Vodafone 449 plan: ಈ ಪ್ಲಾನ್​​ ಅಳವಡಿಸಿಕೊಂಡರೆ ಪ್ರತಿ ದಿನ ಅನಿಯಮಿತ ಕರೆ ಜೊತೆಗೆ 4GB ಡೇಟಾ ಉಚಿತ!

Vodafone Idea: ವೊಡಾಫೋನ್​ ಐಡಿಯಾ 500 ರೂ.ಗಿಂತ ಕಡಿಮೆ ಬೆಲೆಯ 2 ಪ್ಲಾನ್​ಗಳನ್ನು ಪರಿಚಯಿಸಿದೆ. ಮೊದಲ ಪ್ಲಾನ್​​ 449 ರೂ.ಗೆ ಆಗಿದ್ದು, ಇದರ ಮೂಲಕ ಡಬಲ್​ ಡೇಟಾ ಪ್ಲಾನ್​  ಒದಗಿಸುತ್ತಿದೆ. ಅಂದರೆ 2+ 2 ಒಟ್ಟು 4GB ಡೇಟಾ ಒದಗಿಸುತ್ತಿದೆ. ಸದ್ಯ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಜನರಿಗೆ ಈ  ಕೊಡುಗೆಯನ್ನು ನಿಲ್ಲಿಸಿದ್ದರು, ಅದರ ಪ್ರಯೋಜನವನ್ನು ಒದಗಿಸುತ್ತಿದೆ.

Vi

Vi

  • Share this:
    Vodafone Idea Prepaid Plan: ಟೆಲಿಕಾಂ ಕಂಪನಿಗಳು ಸುಂಕ ಏರಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಈಗಾಗಲೇ ಹಲವು ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಮತ್ತು ಪೋಸ್ಟ್​ಪೇಯ್ಡ್​ ಪ್ಲಾನ್​ಗಳಲ್ಲಿ ಬದಲಾಯಿಸಿಕೊಂಡಿದೆ. ಅಧಿಕ ಪ್ರಯೋಜನದ ಜೊತೆಗೆ ಯೋಜನೆಯ ಬೆಲೆಯನ್ನು ಹೆಚ್ಚಿಸಿಕೊಂಡಿದೆ. ಇದರ ನಡುವೆ ವೊಡಾಫೋನ್​ ಐಡಿಯಾ 500 ರೂ.ಗಿಂತ ಕಡಿಮೆ ಬೆಲೆಯ 2 ಪ್ಲಾನ್​ಗಳನ್ನು ಪರಿಚಯಿಸಿದೆ. ಮೊದಲ ಪ್ಲಾನ್​​ 449 ರೂ.ಗೆ ಆಗಿದ್ದು, ಇದರ ಮೂಲಕ ಡಬಲ್​ ಡೇಟಾ ಪ್ಲಾನ್ (Double data)​  ಒದಗಿಸುತ್ತಿದೆ. ಅಂದರೆ 2+ 2 ಒಟ್ಟು 4GB ಡೇಟಾ ಒದಗಿಸುತ್ತಿದೆ. ಸದ್ಯ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಜನರಿಗೆ ಈ  ಕೊಡುಗೆಯನ್ನು ನಿಲ್ಲಿಸಿದ್ದರು, ಅದರ ಪ್ರಯೋಜನವನ್ನು ಒದಗಿಸುತ್ತಿದೆ.

    449 ರೂ ಪ್ರಿಪೇಯ್ಡ್​ ಪ್ಲಾನ್​:

    ವೊಡಾಫೋನ್​ 449 ರೂ. ಯೋಜನೆಯು ಡಬಲ್ ಡೇಟಾ ಪ್ರಯೋಜನವನ್ನು ನೀಡುತ್ತಿದ್ದು, 56 ದಿನಗಳವರೆಗಿನ ಸಿಂಧುತ್ವ ಹೊಂದಿದೆ. 4GB ದೈನಂದಿನ ಡೇಟಾವನ್ನು ಒದಗಿಸುತ್ತಿದೆ. ಗ್ರಾಹಕರಿಗಾಗಿ ಈ ಯೋಜನೆಯ ಮೂಲಕ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡುತ್ತಿದೆ.

    ಅಷ್ಟು ಮಾತ್ರವಲ್ಲದೆ, ವೊಡಾಫೋನ್​ 449 ರೂ ಯೋಜನೆ ಮೂಲಕ ಬಿಂಜ್ ಆಲ್-ನೈಟ್ ಆಫರ್ ಮತ್ತು ವಾರಾಂತ್ಯದ ರೋಲ್ಓವರ್ ಡೇಟಾ ಪ್ರಯೋಜನವನ್ನು ಸಹ ಒದಗಿಸುತ್ತಿದೆ, ಇದು ಬಳಕೆದಾರರಿಗೆ ರಾತ್ರಿ 12 AM ಮತ್ತು 6 AM ನಡುವೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಳಸಲು ಅನುವು ಮಾಡಿಕೊಡುತ್ತದೆ.

    Binge rollover data

    Binge ರೋಲ್ಓವರ್ ಡೇಟಾ ಪ್ರಯೋಜನದ ಮೂಲಕ ವಾರದಲ್ಲಿ ಬಳಕೆದಾರರು ತಮ್ಮ ಬಳಕೆಯಾಗದ ಡೇಟಾವನ್ನು ಮತ್ತೆ ಬಳಸಬಹುದಾಗಿದೆ. ಮಾತ್ರವಲ್ಲದೆ ಈ ಪ್ಲಾನ್ ಮೂಲಕ ಸಿನಿಮಾಗ ಸ್ಟ್ರೀಮ್ ಮಾಡಬಹುದು. ಈ ಯೋಜನೆಯು ಅನಿಯಮಿತ ಕರೆ ಹೊಂದಿದ್ದು ದಿನಕ್ಕೆ 100 ಎಸ್‌ಎಂಎಸ್​ ಅವಕಾಶ ನೀಡುತ್ತಿದೆ.

    ವೊಡಾಫೋನ್ ಐಡಿಯಾ 499 ರೂ ಪ್ಲಾನ್​

    ವೊಡಾಫೋನ್ ಐಡಿಯಾ 499 ರೂ.ಗಳ ಪ್ರಿಪೇಯ್ಡ್ ಪ್ಲಾನ್​ ರೀಚಾರ್ಜ್​ ಮಾಡಿದರೆ. ಬಳಕೆದಾರರಿಗೆ 1.5GB ದೈನಂದಿನ ಡೇಟಾವನ್ನು ನೀಡುತ್ತದೆ. ಈ ಪ್ಲಾನ್​ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ನೀಡುತ್ತದೆ. ಈ ಯೋಜನೆಯು ವಾರಾಂತ್ಯದ ರೋಲ್‌ಓವರ್ ಡೇಟಾ ಪ್ರಯೋಜ ಮತ್ತು ವಿ ಸಿನಿಮಾ ಮತ್ತು  ಟೆಲಿವಿಶನ್​ ಕಾರ್ಯಕ್ರಮ ಪ್ರವೇಶದೊಂದಿಗೆ ಆಲ್-ನೈಟ್ ಕೊಡುಗೆಗಳನ್ನು ನೀಡುತ್ತದೆ.

    ಬಳಕೆದಾರರು ವೊಡಾಫೋನ್ ಹೆಚ್ಚುವರಿ ಡೇಟಾ ಹಾಗೂ ರೂ .500 ಕ್ಕಿಂತ ಕಡಿಮೆ ಬೆಲೆ ಹೊಂದಿರುವ ಯೋಜನೆಗಳಿಗೆ ಗಮನಿಸಿದಾಗ ಗ್ರಾಹಕರಿಗೆ ಅನುಕೂಲಕರ ಪ್ರಯೋಜನವನ್ನು ವೊಡಾಫೋನನ್​ ನೀಡುತ್ತಿದೆ. ಗ್ರಾಹಕರು ಹೆಚ್ಚಿನ ಡೇಟಾ ಪ್ರಯೋಜನ ಬೇಕಾದಲ್ಲಿ 449 ರೂ ಪ್ಲಾನ್​ ಅಳವಡಿಸಬಹುದಾಗಿದೆ. ಒಂದು ವೇಲೆ ಡೇಟಾ ಪ್ರಯೋಜನ ಮತ್ತು ಅಷ್ಟೇನು ಅವಶ್ಯಕತೆ ಇಲ್ಲದಿದ್ದರೆ 499 ರೂ ರೀಚಾರ್ಜ್ ಮಾಡಬಹುದಾಗಿದೆ.

    Read Also ⇒ Microsoft Surface Duo 2 | ತ್ರಿವಳಿ ಕ್ಯಾಮೆರಾ, 8GB RAM; ಮಡಚುವ ಫೋನ್ ಅನಾವರಣಗೊಳಿಸಿದ ಮೈಕ್ರೋಸಾಫ್ಟ್

    ವಿಐ ಗ್ರಾಹಕರು ಸೆಪ್ಟೆಂಬರ್ 18, 2021 ರಿಂದ myvi.com, ವಿ ಆಪ್ ಮತ್ತು ಭಾರತದ 270+ ಚಿಲ್ಲರೆ ಮಾರಾಟ ಕೇಂದ್ರಗಳ ಮೂಲಕ ಐಫೋನ್ 13 ಶ್ರೇಣಿಯನ್ನು ಪೂರ್ವ-ಆರ್ಡರ್ ಮಾಡಬಹುದು. ಜೊತೆಗೆ ಆಕರ್ಷಕ ಆಫರ್​ ಅನ್ನು ವೊಡಾಫೋನ್​ ಒದಗಿಸುತ್ತಿದೆ.  ಐಫೋನ್ 13 ಮಾದರಿಗಳ ಲಭ್ಯತೆ ಮತ್ತು ವಿತರಣೆಗಳು ಸೆಪ್ಟೆಂಬರ್ 25, 2021 ರಿಂದ ಆರಂಭವಾಗುತ್ತವೆ. ಸಂಪೂರ್ಣ ಬೆಲೆ ಮತ್ತು ಲಭ್ಯತೆ ವಿವರಗಳು www.myvi.in ನಲ್ಲಿ ಸಿಗುತ್ತಿದೆ.
    Published by:Harshith AS
    First published: