HOME » NEWS » Tech » VOLKSWAGEN OFFERING HEAVY DISCOUNTS OF UPTO RS 178 LAKH ON VENTO AND POLO CARS HG

Volkswagen: ವೆಂಟೊ ಮತ್ತು ಪೊಲೊ ಕಾರಿನ ಮೇಲೆ ಆಕರ್ಷಕ ಡಿಸ್ಕೌಂಟ್​; ಗ್ರಾಹಕರಿಗೆ 1.78 ಲಕ್ಷದವರೆಗೆ ಬೆನಿಫಿಟ್ಸ್​!

ಗ್ರಾಹಕ ಸ್ನೇಹಿಯಾದ ಈ ಸಂಸ್ಥೆ ಇದೀಗ ಕೆಲವು ಕಾರುಗಳ ಮೇಲೆ ಆಕರ್ಷಕ ಆಫರ್​ ಅನ್ನು ನೀಡಿದೆ. ಕೊರೋನಾ ಕಾಲಘಟ್ಟದಲ್ಲಿ ಕಡಿಮೆ ಬೆಲೆಗೆ ಕಾರು ಖರೀದಿಸುವ ಸೌಲಭ್ಯವನ್ನು ನೀಡಿದೆ.

news18-kannada
Updated:March 18, 2021, 9:57 AM IST
Volkswagen: ವೆಂಟೊ ಮತ್ತು ಪೊಲೊ ಕಾರಿನ ಮೇಲೆ ಆಕರ್ಷಕ ಡಿಸ್ಕೌಂಟ್​; ಗ್ರಾಹಕರಿಗೆ 1.78 ಲಕ್ಷದವರೆಗೆ ಬೆನಿಫಿಟ್ಸ್​!
polo GT
  • Share this:
ವೋಕ್ಸ್​​ವ್ಯಾಗನ್​ ಆಕರ್ಷಕ ಫೀಚರ್​ ಜೊತೆಗೆ ಸುರಕ್ಷತೆಗೆ ಅನುಗುಣವಾದ ಕಾರುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಗ್ರಾಹಕ ಸ್ನೇಹಿಯಾದ ಈ ಸಂಸ್ಥೆ ಇದೀಗ ಕೆಲವು ಕಾರುಗಳ ಮೇಲೆ ಆಕರ್ಷಕ ಆಫರ್​ ಅನ್ನು ನೀಡಿದೆ. ಕೊರೋನಾ ಕಾಲಘಟ್ಟದಲ್ಲಿ ಕಡಿಮೆ ಬೆಲೆಗೆ ಕಾರು ಖರೀದಿಸುವ ಸೌಲಭ್ಯವನ್ನು ನೀಡಿದೆ.

ವೋಕ್ಸ್​ವ್ಯಾಗನ್​ ವೆಂಟೊ ಮತ್ತು ಹ್ಯಾಚ್​ಬ್ಯಾಕ್ ಮಾಡೆಲ್​ ಪೊಲೊ ಕಾರಿನ ಖರೀದಿ ಮೇಲೆ ಬೆನಿಫಿಟ್ಸ್​ ನೀಡುತ್ತಿದೆ. ಮಾರ್ಚ್​ ತಿಂಗಳಾಂತ್ಯದವರೆಗೆ ಈ ಆಫರ್​ ಸಿಗಲಿದೆ. ಜೊತೆಗೆ ಎಕ್ಸ್​ಚೇಂಜ್​ ಮತ್ತು ಲಾಯಲ್ಟಿ ಬೋನಸ್​​ ನೀಡುತ್ತಿದೆ.

ವೋಕ್ಸ್​ವ್ಯಾಗನ್​ ವೆಂಟೊ

ಜರ್ಮನ್​ ಅಟೋಮೇಕರ್​ ವೋಕ್ಸ್​ವ್ಯಾಗನ್​ ತನ್ನ ಮಧ್ಯಮ-ಗಾತ್ರದ ಸೆಡಾನ್​ ಕಾರು ವೆಂಟೊ ಮೇಲೆ 69 ಸಾವಿರದಷ್ಟು ಡಿಸ್ಕೌಂಟ್​ ನೀಡಿದೆ. ಅಂತೆಯೇ ಮ್ಯಾನುಯೆಲ್​ ಟ್ರಾನ್ಸ್​ಮಿಶನ್​ ಮೇಲೆ 1.38 ಲಕ್ಷ ರೂ ನೀಡಿದೆ. ಸಂಭಾವ್ಯ ಖರೀದಿದಾರರು 40 ಸಾವಿರದಷ್ಟು ಬೆನಿಫಿಟ್ಸ್​ ಜೊತೆಗೆ ಒಟ್ಟು 1.78 ಲಕ್ಷ ರೂ ಪಡೆಯಲಿದ್ದಾರೆ.

ವೋಕ್ಸ್​ವ್ಯಾಗನ್​ ವೆಂಟೊ ಕಾರು ಟಿಎಸ್​ಐ ಪೆಟ್ರೋಲ್​ ಎಂಜಿನ್​ ವರ್ಷನ್​ ಆಗಿದ್ದು, 1.0 ಲೀಟರ್​, ಮೂರು ಸಿಲಿಂಡರ್​ ಪೆಟ್ರೋಲ್​ ಎಂಜಿನ್​  ಜೊತೆಗೆ 110 ಪಿಸೆ್​ ಪವರ್​ ಉತ್ಪಾದಿಸುತ್ತದೆ. ಅಂತೆಯೇ 175 ಎನ್​ಎಮ್​ ಪೀಕ್​ ಟಾರ್ಕ್​ ನೀಡುತ್ತದೆ. ಸಿಕ್ಸ್​ ಸ್ಪೀಡ್​ ಮ್ಯೂನುಯೆಲ್​ ಗೇರ್​ಬಾಕ್ಸ್​ ಮತ್ತು ಸಿಕ್ಸ್​ ಸ್ಪೀಡ್​ ಟಾರ್ಕ್​ ಕನ್ಪರ್ಟರ್​ ಅಟೋಮ್ಯಾಟಿಕ್​ ಗೇರ್​ಬಾಕ್ಸ್​ ಇದರಲ್ಲಿದೆ. ಈ ಕಾರಿನ ಎಕ್ಸ್​ ಶೋ ರೂಂ ಬೆಲೆ 8.69 ಲಕ್ಷ ರೂ.ನಿಂದ 13.68 ಲಕ್ಷದವರೆಗೆ ಇದೆ.

ಪೊಲೊ: ಈ ಕಾರಿನ ಮೇಲೆ 55 ಸಾವಿರ ಬೆನಿಫಿಟ್ಸ್​ ನೀಡುತ್ತಿದೆ. ಎಮ್​ಪಿಐ ಮತ್ತು ಟಿಎಸ್​ಐ ಎರಡು ಆಯ್ಕೆಯಲ್ಲಿ ಸಿಗುತ್ತದೆ. ಜೊತಗೆ ಎಕ್ಸ್​ಚೇಂಜ್​ ಬೋನಸ್​ ಮತ್ತು 30 ಸಾವಿರಲಾಯಲ್ಟಿ ಬೋನಸ್​ ನೀಡುತ್ತಿದೆ.

ಪೊಕೊ ಕಾರಿನ ಮೇಲೆ 6.01 ಲಕ್ಷದಿಂದ ಹಿಡಿದು 9.92 ಲಕ್ಷದವರೆಗೆ ಇರಲಿದೆ. ಗ್ರಾಹಕರಿಗಾಗಿ ಟ್ರೆಂಡ್​ಲೈನ್​, ಕಂಫರ್​ಲೈನ್​, ಹೈಲೈನ್​ ಪ್ಲಸ್​ ಮತ್ತು   ಜಿಟಿ ವರ್ಷನ್​ನಲ್ಲಿ ಸಿಗುತ್ತಿದೆ.ವೋಕ್ಸ್​ವ್ಯಾಗನ್​ ವಿಂಟೊ ಮತ್ತು ಪೊಲೊ ಕಾರಿನ ಮೇಲೆ ನೀಡುತ್ತಿರುವ ಈ ಬೆನಿಫಿಟ್ಸ್​ಗಾಗಿ ಹತ್ತಿರದ ಶೋ ರೂಂ ತೆರಳಿ ವಿಚಾರಿಸಿರಿ
Published by: Harshith AS
First published: March 18, 2021, 9:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories