Vodafone: ವೊಡಾಫೋನ್​ನ ಈ ​ಪೋಸ್ಟ್​ಪೇಯ್ಡ್​ ಪ್ಲಾನ್​ನಲ್ಲಿ 20 ಸಾವಿರ ರೂ. ಬೆನಿಫಿಟ್​!

news18-kannada
Updated:November 7, 2019, 6:59 PM IST
Vodafone: ವೊಡಾಫೋನ್​ನ ಈ ​ಪೋಸ್ಟ್​ಪೇಯ್ಡ್​ ಪ್ಲಾನ್​ನಲ್ಲಿ 20 ಸಾವಿರ ರೂ. ಬೆನಿಫಿಟ್​!
news18-kannada
Updated: November 7, 2019, 6:59 PM IST
ವೊಡಾಫೋನ್​​ ಟೆಲಿಕಾಂ ಕಂಪೆನಿ ಹೊಸ ಆರ್​ಇಡಿಎಕ್ಸ್​ ಪೋಸ್ಟ್​ಪೇಯ್ಡ್ ಪ್ಲಾನ್​ವೊಂದನ್ನು ಬಿಡುಗಡೆಮಾಡಿದೆ. ಈ ನೂತನ ಪ್ಲಾನ್​ 999 ರೂ. ವಿನದಾಗಿದ್ದು, ಗ್ರಾಹಕರಿಗೆ ಹೆಚ್ಚಿನ 20 ಸಾವಿರ ರೂ. ವಿನ ಬೆನಿಫಿಟ್​ ನೀಡುತ್ತಿದೆ.

ವೊಡಾಫೋನ್​ ಪರಿಚಯಿಸಿರುವ ಈ ನೂತನ ಆರ್​ಇಡಿಎಕ್ಸ್ ಪೋಸ್ಟ್​​ಪೇಯ್ಡ್​ ಪ್ಲಾನ್​ ಒಂದು ತಿಂಗಳ ಪ್ಲಾನ್​ ಆಗಿದೆ. ಇದರಲ್ಲಿ ಇಂಟರ್​ ನ್ಯಾಷನಲ್​ ರೋಮಿಂಗ್​ ಸೇವೆಯನ್ನು, ಪ್ರಿಮಿಯಂ ಕಸ್ಟಮರ್​ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ಮಾತ್ರವಲ್ಲದೆ, ಅನಿಯಮಿತ ವಾಯ್ಸ್​ ಕರೆ ಮತ್ತು ಡೇಟಾ, 100 ಎಸ್ಎಮ್​ಎಸ್​​​ಗಳನ್ನು ಉಚಿತವಾಗಿ ನೀಡುತ್ತಿದೆ.  ತಿಂಗಳಿಗೆ

999 ರೂ. ವಿನ  ಆರ್​ಇಡಿಎಕ್ಸ್ ಪೋಸ್ಟ್​ಪೇಯ್ಡ್​ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ ನೆಟ್​ಫ್ಲಿಕ್ಸ್​, ಅಮಜಾನ್​ ಪ್ರೈಮ್​, ಝಿ5 ಮತ್ತು ವೊಡಾಫೋನ್​ ಪ್ಲೇ ಸೇವೆಯನ್ನು ಸೇವೆಯನ್ನು ಪಡೆಯಬಹುದಾಗಿದೆ. ಜತೆಗೆ ಲೈವ್​ ಟಿವಿ, ಸನ್​​ ಎನ್​ಎಕ್ಸ್​​ಟಿ + ಹೊಯ್ಚೊಯ್​+ ಸೋನಿಲೈವ್​ + ಎಎಲ್​ಟಿಬಾಲಾಜಿ ಟಿವಿಯನ್ನು ವೀಕ್ಷಿಸಬಹುದಾಗಿದೆ. ಸಿನಿಮಾಗಳನ್ನು ಕೂಡ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: BSNL Preapaid Plan: ಈ ಪ್ಲಾನ್ ಅಳವಡಿಸಿಕೊಂಡರೆ 425 ದಿನಗಳ ವ್ಯಾಲಿಡಿಟಿ ಜೊತೆಗೆ ದೈನಂದಿನ 3GB ಡೇಟಾ ಉಚಿತ!

ಮಾತ್ರವಲ್ಲದೆ, ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿಯನ್ನು ಬುಕ್​ ಮಾಡಬಹುದಾಗಿದೆ. ಜೊತೆಗೆ ಹೋಟೆಲ್​ ಬುಕ್ಕಿಂಗ್​ ಕೂಡ ಮಾಡಬಹುದಾಗಿದೆ. ಇವೆಲ್ಲದರ ಮೇಲೆ ವೊಡಾಫೋನ್​ ಶೇ.50 ರಷ್ಟು ಡಿಸ್ಕೌಂಟ್​​ ನೀಡುತ್ತಿದೆ. ಅಲ್ಲದೆ, ಮ್ಯೂಸಿಯಂ, ಮತ್ತಿತರ ಟಿಕೆಟ್​​ಗಳ ಮೇಲೆ ಶೇ. 10 ರಷ್ಟು ಡಿಸ್ಕೌಂಟ್​ ನೀಡುತ್ತಿದೆ.​

ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾಗುತ್ತಿದ್ದು, ಟೆಲಿಕಾಂ ಕಂಪೆನಿಗಳು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪ್ಲಾನ್​ಗಳನ್ನು ಅನಾವರಣಗೊಳಿಸುತ್ತಿದೆ. ಇದೀಗ ವೊಡಾಫೋನ್​ ಸಂಸ್ಥೆ ಬಿಡುಗಡೆ ಮಾಡಿದ ಈ ಆರ್​ಇಡಿಎಕ್ಸ್​ ಪೋಸ್ಟ್​ಪೇಯ್ಡ್​ ಪ್ಲಾನ್​ನಲ್ಲಿ ಲೈವ್​ ಟಿವಿ, ಸಿನಿಮಾ, ಡೇಟಾ, ಅನಿಯಮಿತ ಕರೆ, ರೋಮಿಂಗ್​ ಕರೆ ಸೇರಿದಂತೆ 20 ಸಾವಿರ ರೂ. ವಿನ ಬೆನಿಫಿಟ್​ ನೀಡುತ್ತಿದೆ.

ಇದನ್ನೂ ಓದಿ: PHOTOS: ಮಾದಕ ಮೈಮಾಟದಿಂದ ಅಭಿಮಾನಿಗಳ ನಿದ್ದೆ ಕದ್ದ ಸೋಫಿ ಚೌಧರಿ..!
Loading...

ಇದನ್ನೂ ಓದಿ:Nayanthara: ಸಿನಿಮಾ ರಂಗದಲ್ಲಿ ಮಾಡಿದ ಅತಿದೊಡ್ಡ ತಪ್ಪಿನ ‘ಗುಟ್ಟು‘ ಬಿಚ್ಚಿಟ್ಟ ನಟಿ ನಯನತಾರಾ

First published:November 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...