HOME » NEWS » Tech » VODAFONE VI ANNOUNCES FREE AND HIGH SPEED NIGHT TIME INTERNET FOR VODAFONE PREPAID USERS STG SCT

Vodafone: ವೊಡಾಫೋನ್ ಗ್ರಾಹಕರಿಗೆ ರಾತ್ರಿ ವೇಳೆ ಉಚಿತ ಹೈ-ಸ್ಪೀಡ್ ಇಂಟರ್ನೆಟ್!

Vodafone: ವಿಐ (ವೊಡಾಫೋನ್ ಐಡಿಯಾ) ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ರಾತ್ರಿ ಸಮಯದಲ್ಲಿ ಉಚಿತವಾಗಿ ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ನೀಡುವುದಾಗಿ ಘೋಷಿಸಿದೆ.

news18-kannada
Updated:February 17, 2021, 3:49 PM IST
Vodafone: ವೊಡಾಫೋನ್ ಗ್ರಾಹಕರಿಗೆ ರಾತ್ರಿ ವೇಳೆ ಉಚಿತ ಹೈ-ಸ್ಪೀಡ್ ಇಂಟರ್ನೆಟ್!
Vodafone Idea
  • Share this:
ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ವಿವಿಧ ರೀತಿಯ ಕೊಡುಗೆಗಳನ್ನು ನೀಡುತ್ತಿವೆ. ಮೊಬೈಲ್ ಡೇಟಾ ಬಳಕೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿರುವುದರಿಂದ ಪ್ರತಿದಿನ ಹೊಸ ಹೊಸ ಆಫರ್ ಗಳನ್ನು ನೀಡುತ್ತಿರುತ್ತವೆ. ಅಸ್ತಿತ್ವದಲ್ಲಿರುವ ಬಳಕೆದಾರರನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿನ ಬಳಕೆದಾರರನ್ನು ತನ್ನ ನೆಟ್‌ವರ್ಕ್‌ಗೆ ಆಕರ್ಷಿಸುವ ನಿಟ್ಟಿನಲ್ಲಿ ವಿಐ (ವೊಡಾಫೋನ್ ಐಡಿಯಾ) ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ರಾತ್ರಿ ಸಮಯದಲ್ಲಿ ಉಚಿತವಾಗಿ ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ನೀಡುವುದಾಗಿ ಘೋಷಿಸಿದೆ.

ಮಧ್ಯರಾತ್ರಿ 12ರಿಂದ ಬೆಳಗ್ಗೆ 6 ಗಂಟೆವರೆಗೆ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ. 249 ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಹಾಕಿಸಿಕೊಳ್ಳುವ ಪ್ರಿಪೇಯ್ಡ್ ಗ್ರಾಹಕರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ರಾತ್ರಿ ಸಮಯದಲ್ಲಿ ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ನೀಡುವ ಉದ್ದೇಶದಿಂದ ಈ ಯೋಜನೆ ಘೋಷಿಸಲಾಗಿದೆ ಎಂದು ವಿಐ ಕಂಪನಿ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಜಗತ್ತಿನಲ್ಲಿ ಮೊಬೈಲ್ ಇಂಟರ್ನೆಟ್ ಅನ್ನುವುದು ಜನರಿಗೆ ಆಕ್ಸಿಜನ್ ರೀತಿ ಅನಿವಾರ್ಯವಾಗಿಬಿಟ್ಟಿದೆ. ರಾತ್ರಿ ವೇಳೆ ಬೋನಸ್ ಆಗಿ ಸಿಗಲಿರುವ ಹೈ-ಸ್ಪೀಡ್ ಇಂಟರ್ನೆಟ್ ವಿಐ ಗ್ರಾಹಕರಿಗೆ ಹೆಚ್ಚಿನದನ್ನು ಪಡೆಯಲು ಅನುವು ಮಾಡಿಕೊಡಲಿದೆ. ವಿಐ ಪ್ರಿಪೇಯ್ಡ್ ಗ್ರಾಹಕರು ಬಹಳ ದಿನಗಳ ನಂತರ ಇದೀಗ ಅನಿಯಮಿತ ಇನ್ಫೋಟೈನ್‌ಮೆಂಟ್‌ ಆನಂದಿಸಬಹುದು. ದೈನಂದಿನ ಡೇಟಾ ಕೋಟಾವು ಖಾಲಿಯಾಗುವ ಬಗ್ಗೆ ಚಿಂತಿಸದೆ ತಮ್ಮ ಪ್ರೀತಿಪಾತ್ರರ ಜೊತೆ ಹೆಚ್ಚಿನ ಮನರಂಜನೆಯನ್ನು ಪಡೆಯಬಹುದಾಗಿದೆ. ದೀರ್ಘ ವಿಡಿಯೋ ಕರೆಗಳನ್ನು ಹಾಗೂ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಟೆಲ್ಕೊ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಉದ್ಯಮದ ಮೊದಲ ಪ್ರತಿಪಾದನೆಯಾಗಿದೆ ಮತ್ತು ರಾತ್ರಿ ವೇಳೆ ಯುವಕರು ಹೆಚ್ಚಿನ ಡೇಟಾವನ್ನು ಬಳಸಲು ಅನುಕೂಲವಾಗುತ್ತದೆ ಎಂದು ವಿಐ ತಿಳಿಸಿದೆ.

ಅನಿಯಮಿತ ಹೈ-ಸ್ಪೀಡ್ ನೈಟ್-ಟೈಮ್ ಡೇಟಾದ ಮೂಲಕ ವಿಐ ಗ್ರಾಹಕರು ವಿವಿಧ ಒಟಿಟಿ ಅಪ್ಲಿಕೇಶನ್‌ಗಳಲ್ಲಿ ವೈವಿಧ್ಯಮಯ ವಿಷಯಗಳನ್ನು ಬ್ರೌಸ್ ಮಾಡಲು ಮತ್ತು ಡೌನ್‌ಲೋಡ್ ಮಾಡಬಹುದು. ಜೊತೆಗೆ ವಿಐ ಮೂವೀಸ್ ಮತ್ತು ಟಿವಿ ಆಪ್ ಅನ್ನು ಕೂಡ ಬಳಸಬಹುದಾಗಿದೆ. ಈಗಾಗಲೇ 10 ಮಿಲಿಯನ್ ಗಿಂತಲೂ ಹೆಚ್ಚು ಜನರು ವಿಐ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದು, ಉಚಿತ ಮನರಂಜನೆ ಪಡೆದುಕೊಳ್ಳುತ್ತಿದ್ದಾರೆ. ವಿಐ ಚಂದಾದಾರರು 13 ಭಾಷೆಗಳಲ್ಲಿ ಬರೋಬ್ಬರಿ 9,500ಕ್ಕೂ ಹೆಚ್ಚು ಮೂವೀಸ್ ವೀಕ್ಷಿಸಬಹುದು. 400ಕ್ಕೂ ಹೆಚ್ಚು ಟಿವಿ ಚಾನಲ್ ಗಳು, ವೆಬ್ ಸೀರಿಸ್‌ಗಳು ಮತ್ತು ಎಲ್ಲಾ ಪ್ರಕಾರದ ಅಂತಾರಾಷ್ಟ್ರೀಯ ಟಿವಿ ಶೋಗಳನ್ನು ವೀಕ್ಷಿಸಬಹುದಾಗಿದೆ.

ವಿಐ ತನ್ನ ಬಳಕೆದಾರರಿಗೆ ಹೆಚ್ಚುವರಿಯಾಗಿ ವಾರಾಂತ್ಯದ ರೋಲ್‌ಓವರ್ ಡೇಟಾ ಪ್ರಯೋಜನವನ್ನು ನೀಡುತ್ತದೆ. ಇದು ವಾರಾಂತ್ಯದಲ್ಲಿ ಬಳಕೆಯಾಗದ ಡೇಟಾವನ್ನು ಸಂಗ್ರಹಿಸಿ ಅದನ್ನು ಬಳಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಸದ್ಯ ವಾರಾಂತ್ಯದ ರೋಲ್‌ಓವರ್ ಡೇಟಾ ಪ್ರಯೋಜನವು ಏಪ್ರಿಲ್ 2021 ರವರೆಗೆ ಅನ್ವಯಿಸುತ್ತದೆ. ಪ್ರಸ್ತುತ 299, 449 ಮತ್ತು 699 ರೂ.ಗಳ ಬೆಲೆಯ ಪ್ರಿಪೇಯ್ಡ್ ಯೋಜನೆಗಳಲ್ಲಿ ಬಳಕೆದಾರರಿಗೆ ಡಬಲ್ ಡೇಟಾ ಸೌಲಭ್ಯ ನೀಡುವ ಏಕೈಕ ಟೆಲಿಕಾಂ ಕಂಪನಿ ಟೆಲ್ಕೊ ಆಗಿದೆ.
ಈ ಪ್ರೀಪೇಯ್ಡ್‌ ಯೋಜನೆಯಿಂದ ಡಬಲ್ ಡೇಟಾ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್ ಪ್ರಯೋಜನಗಳನ್ನು ನೀಡುತ್ತದೆ. ಅದು ಗ್ರಾಹಕರಿಗೆ ವಾರದಲ್ಲಿ ಬಳಕೆಯಾಗದ ಡೇಟಾವನ್ನು ಸಂಗ್ರಹಿಸಲು ಮತ್ತು ವಾರಾಂತ್ಯದಲ್ಲಿ ಒಟ್ಟಿಗೆ ಬಳಸಲು ಅನುಮತಿಸುತ್ತದೆ.
ಈ ಯೋಜನೆಯಡಿ ದಿನಕ್ಕೆ 4 GB ಡೇಟಾವನ್ನು ನೀಡಲಾಗುತ್ತದೆ. ಇದು ಹೆಚ್ಚಿನ ಮನರಂಜನೆ ಪಡೆಯಲು ಮತ್ತು ಮನೆಯಿಂದ ಕೆಲಸ ಮಾಡಲು ಸೂಕ್ತವಾಗಿದೆ. ಈ ಮೂಲಕ ಬಳಕೆದಾರರು ತಮ್ಮ ಡೇಟಾ ವ್ಯರ್ಥವಾಗದಂತೆ ನೋಡಿಕೊಳ್ಳಬಹುದು. ಈ ಯೋಜನೆಗಳು ಕ್ರಮವಾಗಿ 28, 56 ಮತ್ತು 84 ದಿನಗಳ ಮಾನ್ಯತೆ ಹೊಂದಿವೆ.
Published by: Sushma Chakre
First published: February 17, 2021, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories