ಆಘಾತಕಾರಿ ಸುದ್ದಿ: ಹ್ಯಾಕರ್​ಗಳ ಕಣ್ಣು ಈಗ ನಿಮ್ಮ ವಾಟ್ಸಪ್ ಮೇಲೆ..!

news18
Updated:October 6, 2018, 5:50 PM IST
ಆಘಾತಕಾರಿ ಸುದ್ದಿ: ಹ್ಯಾಕರ್​ಗಳ ಕಣ್ಣು ಈಗ ನಿಮ್ಮ ವಾಟ್ಸಪ್ ಮೇಲೆ..!
  • Advertorial
  • Last Updated: October 6, 2018, 5:50 PM IST
  • Share this:
-ನ್ಯೂಸ್ 18 ಕನ್ನಡ

Whatsapp ಇತ್ತೀಚೆಗೆ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್​ಗಳನ್ನು ಪರಿಚಯಿಸುತ್ತಲೇ ಬರುತ್ತಿದೆ. ಕಾಲಕ್ಕೆ ತಕ್ಕಂತೆ ಅಪ್ಡೇಟ್​ ಆಗುತ್ತಿರುವ ವಾಟ್ಸಪ್​ ಸಂಸ್ಥೆಗೂ ಈಗ ಹೊಸ ತಲೆನೋವು ಪ್ರಾರಂಭವಾದಂತಿದೆ. ಇತ್ತೀಚೆಗೆ ಸುಳ್ಳು ಸುದ್ದಿ ಹರಡುವಿಕೆ ಮತ್ತು ಸಾಮಾಜಿಕ ಸಾಮರಸ್ಯಗೆ ಹಾನಿಯುಂಟು ಮಾಡುವ ಸಂದೇಶಗಳನ್ನು ನಿಯಂತ್ರಿಸಲು ವಾಟ್ಸಪ್ ಕ್ರಮ ಕೈಗೊಂಡಿತ್ತು. ಇದರ ಬೆನ್ನಲ್ಲೇ ವಾಟ್ಸಪ್ ಆ್ಯಪ್​ನ್ನು ಕೂಡ ಹ್ಯಾಕ್ ಮಾಡಲಾಗುತ್ತಿದೆ ಎಂಬ ಆಘಾತಕಾರಿ  ಸುದ್ದಿಯೊಂದು ಹೊರ ಬಿದ್ದಿದೆ. ಈ ಕುರಿತು ಈಗಾಗಲೇ ಎಚ್ಚೆತ್ತುಕೊಂಡಿರುವ ಇಸ್ರೇಲಿ ರಾಷ್ಟ್ರೀಯ ಸೈಬರ್ ಭದ್ರತಾ ಪ್ರಾಧಿಕಾರ ಇಸ್ರೇಲ್ ಸರ್ಕಾರಕ್ಕೆ ಈ ಕುರಿತಾದ ಮುನ್ನೆಚ್ಚರಿಕೆ ನೀಡಿದೆ. ಈ ಎಚ್ಚರಿಕೆಯಲ್ಲಿ ವಾಟ್ಸಪ್​ನ್ನು ಹ್ಯಾಕ್​ ಮಾಡಲಾಗುತ್ತಿರುವ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ZDNet ವರದಿಯ ಪ್ರಕಾರ, ಇಸ್ರೇಲ್ ರಾಷ್ಟ್ರೀಯ ಸೈಬರ್ ಭದ್ರತಾ ಪ್ರಾಧಿಕಾರವು ಹೊಸ ರೀತಿಯ ವಾಟ್ಸಪ್ ಹ್ಯಾಕಿಂಗ್​ನ್ನು ಪತ್ತೆ ಹಚ್ಚಿದ್ದು, ಇಲ್ಲಿ ಮೊಬೈಲ್ ಸರ್ವೀಸ್​ ಪ್ರೊವೈಡರ್​ನ್ನು ಬಳಸಿ ಹ್ಯಾಕ್​ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಹ್ಯಾಕರ್​ಗಳು ವಾಯ್ಸ್​ಮೇಲ್​ನ್ನು ಹೆಚ್ಚಾಗಿ ಬಳಸುತ್ತಿರುವವರನ್ನು ಗುರಿಯಾಗಿಸಿಕೊಂಡಿದ್ದು, ಇಲ್ಲಿ ಯಾರೂ ಡಿಫಾಲ್ಟ್​ ಪಾಸ್​ವರ್ಡ್​ ಬದಲಿಸಿರುವುದಿಲ್ಲವೋ ( ಸಾಮಾನ್ಯವಾಗಿ 0000 ಅಥವಾ 1234 ಪಾಸ್​ವರ್ಡ್​ ಇರುತ್ತದೆ) ಅವರೇ ಹ್ಯಾಕರ್​ಗಳಿಗೆ ಶಿಕಾರಿಗಳಾಗುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಹೇಗೆ ನಡೆಯುತ್ತೆ ಹ್ಯಾಕಿಂಗ್
ಹ್ಯಾಕರ್​ಗಳು ವಾಟ್ಸಪ್ ಆ್ಯಪ್​ನ್ನು ಇನ್​ಸ್ಟಾಲ್ ಮಾಡಿ ಖಾತೆ ತೆರೆಯಲು ಬಳಕೆದಾರನ ಫೋನ್ ನಂಬರ್​ನಿಂದ ವೆರಿಫೈ ಮಾಡುತ್ತಾನೆ. ಅಂತಹ ಸಂದರ್ಭದಲ್ಲಿ ವೆರಿಫಿಕೇಶನ್ ಕೋಡ್ ಬಳಕೆದಾರರ ಫೋನ್​ಗೆ ಹೋಗುತ್ತದೆ. ಈ ವೇಳೆ ಹ್ಯಾಕರ್ ತಪ್ಪಾದ ಕೋಡ್​ವೊಂದನ್ನು ನಮೂದಿಸುತ್ತಾನೆ. ಏಕೆಂದರೆ ಸರಿಯಾದ ಕೋಡ್​ ನಿಜವಾದ ಬಳಕೆದಾರನಿಗೆ ಹೋಗಿರುತ್ತದೆ. ಈ ರೀತಿಯಾಗಿ ಹಲವಾರು ತಪ್ಪು ಕೋಡ್​ಗಳನ್ನು ನಮೂದಿಸುತ್ತಾನೆ. ಇದರಿಂದ ಬಳಕೆದಾರನಿಗೆ ವಾಯ್ಸ್​ ವೆರಿಫಿಕೇಶನ್ ಆಯ್ಕೆಯನ್ನು ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಳಕೆದಾರನಿಗೆ ವಾಟ್ಸಪ್​ನಿಂದ ಕರೆ ಮಾಡಲಾಗುತ್ತದೆ. ಇಲ್ಲಿ ಬಳಕೆದಾರನು ವಾಯ್ಸ್​ ಮೂಲಕ ಪಾಸ್​ವರ್ಡ್​ ಪಡೆಯುತ್ತಾನೆ.

ಫೋನ್ ಬಳಕೆದಾರನು ಮೊಬೈಲ್​ನಿಂದ ದೂರವಿದ್ದಾಗ ಅಥವಾ ಮಲಗಿರುವ ವೇಳೆ ಹ್ಯಾಕರ್​ಗಳು ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಾನೆ. ಈ ಸಂದರ್ಭಗಳಲ್ಲಿ ಬಳಕೆದಾರನು ಫೋನ್​ ನೋಡಿರುವುದಿಲ್ಲ. ಇದೇ ವೇಳೆ ಹ್ಯಾಕರ್​ಗಳು ವಾಯ್ಸ್​ಮೇಲ್ ಮೂಲಕ ಪಾಸ್​ವರ್ಡ್​ನ್ನು ಪಡೆದಿರುತ್ತಾರೆ. ಈ ಸಂದರ್ಭದಲ್ಲಿ ಹ್ಯಾಕರ್​ಗಳು ಡಿಫಾಲ್ಟ್​ನಲ್ಲಿರುವ ಬಳಕೆದಾರರ ಖಾತೆಯ ಪಿನ್​ಗಳನ್ನು ಹ್ಯಾಕ್ ಮಾಡುತ್ತಾರೆ. ಈ ರೀತಿ ಒಂದು ಬಾರಿ ಪಾಸ್​ವರ್ಡ್​ನ್ನು ರಿಕವರ್​ ಮಾಡುವ ಮೂಲಕ ವಾಟ್ಸಪ್​ಗಳನ್ನು ಹ್ಯಾಕ್ ಮಾಡಬಹುದಾಗಿದೆ. ಈ ರೀತಿಯಾಗಿ ಹ್ಯಾಕ್ ಮಾಡಿದ ಅಕೌಂಟ್​ಗಳನ್ನು ಹ್ಯಾಕರ್​ಗಳು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ ಎಂದು ಈ ವರದಿಯಲ್ಲಿ ಎಚ್ಚರಿಸಲಾಗಿದೆ.

ಇದನ್ನು ಓದಿ: ಕೇವಲ 287 ರೂ.ಗೆ ಮಾರಾಟವಾಗುತ್ತಿದೆ ನಿಮ್ಮ ಫೇಸ್​ಬುಕ್ ಖಾತೆ: ಅಚ್ಚರಿಯಾದರೂ ಇದು ಸತ್ಯಇಸ್ರೇಲ್ ಅಧಿಕಾರಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಇಂತಹ ಹ್ಯಾಕಿಂಗ್ ಪ್ರಕ್ರಿಯೆಗಳು ಹೆಚ್ಚಾಗಿವೆಯಂತೆ. ಹೀಗಾಗಿ ಇಸ್ರೇಲ್​ನ ಮಾಹಿತಿ ಏಜೆನ್ಸಿ ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದು, ವಾಟ್ಸಪ್ ಪಾಸ್​ವರ್ಡ್​​ಗಳನ್ನು ಕಠಿಣಗೊಳಿಸುವ ಮೂಲಕ ಹ್ಯಾಕಿಂಗ್​ ಪ್ರಕ್ರಿಯೆಯನ್ನು ತಡೆಗಟ್ಟಲು ಸೂಚಿಸಿದೆ ಎಂದು ವರದಿ ಹೇಳಿದೆ. ಕೆಲ ದಿನಗಳ ಹಿಂದೆಯಷ್ಟೇ ಡಾರ್ಕ್​ ವೆಬ್​ ಎಂಬ ಅಂತರ್ಜಾಲ ​ಸೈಟ್​ ಫೇಸ್​ಬುಕ್ ಬಳಕೆದಾರರ ಲಾಗಿನ್ ಐಡಿ ಮತ್ತು ಪಾಸ್​ವರ್ಡ್​ನ್ನು ಮಾರಾಟ ಮಾಡುತ್ತಿದೆ ಎಂದು ತನಿಖಾ ವರದಿಯೊಂದು ತಿಳಿಸಿತ್ತು. ಇದೀಗ ವಾಟ್ಸಪ್​ ಕೂಡ ಹ್ಯಾಕಿಂಗ್​ಗೆ ಒಳಗಾಗುತ್ತಿರುವುದರಿಂದ ಬಳಕೆದಾರರು ಇನ್ನಷ್ಟು ಎಚ್ಚರಿಕೆವಹಿಸುವ ಅವಶ್ಯಕತೆಯಿದೆ.

First published:October 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ