ಇ-ಕಾಮರ್ಸ್ ಸೈಟ್‌ಗಳಲ್ಲಿ (E- Commerce Site) ಪ್ರಮುಖವಾಗಿರುವ ಅಮೆಜಾನ್ ಈಗಾಗಲೇ ಫೆಸ್ಟಿವಲ್ ಸೇಲ್ (Festival Site) ಸೇರಿದಂತೆ ಇನ್ನಿತರೆ ಸಂದರ್ಭದಲ್ಲಿ ಗ್ಯಾಜೆಟ್‌ಗಳಿಗೆ (Gadget) ಭರ್ಜರಿ ಆಫರ್ ಘೋಷಣೆ (Offer) ಮಾಡಿತ್ತು. ಇದರಲ್ಲಿ ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್ ಹಾಗೂ ಇನ್ನಿತರೆ ಡಿವೈಸ್‌ಗಳು ಹೆಚ್ಚಿನ ರಿಯಾಯಿತಿ ಮತ್ತು ಆಫರ್ ನೀಡಲಾಗಿತ್ತು. ಇದೀಗ ಅಮೆಜಾನ್ ಗ್ರಾಹಕರಿಗೆ (Amazon Customer) ಮತ್ತೊಂದು ಸಖತ್ ಆಫರ್ ಒಂದನ್ನು ಘೋಷಣೆ ಮಾಡಿದೆ. ಅದೇನಂದ್ರೆ ಅಮೆಜಾನ್ ಇ- ಕಾಮರ್ಸ್ ತಾಣದ ಜೊತೆಗೆ ಓಟಿಟಿ ಪ್ಲಾಟ್‌ಫಾರ್ಮ್ ಆಗಿಯೂ ಸೇವೆ ನೀಡುತ್ತಿದೆ. ಇದರ ನಡುವೆ ಈಗ ಪ್ರತಿಸ್ಪರ್ಧಿ ಕಂಪೆನಿಗಳಿಗೆ (Company)ಪೈಪೋಟಿ ನೀಡಲು ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನಲ್ಲಿ ಉಚಿತ ಸಬ್ಸ್ಕ್ರಿಪ್ಷನ್ (Subscription) ನೀಡಲು ಮುಂದಾಗಿದೆ. ಈ ಉಚಿತ ಸೇವೆ ಪಡೆದುಕೊಳ್ಳಲು ನೀವು ಏನು ಮಾಡಬೇಕು ಅನ್ನೋದನ್ನ ಮೊದಲು ನೋಡಿ.
ಅಮೆಜಾನ್ ಇಂಡಿಯಾ ಗ್ರಾಹಕರಿಗೆ ಹೊಸ ಕೊಡುಗೆ ನೀಡಿದ್ದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ನಲ್ಲಿ ಇಯರ್‌ಫೋನ್, ಹೆಡ್‌ಫೋನ್ ಲ್ಯಾಪ್‌ಟಾಪ್ , ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನ್, ಟಿವಿ, ಕೂಲರ್, ಎಸಿ, ಫ್ರಿಡ್ಜ್, ಸೇರಿದಂತೆ ವಿವಿಧ ಆಯ್ದ ಎಲೆಕ್ಟ್ರಾನಿಕ್ ಉತ್ಪನ್ನಗಳ ಖರೀದಿಯ ಮೇಲೆ ಉಚಿತ ಮ್ಯೂಸಿಕ್ ಸ್ಟ್ರೀಮಿಂಗ್ ಸಬ್ಸ್ಕ್ರಿಪ್ಷನ್ ನೀಡಲು ಮುಂದಾಗಿದೆ.
ಉಚಿತ ಸ್ಪಾಟಿಫೈ
ಅಮೆಜಾನ್‌ನಲ್ಲಿ ಆಯ್ದ ಆಡಿಯೋ ಹಾಗೂ ವಿಡಿಯೋ ಡಿವೈಸ್‌ಗಳನ್ನು ಖರೀದಿ ಮಾಡಿದರೆ ಆರು ತಿಂಗಳವರೆಗೆ ಉಚಿತವಾಗಿ ಸ್ಪಾಟಿಫೈ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಪಡೆಯಬಹುದಾಗಿದೆ. ಇದು ಒಂದೇ ಬಳಕೆದಾರ ಪ್ಲ್ಯಾನ್ ಆಗಿದ್ದು, ನೀವು ಖಾಸಗಿಯಾಗಿ ಪ್ಲ್ಯಾನ್ ಖರೀದಿ ಮಾಡಬೇಕು ಎಂದುಕೊಂಡರೆ ತಿಂಗಳಿಗೆ 129 ರೂ. ಗಳನ್ನು ಪಾವತಿ ಮಾಡಬೇಕಿದೆ.
ಆಫರ್ ಪಡೆಯುವ ಮುಂಚೆ ಈ ರೂಲ್ಸ್ ನೆನಪಿಟ್ಟುಕೊಳ್ಳಿ
ಅಮೆಜಾನ್ ಈ ಆಫರ್‌ಗೆ ಕೆಲವು ನಿಯಮಗಳನ್ನು ರೂಪಿಸಿದೆ. ಅದರಂತೆ ಆಯ್ದ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಮೊಬೈಲ್ ಡಿವೈಸ್, ಹೆಡ್‌ಫೋನ್, ಸ್ಪೀಕರ್‌ಗಳನ್ನು ಖರೀದಿಸಬೇಕಿದೆ. ಹಾಗೆಯೇ 1,000 ರೂ. ಗಳಿಂದ 5,000 ರೂ. ವರೆಗಿನ ಡಿವೈಸ್‌ಗಳನ್ನು ಖರೀದಿ ಮಾಡಿದರೆ ಮೂರು ತಿಂಗಳ ವರೆಗೆ ಸ್ಪಾಟಿಫೈ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ 5,000ರೂ. ಗಳಿಗೂ ಮೇಲ್ಪಟ್ಟ ಡಿವೈಸ್‌ಗಳನ್ನು ಖರೀದಿ ಮಾಡಿದರೆ ಆರು ತಿಂಗಳ ಉಚಿತ ಸ್ಪಾಟಿಫೈ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಪಡೆದುಕೊಂಡು ಉತ್ತಮ ಕ್ವಾಲಿಟಿಯ ಆಡಿಯೋ ಕೇಳಬಹುದಾಗಿದೆ.
ಇದನ್ನೂ ಓದಿ: Wikipedia: ವಿಕಿಪೀಡಿಯಾದಲ್ಲಿ ಕನ್ನಡ ಭಾಷೆಯ ನಿರ್ಲಕ್ಷ್ಯ- ಕನ್ನಡಿಗರ ಆಕ್ರೋಶ
ಆಫರ್ ಅವಧಿ ನೋಡಿಕೊಳ್ಳಿ
ಅಮೆಜಾನ್‌ನ ಈ ಆಫರ್‌ನಲ್ಲಿ ಸ್ಪಾಟಿಫೈ ಉಚಿತ ಚಂದಾದಾರಿಕೆ ಪಡೆಯಲು ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಅಕ್ಟೋಬರ್ 24 ರಂದು ಪ್ರಾರಂಭವಾಗಿ ನವೆಂಬರ್ 30 ರ ವರೆಗೆ ಇರಲಿದೆ. ಈ ದಿನಾಂಕದ ಒಳಗೆ ಅಮೆಜಾನ್‌ನಲ್ಲಿ ಆಯ್ದ ಆಡಿಯೋ ಹಾಗೂ ವಿಡಿಯೋ ಸಂಬಂಧಿತ ಗ್ಯಾಜೆಟ್‌ಗಳನ್ನು ಖರೀದಿ ಮಾಡಿದರೆ ಈ ಆಫರ್ ಅನ್ವಯ ಆಗಲಿದೆ.
ಈ ಆಫರ್ ಯಾರಿಗೆ ಲಭ್ಯ ಗೊತ್ತಾ?
ಈ ಆಫರ್ ಅಮೆಜಾನ್‌ನಲ್ಲಿ ಖರೀದಿ ಮಾಡುವ ಎಲ್ಲಾ ಗ್ರಾಹಕರಿಗೂ ಅನ್ವಯ ಆಗುವುದಿಲ್ಲ ಹಾಗೆಯೇ ಈ ಮೊದಲೇ ಸ್ಪಾಟಿಫೈ ಸಬ್ಸ್ಕ್ರಿಪ್ಷನ್ ಇರುವವರಿಗೂ ಈ ಆಫರ್ ಸೌಲಭ್ಯ ಸಿಗುವುದಿಲ್ಲ. ಯಾರು ಈ ಮೊದಲು ಸ್ಪಾಟಿಫೈ ಉಚಿತ ಸಬ್ಸ್ಕ್ರಿಪ್ಷನ್ ಪಡೆದಿರುವುದಿಲ್ಲವೋ ಅವರಿಗೆ ಮಾತ್ರ ಈ ಆಫರ್ ಅನ್ವಯ ಆಗಲಿದೆ. ಈ ಸೇವೆ ಪಡೆದುಕೊಳ್ಳಲು ಕಡ್ಡಾಯವಾಗಿ ನೀವು ಇ-ಮೇಲ್ ಖಾತೆಯನ್ನು ನಮೂದು ಮಾಡಬೇಕಿದೆ.
ಸ್ಪಾಟಿಫೈ ಆಪ್ ನಲ್ಲಿ ಈ ಹಿಂದೆ ಅಂದರೆ, ಅಂದರೆ ದೀಪಾವಳಿ ಸಂದರ್ಭದಲ್ಲಿ ಗ್ರಾಹಕರಿಗೆ ಉಚಿತ ಆಫರ್ ನೀಡಿತ್ತು. ಜಾಹಿರಾತು ಮುಕ್ತ ಸ್ಟ್ರೀಮಿಂಗ್ ಗಾಗಿ ನಾಲ್ಕು ತಿಂಗಳ ವರೆಗೆ ಉಚಿತ ಪ್ರೀಮಿಯಂ ಸೇವೆಯನ್ನು ನೀಡಿತ್ತು. ಅದರಲ್ಲೂ ಪ್ರಮುಖವಾಗಿ ಈ ಆಫರ್ ಕೇವಲ ಭಾರತೀಯರಿಗೆ ಮಾತ್ರ ಅನ್ವಯ ಮಾಡಲಾಗಿದ್ದು, ನಾಲ್ಕು ತಿಂಗಳ ನಂತರ ತಿಂಗಳಿಗೆ 119ರೂ. ಗಳನ್ನು ಪಾವತಿ ಮಾಡಬೇಕು ಎಂದು ತಿಳಿಸಿತ್ತು. ಜೊತೆಗೆ ಬೇಡವಾದರೆ ಚಂದಾದಾರಿಕೆ ರದ್ದು ಮಾಡಬಹುದಾದ ಆಯ್ಕೆಯನ್ನೂ ಸಹ ನೀಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ