Vodafone: ವೊಡಾಫೋನ್​-ಐಡಿಯಾದಿಂದ 20 ರೂ.ಗೆ ಹೊಸ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್​..!

ಟೆಲಿಫೋನ್​ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ರಿಲಾಯನ್ಸ್​ ಜಿಯೋಗೆ ಪೈಪೋಟಿ ನೀಡಲು ವೊಡಾಫೋನ್​ ತನ್ನ ಸೇವೆಗಳನ್ನು ಸಡಿಲಗೊಳಿಸುತ್ತಿದೆ. ಗ್ರಾಹಕರನ್ನು ಸೆಳೆಯುವು ನಿಟ್ಟಿನಲ್ಲಿ ಹಾಗೂ ಕಡಿಮೆ ಬೆಲೆಯಲ್ಲಿ ಸೇವೆಯನ್ನು ನೀಡಲು ಈ ಯೋಜನೆಯನ್ನು ಹಾಕಿಕೊಂಡಿದೆ.

Harshith AS | news18-kannada
Updated:September 3, 2019, 5:19 PM IST
Vodafone: ವೊಡಾಫೋನ್​-ಐಡಿಯಾದಿಂದ 20 ರೂ.ಗೆ ಹೊಸ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್​..!
ವೊಡಾಫೋನ್
Harshith AS | news18-kannada
Updated: September 3, 2019, 5:19 PM IST
ಟೆಲಿಫೋನ್​ ಕ್ಷೇತ್ರದಲ್ಲಿ ನಡೆಯುತ್ತಿರುವ ಪೈಫೋಟಿಯಿಂದಾಗಿ ವೊಡಾಫೋನ್​ ಐಡಿಯಾ ತನ್ನ ರಿಚಾರ್ಜ್​ ಪ್ಲಾನ್​ ಅನ್ನು ಮತ್ತಷ್ಟು ಸಡಿಲಗೊಳಿಸಿದೆ.

ವೊಡಾಫೋನ್​ ಐಡಿಯಾ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್​ ಅನ್ನು 20 ರೂ.ಗೆ ನೀಡುತ್ತಿದೆ. 28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ ಪ್ರಿಪೇಯ್ಡ್​ ರೀಚಾರ್ಜ್​ ಪ್ಲಾನ್​ ಇದಾಗಿದೆ. ಇದರ ಜೊತೆಗೆ 35 ರೂ. ರಿಚಾರ್ಜ್ ಪ್ಲಾನ್​  ಅನ್ನು ಪರಿಚಯಿಸಿದೆ. ಇದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಟೆಲಿಫೋನ್​ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ರಿಲಾಯನ್ಸ್​ ಜಿಯೋಗೆ ಪೈಪೋಟಿ ನೀಡಲು ವೊಡಾಫೋನ್​ ತನ್ನ ಸೇವೆಗಳನ್ನು ಸಡಿಲಗೊಳಿಸುತ್ತಿದೆ. ಗ್ರಾಹಕರನ್ನು ಸೆಳೆಯುವು ನಿಟ್ಟಿನಲ್ಲಿ ಹಾಗೂ ಕಡಿಮೆ ಬೆಲೆಯಲ್ಲಿ ಸೇವೆಯನ್ನು ನೀಡಲು ಈ ಯೋಜನೆಯನ್ನು ಹಾಕಿಕೊಂಡಿದೆ.

ಇದನ್ನೂ ಓದಿ: Video: ಚಂದ್ರನಂಗಳಕ್ಕೆ ಕಾಲಿಟ್ಟ ಬೆಂಗಳೂರಿಗ!; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಕೆಲ ದಿನಗಳ ಹಿಂದೆ ವೊಡಾಫೋನ್​ 299 ರೂ.ಗಳನ್ನು ಬಿಡುಗಡೆ ಮಾಡಿತತ್ತು. ಈ ಯೋಜನೆಯಲ್ಲಿ 3 GB ಡೇಟಾ ಮತ್ತು ಸಾವಿರ ಉಚಿತ SMS​ಗಳನ್ನು ಇದರಲ್ಲಿ ನೀಡಿದೆ. ಅಲ್ಲದೆ ಅನಿಯಮಿತ ಕರೆ ಹಾಗೂ ಕಡಿಮೆ ಡೇಟಾ ಬಳಕೆದಾರರಿಗಾಗಿ ಇಂತದೊಂದು ಪ್ಲಾನ್​ ಅನ್ನು ವೊಡಾಫೋನ್​ ಪರಿಚಯಿಸಿತ್ತು.

ಇದಕ್ಕೂ ಮೊದಲು ವೊಡಾಫೋನ್ ಕಂಪೆನಿಯು 229 ರೂ.ಗಳ ರಿಚಾರ್ಜ್ ಯೋಜನೆಯನ್ನು ಪ್ರಸ್ತುತಪಡಿಸಿತ್ತು. ಈ ಯೋಜನೆಯಲ್ಲಿ ಕೇವಲ 2 GB ಡೇಟಾ ಮತ್ತು 28 ದಿನಗಳ ವಾಲಿಡಿಟಿ ನೀಡಲಾಗಿತ್ತು. ಇದರೊಂದಿಗೆ ವೊಡಾಫೋನ್ ಪ್ಲೇ ಆ್ಯಪ್ ಮೂಲಕ ಉಚಿತ ಲೈವ್ ಟಿವಿ, ಸಿನಿಮಾ ಮತ್ತು ಇತರೆ ಫೀಚರ್​​ಗಳನ್ನು ಬಳಕೆದಾರರು ಪಡೆಯಬಹುದಾಗಿತ್ತು.

First published:September 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...