Volkswagen Taigun: ಇಂದು ದೇಶಿಯ ಮಾರುಕಟ್ಟೆಗೆ ವೋಕ್ಸ್​ವ್ಯಾಗನ್​ ಟೈಗುನ್ ಕಾರು; ಬೆಲೆ, ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ

Volkswagen Taigun ಭಾರತದಲ್ಲಿ ಉದ್ದದ ವೀಲ್‌ಬೇಸ್ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಆಕರ್ಷಕ ಲುಕ್​ ಹೊಂದಿದ್ದು ಉದ್ದವಾದ ವೀಲ್‌ಬೇಸ್, ಹಿಂಭಾಗದಲ್ಲಿ ವಿಶಾಲವಾದ ಆಸನಗಳನ್ನು ನೀಡಿದೆ.

Volkswagen Taigun

Volkswagen Taigun

 • Share this:
  ವೋಕ್ಸ್​ವ್ಯಾಗನ್​ ಸಂಸ್ಥೆ ನೂತನ ಟೈಗುನ್​ ಕಾರನ್ನು ಸಿದ್ಧಡಿಸಿದ್ದು, ಇಂದು ಭಾರತೀಯ ಮಾರುಕಟ್ಟೆಗೆ  ಪರಿಚಯಿಸುತ್ತಿದೆ. ನೂತನ ಕಾರು ಸ್ಕೋಡಾ ಕುಶಾಕ್, ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮೊದಲಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಫರ್ಧಿಯಾಗಿದೆ. ಆಕರ್ಷಕ ಲುಕ್​ ಹಾಗೂ ಗ್ರಾಹಕರ ನಿರೀಕ್ಷೆ ಮೀರಿಸಿ ಈ ಕಾರನ್ನು ಸಿದ್ಧಪಡಿಸಲಾಗಿದೆ. ಅಂದಹಾಗೆಯೇ ಇಂದು ಮಾರುಕಟ್ಟೆಗೆ ಧಾವಿಸುತ್ತಿರುವ ಟೈಗುನ್ ಕಾರಿನ ವಿಶೇಷತೆ ಹೇಗಿದೆ? ಬೆಲೆ ಎಷ್ಟು? ಇದರ ಬಗ್ಗೆ ತಿಳಿಯೋಣ..

  ವೋಕ್ಸ್‌ವ್ಯಾಗನ್ ಟೈಗುನ್ ಭಾರತದಲ್ಲಿ ಉದ್ದದ ವೀಲ್‌ಬೇಸ್ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಆಕರ್ಷಕ ಲುಕ್​ ಹೊಂದಿದ್ದು ಉದ್ದವಾದ ವೀಲ್‌ಬೇಸ್, ಹಿಂಭಾಗದಲ್ಲಿ ವಿಶಾಲವಾದ ಆಸನಗಳನ್ನು ನೀಡಿದೆ.

  ಟೈಗುನ್​ ಕಾರಿನ ಕ್ಯಾಬಿನ್‌ನ ಒಳಗೆ ಒಂದು ವಿಶಿಷ್ಟ ಆಕಾರದ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ವೈರ್‌ಲೆಸ್ ಚಾರ್ಜರ್, ಸನ್‌ರೂಫ್ ಜೊತೆಗೆ ಇತರ ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ.

  ಗ್ರಾಹಕರಿಗಾಗಿ ಎರಡು ಇಂಜಿನ್ ಆಯ್ಕೆಗಳಲ್ಲಿ ಸಿಗಲಿದೆ. 1.0-ಲೀಟರ್ TSI ಪೆಟ್ರೋಲ್ ಮತ್ತು 1.5-ಲೀಟರ್ TSI ಪೆಟ್ರೋಲ್ ಯುನಿಟ್, ಎರಡು ವೇರಿಯಂಟ್​ ಕಾರುಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ವೋಕ್ಸ್‌ವ್ಯಾಗನ್ ಟೈಗುನ್ ಕಾರಿನಲ್ಲಿ 6-ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ ವೈಶಿಷ್ಟ್ಯಗಳನ್ನು ನೀಡಿದೆ.  ವೋಕ್ಸ್‌ವ್ಯಾಗನ್ ಟೈಗುನ್ ದೈತ್ಯ ಕಂಪನಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಹೊಸದಾಗಿ ಪ್ರಾರಂಭಿಸಿದ ಸ್ಕೋಡಾ ಕುಶಾಕ್ ವಿರುದ್ಧ ಹೋರಾಡಲಿದೆ. ಕಳೆದ ಮೂರು ವರ್ಷಗಳಿಂದ ಕಂಪನಿ ಟೈಗುನ್​ ಕಾರನ್ನು ಸಿದ್ಧಪಡಿಸುತ್ತಾ ಬಂದಿದೆ. ಇದೀಗ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹೊಸ ಕಾರನ್ನು ಪರಿಚಯಿಸಿದಂತಾಗಿದೆ

  ಅಂದಹಾಗೆಯೇ ನೂತನ ಟೈಗುನ್​ ಕಾರಿನ ಬೆಲೆ 10 ರಿಂದ 15 ಲಕ್ಷದವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

  ವೋಕ್ಸ್‌ವ್ಯಾಗನ್ ಟೈಗುನ್‌ಗೆ ಪೂರ್ವ-ಬುಕಿಂಗ್ ಈಗಾಗಲೇ ಮುಕ್ತವಾಗಿದೆ ಮತ್ತು ವಾಹನ ತಯಾರಕರು ಈಗಾಗಲೇ 10,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಮಾಡಿದ್ದಾರೆ ಎಂದು ವೋಜಸ್​ವ್ಯಾಗನ್​ ಧೃಡಪಡಿಸಿದೆ. ಕಂಪನಿ ಪ್ರತಿ ತಿಂಗಳು ಸುಮಾರು 6000 ಯುನಿಟ್ ಎಸ್‌ಯುವಿಯನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ ಮತ್ತು ಭವಿಷ್ಯದಲ್ಲಿ ಬೇಡಿಕೆಯ ಆಧಾರದ ಮೇಲೆ ಉತ್ಪಾದನೆಯನ್ನು ಕ್ರಮೇಣ ಹೆಚ್ಚಿಸಲಿದೆ.
  Published by:Harshith AS
  First published: