ವೊಡಾಫೋನ್ ಧಮಾಕ: ನೂತನ ಸಿಮ್ ಖರೀದಿಸಿ ಈ ಸೂಪರ್ ಆಫರ್ ನಿಮ್ಮದಾಗಿಸಿ!

ವೊಡಾಫೋನ್​ ನೂತನವಾಗಿ ಪರಿಚಯಿಸಿದ ರಿಚಾರ್ಜ್​ ಪ್ಯಾಕ್​ನಲ್ಲಿ ಸಿಮ್​ ಖರೀದಿಸಿದರೆ, ಮನೆ ಬಾಗಿಲಿಗೆ ಸಿಮ್​ ವಿತರಿಸುವುದಾಗಿ ಗ್ರಾಹಕರಿಗೆ ತಿಳಿಸಿದೆ.

news18
Updated:May 6, 2019, 5:13 PM IST
ವೊಡಾಫೋನ್ ಧಮಾಕ: ನೂತನ ಸಿಮ್ ಖರೀದಿಸಿ ಈ ಸೂಪರ್ ಆಫರ್ ನಿಮ್ಮದಾಗಿಸಿ!
ವೊಡಾಫೋನ್
  • News18
  • Last Updated: May 6, 2019, 5:13 PM IST
  • Share this:
ವೊಡಾಫೋನ್​​ ಹೊಸ ಪ್ರಿಪೇಯ್ಡ್​​ ಸಿಮ್​ ಖರೀದಿಸುವ ಗ್ರಾಹಕರಿಗಾಗಿ ಭರ್ಜರಿ ಆಫರ್​ವೊಂದನ್ನು  ಪರಿಚಯಿಸಿದೆ. ವೊಡಾಫೋನ್​ ನೂತನವಾಗಿ ಪರಿಚಯಿಸಿದ ರಿಚಾರ್ಜ್​ ಪ್ಯಾಕ್​ನಲ್ಲಿ ಸಿಮ್​ ಖರೀದಿಸಿದರೆ, ಮನೆ ಬಾಗಿಲಿಗೆ ಸಿಮ್​ ವಿತರಿಸುವುದಾಗಿ ಗ್ರಾಹಕರಿಗೆ ತಿಳಿಸಿದೆ.

ವೊಡಾಫೋನ್​ ಅಧಿಕೃತ ವೆಬ್​ಸೈಟ್​ ಮೂಲಕ 249 ರೂ. ರೀಚಾರ್ಜ್​ ಪ್ಯಾಕ್​ನೊಂದಿಗೆ ಸಿಮ್​ ಖರೀದಿಸಬೇಕು. ನೀವು ನಮೂದಿಸಿದ ಹೆಸರು, ವಿಳಾಸ ಸೇರಿದಂತೆ ಡೆಲಿವರಿ ಪಿನ್​ಕೋಡ್​ನ ಆಧಾರದಲ್ಲಿ ಸಿಮ್ ಅನ್ನು​ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಅವಕಾಶವನ್ನು ಮಾಡುತ್ತದೆ.

ಇದನ್ನೂ ಓದಿ: ಕೇಸರಿ ಸೀರೆ ತೊಟ್ಟಾಕ್ಷಣ ನನ್ನ ಹೆಸರಿನ ಹಿಂದೆ ‘ಸಾಧ್ವಿ’ ಸೇರಿಸಲು ಸಾಧ್ಯವೇ?; ಪ್ರಗ್ಯಾ ಠಾಕೂರ್​ಗೆ ಸ್ವರ ಭಾಸ್ಕರ್ ಪ್ರಶ್ನೆ

ವೊಡಾಫೋನ್​ 249 ರೂ ಪ್ಲಾನ್​ನಡಿಯಲ್ಲಿ ದಿನಕ್ಕೆ 1.5GB ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ. ಅಂತೆಯೇ, ಉಚಿತ ಲೋಕಲ್​, ಎಸ್​ಟಿಡಿ ಕರೆ, ಹಾಗೂ SMS​ ಸೇವೆಗಳು ಲಭ್ಯವಿದೆ. ಈ ಯೋಜನೆ ಮುಗಿದಂತೆ ಗ್ರಾಹಕರಿಗೆ ಹೆಚ್ಚಿನ ಆಫರ್​ ದೊರೆಯಲಿದೆ.

ಗ್ರಾಹಕರಿಗಾಗಿ ವೊಡಾಫೋನ್​ 399 ರೂ. ಪೋಸ್ಟ್​​ಪೇಯ್ಡ್​ ಯೋಜನೆಯನ್ನು ಆರಂಭಿಸಿತ್ತು. ಈ ಪ್ಲಾನ್​ನಲ್ಲಿ ಮಾಸಿಕ 40 ಜಿಬಿ ಡೇಟಾ, ಲೋಕಲ್​, ಎಸ್​ಟಿಡಿ ಕರೆಗಳು ಹಾಗೂ ಎಸ್​ಎಂಎಸ್​ ಪ್ರಯೋಜನಗಳನ್ನು ನೀಡಿದೆ. ಜೊತೆಗೆ ವೊಡಾಪೋನ್​ ಪ್ಲೇಬ್ಯಾಕ್​​, 12 ತಿಂಗಳ ಅಮೆಜಾನ್​​ ಪ್ರೈಮ್​ ಸದಸ್ಯತ್ವ, ಝೀ5 ಚಂದಾದಾರಿಕೆಗಳು ಗ್ರಾಹಕರಿಗೆ ನೀಡಿದೆ.

First published: May 6, 2019, 5:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading