Vodafone Idea: 148 ರೂ. ಪ್ರಿಪೇಯ್ಡ್, 149 ರೂ. ಪೋಸ್ಟ್​​ಪೇಯ್ಡ್​ ಪ್ಲಾನ್ ವಿಸ್ತರಿಸಿದ ವೊಡಾಫೋನ್!

VI: 2020ರ ಮೂರನೇ ತ್ರೈಮಾಸಿಕದಲ್ಲಿ VI ಟೆಲಿಕಾಂ ಸಂಸ್ಥೆ ಒದಗಿಸುವ 4G ನೆಟ್​ವರ್ಕ್​ ಭಾರತದ ವೇಗದ ನೆಟ್​ವರ್ಕ್​ ಎಂಬ ಹೆಗ್ಗಳಿಕೆ ಪಡೆದಿದೆ.

news18-kannada
Updated:November 21, 2020, 3:24 PM IST
Vodafone Idea: 148 ರೂ. ಪ್ರಿಪೇಯ್ಡ್, 149 ರೂ. ಪೋಸ್ಟ್​​ಪೇಯ್ಡ್​ ಪ್ಲಾನ್ ವಿಸ್ತರಿಸಿದ ವೊಡಾಫೋನ್!
Vi
  • Share this:
VI ಟೆಲಿಕಾಂ ಸಂಸ್ಥೆ (ವೊಡಾಫೋನ್​ ಐಡಿಯಾ) 148 ರೂ. ಮತ್ತು 149 ರೂ.ವಿನ ಪ್ರಿಪೇಯ್ಡ್​ ಮತ್ತು ಪೋಸ್ಟ್​​​ಪ್ಲಾನ್​​​ ಪರಿಚಯಿಸಿತ್ತು. ಆದರೀಗ ವೊಡಾಫೋನ್​ ಐಡಿಯಾ ಈ ಪ್ಲಾನ್​ ಅನ್ನು ವಿಸ್ತರಿಸುವ ಮೂಲಕ ಹೆಚ್ಚಿನ ಬೆನಿಫಿಟ್​ ಒದಗಿಸುತ್ತಿದೆ.

148 ರೂ ಪ್ರಿಪೇಯ್ಡ್​ ಪ್ಲಾನ್​ 18 ದಿನಗಳ ವ್ಯಾಲಿಡಿಟಿ ಹೊಂದಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ಮತ್ತು 1GB ಡೇಟಾ ಒದಗಿಸುತ್ತಿದೆ. ಅಷ್ಟು ಮಾತ್ರವಲ್ಲದೆ 100 ಎಸ್ಎಮ್​ಎಸ್​ ಉಚಿತವಾಗಿ ನೀಡುತ್ತಿದೆ. ಅದರ ಜೊತೆಗೆ VI ಸಿನಿಮಾ ಮತ್ತು ಟಿವಿ ಚಂದಾದರಿಕೆ ನೀಡುತ್ತಿದೆ

149 ರೂ ಪೋಸ್ಟ್​ಪೇಯ್ಡ್​ ಪ್ಲಾನ್​ 3GB ಡೇಟಾ ಒದಗಿಸುತ್ತಿದೆ. 300 SMS​ ಜೊತೆಗೆ VI ಸಿನಿಮಾ ಮತ್ತು ಟಿವಿ ವೀಕ್ಷಿಸುವ ಅವಕಾಶ ಮಾಡಿಕೊಟ್ಟಿದೆ. ಈ ಪ್ಲಾನ್​​ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

2020ರ ಮೂರನೇ ತ್ರೈಮಾಸಿಕದಲ್ಲಿ VI ಟೆಲಿಕಾಂ ಸಂಸ್ಥೆ ಒದಗಿಸುವ 4G ನೆಟ್​ವರ್ಕ್​ ಭಾರತದ ವೇಗದ ನೆಟ್​ವರ್ಕ್​ ಎಂಬ ಹೆಗ್ಗಳಿಕೆ ಪಡೆದಿದೆ.

ಓಕ್ಲಾ ವರದಿ ಪ್ರಕಾರ, VI ಟೆಲಿಕಾಂ ಸಂಸ್ಥೆ 13,74mbps​ ಡೌನ್​ಲೋಡ್​ ವೇಗವನ್ನು , 6.19mbpsಅಪ್ಲೋಡ್​ ಸ್ಪೀಡ್​ ಅನ್ನು ತನ್ನ ಬಳಕೆದಾರರಿಗೆ ಒದಗಿಸಿದೆ.

ಭಾರ್ತಿ ಏರ್​ಟೆಲ್​ 13.58mbps​ ಡೌನ್​ಲೋಡ್ ಮತ್ತು 4.15 mbps ​​ಅಪ್ಲೋಡ್​ ವೇಗವನ್ನು ಹೊಂದಿದೆ. ರಿಲಾಯನ್ಸ್​ ಜಿಯೋ 9.71mbps​ ಡೌನ್​ಲೋಡ್​ ಮತ್ತು 3.41mbps​ ಅಪ್ಲೋಡ್​​ ವೇಗವನ್ನು ಹೊಂದಿದೆ
Published by: Harshith AS
First published: November 21, 2020, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading