನ್ನು ಹೊಂದಿದೆ. ಜೊತೆಗೆ ಡಾರ್ಕ್ ಥೀಮ್ ಆಯ್ಕೆ ಇರುವುದು ಇನ್ನಷ್ಟು ವಿಶೇಷ ಫೀಚರ್ ಆಗಿದೆ. ಈ ಆ್ಯಪ್ ಮೂಲಕ ಯುರೋಪ್, ಜಪಾನ್ ಮತ್ತು ಚೀನಾ, ಯುಎಸ್ಎ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್‌ ದೇಶದಲ್ಲಿ ಬಳಕೆ ಮಾಡುವ ಗಾತ್ರದ ವಿವರವನ್ನು ಒದಗಿಸುತ್ತದೆ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್​ನಲ್ಲಿ 10K+ ಇನ್‌ಸ್ಟಾಲ್‌ ಆಗಿದ್ದು, 3+ ರೇಟಿಂಗ್‌ ಅನ್ನು ಪಡೆದಿದೆ.




    ರಿಂಗ್ ಸೈಜ್ ಫೈಂಡರ್​


    ರಿಂಗ್​ ಸೈಜ್ ಆ್ಯಪ್ ಅನ್ನು ಪ್ರಪಂಚದಾದ್ಯಂತ ಬಹಳಷ್ಟು ಜನ ಬಳಕೆ ಮಾಡುತ್ತಿದ್ದಾರೆ. ಈ ಮೂಲಕ ಉಂಗುರದ ಗಾತ್ರವನ್ನು ಸುಲಭವಾಗಿ ಹಾಗೂ ನಿಖರವಾಗಿ ಪತ್ತೆ ಮಾಡಬಹುದಾಗಿದ್ದು, ಅಳತೆ ಪ್ರಕ್ರಿಯೆಯನ್ನು ಮೂರು ರೀತಿಯಲ್ಲಿ ಮಾಡಬಹುದಾಗಿದೆ. ಹಾಗೆಯೇ ಮೆಟ್ರಿಕ್ ಮಾನದಂಡದಲ್ಲಿ ಅಥವಾ ಇಂಚುಗಳಲ್ಲಿ ನಿಮ್ಮ ಉಂಗುರದ ಸೈಜ್‌ ಅನ್ನು ಕಂಡುಕೊಳ್ಳಬಹುದಾಗಿದೆ. ಇನ್ನು ಈ ಆ್ಯಪ್​ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 100K+ ಇನ್‌ಸ್ಟಾಲ್‌ ಆಗಿದ್ದು, 4.1 ರೇಟಿಂಗ್ ಪಡೆದುಕೊಂಡಿದೆ.


    ರಿಂಗ್ ಸೈಜರ್​ ಆ್ಯಪ್​ - ಮೆಸರ್ ಯುವರ್


    ಮೆಸರ್‌ ಯುವರ್‌ ಆ್ಯಪ್ ಸಹ ವಿಶೇಷವಾದ ಫೀಚರ್ಸ್​ ಅನ್ನು ಬಳೆಕದಾರರಿಗೆ ನೀಡುತ್ತದೆ. ಇದರಲ್ಲೂ ಸಹ ಬೆರಳಿನ ಗಾತ್ರವನ್ನು ನಿರ್ಧರಿಸಲು ಮೂರು ಮಾರ್ಗ ನೀಡಲಾಗಿದೆ. ಈಗಾಗಲೇ ಬಳಕೆ ಮಾಡುತ್ತಿರುವ ಉಂಗುರವನ್ನು ಅಳೆಯುವ ಮೂಲಕ, ನಿಮ್ಮ ಬೆರಳನ್ನು ಅಳೆಯುವ ಮೂಲಕ ಹಾಗೂ ಬೆರಳಿನ ಗಾತ್ರವನ್ನು ಅಂತರರಾಷ್ಟ್ರೀಯ ಗಾತ್ರದಿಂದ ಪರಿವರ್ತಿಸುವ ಮೂಲಕ.


    ಸಾಂಕೇತಿಕ ಚಿತ್ರ


    ಅಂದರೆ ಗಾತ್ರ ಅಳೆಯುವ ವಿಚಾರದಲ್ಲಿ ಕೆಲವು ದೇಶಗಳು ವಿವಿಧ ಮಾನದಂಡವನ್ನು ಅನುಸರಿಸುತ್ತವೆ. ಅದೆಲ್ಲಕ್ಕೂ ಈ ಆ್ಯಪ್ ಸಹಾಯವಾಗಲಿದೆ. ಇನ್ನು ಈ ಆ್ಯಪ್ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಲಭ್ಯವಿದೆ. ಸದ್ಯಕ್ಕೆ ಇದು 4.4 ರೇಟಿಂಗ್‌ನೊಂದಿಗೆ 100K+ ಇನ್‌ಸ್ಟಾಲ್‌ ಅನ್ನು ಪಡೆದುಕೊಂಡಿದೆ.


    ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಫೈರ್​ಬೋಲ್ಟ್​ ಕಂಪೆನಿಯ ಹೊಸ ಸ್ಮಾರ್ಟ್​​ವಾಚ್​! ಬೆಲೆ ಎಷ್ಟು?


    ರಿಂಗ್ ಸೈಜರ್​ಬೈ ಜಾಸನ್ ವಿಧರ್ಸ್​


    ಆಂಡ್ರಾಯ್ಡ್ ಬಳಕೆದಾರರು ನಿಮ್ಮ ರಿಂಗ್‌ ಸೈಜ್‌ ಪತ್ತೆ ಮಾಡಲು ಈ ಆ್ಯಪ್ ಬಳಕೆ ಮಾಡಬಹುದಾಗಿದೆ. ಈ ಆ್ಯಪ್​ನಲ್ಲಿ ವ್ಯಾಸ ಹಾಗೂ ಸುತ್ತಳತೆಯ ವಿವರ ನೀಡುವ ಆಯ್ಕೆ ನೀಡಲಾಗಿದ್ದು, ಸುಲಭವಾಗಿ ನಿಮ್ಮ ಬೆರಳಿನ ಸೈಜ್‌ ಕಂಡುಕೊಳ್ಳಬಹುದು. ಇನ್ನು ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 1 ಮಿಲಿಯನ್​ಗಿಂತಲೂ ಹೆಚ್ಚು ಇನ್‌ಸ್ಟಾಲ್‌ ಆಗಿದ್ದು, 4.3 ರೇಟಿಂಗ್‌ ಅನ್ನು ಪಡೆದುಕೊಂಡಿದೆ.

    Published by:Prajwal B
    First published: