ಇದುವೇ ವಿಶ್ವದ ಅತಿ ವೇಗದ ಎಲೆಕ್ಟ್ರಿಕ್​ ಬೈಕ್; ಗಂಟೆಗೆ ಎಷ್ಟು ಸ್ಪೀಡ್​ ಕ್ರಮಿಸುತ್ತೆ ಗೊತ್ತಾ?

ವೋಕ್ಸನ್​ ವಾಟ್​​ಮ್ಯಾನ್

ವೋಕ್ಸನ್​ ವಾಟ್​​ಮ್ಯಾನ್

Voxan Wattman electric motorcycle: ಇತ್ತೀಚೆಗೆ ಇವೆಂಟ್​​ ಒಂದರಲ್ಲಿ ಭಾಗವಹಿಸಿದ್ದ ವೋಕ್ಸನ್​ ವಾಟ್​​ಮ್ಯಾನ್​ ಎಲೆಕ್ಟ್ರಿಕ್​ ಮೋಟಾರ್​ಸೈಕಲ್  ಗಂಟೆಗೆ 408ಕಿ.ಮೀ ವೇಗವನ್ನು ಕ್ರಮಿಸಿದೆ. ಮಾತ್ರವಲ್ಲದೆ, ಐದು ವಿಶ್ವದಾಖಲೆಯನ್ನು ಬರೆದಿದೆ. ಆರು ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಮುಂದೆ ಓದಿ ...
  • Share this:

    ಇಂಧನ ಬಳಕೆಯ ವಾಹನಕ್ಕಿಂತ ಬ್ಯಾಟರಿ ಚಾಲಿತ ವಾಹನಗಳು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿಲ್ಲ ಎಂಬುದು ಹಲವರ ಅನಿಸಿಕೆ. ಆದರೆ ವೋಕ್ಸನ್​ ವಾಟ್​​ಮ್ಯಾನ್​ ಎಲೆಕ್ಟ್ರಿಕ್​ ಮೋಟಾರ್​ಸೈಕಲ್​ ಆ ಅನಿಸಿಕೆಯನ್ನು ಅಲ್ಲಗೆಳೆದಿದೆ.


    ಇತ್ತೀಚೆಗೆ ಇವೆಂಟ್​​ ಒಂದರಲ್ಲಿ ಭಾಗವಹಿಸಿದ್ದ ವೋಕ್ಸನ್​ ವಾಟ್​​ಮ್ಯಾನ್​ ಎಲೆಕ್ಟ್ರಿಕ್​ ಮೋಟಾರ್​ಸೈಕಲ್  ಗಂಟೆಗೆ 408ಕಿ.ಮೀ ವೇಗವನ್ನು ಕ್ರಮಿಸಿದೆ. ಮಾತ್ರವಲ್ಲದೆ, ಐದು ವಿಶ್ವದಾಖಲೆಯನ್ನು ಬರೆದಿದೆ. ಆರು ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.


    ಆರು ಬಾರಿ ಮೋಟಾರ್​ಸೈಕಲ್​ ರೇಸಿಂಗ್​ನಲ್ಲಿ ಚಾಂಪಿಯನ್​ ಪಟ್ಟವನ್ನು ಪಡೆದಿದ್ದ ಮ್ಯಾಕ್ಸ್​​​ ಬಿಯಾಗಿಯನ್ನು ವೋಕ್ಸನ್​ ವಾಟ್​ಮ್ಯಾನ್​ ಹಿಂದೆಗೆ ಸರಿಸಿದೆ. ಫ್ರಾನ್ಸ್​ನ ಚೇಟೌರೊಕ್ಸ್​ ಏರ್​​ಫೀಲ್ಡ್​ನಲ್ಲಿ ವೇಗವಾಗಿ ಕ್ರಮಿಸುವ ಮೂಲಕ ಪ್ರಶಂಸೆ ಗಿಟ್ಟಿಸಿಕೊಂಡಿದೆ.  ಸದ್ಯ ಜನರನ್ನು ಎಲೆಕ್ಟ್ರಿಕ್​ ವಾಹನಗಳತ್ತ ತಿರುಗಿನೋಡುವಂತೆ ಮಾಡಿದೆ.


    ಎಲೆಕ್ಟ್ರೆಕ್​​​ ವರದಿ ಮಾಡಿದ ಪ್ರಕಾರ, ಕ್ವಾರ್ಟರ್​​​ ಮೈಲ್​ ಸ್ಯಾಂಡ್​ ಸ್ಟಾರ್ಟ್​​​ ವೇಳೆ 126.02kmph ಕ್ರಮಿಸಿದೆ. ಕ್ವಾರ್ಟರ್​​ ಮೈಲ್​ ಸ್ಟಾರ್ಟ್​ ಟಾಪ್​ ಸ್ಟೀಡ್ ವೇಳೆ 394.45kmph​ ಕ್ರಮಿಸಿದೆ. ಇನ್ನು ಕ್ವಾಟರ್​ಮೈಲ್​, ಫ್ಲೈಯಿಂಗ್​ ಸ್ಟಾರ್ಟ್​​, ಟಾಪ್​​ ಸ್ಪೀಡ್​ ನೋಡಿದಾಗ 357kmph​ ಕ್ರಮಿಸಿದೆ ಎಂದು ತಿಳಿಸಿದೆ.




    ವೋಕ್ಸನ್​ ವಾಟ್​​ಮ್ಯಾನ್​ ತಂಡ ಅನೇಕ ದಾಖಲೆಯನ್ನುತನ್ನದಾಗಿಸಿಕೊಂಡಿದೆ. 2019ರಲ್ಲಿ ಸಲಾರ್​ ಡಿ ಉಯುನಿ ಸಾಲ್ಟ್​​​ ಫ್ಲಾಟ್​ನಲ್ಲಿ ಈ ಇವೆಂಟ್​ ನಡೆಯಬೇಕಾಗಿತ್ತು. ಆದರೆ ಕೊರೋನಾದಿಂದಾಗಿ ಕಾಯಕ್ರಮವನ್ನು ಮುಂದೂಡಬೇಕಾದ ಅನಿವಾರ್ಯತೆ ಎದುರಾಯಿತು. ಇದೀಗ 2020 ಅಂತ್ಯದ ವೇಳೆಗೆ ಫ್ರಾನ್ಸ್​ ನಲ್ಲಿ ಇವೆಂಟ್​ ನಡೆಸಿದರು.

    Published by:Harshith AS
    First published: