• Home
  • »
  • News
  • »
  • tech
  • »
  • Whatsapp Feature: ವಾಟ್ಸಪ್​ ಸ್ಟೇಟಸ್​ನಲ್ಲಿ ಇನ್ಮುಂದೆ ವಾಯ್ಸ್​ ಮೆಸೇಜ್ ಕೂಡ ಹಂಚಿಕೊಳ್ಬಹುದು! ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ

Whatsapp Feature: ವಾಟ್ಸಪ್​ ಸ್ಟೇಟಸ್​ನಲ್ಲಿ ಇನ್ಮುಂದೆ ವಾಯ್ಸ್​ ಮೆಸೇಜ್ ಕೂಡ ಹಂಚಿಕೊಳ್ಬಹುದು! ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೆಲದಿನಗಳ ಹಿಂದೆಯಷ್ಟೇ ವಾಟ್ಸಪ್ ಮಿಸ್ಡ್ ಕಾಲ್ ಅಲರ್ಟ್​ ಫೀಚರ್, ವೆಬ್​ನಲ್ಲಿ ವಾಟ್ಸಪ್ ಸ್ಕ್ರೀನ್​ಲಾಕ್ ಈ ಎಲ್ಲಾ ಫೀಚರ್ಸ್​ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಬಳಕೆದಾರರು ಊಹಿಸಲಾಗದ ಫೀಚರ್ ಒಂದನ್ನು ವಾಟ್ಸಪ್ ಪರಿಚಯಿಸುತ್ತಿದೆ. ಈ ಮೂಲಕ ಇನ್ನುಮುಂದೆ ವಾಟ್ಸಪ್ ಸ್ಟೇಟಸ್​ನಲ್ಲಿ ವಾಯ್ಸ್​ ಮೆಸೇಜನ್ನು ಅಪ್​​ಲೋಡ್ ಮಾಡಬಹುದಾಗಿದೆ.

ಮುಂದೆ ಓದಿ ...
  • Share this:

    ವಾಟ್ಸಪ್ (Whatsapp)​ ಎಂಬುದು ಬಹಳ ಪ್ರಸಿದ್ಧಿ ಪಡೆದ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿದ್ದು ವಿಶ್ವದಾದ್ಯಂತ ಅತೀ ಹೆಚ್ಚು ಬಳಕೆದಾರರನ್ನು ಹೊಂದಿದ ಮೆಸೇಜಿಂಗ್ ಅಪ್ಲಿಕೇಶನ್ ಇದಾಗಿದೆ. ವಾಟ್ಸಪ್ ಇತ್ತೀಚೆಗೆ ವಾರಕ್ಕೊಂದು ಅಪ್​ಡೇಟ್ಸ್ (Updates)​ ಅನ್ನು ಮಾಡುತ್ತಲೇ ಇದೆ. ಆದರೆ ಈ ಅಪ್ಡೇಟ್ಸ್​ಗಳು ಮೊದಲಿಕೆ ಐಒಎಸ್ ಸಾಧನಗಳಿಗೆ ಬಂದು ನಂತರದಲ್ಲಿ ಇದು ಆಂಡ್ರಾಯ್ಡ್ (Android) ಸಾಧನಗಳಿಗೆ ಬರುತ್ತದೆ. ವಾಟ್ಸಪ್ ಈ ಬಾರಿ 2022ರಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದು ವಿಶ್ವದಾದ್ಯಂತ  ವಾಟ್ಸಪ್ ಬಳಸುವವರ ಸಂಖ್ಯೆ 2 ಬಿಲಿಯನ್​ ದಾಟಿದೆ. ವಿಶೇಷವಾಗಿ ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಈ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಉಪಯೋಗಿಸುತ್ತಿದ್ದಾರೆ. 


    ಕೆಲದಿನಗಳ ಹಿಂದೆಯಷ್ಟೇ ವಾಟ್ಸಪ್ ಮಿಸ್ಡ್ ಕಾಲ್ ಅಲರ್ಟ್​ ಫೀಚರ್, ವೆಬ್​ನಲ್ಲಿ ವಾಟ್ಸಪ್ ಸ್ಕ್ರೀನ್​ಲಾಕ್ ಈ ಎಲ್ಲಾ ಫೀಚರ್ಸ್​ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಬಳಕೆದಾರರು ಊಹಿಸಲಾಗದ ಫೀಚರ್ ಒಂದನ್ನು ವಾಟ್ಸಪ್ ಪರಿಚಯಿಸುತ್ತಿದೆ. ಈ ಮೂಲಕ ಇನ್ನುಮುಂದೆ ವಾಟ್ಸಪ್ ಸ್ಟೇಟಸ್​ನಲ್ಲಿ ವಾಯ್ಸ್​ ಮೆಸೇಜನ್ನು ಅಪ್​​ಲೋಡ್ ಮಾಡಬಹುದಾಗಿದೆ.


    ಹೇಗಿರಲಿದೆ ಈ ಫೀಚರ್​:


    ವಾಟ್ಸಪ್​ನಲ್ಲಿ ಈ ಹಿಂದೆ ಬಳಕೆದಾರರು ತನ್ನ ಸ್ಟೇಟಸ್​ಗಳಲ್ಲಿ ವಿಡಿಯೋ, ಫೋಟೋ, ಲಿಂಕ್,ಬರಹಗಳನ್ನು ಮಾತ್ರ ಹಂಚಿಕೊಳ್ಳುವ ಅವಕಾಶಗಳಿತ್ತು. ಇದೀಗ ಇನ್ನುಮುಂದೆ ವಾಯ್ಸ್ ಮೆಸೇಜ್​ ಅನ್ನು ಕೂಡ ಸ್ಟೇಟಸ್​​ನಲ್ಲಿ ಹಾಕಬಹುದಾಗಿದೆ. ಈ ಫೀಚರ್​ ಮೊದಲಿಗೆ ಐಒಎಸ್ ಬಳಕೆದಾರರಿಗೆ ಬರಲಿದೆ ನಂತರದಲ್ಲಿ ಇದು ಆಂಡ್ರಾಯ್ಡ್​ ಬಳಕೆದಾರರಿಗೆ ಬರಲಿದೆ ಎಂದು ಹೇಳಿದ್ದಾರೆ.


    ಇದನ್ನೂ ಓದಿ: ವಾಟ್ಸಪ್ ಬಳಕೆದಾರರಿಗೆ ಗುಡ್‌ನ್ಯೂಸ್:‌ ಡೆಸ್ಕ್​ಟಾಪ್​ನಲ್ಲಿ ಗೌಪ್ಯತೆ ಕಾಪಾಡುವ ಫೀಚರ್


    ಈ ಫೀಚರ್ಸ್​ನಲ್ಲಿ ವಾಯ್ಸ್​​ ಮೆಸೇಜ್​ ಅನ್ನು 30 ಸೆಕೆಂಡ್​ಗಳ ಕಾಲ ಶೇರ್​ ಮಾಡಬಹುದಾಗಿದೆ. ಇಇದುವರೆಗೆ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಎಮಬ ಮತ್ತೊಂದು ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್​ಕ್ರಿಪ್ಟೆಡ್ ಆಗಿದೆ. ಸದ್ಯಕ್ಕೆ ಈ ಆಯ್ಕೆ ಐಒಎಸ್ ಬೇಟಾ ಬಳಕೆದಾರರಿಗೆ ಮಾತ್ರ ಬಂದಿದೆ.


    ಸಾಂಕೇತಿಕ ಚಿತ್ರ


    ಡೆಸ್ಕ್‌ಟಾಪ್‌ ಬಳಕೆದಾರರಿಗೆ ಸ್ಕ್ರೀನ್ ಲಾಕ್


    ವಾಟ್ಸಪ್ ಪ್ರಸ್ತುತ ಡೆಸ್ಕ್‌ಟಾಪ್‌ ಬಳಕೆದಾರರಿಗೆ ಹೊಸದೊಂದು ಫೀಚರ್‌ ಅನ್ನು ತಂದಿದೆ. ಈ ಫೀಚರ್‌ ವೆಬ್‌ ಬಳಕೆದಾರರಿಗೆ ಗೌಪ್ಯತೆಯ ಬಗ್ಗೆ ಹೆಚ್ಚು ಭದ್ರತೆಯನ್ನು ನೀಡುವಲ್ಲಿ ಸಹಕಾರಿಯಾಗಲಿದೆ. ಮೆಟಾ ಮಾಲೀಕತ್ವದ ಕಂಪನಿ ಬಳಕೆದಾರರಿಗೆ ಈಗ ಸ್ಕ್ರೀನ್ ಲಾಕ್ ಎಂದು ಕರೆಯಲ್ಪಡುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ನೀವು ಪ್ರತಿ ಬಾರಿ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಪ್ ಅನ್ನು ತೆರೆದಾಗ, ನಿಮ್ಮ ಪಾಸ್‌ವರ್ಡ್‌ ಅನ್ನು ನಮೂದಿಸಲು ನಿಮ್ಮನ್ನು ಇದು ಕೇಳುತ್ತದೆ. ಇದರಿಂದ ಬೇರೆ ಯಾವುದೇ ವ್ಯಕ್ತಿಗಳಿಗೆ ನಿಮ್ಮ ಚಾಟ್​ಗಳನ್ನು ಓದಲು, ನಿಮ್ಮ ವಾಟ್ಸಪ್ ಓಪನ್ ಮಾಡಲು ಸಾಧ್ಯವಾಗುವುದಿಲ್ಲ.


    ಮಿಸ್ಡ್ ಕಾಲ್ ಅಲರ್ಟ್‌ ಫೀಚರ್:


    ಇತ್ತೀಚೆಗೆ ವಾಟ್ಸಪ್ ಐಒಎಸ್​ ಮತ್ತು ಆಂಡ್ರಾಯ್ಡ್​ ಬಳಕೆದಾರರಿಗೆ ಮಿಸ್ಡ್ ಕಾಲ್ ಅಲರ್ಟ್​ ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ನಿಮ್ಮ ಮೊಬೈಲ್ ಡು ನಾಟ್​ ಡಿಸ್ಟರ್ಬ್​ ಮೋಡ್​ನಲ್ಲಿದ್ದಾಗ ನಿಮಗೆ ವಾಟ್ಸಪ್​ನಲ್ಲಿ ಕರೆ ಬಂದಾಗ ಅದು ಗೊತ್ತಾಗದಿದ್ದರೆ ಈ ಫೀಚರ್ ಮೂಲಕ ನಿಮಗೆ ತಿಳಿಸುತ್ತದೆ. ಆದ್ದರಿಂದ ಇದು ನಿಮ್ಮ ಸ್ಕ್ರೀನ್​ನಲ್ಲಿ ಯಾರ ಕಅಲ್ ಮಿಸ್​ ಮಾಡಿಕೊಂಡಿದ್ದೀರಿ ಎಂಬ ಮಾಹಿತಿಯನ್ನು ಒದಗಿದುತ್ತದೆ.​


    ವಾಟ್ಸಪ್ ದಿನದಿಂದ ದಿನಕ್ಕೆ ಬಿಡುಗಡೆ ಮಾಡುತ್ತಿರುವ ಈ ಫೀಚರ್ಸ್​ಗಲು ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಬಿಡುಗಡೆ ಮಾಡುತ್ತಿದೆ.

    Published by:Prajwal B
    First published: