• Home
  • »
  • News
  • »
  • tech
  • »
  • Tech Tips: ಸೆಲ್ಫಿ ಫೋಟೋ ಸೂಪರ್ ಆಗಿ ಬರ್ಬೇಕಾ? ಈ ಆ್ಯಪ್ಸ್ ಬೆಸ್ಟ್​

Tech Tips: ಸೆಲ್ಫಿ ಫೋಟೋ ಸೂಪರ್ ಆಗಿ ಬರ್ಬೇಕಾ? ಈ ಆ್ಯಪ್ಸ್ ಬೆಸ್ಟ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸೆಲ್ಫಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆದರೆ ಕೆಲವೊಂದು ಬಾರಿ ಮೊಬೈಲ್ ​ಕ್ಯಾಮೆರಾ ಸರಿಯಿಲ್ಲದಾಗ ಸೆಲ್ಫಿ ತೆಗೆಯಲು ಹಿಂಜರಿಯುತ್ತಾರೆ. ಇದೀಗ ಟೆಕ್​ ಕಂಪನಿಗಳು ಇದಕ್ಕಾಗಿಯೇ ಗುಣಮಟ್ಟದ ಕೆಲವು ಆ್ಯಪ್​ಗಳನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಆ ಆ್ಯಪ್​ಗಳು ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ

ಮುಂದೆ ಓದಿ ...
  • Share this:

    ಸ್ಮಾರ್ಟ್​ಫೋನ್​ಗಳನ್ನು (Smartphones) ಹೆಚ್ಚಿನ ಜನರು ಬಳಸುವುದೇ ಫೋಟೋಶೂಟ್ (Photoshoot) ಮಾಡಲು. ಹೆಚ್ಚಿನ ಜನರು ಯಾವುದೇ ಸ್ಮಾರ್ಟ್​​ಫೋನ್​ಗಳನ್ನು ಖರೀದಿಸುವಾಗ ಅದರ ಫೀಚರ್ಸ್​​ಗಳಲ್ಲಿ ಮೊದಲು ನೋಡುವುದೇ ಅದರ ಕ್ಯಾಮೆರಾ ಹೇಗಿದೆ ಎಂದು. ಇತ್ತೀಚೆಗೆ ಟೆಕ್ನಾಲಜಿ ಬಹಳಷ್ಟು ಬದಲಾವಣೆಯಾಗಿದೆ. ಜನರ ಬೇಡಿಕೆಗೆ ಅನುಗುಣವಾಗಿ ಈ ಕಂಪನಿಗಳು ಕೂಡ ಉತ್ತಮ ಕ್ಯಾಮೆರಾ ಹೊಂದಿದ ಸ್ಮಾರ್ಟ್​​ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಆದರೆ ಇನ್ನೂ ಕೆಲವು ತಂತ್ರಜ್ಞಾನ ಕಂಪನಿಗಳು ಕ್ಯಾಮೆರಾ (Camera) ಎಷ್ಟೇ ಗುಣಮಟ್ಟದಲ್ಲಿ ಇಲ್ಲದಿದ್ದರೂ ಫೋಟೋಗಳು ಉತ್ತಮವಾಗಿ ಕಾಣುವಂತೆ ಮಾಡಲು ಆ್ಯಪ್​ಗಳನ್ನು ಬಿಡುಗಡೆ ಮಾಡಿದೆ. ಅದ್ರಲ್ಲೂ ಸೆಲ್ಫಿಗಾಗಿ (Selfie Apps) ಸಾಕಷ್ಟು ಆ್ಯಪ್​​ಗಳು ಬಿಡುಗಡೆಯಾಗಿದೆ ಅಂತಾನೇ ಹೇಳ್ಬಹುದು. ಈ ಮೂಲಕ ಬಳಕೆದಾರರಿಗೆ ಬೇಕಾದ ರೀತಿಯಲ್ಲಿ ಫೋಟೋ ತೆಗೆದುಕೊಳ್ಳಬಹುದು. ರೀ ಎಡಿಟ್​ ಮಾಡುವಂತಹ ಅವಕಾಶವಿರುವುದಿಲ್ಲ.


    ಸೆಲ್ಫಿ ಅಂದ್ರೆ ಯಾರಿಗರ ಇಷ್ಟ ಇಲ್ಲ ಹೇಳಿ. ಆದರೆ ಕೆಲವೊಂದು ಬಾರಿ ಮೊಬೈಲ್ ​ಕ್ಯಾಮೆರಾ ಸರಿಯಿಲ್ಲದಾಗ ಸೆಲ್ಫಿ ತೆಗೆಯಲು ಹಿಂಜರಿಯುತ್ತಾರೆ. ಇದೀಗ ಟೆಕ್​ ಕಂಪನಿಗಳು ಇದಕ್ಕಾಗಿಯೇ ಗುಣಮಟ್ಟದ ಕೆಲವು ಆ್ಯಪ್​ಗಳನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಆ ಆ್ಯಪ್​ಗಳು ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.


    ಬ್ಯೂಟಿಪ್ಲಸ್​ ಕ್ಯಾಮ್​


    ಈ ಬ್ಯೂಟಿಪ್ಲಸ್​ ಕ್ಯಾಮ್​ ಆ್ಯಪ್​ ಬಹಳ ಹಿಂದಿನಿಂದ ಇರುವಂತಹ ಜನಪ್ರಿಯ ಆ್ಯಪ್​ ಆಗಿದೆ. ಇದರ ಹೆಸರೇ ಹೇಳುವಂತೆ ಇದು ನಿಮ್ಮ ಫೋಟೋವನ್ನು ಇನ್ನಷ್ಟು ಅಂದವಾಗಿ ಕಾಣುವಂತೆ ಮಾಡುತ್ತದೆ. ಈ ಆ್ಯಪ್​ ಐಓಎಸ್​​ ಮತ್ತು ಆಂಡ್ರಾಯ್ಡ್​ ಬಳಕೆದಾರರಿಗೆ ಎರಡರಲ್ಲೂ ಲಭ್ಯವಿದೆ. ಇದು ಬಳಕೆದಾರರ ಫೇಸ್​ಗೆ ಫಿಲ್ಟರ್​ ತುಂಬುವ ಮೂಲಕ ಇನ್ನಷ್ಟು ಅಂದಗಾಣುವಂತೆ ಮಾಡುತ್ತದೆ.


    ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಡ್ತಿದೆ 39 ಗಂಟೆಗಳ ಬ್ಯಾಟರಿ ಬ್ಯಾಕಪ್​ ಹೊಂದಿದ ಇಯರ್​​ಬಡ್ಸ್​!


    ಸ್ನೋ ಆ್ಯಪ್​


    ಸೆಲ್ಫಿ ಪ್ರಿಯರಿಗಾಗಿ ಸ್ನೋ ಆ್ಯಪ್​ ಉತ್ತಮವಾದ ಆಯ್ಕೆಯಾಗಿದೆ. ಯಾಕೆಂದರೆ ಇದರಲ್ಲಿ ಸೆಲ್ಫಿ ತೆಗೆದ ಫೋಟೋಗಳನ್ನು ಎಡಿಟ್​ ಮಾಡುವಂತಹ ಅವಕಾಶವಿದೆ. ಇದರಲ್ಲಿ ಕಸ್ಟಮ್ ಬ್ಯೂಟಿ ಟೂಲ್ಸ್‌ಗಳನ್ನು ಹೊಂದಿದ್ದು, ಎಆರ್​ ಮೇಕಪ್ ಫೀಚರ್ಸ್‌ಗಳನ್ನು ಬಳಸಲು ಬಳಕೆದಾರರಿಗೆ ಅನುಮತಿಸಲಿದೆ. ಇದಲ್ಲದೆ ಈ ಆ್ಯಪ್‌ನಲ್ಲಿ ಸ್ಟಿಕ್ಕರ್‌ಗಳು ಮತ್ತು ಎಫೆಕ್ಟ್‌ಗಳ ಬಿಗ್‌ ಕ್ಯಾಟ್‌ಲಾಗ್‌ ಅನ್ನು ಕೂಡ ಅಳವಡಿಸಲಾಗಿದೆ. ಈ ಮೂಲಕ ನಿಮ್ಮ ಫೋಟೋಗಳಿಗೆ ನಿಮಗೆ ಬೇಕಾದ ಎಮೋಜಿ, ಸ್ಟಿಕ್ಕರ್ಸ್​​ಗಳನ್ನು ಆ್ಯಡ್​ ಮಾಡಬಹುದು. ಇದು ಐಓಎಸ್​ ಮತ್ತು ಆಂಡ್ರಾಯ್ಡ್​ ಸಾಧನಗಳಲ್ಲಿ ಎರಡರಲ್ಲೂ ಲಭ್ಯವಿದೆ.


    ಸಾಂಕೇತಿಕ ಚಿತ್ರ


    ಬಿ612 ಆ್ಯಪ್​


    ಸ್ವತಃ ಆಲ್-ಇನ್-ಒನ್ ಕ್ಯಾಮೆರಾ ಹೊಂದಿರುವ ಈ ಆ್ಯಪ್‌ ಕೂಡ ಫೇಸ್‌ ಫಿಲ್ಟರ್‌ ಆ್ಯಪ್‌ಗಳಲ್ಲಿ ಒಂದಾಗಿದೆ. ಈ ಬಿ 612 ಆ್ಯಪ್​ ಕೂಡ ನಿಮ್ಮ ಫೋಟೋಗಳನ್ನು ಅಂದಗಾಣಿಸುವಂತಹ ಟೂಲ್ಸ್ ಅನ್ನು ಹೊಂದಿದೆ. ಈ ಆ್ಯಪ್​ ಉಪಯೋಗಿಸಿ ಫೋಟೋ ತೆಗೆಯಬಹುದಾಗಿದೆ. ಜೊತೆಗೆ ಇದನ್ನು ಮತ್ತೆ ಎಡಿಟ್​ ಮಾಡುವಂತಹ ಸಂದರ್ಭಗಳು ಬರುವುದಿಲ್ಲ. ಈ ಆ್ಯಪ್​ನಲ್ಲಿ "ಸ್ಮಾರ್ಟ್ ಬ್ಯೂಟಿ" ಎಂಬ ಫೀಚರ್ಸ್‌ ಬಳಸಿ ನಿಮ್ಮ ಫೋಟೋ ಆಕರ್ಷಕವಾಗಿ ಕಾಣುವಂತೆ ಕ್ಲಿಕ್ ಮಾಡಬಹುದಾಗಿದೆ. ಜೊತೆಗೆ ಇದರಲ್ಲಿ ಫೊಟೋ ತೆಗೆಯುವಾಗ ನಿಮಗೆ ಬೇಕಾದ ಕಲರ್​, ಫಿಲ್ಟರ್​​ಗಳನ್ನು ಸೆಲೆಕ್ಟ್​ ಮಾಡುವ ಅವಕಾಶವೂ ಇದೆ.


    ಡೀಪ್​ ಸೆಲ್ಫಿ ಆ್ಯಪ್​


    ಡೀಪ್‌ಸೆಲ್ಫಿ ಆ್ಯಪ್‌ನಲ್ಲಿ ನಿಮ್ಮ ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗೆ ಅನೇಕ ಎಫೆಕ್ಟ್‌ಗಳನ್ನು ಆ್ಯಡ್​ ಮಾಡಬಹುದು. ಇದರಲ್ಲಿ 3ಡಿ ಯಂತಹ ಫೇಸ್ ಫಿಲ್ಟರ್‌ಗಳನ್ನು ಆ್ಯಡ್​ ಮಾಡಬಹುದಾಗಿದೆ. ಜೊತೆಗೆ ಫೇಸ್ ಸ್ವಾಪ್‌ಗಳು, ಮೇಕಪ್ ಸೆಟ್ಟಿಂಗ್​ಗಳು ಮತ್ತು ಫೋಟೋ ಎಡಿಟರ್ ಫಿಲ್ಟರ್‌ಗಳನ್ನು ಸೆಲೆಕ್ಟ್​ ಮಾಡಿ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇದರಲ್ಲಿರುವ ಲೈವ್ ಫೇಸ್ ಮಾಸ್ಕ್ ಫೀಚರ್​​​ ಕಾಮಿಕ್‌ ಫೇಸ್‌ಗಳು, ಹೀರೋ ಮಾಸ್ಕ್‌ಗಳು ಮತ್ತು ವಿಭಿನ್ನ ಮುಖವಾಡಗಳನ್ನು ಆ್ಯಡ್​ ಮಾಡಿ ಫೋಟೋ ತೆಗೆಯಲು ಅನುಮತಿಸುತ್ತದೆ.


    ಸಾಂಕೇತಿಕ ಚಿತ್ರ


    ಯೂಕ್ಯಾಮ್​ ಪರ್ಫೆಕ್ಟ್​​


    ಯೂಕ್ಯಾಮ್‌ ಪರ್ಫೆಕ್ಟ್‌ ಆ್ಯಪ್‌ ಜನಪ್ರಿಯ ಫೇಸ್ ಫಿಲ್ಟರ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ಸಿಂಗಲ್‌ ಟ್ಯಾಪ್ ಸೆಲ್ಫಿ ಬ್ಯೂಟಿಫಿಕೇಶನ್ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದರಲ್ಲಿ ಕೂಡ ನಿಮ್ಮ ಮುಖದ ಬಣ್ಣವನ್ನು ಇನ್ನಷ್ಟು ಕಲರ್‌ಫುಲ್‌ ಆಗಿ ಕಾಣುವಂತೆ ಮಾಡಬಹುದು. ಇದರಲ್ಲಿ ಮ್ಯಾಜಿಕ್ ಬ್ರಷ್ ಅನ್ನು ಕೂಡ ನೀಡಲಾಗಿದ್ದು, ಇದನ್ನು ಟ್ಯಾಪ್‌ ಮಾಡಿದರೆ ನಿಮಗೆ ಎಲ್ಲಿ ಬೇಕೋ ಅಲ್ಲಿ ಕಲರ್‌ ಅನ್ನು ಆ್ಯಡ್​ ಮಾಡಬಹುದು. ಜೊತೆಗೆ ಸೆಲ್ಫಿಗಳಿಗೆ ಫ್ರೇಮ್‌ಗಳನ್ನು ಸೇರಿಸುವ ಮೂಲಕ ನಿಮ್ಮ ಫೋಟೋಗಳನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದಾಗಿದೆ.

    Published by:Prajwal B
    First published: