ಜಿಯೋ, ಏರ್​ಟೆಲ್​ ದರ ಸಮರ: ರಿಚಾರ್ಜ್​ ಪ್ಲ್ಯಾನ್​ ಬದಲಿಸಿ ಭರ್ಜರಿ ಆಫರ್​ ನೀಡಿದ ವೊಡಾಫೋನ್

1.4GB ಡೇಟಾ ಪ್ಲ್ಯಾನ್​ ಒದಗಿಸಿದ್ದ 199 ರಿಚಾರ್ಜ್​​ ಯೋಜನೆಯಲ್ಲೂ ಬದಲಾವಣೆ ತರಲಾಗಿದ್ದು ಇನ್ನು ಮುಂದೆ ವೊಡಾಫೋನ್​ ಬಳಕೆದಾರರು 1.5GB ಇಂಟರ್​ನೆಟ್​ ಡೇಟಾ ಪಡೆಯಬಹುದು.

zahir | news18
Updated:January 30, 2019, 3:25 PM IST
ಜಿಯೋ, ಏರ್​ಟೆಲ್​ ದರ ಸಮರ: ರಿಚಾರ್ಜ್​ ಪ್ಲ್ಯಾನ್​ ಬದಲಿಸಿ ಭರ್ಜರಿ ಆಫರ್​ ನೀಡಿದ ವೊಡಾಫೋನ್
ವೊಡಾಫೋನ್
  • News18
  • Last Updated: January 30, 2019, 3:25 PM IST
  • Share this:
ಟೆಲಿಕಾಂ ಕಂಪೆನಿಗಳ ದರ ಸಮರಕ್ಕೆ ವೊಡಾಫೋನ್​ ಕಂಪೆನಿ ಭರ್ಜರಿ ಆಫರ್​ನೊಂದಿಗೆ ಎಂಟ್ರಿ ಕೊಟ್ಟಿದೆ. ಜಿಯೋ ಮತ್ತು ಏರ್​ಟೆಲ್​ ಡೇಟಾ ಪ್ಲ್ಯಾನ್​ಗಳಲ್ಲಿ ಆಫರ್​ ಘೋಷಿಸಿರುವ ಬೆನ್ನಲ್ಲೇ ಇದೀಗ ವೊಡಾಫೋನ್​ ತನ್ನ ಹಿಂದಿನ ರಿಚಾರ್ಜ್​ ಪ್ಲ್ಯಾನ್​ ಅನ್ನು ಬದಲಿಸಿದೆ. ಈ ಹಿಂದೆ ಪರಿಚಯಿಸಿದ್ದ 209 ಮತ್ತು 479 ರೂ. ಯೋಜನೆಗಳಲ್ಲಿ ಇದೀಗ ವೊಡಾಫೋನ್​ ಬಳಕೆದಾರರಿಗೆ ಮತ್ತಷ್ಟು ಆಫರ್ ನೀಡಿದೆ.

209 ರಿಚಾರ್ಜ್​ ಪ್ಲ್ಯಾನ್​ ಅನ್ನು ಬದಲಿಸಿರುವ ವೊಡಾಫೋನ್ 1.5GB ಡೇಟಾ ಬದಲಾಗಿ​ ಇನ್ಮುಂದೆ ಬಳಕೆದಾರರಿಗೆ ಪ್ರತಿ ದಿನ 1.6GB ಇಂಟರ್​ನೆಟ್​ ಡೇಟಾ ನೀಡಲಿದೆ. ಇದರೊಂದಿಗೆ ಅನಿಯಮಿತ ಕರೆ ಮತ್ತು ರೋಮಿಂಗ್ ಫ್ರಿ ಹಾಗೂ 100 ಉಚಿತ ಎಸ್​ಎಂಎಸ್​ಗಳು ಸಿಗಲಿದೆ.

ಇನ್ನು 479 ರಿಚಾರ್ಜ್​ ಯೋಜನೆಯಲ್ಲೂ ಬದಲಾವಣೆ ಮಾಡಿಕೊಂಡಿರುವ ವೊಡಾಫೋನ್ 1.5GB ಡೈಲಿ ಡೇಟಾ ಬದಲಿಗೆ 1.6GB ಇಂಟರ್​ನೆಟ್​ ಡೇಟಾ ನೀಡಲಿದೆ. 209 ರಿಚಾರ್ಜ್​ ಪ್ಲ್ಯಾನ್​ನಂತೆ ಇಲ್ಲೂ ಅನಿಯಮಿತ ಕರೆ, ರೋಮಿಂಗ್ ಫ್ರಿ ಮತ್ತು ಪ್ರತಿದಿನ 100 ಎಸ್​ಎಂಎಸ್​ ಸಿಗಲಿದೆ. ಆದರೆ 479 ರಿಚಾರ್ಜ್​​ ಪ್ಲ್ಯಾನ್​ನಲ್ಲಿ 84 ದಿನಗಳ ವಾಲಿಡಿಟಿ ನೀಡಲಾಗಿದ್ದು, ಅದೇ 209 ಪ್ಲ್ಯಾನ್​ 28 ದಿನಗಳ ವಾಲಿಡಿಟಿ ಹೊಂದಿರಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್: ಗ್ರೂಪ್​ ಹಂತದಲ್ಲಿ ಭಾರತ-ಪಾಕ್ ಮುಖಾಮುಖಿ ಇಲ್ಲ! ಇಲ್ಲಿದೆ ಕಾರಣ

1.4GB ಡೇಟಾ ಪ್ಲ್ಯಾನ್​ ಒದಗಿಸಿದ್ದ 199 ರಿಚಾರ್ಜ್​​ ಯೋಜನೆಯಲ್ಲೂ ಬದಲಾವಣೆ ತರಲಾಗಿದ್ದು ಇನ್ನು ಮುಂದೆ ವೊಡಾಫೋನ್​ ಬಳಕೆದಾರರು 1.5GB ಇಂಟರ್​ನೆಟ್​ ಡೇಟಾ ಪಡೆಯಬಹುದು. 28 ದಿನಗಳ ವಾಲಿಡಿಟಿ ಹೊಂದಿರುವ ಈ ಪ್ಲ್ಯಾನ್​ನಲ್ಲೂ ಅನಿಯಮಿತ ಕರೆ, ರೊಮಿಂಗ್ ಫ್ರಿ ಮತ್ತು ಪ್ರತಿದಿನ ಉಚಿತ ಎಸ್​ಎಂಎಸ್​ಗಳನ್ನು ಪಡೆಯಬಹುದು. ಒಟ್ಟಿನಲ್ಲಿ ದರ ಸಮರದ ಹಿಂದೆ ಬಿದ್ದಿರುವ ಟೆಲಿಕಾಂ ಕಂಪೆನಿಗಳಿಂದ ಸ್ಮಾರ್ಟ್​ಫೋನ್ ಬಳಕೆದಾರರಿಗೆ ಅಗ್ಗದ ದರದಲ್ಲಿ ಇಂಟರ್​ನೆಟ್​ ಸಿಗುತ್ತಿರುವುದು ಮಾತ್ರ ಸುಳ್ಳಲ್ಲ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹೊಸ ಇತಿಹಾಸ ಬರೆದ ಹಿಂದೂ ಮಹಿಳೆ!

First published:January 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ