Jio Gigafiber Effect: ವೊಡಾಫೋನ್ ‘ಯೂ ಬ್ರಾಡ್​​ಬ್ಯಾಂಡ್​‘ ಸೇವೆಯಲ್ಲಿ ಬದಲಾವಣೆ

ವೊಡಾಫೋನ್ ಕಂಪೆನಿಯ ‘ಯೂ ಬ್ರಾಡ್​ಬ್ಯಾಂಡ್‘​ ತನ್ನ ನಾಲ್ಕು ಪ್ಲಾನ್​ಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡಿದೆ.

news18-kannada
Updated:September 7, 2019, 3:47 PM IST
Jio Gigafiber Effect: ವೊಡಾಫೋನ್ ‘ಯೂ ಬ್ರಾಡ್​​ಬ್ಯಾಂಡ್​‘ ಸೇವೆಯಲ್ಲಿ ಬದಲಾವಣೆ
ವೊಡಾಫೋನ್
  • Share this:
ಇತ್ತೀಚೆಗೆ ರಿಲಾಯನ್ಸ್​ ಜಿಯೋ ಗಿಗಾ ಫೈಬರ್​ ವಾಣಿಜ್ಯ ಸೇವೆಯನ್ನು ಆರಂಭಿಸಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸೇವೆಯನ್ನು ನೀಡುತ್ತಿದೆ. ಇದರಿಂದಾಗಿ ಬೇರೆ ಬ್ರಾಡ್​ ಬ್ಯಾಂಡ್​ ಸೇವೆಯ ಮೇಲೆ ಹೊಡೆತ ಬಿದ್ದಿದ್ದು, ಕೆಲ ಕಂಪೆನಿಗಳು ಬ್ರಾಡ್​ಬ್ಯಾಂಡ್​ ಪ್ಲಾನ್​ಗಳ ಬೆಲೆಯನ್ನು ಇಳಿಕೆ ಮಾಡಿದೆ. ಆ ಪೈಕಿ ವೊಢಾಫೋನ್​ ಸಹ ಜಿಯೋಗೆ ಸ್ಫರ್ಧಿಸುವ ಸಲುವಾಗಿ ಬ್ರಾಡ್​ಬ್ಯಾಂಡ್​ ದರಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡಿದೆ.

ವೊಡಾಫೋನ್ ಕಂಪೆನಿಯ ‘ಯೂ ಬ್ರಾಡ್​ಬ್ಯಾಂಡ್‘​ ತನ್ನ ನಾಲ್ಕು ಪ್ಲಾನ್​ಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡಿದೆ. ಮೊದಲ ಪ್ಲಾನ್​ನಲ್ಲಿ 944 ರೂ. ರಿಚಾರ್ಜ್​ ಮಾಡುವ ಮೂಲಕ ತಿಂಗಳಿಗೆ 100mbps​ ವೇಗದ ಇಂಟರ್​ನೆಟ್​ ಸೇವೆ ನೀಡುತ್ತಿದೆ. ಈ ಪ್ಲಾನ್​ನಲ್ಲಿ ಅನಿಯಮಿತ ಡೇಟಾ, ಯಾವುದೇ FUP ಲಿಮಿಟ್​ ಇರುವುದಿಲ್ಲ ಎಂದು ಹೇಳಿದೆ. ಜೊತೆಗೆ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಇದನ್ನೂ ಓದಿ: ‘ನಿಮಗೆ 10 ಸಾವಿರ ಕೊಟ್ಟಿದ್ದೇ ಜಾಸ್ತಿ ಆಯ್ತು’; ಚಿಕ್ಕೋಡಿ ನೆರೆ ಸಂತ್ರಸ್ತರ ಮೇಲೆ ದರ್ಪ ತೋರಿದ ಸಚಿವ ಈಶ್ವರಪ್ಪ

ಗ್ರಾಹಕರಿಗಾಗಿ 90 ದಿನಗಳ, 180 ದಿನಗಳ, 360 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್​ ಅನ್ನು ಪರಿಚಯಿಸಿದೆ. 90 ದಿನಗಳ ಅನಿಯಮಿತ ಡೇಟಾ ಪ್ಲಾನ್​ ಬೆಲೆ 2,744 ರೂ. ಆಗಿದೆ. 180 ಅವಧಿಯ ಪ್ಲಾನ್​  ಬೆಲೆ 5,133 ರೂ. ಆಗಿದೆ. ಹಾಗೆಯೇ,  360 ದಿನಗಳ ಪ್ಲಾನ್​ ಅಳವಡಿಸುವ ಗ್ರಾಹಕರು 9,558 ರೂ, ರಿಚಾರ್ಜ್​ ಮಾಡಬೇಕಿದೆ.

First published:September 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ