ಅಮೆಜಾನ್​ಗೆ ಸೆಡ್ಡು: ವಾಲ್​​ಮಾರ್ಟ್ ತಕ್ಕೆಗೆ ​ಫ್ಲಿಪ್​ಕಾರ್ಟ್​


Updated:May 9, 2018, 5:47 PM IST
ಅಮೆಜಾನ್​ಗೆ ಸೆಡ್ಡು: ವಾಲ್​​ಮಾರ್ಟ್ ತಕ್ಕೆಗೆ ​ಫ್ಲಿಪ್​ಕಾರ್ಟ್​
The logo of Indian e-commerce firm Flipkart is seen at the company's office in Bengaluru, April 12, 2018. REUTERS/Abhishek N. Chinnappa/Files

Updated: May 9, 2018, 5:47 PM IST
ನ್ಯೂಸ್​ 18 ಕನ್ನಡ

ನವದೆಹಲಿ: ಭಾರತದ ಜನಪ್ರಿಯ ಇ-ಕಾಮರ್ಸ್​ ಮಾರುಕಟ್ಟೆ ಫ್ಲಿಪ್​ಕಾರ್ಟ್​ನ ಬಹುಪಾಲು ಷೇರು​ಗಳನ್ನು ಅಮೆರಿಕದ ಮತ್ತೊಂದು ಇ-ಕಾಮರ್ಸ್​ ದೈತ್ಯ ವಾಲ್​ ಮಾರ್ಟ್​ ಖರೀದಿಸಿದೆ. ಈ ಕುರಿತು ಈಗ ಅಧಿಕೃತ ಘೋಷಣೆ ಹೊರ ಬಿದ್ದಿದೆ.
ಫ್ಲಿಪ್​ಕಾರ್ಟ್​ ಮಾರಾಟ ಪ್ರಕ್ರಿಯೆ ಕಳೆದ ರಾತ್ರಿಯೇ ಪೂರ್ಣಗೊಂಡಿದ್ದು, ಈ ಖರೀದಿಗೆ ವಾಲ್ ​ಮಾರ್ಟ್​ ಒಪ್ಪಿಗೆ ಸೂಚಿಸಿದೆ ಎಂದು ಫ್ಲಿಪ್​ಕಾರ್ಟ್​ ಸಂಸ್ಥೆಯಲ್ಲಿ ಶೇ.20ರಷ್ಟು ಷೇರು ಹೊಂದಿರುವ ಸಾಫ್ಟ್​ಬ್ಯಾಂಕ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಸಯೊಶಿ ಸನ್​ ಮಾಧ್ಯಮಗಳಿಗೆ ಹೇಳಿದ್ದಾರೆ.

ವಾಲ್ ​ಮಾರ್ಟ್​​ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಡೌಗ್ ಮ್ಯಾಕ್​ಮಿಲ್ಲನ್ ಬೆಂಗಳೂರಿನಲ್ಲಿರುವ ಫ್ಲಿಪ್​ಕಾರ್ಟ್​ ಮುಖ್ಯ ಕಚೇರಿಗೆ  ಭೇಟಿ ನೀಡಿದ್ದು, ಫ್ಲಿಪ್​ ಕಾರ್ಟ್ ನ ಶೇ.70ರಷ್ಟು ಪಾಲು ವಾಲ್​ಮಾರ್ಟ್ ಪಾಲಾಗಲಿದೆ. ವರದಿಗಳ ಪ್ರಕಾರ ಸುಮಾರು 15 ಬಿಲಿಯನ್​ ಡಾಲರ್​ಗೆ ಫ್ಲಿಪ್​ಕಾರ್ಟ್​ ಖರೀದಿ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ.

ಅಮೆಜಾನ್​ಗೆ ಸೆಡ್ಡು ಹೊಡೆಯಲು ಈ ಒಪ್ಪಂದ ನಡೆದಿದ್ದು, ಇದೊಂದು ಅತಿ ದೊಡ್ಡ ಇ – ಕಾಮರ್ಸ್​  ಸ್ವಾಧೀನವಾಗಿದೆ ಎಂಬುದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವಾರ ಶೇ 75% ರಷ್ಟು ಪಾಲನ್ನು ವಾಲ್​ಮಾರ್ಟ್ ಸಂಸ್ಥೆಗೆ ಮಾರಾಟ ಮಾಡಲು ಫ್ಲಿಪ್​ಕಾರ್ಟ್​ ಒಪ್ಪಿಗೆ ನೀಡಿತ್ತು.
First published:May 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ